ಜಿಲ್ಲೆ

ಉತ್ತರ ಕನ್ನಡ

ತಾಲೂಕು

ಸಿದ್ದಾಪುರ

ಗ್ರಾಮ

ಹಾವಿನಬೀಳು

ವೆಬ್‌ಸೈಟ್ ಉದ್ದೇಶ

ಡಿಜಿಟಲ್ ಮಾರ್ಕೆಟಿಂಗ್ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ವೇಗದ ಜಗತ್ತಿನ ಹೊಸ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಡಿಜಿಟಲ್ ಮಾರ್ಕೆಟಿಂಗ್ ಅರಿವು ಪ್ರಾಥಮಿಕ ಶಿಕ್ಷಣದಿಂದಲೇ ಸಿಗಬೇಕು ಎನ್ನುವ ಉದ್ದೇಶಕ್ಕೆ ಹುಲ್ಕುತ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಬ್‌ಸೈಟ್ ಆರಂಭಿಸಲಾಗಿದೆ.

ಶಾಲೆಯ ಪರಿಚಯ

ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ಪಟ್ಟಣದಿಂದ ಅಂದಾಜು 28 ಕಿ.ಮೀ. ದೂರದಲ್ಲಿ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮದಲ್ಲಿದೆ. ಶಾಲೆ 1964 ರಲ್ಲಿ ಸ್ಥಾಪನೆಯಾಗಿದೆ.  ತರಗತಿಗೊಂದು ಡಿಜಿಟಲ್ ಟಿವಿ ಅನ್ನು ಸಜ್ಜುಗೊಳಿಸಲಾಗಿದೆ. ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಅವರು ಈ ವೆಬ್‌ಸೈಟ್ ಆರಂಭಿಸಿದ್ದಾರೆ.

ಗುಣಮಟ್ಟದ ಶಿಕ್ಷಣ

ಪಟ್ಟಣದಿಂದ ದೂರ ಇರುವ ಹುಲ್ಕುತ್ರಿ ಗ್ರಾಮವು ಪಶ್ಚಿಮ ಘಟ್ಟದ ಅರಣ್ಯದ ನಡುವೆ ಇದ್ದರೂ ಇಲ್ಲಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಕೊರತೆ ಇಲ್ಲ. ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪ್ರತೀ ವರ್ಷ ಭತ್ತದ ಬಿತ್ತನೆಯಿಂದ ಹಿಡಿದು ಕೊಯ್ಲು ವರೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಪರಿಸರ ಪ್ರವಾಸ, ವೆಬ್‌ಸೈಟ್ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.

WWW

ನಮ್ಮ ಶಾಲೆಯ ಡಿಜಿಟಲ್ ಶಿಕ್ಷಣದ ವಿಶೇಷ

ಎಲ್ಲಿಯಾದರೂ, ಯಾವ ಸಮಯದಲ್ಲಾದರೂ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಬಹುದು.

ಸಂಪೂರ್ಣ ಪಠ್ಯಕ್ರಮ ಡಿಜಿಟಲ್ ರೂಪದಲ್ಲಿ ಲಭ್ಯವಿದೆ.

ಆಕರ್ಷಕ ಚಿತ್ರಗಳು, ಸಂವೇದ ಪಾಠಗಳೊಂದಿಗೆ ಪೂರಕ ವಿಡಿಯೋಗಳು ಲಭ್ಯ.

ವ್ಯಾಕರಣ, ಶಬ್ದಾರ್ಥ, ಪ್ರಶ್ನೋತ್ತರಗಳು, ನಕಾಶೆ, ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು ಲಭ್ಯ

ಶಿಕ್ಷಕರಿಗೆ ತರಗತಿ ಕೋಣೆಯಲ್ಲಿ ಪಾಠ ಬೋಧನೆಗೆ ಅತ್ಯುಪಯುಕ್ತ

ಶಿಕ್ಷಕರ ಸಹಾಯವಿಲ್ಲದೇ ಕಲಿಕೆಗೆ ಅವಕಾಶ

About US

ಶಾಲೆಯ ಸಾಧನೆ

ರಾಜ್ಯದಲ್ಲಿಯೇ ಮೊದಲ ಬಾರಿಗೆ ಸರಕಾರಿ ಶಾಲೆ ಹೆಸರಿನಲ್ಲಿ ವೆಬ್‌ಸೈಟ್ ಆರಂಭಿಸಿರುವುದು ನಮ್ಮ ಶಾಲೆಯ ಹೆಗ್ಗಳಿಕೆ. ಇದನ್ನು ಗಮನಿಸಿ ರಾಜ್ಯದ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ನಮ್ಮ ಶಾಲೆ ಮತ್ತು ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಅವರ ಕುರಿತು ಡಾಕ್ಯುಮೆಂಟರಿ ಮಾಡಿದೆ. ಅಲ್ಲದೆ, 2022ನೇ ಸಾಲಿನ ಚೇಂಜ್ ಮೇರ‍್ರ್ಸ್ ಎನ್ನುವ ಸಾಧಕರ ಸಾಲಿನಲ್ಲಿಯೂ ಆಯ್ಕೆ ಮಾಡಿದೆ.

Students

School Start

Teachers

Website start

ADDMISSION

ಇಂದಿನ ಪಾಠಗಳು

ಕರ್ನಾಟಕದ ಏಕೀಕರಣ ಮತ್ತು ಗಡಿ ವಿವಾದಗಳು – 7ನೇ ತರಗತಿ ಸಮಾಜ ವಿಜ್ಞಾನ

ಕರ್ನಾಟಕದ ಏಕೀಕರಣ ಮತ್ತು ಗಡಿ ವಿವಾದಗಳು - ಅಧ್ಯಾಯ 18 ಪಾಠದ ಪರಿಚಯ - ಕನ್ನಡ ನಾಡಿಗೆ ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಚರಿತ್ರೆಯಿದೆ. ಕನ್ನಡಿಗರು ಚಾರಿತ್ರಿಕವಾಗಿ ಬೇರೆ ಬೇರೆ ರಾಜಕೀಯ ವ್ಯವಸ್ಥೆಗಳಲ್ಲಿ ಬದುಕಿದವರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕನ್ನಡ ಭಾಷಿಕರ ಪ್ರದೇಶಗಳು ಮರಾಠಾ ಪೇಶ್ವೆಗಳು, ಪಾಳೇಗಾರರು,...

ಆಫ್ರಿಕ ಖಂಡ – 6ನೇ ತರಗತಿ ಸಮಾಜ ವಿಜ್ಞಾನ

ಆಫ್ರಿಕ ಖಂಡ - ಅಧ್ಯಾಯ 24 ಪಾಠದ ಪರಿಚಯ: ಈ ಅಧ್ಯಾಯದಲ್ಲಿ ನೀವು ಆಫ್ರಿಕದ ಭೌಗೋಳಿಕ ಸ್ಥಾನ, ವಿಸ್ತೀರ್ಣ ಹಾಗೂ ಭೌಗೋಳಿಕ ಸನ್ನಿವೇಶ. ಪ್ರಾಕೃತಿಕ ಲಕ್ಷಣಗಳು, ನದಿ ವ್ಯವಸ್ಥೆ, ವಾಯುಗುಣ ಹಾಗೂ ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿಸಂಪತ್ತು, ವ್ಯವಸಾಯ, ಕೈಗಾರಿಕೆಗಳು, ಬೆಲೆಬಾಳುವ ಖನಿಜಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ...

ಯೂರೋಪ್ ಖಂಡ – 6ನೇ ತರಗತಿ ಸಮಾಜ ವಿಜ್ಞಾನ

ಯೂರೋಪ್ ಖಂಡ - ಅಧ್ಯಾಯ 23 ಪಾಠದ ಪರಿಚಯ: ಈ ಅಧ್ಯಾಯದಲ್ಲಿ ಯೂರೋಪ್ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ. ಪ್ರಾಕೃತಿಕ ಮತ್ತು ವಾಯುಗುಣ ವಿಭಾಗಗಳು, ಸಸ್ಯವರ್ಗ, ವ್ಯವಸಾಯ, ಹೈನುಗಾರಿಕೆ ಮತ್ತು ಮೀನುಗಾರಿಕೆ. ಖನಿಜ ಮತ್ತು ಕೈಗಾರಿಕೆಗಳು ಹಾಗೂ ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು...

ಏಷ್ಯಾ ಖಂಡ – 6ನೇ ತರಗತಿ ಸಮಾಜ ವಿಜ್ಞಾನ

ಏಷ್ಯಾ ಖಂಡ - ಅಧ್ಯಾಯ 22 ಪಾಠದ ಪರಿಚಯ ಏಷ್ಯಾ ಖಂಡದ ಸ್ಥಾನ, ವಿಸ್ತೀರ್ಣ ಮತ್ತು ಭೌಗೋಳಿಕ ಸನ್ನಿವೇಶ, ಪ್ರಾದೇಶಿಕ ವಿಭಾಗಗಳು, ಪ್ರಾಕೃತಿಕ ಲಕ್ಷಣಗಳು, ಪ್ರಮುಖ ನದಿಗಳು ಮತ್ತು ವ್ಯವಸಾಯ, ವಾಯುಗುಣ ಮತ್ತು ಸಸ್ಯವರ್ಗ, ಪ್ರಮುಖ ಖನಿಜಗಳು, ಜನಸಂಖ್ಯೆಯ ಬೆಳವಣಿಗೆ, ಹಂಚಿಕೆ ಮತ್ತು ಸಾಂದ್ರತೆಗಳನ್ನು ಕುರಿತ ಪರಿಚಯ ಈ...

ರಾಷ್ಟ್ರೀಯ ಭಾವೈಕ್ಯತೆ – 6ನೇ ತರಗತಿ ಸಮಾಜ ವಿಜ್ಞಾನ

ರಾಷ್ಟ್ರೀಯ ಭಾವೈಕ್ಯತೆ - ಅಧ್ಯಾಯ 20 ಪಾಠದ ಪರಿಚಯಈ ಅಧ್ಯಾಯದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಭಾರತೀಯ ವೈವಿಧ್ಯತೆ, ಬಹುತ್ವದಲ್ಲಿ ಏಕತೆ ಹಾಗೂ ರಾಷ್ಟ್ರೀಯ ಏಕತೆಯ ಕುರಿತು ಪರಿಚಯಿಸಲಾಗಿದೆ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ವೃದ್ಧಿಸುವ ಅಂಶಗಳು, ತೊಡಕಾಗುವ ಅಂಶಗಳ ಕುರಿತು ಚರ್ಚಿಸಲಾಗಿದೆ. ರಾಷ್ಟ್ರೀಯ ಭಾವೈಕ್ಯತೆಯ ಅರ್ಥ:...

ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ – 6ನೇ ತರಗತಿ ಸಮಾಜ ವಿಜ್ಞಾನ

ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ - ಅಧ್ಯಾಯ 21 ಪಾಠದ ಪರಿಚಯರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ದಿನಾಚರಣೆ ಈ ಅಧ್ಯಾಯದಲ್ಲಿ ರಾಷ್ಟ್ರೀಯ ಚಿಹ್ನೆಗಳು, ನಮ್ಮ ರಾಷ್ಟ್ರಧ್ವಜ, ರಾಷ್ಟ್ರಧ್ವಜದ ವಿಶೇಷತೆ, ರಾಷ್ಟ್ರಧ್ವಜ ಸಂಹಿತೆ, ನಮ್ಮ ರಾಷ್ಟ್ರಗೀತೆ, ನಮ್ಮ ರಾಷ್ಟ್ರಸ್ತವ, ನಮ್ಮ ರಾಷ್ಟ್ರಲಾಂಛನ,...

ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು – 6ನೇ ತರಗತಿ ಸಮಾಜ ವಿಜ್ಞಾನ

ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು - ಅಧ್ಯಾಯ 19 ಪಾಠದ ಪರಿಚಯಈ ಅಧ್ಯಾಯದಲ್ಲಿ ಮಾನವ ಹಕ್ಕುಗಳ ಅರ್ಥ ಮತ್ತು ಮಹತ್ವವನ್ನು ಪರಿಚಯಿಸಲಾಗಿದೆ ಹಾಗೂ ನಮ್ಮ ಸಂವಿಧಾನವು ಭಾರತದ ಪೌರರಿಗೆ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪರಿಚಯಿಸಲಾಗಿದೆ. ಹಕ್ಕುಗಳು ಎಂದರೇನು? 'ಹಕ್ಕು’ ಎಂದರೆ ನಾಗರಿಕರಿಗೆ...

ಹುಲ್ಕುತ್ರಿ ಶಾಲೆಯಲ್ಲಿ ನಡೆದ ‘ಬಾನು ಬೆರಗು’ ಎಂಬ ವಿನೂತನ ಕಾರ್ಯಕ್ರಮ

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ಬಾನು ಬೆರಗು ಕಾರ್ಯಕ್ರಮ ನಡೆಯಿತು. ಶನಿವಾರ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಯಲ್ಲಾಪುರ ತಾಲೂಕಿನ ಆನಗೋಡ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರು ಹಾಗೂ ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಆದ...

‘ಕರ್ನಾಟಕ ದರ್ಶನ’ ಮಾಡಿದ ಹುಲ್ಕುತ್ರಿ ಶಾಲೆಯ ವಿದ್ಯಾರ್ಥಿಗಳು

ಶೈಕ್ಷಣಿಕ ಪ್ರವಾಸ ಸಿದ್ದಾಪುರ: ಕೋಶ ಓದು-ದೇಶ ಸುತ್ತು ಎನ್ನುವಂತೆ ತಾಲೂಕಿನ ಸೋವಿನಕೊಪ್ಪ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ನಾಲ್ಕು ವರ್ಷದಿಂದ ಶೈಕ್ಷಣಿಕ ಪ್ರವಾಸ ಕೈಗೊಂಡು ಸಂಪೂರ್ಣ ಕರ್ನಾಟಕ ದರ್ಶನ ಮಾಡಿದ್ದಾರೆ. 2022-23ನೇ ಸಾಲಿನಿಂದ ಇಲ್ಲಿಯವರೆಗೆ 6 ಮತ್ತು 7ನೇ ತರಗತಿಯ...

ರಾಜ್ಯ ನೀತಿ ನಿರ್ದೇಶಕ ತತ್ವಗಳು – 6ನೇ ತರಗತಿ ಸಮಾಜ ವಿಜ್ಞಾನ

ರಾಜ್ಯ ನೀತಿ ನಿರ್ದೇಶಕ ತತ್ವಗಳು - ಅಧ್ಯಾಯ 18 ಪಾಠದ ಪರಿಚಯರಾಜ್ಯ ನೀತಿ ನಿರ್ದೇಶಕ ತತ್ವಗಳು ನಮ್ಮ ಸಂವಿಧಾನದ ನಾಲ್ಕನೇ ಭಾಗದ 36 ರಿಂದ 51ನೇ ವಿಧಿಗಳವರೆಗೆ ರಾಜ್ಯ ನೀತಿ ನಿರ್ದೇಶಕ ತತ್ವಗಳ ಪ್ರಸ್ತಾಪವಿದೆ. ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ಚುನಾಯಿತ ಸರ್ಕಾರಕ್ಕೆ ಇವು ಮಾರ್ಗದರ್ಶಿ ಸೂತ್ರಗಳಂತಿವೆ. ಈ ಪಾಠವು ಅವುಗಳ...

ನಮ್ಮ ಶಾಲೆಗೆ ಸ್ವಾಗತ

ಕಲಿಕಾ ವಿಭಾಗದಲ್ಲಿ ಡಿಜಿಟಲ್ ಪಾಠಗಳಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ, ಕಾರ್ಯಕ್ರಮಗಳು ಹಾಗೂ ಲೇಖನಗಳಿಗೆ ಸಬ್ ಸ್ಕ್ರೈಬ್ ಆಗಬಹುದು. ಕಲಿಕೆಯ ಹೊಸ ಅನುಭವಕ್ಕಾಗಿ ನಮ್ಮ ಅಂರ್ಜಾಲ ಸಂಪರ್ಕಿಸಿರಿ.

ಬನ್ನಿ ನಮ್ಮೊಂದಿಗೆ