ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು – ಅಧ್ಯಾಯ 7

ಪಾಠದ ಪರಿಚಯ

1600ರಿಂದ 1757ರ ತನಕ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯು ಕೇವಲ ಒಂದು ವ್ಯಾಪಾರಿ ಕಂಪನಿಯಾಗಿತ್ತು. ವ್ಯಾಪಾರಿ ಹಿತಾಸಕ್ತಿಯನ್ನು ಹೊತ್ತು ಬಂದ ಬ್ರಿಟಿಷರು ಕ್ರಮೇಣ ರಾಜಕೀಯ ಆಸಕ್ತಿಯನ್ನು ಬೆಳೆಸಿಕೊಂಡರು. ಆರಂಭದಲ್ಲಿ ಭಾರತದ ವಿವಿಧ ರಾಜಕೀಯ ಶಕ್ತಿಗಳಿಗೆ ಮನವಿಗಳನ್ನು ಸಲ್ಲಿಸುತ್ತ ತಮ್ಮ ವ್ಯಾಪಾರಿ ಹಿತಾಸಕ್ತಿಯನ್ನು ಬೆಳೆಸಿಕೊಂಡರು. ಕ್ರಮೇಣ ಅವರು ಮನವಿ ಸೂತ್ರದ ಬದಲಿಗೆ ಯುದ್ಧ ಸೂತ್ರವನ್ನು ಅಳವಡಿಸಿದರು. ಇದರಿಂದ ರಾಜಕೀಯವಾಗಿ ಬಲಾಢ್ಯರಾದರು. ಯುದ್ಧಗಳಿಂದ ಪಡೆದ ಭಾರತವನ್ನು ಬೌದ್ಧಿಕವಾಗಿ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ದೂರಗಾಮಿ ಉಪಾಯಗಳನ್ನು ರೂಪಿಸಿದರು. ಅವರ ದೂರಗಾಮಿ ಕನಸನ್ನು ಈಡೇರಿಸಿಕೊಳ್ಳಲು ಆಡಳಿತದ ಸುಧಾರಣೆಗಳನ್ನು ಒಂದು ಸಾಧನಾಮಾರ್ಗವಾಗಿ ಬಳಸಿಕೊಂಡರು. ರಾಜಕೀಯ, ಅರ್ಥವ್ಯವಸ್ಥೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದರು. ತಮ್ಮ ಬಹುಮುಖಿ ಹಿತಾಸಕ್ತಿಯೇ ಅವರ ಲೆಕ್ಕಾಚಾರವಾಗಿತ್ತು. ಆದರೆ ಜಾರಿಗೆ ಬಂದ ಕಾನೂನುಗಳನ್ನು `ಸುಧಾರಣೆ’ ಎಂದು ಕರೆದರು. ಆರಂಭದಲ್ಲಿ ಭಾರತೀಯರು ಹಾಗೆಯೇ ನಂಬತೊಡಗಿದರು. ಅವರು ಜಾರಿಗೊಳಿಸಿದ ಸುಧಾರಣೆಗಳಿಂದ ಭಾರತೀಯ ಸಮಾಜದ ಮೇಲೆ ಒಳ್ಳೆಯ ಪರಿಣಾಮಗಳಾಗಿದ್ದರೆ ಅದು ಆಕಸ್ಮಿಕ ಎಂದು ನಾವು ಭಾವಿಸಬಹುದು. ಈ ಪಾಠದಲ್ಲಿ `ಸುಧಾರಣೆ’ಗಳಿಗೆ ಸಂಬಂಧಿಸಿದಂತೆ ಆರು ಕ್ಷೇತ್ರಗಳನ್ನು ಆರಿಸಿ ವಿವೇಚನೆ ನಡೆಸಲಾಗಿದೆ. ಆಡಳಿತ, ನ್ಯಾಯಾಂಗ, ಕಂದಾಯ, ಇಂಗ್ಲಿಷ್ ಶಿಕ್ಷಣ, ವ್ಯಾಪಾರ ಮತ್ತು ವಾಣಿಜ್ಯ ಮತ್ತು ಸಾಮಾಜಿಕ ಸುಧಾರಣೆಗಳು ಇವೇ ಆ ಆರು ಕ್ಷೇತ್ರಗಳು.

7.1 ಆಡಳಿತ

ಭಾರತದಲ್ಲಿ ಬ್ರಿಟಿಷ್ ಆಡಳಿತದ ಆಧಾರ ಸ್ತಂಭಗಳೆಂದರೆ ನಾಗರಿಕ ಸೇವೆ, ಸೇನಾಪಡೆ ಮತ್ತು ಪೊಲೀಸ್ ವ್ಯವಸ್ಥೆ. ಇವುಗಳನ್ನೀಗ ಒಂದೊಂದಾಗಿ ಪರಿಶೀಲಿಸೋಣ.

1 ನಾಗರಿಕ ಸೇವೆ (Civil Service)

ಈಸ್ಟ್ ಇಂಡಿಯಾ ಕಂಪನಿಯು ತನ್ನ ಕಾರ್ಯಭಾರ ನಿರ್ವಹಿಸಲು ತನ್ನದೇ ಆದ ನೌಕರ ವರ್ಗವನ್ನು ಹೊಂದಿತ್ತು. ನೌಕರರು ಸಂಬಳವಲ್ಲದೆ ಖಾಸಗಿ ವ್ಯಾಪಾರದಲ್ಲಿ ತೊಡಗುವ ಮೂಲಕ ಹೇರಳವಾಗಿ ಲಾಭಗಳಿಸುತ್ತಿದ್ದರು. ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯ ವಿಸ್ತಾರವಾಗುತ್ತಿದ್ದಂತೆ ನೌಕರರಿಗೆ ವ್ಯಾಪಾರವಲ್ಲದೆ ಆಡಳಿತ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ದೊರಕಿತು.

ಕಾರ್ನವಾಲೀಸನು ಆಡಳಿತದ ವಿವಿಧ ಶಾಖೆಗಳಲ್ಲಿ ಸಾರ್ವಜನಿಕ ಸೇವೆಯನ್ನು ವ್ಯವಸ್ಥಿತಗೊಳಿಸಿ ಅದನ್ನು ನಾಗರಿಕ ಸೇವೆಯನ್ನಾಗಿ ಪರಿವರ್ತಿಸಿದನು.

ಕಾರ್ನವಾಲೀಸನು ನೌಕರರಲ್ಲಿಯ ಲಂಚಗುಳಿತನ ಮತ್ತು ಭ್ರಷ್ಟಾಚಾರಕ್ಕೆ ಅವರು ಪಡೆಯುವ ಕಡಿಮೆ ವೇತನವೇ ಕಾರಣವೆಂದು ತಿಳಿದಿದ್ದ. ಆದುದರಿಂದ ನೌಕರರ ವೇತನವನ್ನು ಹೆಚ್ಚಿಸಿ ಕಾಣಿಕೆ ಸ್ವೀಕರಿಸುವುದನ್ನು ನಿರ್ಬಂಧಿಸಿದ. ಅಲ್ಲದೆ ಸೇವಾ ಜೇಷ್ಠತೆಯ ಆಧಾರದಲ್ಲಿ ಬಡ್ತಿ ನೀಡುವುದನ್ನು ಜಾರಿಗೆ ತಂದ.

ಕಾರ್ನವಾಲೀಸ

ಲಾರ್ಡ್ ವೆಲ್ಲೆಸ್ಲಿಯು ಅಧಿಕಾರಿಗಳಿಗೆ ಶಿಕ್ಷಣ ಮತ್ತು ತರಬೇತಿ ಒದಗಿಸಲು ಕಲ್ಕತ್ತದಲ್ಲಿ ಕಾಲೇಜನ್ನು ತೆರೆದನು. ಮೊದಲು ಕಂಪನಿಯ ಅಧಿಕಾರಿಗಳನ್ನು ಕಂಪನಿ ಡೈರೆಕ್ಟರುಗಳೇ ನೇಮಕ ಮಾಡುತ್ತಿದ್ದರು. ಅನಂತರ ಸರ್ಕಾರವು ನಾಗರಿಕ ಸೇವಾ ಅಧಿಕಾರಿಗಳನ್ನು ಐ.ಸಿ.ಎಸ್. ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಲಾರಂಭಿಸಿತು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳು ಇಂಗ್ಲೆಂಡಿನಲ್ಲಿ ಮಾತ್ರವೇ ನಡೆಯುತ್ತಿದ್ದವು.

ಲಾರ್ಡ್ ವೆಲ್ಲೆಸ್ಲಿ

ಐ.ಸಿ.ಎಸ್. (ಇಂಡಿಯನ್ ಸಿವಿಲ್ ಸರ್ವೀಸ್) ಅಂದರೆ ಭಾರತೀಯ ನಾಗರಿಕ ಸೇವೆ. ಇದು ಇವತ್ತಿನ ಐ.ಎ.ಎಸ್. (ಇಂಡಿಯನ್ ಆಡ್ಮಿನಿಸ್ಟ್ರೇಟಿವ್ ಸರ್ವಿಸ್) ಇದಕ್ಕೆ ಸಮಾನವಾದುದಾಗಿತ್ತು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏಕಕಾಲದಲ್ಲಿಯೇ ಇಂಗ್ಲೆಂಡ್ ಮತ್ತು ಭಾರತದಲ್ಲಿ ನಡೆಸಬೇಕು ಮತ್ತು ಭಾರತೀಯರನ್ನು ಅಧಿಕ ಸಂಖ್ಯೆಯಲ್ಲಿ ನಾಗರಿಕ ಸೇವೆಯಲ್ಲಿ ನೇಮಿಸಬೇಕೆಂದು ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತ ಬಂದಿತ್ತು. ಕಾಲಕ್ರಮೇಣ ಈ ಬೇಡಿಕೆಯನ್ನು ಈಡೇರಿಸಲಾಯಿತು.

ರವೀಂದ್ರನಾಥ ಟಾಗೋರರ ಸೋದರ ಸತ್ಯೇಂದ್ರನಾಥ ಟಾಗೋರರು ಐ.ಸಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾದ (1863) ಮೊಟ್ಟಮೊದಲ ಭಾರತೀಯರು.

ಸತ್ಯೇಂದ್ರನಾಥ ಟಾಗೋರ

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯು ಅಷ್ಟೊಂದು ದೀರ್ಘಕಾಲ ನಡೆಯಲು ನಾಗರಿಕ ಸೇವಾವರ್ಗ ಮಹತ್ವದ ಪಾತ್ರ ವಹಿಸಿತ್ತು. ವಾಸ್ತವವಾಗಿ, ಆಳ್ವಿಕೆಯನ್ನು ಕಾರ್ಯರೂಪದಲ್ಲಿ ನಡೆಸುತ್ತಿದ್ದುದು ಇದೇ ವರ್ಗ. ಇದೊಂದು ಪ್ರಬಲ ವರ್ಗವಾಗಿದ್ದು, ಸರ್ಕಾರದ ಧೋರಣೆಗಳ ಮೇಲೂ ಸಾಕಷ್ಟು ಪ್ರಭಾವ ಬೀರುತ್ತಿತ್ತು. ಇದೇ ವರ್ಗವು ಭಾರತೀಯರನ್ನು ತಾತ್ಸಾರದಿಂದ ನೋಡುತ್ತಿತ್ತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಪುಟಿದೆದ್ದ ಪ್ರಗತಿಶೀಲ ಚಿಂತನೆಗಳನ್ನು ಈ ವರ್ಗ ವಿರೋಧಿಸಿತು.

ಇಂದು ಕೇಂದ್ರ ಮತ್ತು ರಾಜ್ಯಗಳ ಲೋಕಸೇವಾ ಆಯೋಗಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೌಕರರ ಆಯ್ಕೆ ಮಾಡುತ್ತಿವೆ.

2 ಸೈನ್ಯಾಡಳಿತ

ಸೇನಾಪಡೆಯು ಬ್ರಿಟಿಷ್ ಆಡಳಿತದ ಎರಡನೆಯ ಆಧಾರ ಸ್ತಂಭದಂತಿತ್ತು. ಸೇನಾಪಡೆಯ ಕರ್ತವ್ಯಗಳೆಂದರೆ ಭಾರತೀಯ ರಾಜ್ಯಗಳನ್ನು ಆಕ್ರಮಿಸುವುದು; ಆಂತರಿಕ ದಂಗೆಗಳನ್ನು ನಿಗ್ರಹಿಸುವುದು; ಮತ್ತು ಬ್ರಿಟಿಷ್ ಸಾಮ್ರಾಜ್ಯವನ್ನು ಏಷ್ಯ ಮತ್ತು ಆಫ್ರಿಕಗಳಲ್ಲಿ ವಿಸ್ತರಣೆ ಮಾಡುವುದಾಗಿತ್ತು.

ಸೇನಾಪಡೆಯಲ್ಲಿ ಬಹುಮಂದಿ ಭಾರತೀಯರಿದ್ದರು. 1857ರಲ್ಲಿ ಸೇನಾಪಡೆಯ 3,11,400 ಮಂದಿಯಲ್ಲಿ 2,65,900 ಮಂದಿ ಭಾರತೀಯರಿದ್ದರು. ಭಾರತೀಯ ಸೈನಿಕರ ಸ್ಥಿತಿಗತಿ ಹೀನಾಯವಾಗಿತ್ತು. ಅವರನ್ನು ಏಜಂಟರ ಮೂಲಕ, ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ, ನೇಮಕಾತಿ ಮಾಡಲಾಗುತ್ತಿತ್ತು. ಭಾರತೀಯ ಸೈನಿಕರು ಐರೋಪ್ಯ ಅಧಿಕಾರಿಗಳ ಕೆಳಗೆ ಕೆಲಸ ಮಾಡಬೇಕಾಗಿತ್ತು. ಬ್ರಿಟಿಷ್ ನೌಕರರು ಎಂದೂ ಭಾರತೀಯರ ಕೈಕೆಳಗೆ ಕೆಲಸ ಮಾಡಲು ಸಿದ್ಧರಿರಲಿಲ್ಲ. ಒಬ್ಬ ಭಾರತೀಯ ಯೋಧ ಪಡೆಯಲು ಸಾಧ್ಯವಾಗುತ್ತಿದ್ದ ಅತ್ಯುನ್ನತ ಪದವಿಯೆಂದರೆ ಸುಬೇದಾರ್ ಹುದ್ದೆ ಮಾತ್ರವಾಗಿತ್ತು.

ಸೇನಾಪಡೆಯ ಎಲ್ಲಾ ಅಧಿಕಾರಿಗಳು ಬ್ರಿಟಿಷ್ ಪ್ರಜೆಗಳೇ ಆಗಿದ್ದರು. ಸೈನಿಕರಿಗೆ ತರಬೇತಿಯನ್ನು ನೀಡಲು ಡೆಹರಾಡೂನ್‍ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯನ್ನು ತೆರೆಯಲಾಗಿತ್ತು.

ಡೆಹರಾಡೂನ್‍ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹರಾಡೂನ್‍

3 ಪೊಲೀಸ್ ವ್ಯವಸ್ಥೆ

ಬ್ರಿಟಿಷ್ ಆಡಳಿತದ ಮೂರನೆಯ ಆಧಾರ ಸ್ತಂಭವೇ ಪೊಲೀಸ್ ವ್ಯವಸ್ಥೆ. ಕಾರ್ನ್‍ವಾಲೀಸನು ಪೊಲೀಸ್ ಪಡೆಯನ್ನು ಕಾನೂನು ಮತ್ತು ಶಿಸ್ತಿನ ಪಾಲನೆಗಾಗಿ ಸ್ಥಾಪಿಸಿದ್ದನು. ಈ ನಿಟ್ಟಿನಲ್ಲಿ ಬ್ರಿಟಿಷ್ ಅಧೀನವಿದ್ದ ಎಲ್ಲಾ ಭೂಪ್ರದೇಶಗಳನ್ನು ಹಲವಾರು ವೃತ್ತಗಳನ್ನಾಗಿ ವಿಂಗಡಣೆಮಾಡಿ, ಪ್ರತಿ ವೃತ್ತದಲ್ಲಿ ಪೊಲೀಸ್ ಠಾಣಿಯೊಂದನ್ನು ಸ್ಥಾಪನೆ ಮಾಡಲಾಯಿತು.

ಬ್ರಿಟಿಷರು ಪೊಲೀಸ್ ಪಡೆಯನ್ನು ಭಾರತೀಯರನ್ನು ನಿಗ್ರಹಿಸುವುದಕ್ಕಾಗಿ ಬಳಸಿಕೊಂಡರು. ಬ್ರಿಟಿಷರಿಗೆ ತಮ್ಮ ವಿಧೇಯತೆಯನ್ನು ಪ್ರದರ್ಶಿಸುವುದಕ್ಕಾಗಿ ಭಾರತೀಯ ಪೊಲೀಸರು ತಮ್ಮವರನ್ನು ಹೊಡೆದು ಬಡಿದು ಚಿತ್ರಹಿಂಸೆ ನೀಡುತ್ತಿದ್ದರು. 1861ರ ನಂತರ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ಬ್ರಿಟಿಷ್ ಸರಕಾರ ತಂದಿತು. ಇದಕ್ಕೆ 1857ರ ಮಹಾದಂಗೆ ಪ್ರಮುಖ ಕಾರಣವಾಗಿತ್ತು.

7.2 ನ್ಯಾಯಾಂಗ ವ್ಯವಸ್ಥೆ

ಬ್ರಿಟಿಷರು ಹೊಸ ನ್ಯಾಯಾಂಗ ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು ನ್ಯಾಯವೆಂಬುದು ಹಳ್ಳಿಯ ಪಂಚಾಯಿತಿಗಳಲ್ಲಿ ತೀರ್ಮಾನವಾಗುವ ವಿಷಯವಾಗಿತ್ತು. ನ್ಯಾಯ ತೀರ್ಮಾನದಲ್ಲಿ ಊರಿನ ಪ್ರಮುಖರು (ಪಟೇಲ, ಶಾನುಭೋಗ ಮುಂತಾದವರು) ಭಾಗವಹಿಸುತ್ತಿದ್ದರು. ಈ ವ್ಯವಸ್ಥೆಯನ್ನು ಬದಲಿಸಿ ಬ್ರಿಟಿಷರು ಐರೋಪ್ಯ ಮಾದರಿಯ ನ್ಯಾಯಾಡಳಿತ ವ್ಯವಸ್ಥೆಯನ್ನು ರೂಪಿಸಿದರು. ನ್ಯಾಯಾಡಳಿತವನ್ನು ನಡೆಸಲು ಪ್ರತಿ ಜಿಲ್ಲೆಯಲ್ಲಿ ನ್ಯಾಯಾಲಯಗಳನ್ನು ತೆರೆಯಲಾಯಿತು. ಕಲ್ಕತ್ತ, ಮದ್ರಾಸ್ ಮತ್ತು ಮುಂಬೈಗಳಲ್ಲಿ ಉಚ್ಚ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು 1774ರಲ್ಲಿ ವಾರೆನ್ ಹೇಸ್ಟಿಂಗ್ಸನು ಕಲ್ಕತ್ತದಲ್ಲಿ ಪ್ರಪ್ರಥಮ ಸುಪ್ರೀಂ ಕೋರ್ಟನ್ನು ಸ್ಥಾಪಿಸಿದನು.

ವಾರೆನ್ ಹೇಸ್ಟಿಂಗ್ಸ

ಕಲ್ಕತ್ತದಲ್ಲಿ ಪ್ರಪ್ರಥಮ ಸುಪ್ರೀಂ ಕೋರ್ಟ

ಮೆಕಾಲೆ ಆಯೋಗವು ಭಾರತೀಯ ದಂಡಸಂಹಿತೆಯ ಕರಡನ್ನು ಸಿದ್ದಪಡಿಸಿತು. ಅದನ್ನು ಅನುಸರಿಸಿ ಸಿವಿಲ್ ಪ್ರೊಸೀಜರ್ ಸಂಹಿತೆ ಮತ್ತು ಕ್ರಿಮಿನಲ್ ಸಂಹಿತೆಗಳನ್ನು ಜಾರಿಗೆ ತರಲಾಯಿತು. ಸಿವಿಲ್ ಕೋರ್ಟಗಳನ್ನು `ದಿವಾನಿ ಅದಾಲತ್’ ಮತ್ತು ಕ್ರಿಮಿನಲ್ ಕೋರ್ಟಗಳನ್ನು `ಫೌಜಿ ಅದಾಲತ್’ ಎಂದು ಕರೆಯುತ್ತಿದ್ದರು.

ಬ್ರಿಟಿಷರು ಜಾರಿಗೆ ತಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯುರೋಪಿಯನ್ನರು ಮತ್ತು ಭಾರತೀಯರ ನಡುವೆ ಬೇಧಭಾವವಿತ್ತು. ಬ್ರಿಟಿಷರ ನ್ಯಾಯದಾನ ವ್ಯವಸ್ಥೆಯಲ್ಲಿ ಸಹ ವರ್ಣ ತಾರತಮ್ಯವಿತ್ತು. ಬ್ರಿಟಿಷರು ನ್ಯಾಯ ವ್ಯವಸ್ಥೆಯಲ್ಲಿಯೂ ಮೇಲುಗೈ ಹೊಂದಿದ್ದರು. ಕೆಳದರ್ಜೆಯ ಕೋರ್ಟುಗಳಲ್ಲಿ ಮುನ್ಸಿಫ್ (Munsifs) ಮತ್ತು ಅಮಿನ್ (Amins) ಎಂಬ ಭಾರತೀಯ ನ್ಯಾಯಾಧೀಶರು ಇರುತ್ತಿದ್ದರು. ಈ ಸ್ಥಾನಗಳೇ ಭಾರತೀಯರಿಗೆ ಸಿಗುತ್ತಿದ್ದ ಅತ್ಯುನ್ನತ ಸ್ಥಾನಗಳಾಗಿದ್ದವು.

7.3 ಭೂಕಂದಾಯ ನೀತಿ

ಒಂದು ನಿಗದಿತ ಪ್ರಮಾಣದ ಆದಾಯವು ಸರ್ಕಾರದ ಖಜಾನೆಗೆ ಬರುವಂತೆ ಮಾಡುವುದಕ್ಕಾಗಿ ಬ್ರಿಟಿಷರು ಭೂಕಂದಾಯ ನೀತಿಗಳನ್ನು ಜಾರಿಗೆ ತಂದರು. ಅಲ್ಲದೆ. ಭಾರತದಲ್ಲಿ ಯುದ್ಧಗಳ ವೆಚ್ಚವನ್ನು ತುಂಬುವುದಕ್ಕಾಗಿ, ಕೈತುಂಬ ಸಂಬಳ ಪಡೆಯುತ್ತಿದ್ದ ಸಾವಿರಾರು ಜನ ಬ್ರಿಟಿಷ್ ಸಿಬ್ಬಂದಿಗಳ ವೇತನಕ್ಕಾಗಿ ಹಾಗೂ ಇತರ ಉದ್ದೇಶಗಳಿಗಾಗಿ ಕಂಪನಿಗೆ ಅಗಾಧ ಹಣಕಾಸಿನ ಅವಶ್ಯಕತೆಯಿತ್ತು. ಅದಕ್ಕಾಗಿ ಕಂಪನಿಯು ಭಾರತದ ರೈತರಿಂದ ದುಬಾರಿಯಾದ ಭೂಕಂದಾಯವನ್ನು ವಸೂಲು ಮಾಡಿತು.

ತನ್ನ ಅಧಿಕಾರಾವಧಿಯಲ್ಲಿ ವಾರನ್ ಹೇಸ್ಟಿಂಗ್ಸ್ ಕಂದಾಯ ವಸೂಲಿಗಾಗಿ ಹರಾಜು ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದನು. ಹರಾಜಿನ ವೇಳೆ ಜಮೀನ್ದಾರರು ಪರಸ್ಪರ ಪೈಪೋಟಿಯಿಂದ ಹೆಚ್ಚು ಮೊತ್ತದ ಕಂದಾಯ ಕೊಡಲು ಒಪ್ಪಿದರೂ ನಂತರ ವಸೂಲಿಯಲ್ಲಿ ವಿಫಲರಾಗುತ್ತಿದ್ದರು. ಹೀಗೆ ಕಂದಾಯದ ಪ್ರಮಾಣವು ಏರುಪೇರಾಗುತ್ತಿತ್ತು. ತಮ್ಮ ಸಮಸ್ಯೆಗೆ ಪರಿಹಾರವಾಗಿ ಬ್ರಿಟಿಷರು ಇನ್ನಿತರ ಮೂರು ರೀತಿಯ ಕಂದಾಯ ಪದ್ಧತಿಗಳನ್ನು ಆಚರಣೆಗೆ ತಂದರು.

(1) ಖಾಯಂ ಜಮೀನ್ದಾರಿ ಪದ್ಧತಿ (1793)

ಗವರ್ನರ್ ಜನರಲ್ ಕಾರ್ನವಾಲೀಸನು ಬಂಗಾಳ, ಬಿಹಾರ, ಒರಿಸ್ಸಗಳಲ್ಲಿ ಭೂಕಂದಾಯವನ್ನು ಖಾಯಂ ನೆಲೆಯಲ್ಲಿ ನಿಗದಿಪಡಿಸಲು ನಿರ್ಧರಿಸಿದನು. ಕಂದಾಯ ಸಂಗ್ರಹಕ್ಕೆ ಸಂಬಂಧಿಸಿದಂತೆ, ಕಾರ್ನವಾಲೀಸನು ಜಮೀನ್ದಾರರೊಡನೆ ಮಾಡಿಕೊಂಡ ಒಪ್ಪಂದವನ್ನು ಖಾಯಂ ಜಮೀನ್ದಾರಿ ಪದ್ಧತಿ ಎನ್ನುವರು. ಖಾಯಂ ಜಮೀನ್ದಾರಿ ಪದ್ಧತಿಯಡಿಯಲ್ಲಿ ಜಮೀನ್ದಾರರು ಬ್ರಿಟಿಷ್ ಸರ್ಕಾರದ ಏಜಂಟರಂತೆ ಕಾರ್ಯ ಮಾಡಿದರು. ಕಂಪನಿಯ ಗೇಣಿಯ ಪಾಲು ಖಾಯಂ ಆಗಿ ನಿಗದಿಯಾಗಿತ್ತು. ಆದುದರಿಂದ ಸರ್ಕಾರಕ್ಕೆ ನಿರ್ದಿಷ್ಟ ಪ್ರಮಾಣದ ಆದಾಯ ಬರುವಂತಾಯಿತು. ಕಂದಾಯ ವಸೂಲಿಗಾಗಿ ಸರ್ಕಾರ ಮಾಡುವ ವೆಚ್ಚ ಕಡಿಮೆಯಾಯಿತು. ಭೂಮಾಲೀಕರಾದ ಪ್ರಬಲ ಜಮೀನ್ದಾರರು ಅನೇಕ ಕಠಿಣ ಸಂದರ್ಭಗಳಲ್ಲಿ ಸರ್ಕಾರಕ್ಕೆ ಬೆಂಬಲ ನೀಡಿದರು. ತಮ್ಮನ್ನು ಬೆಂಬಲಿಸಲು ಮತ್ತು ಸಮರ್ಥಿಸಲು ಇಂತಹ ಅನೇಕ ಹೊಸ ವರ್ಗಗಳನ್ನು ಬ್ರಿಟಿಷರು ಸೃಷ್ಟಿ ಮಾಡಿದರು.

ರೈತರ ಮೇಲೆ ಪರಿಣಾಮಗಳು: ದುಬಾರಿಯಾದ ಕಂದಾಯ ಸಂಗ್ರಹಿಸುವ ಮೂಲಕ ಜಮೀನ್ದಾರರು ಕೃಷಿಕರ ಮೇಲೆ ದಬ್ಬಾಳಿಕೆ ನಡೆಸಿದರು. ಭೂಮಾಲಿಕರು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಯಾವುದೇ ಆಸಕ್ತಿವಹಿಸಲಿಲ್ಲ. ಬೆಳೆನಾಶವಾಗಿದ್ದರೂ ರೈತರು ಗೇಣಿಯನ್ನು ಪಾವತಿಸಬೇಕಿತ್ತು. ಒಟ್ಟಿನಲ್ಲಿ ಖಾಯಂ ಜಮೀನ್ದಾರಿ ಪದ್ಧತಿಯಿಂದ ಕೃಷಿರಂಗ ಕುಸಿಯಿತು. ತಮ್ಮ ಕೈಗಾರಿಕೆಗಳಿಗೆ ಬೇಕಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ರೈತರನ್ನು ಒತ್ತಾಯಿಸುವ ಮೂಲಕ ರೈತರನ್ನು ಮತ್ತಷ್ಟು ಬಡವರನ್ನಾಗಿಸಿದ್ದರು. ಈ ಕಾರಣದಿಂದ ಜೀತಪದ್ಧತಿಯು ತೀವ್ರವಾಗಿ ಬೆಳೆಯಿತು.

(2) ರೈತವಾರಿ ಪದ್ಧತಿ (1820)

ರೈತವಾರಿ ಪದ್ಧತಿ ಎಂದರೆ ಮಧ್ಯವರ್ತಿಗಳ ಸಹಾಯವಿಲ್ಲದೆ ರೈತನೇ ನೇರವಾಗಿ ಸರ್ಕಾರಕ್ಕೆ ಕಂದಾಯ ಸಂದಾಯ ಮಾಡುವ ಪದ್ಧತಿಯಾಗಿದೆ. ಸರ್ಕಾರ ಮತ್ತು ಸಾಗುವಳಿದಾರನ ನಡುವಿನ ನೇರ ಸಂಬಂಧವೇ ರೈತವಾರಿ ಪದ್ಧತಿಯ ಮುಖ್ಯ ಲಕ್ಷಣವಾಗಿದೆ. ಈ ಪದ್ಧತಿಯನ್ನು ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಜಾರಿಗೆ ತರಲಾಯಿತು. ಪರಿಣಾಮದಲ್ಲಿ ಈ ಪದ್ಧತಿಯು ಖಾಯಂ ಜಮೀನ್ದಾರಿ ಪದ್ಧತಿಗಿಂತ ಭಿನ್ನವಾಗಿರಲಿಲ್ಲ.

ರೈತವಾರಿ ಪದ್ಧತಿಯಡಿ ಭೂಮಿಯನ್ನು ಅಳತೆಮಾಡಿ, ಭೂಮಿಯ ಫಲವತ್ತತೆ, ನೀರಾವರಿ ಅನುಕೂಲತೆಗಳನ್ನು ಗಮನಿಸಿ ಕಂದಾಯವನ್ನು ನಿಗದಿ ಮಾಡಲಾಯಿತು. ಉತ್ಪನ್ನದ ನಿಗದಿತ ಭಾಗವನ್ನು (50 ಶೇಕಡ) ಕಂದಾಯವಾಗಿ ಪರಿವರ್ತಿಸಲಾಯಿತು. ಕಾಲಕಾಲಕ್ಕೆ ಕಂದಾಯವನ್ನು ನಿರ್ಣಯಿಸಲಾಗುತ್ತಿತ್ತು. ನಿಗದಿಪಡಿಸಿದ ಭೂಕಂದಾಯವು ವಿಪರೀತ ಹೆಚ್ಚಾಗಿರುತ್ತಿತ್ತು. ಕ್ಷಾಮ ಅಥವಾ ಪ್ರವಾಹದಿಂದ ಬೆಳೆ ಪೂರ್ಣವಾಗಿ ಹಾನಿಗೀಡಾದರೂ ರೈತರು ಕಂದಾಯವನ್ನು ತಪ್ಪದೆ ಪಾವತಿಸಬೇಕಾಗಿತ್ತು. ಈ ಪದ್ಧತಿಯನ್ನು ಮದ್ರಾಸ್ ಪ್ರಾಂತ್ಯದಾದ್ಯಂತ ಸರ್ ಥಾಮಸ್ ಮನ್ರೋ ಅವರು 1820ರಲ್ಲಿ ಜಾರಿಗೆ ತಂದರು.

ಸರ್ ಥಾಮಸ್ ಮನ್ರೋ

(3) ಮಹಲ್ವಾರಿ ಪದ್ದತಿ

ಮಹಲ್ ಎಂದರೆ ಗ್ರಾಮ ಅಥವಾ ಎಸ್ಟೇಟ್ ಎಂದರ್ಥ. ಮಹಲ್‍ಗೆ ಭೂಕಂದಾಯವನ್ನು ನಿಗದಿಪಡಿಸಲಾಗುತ್ತಿತ್ತು. ಸ್ಥಳೀಯ ಜಮೀನ್ದಾರನು ಎಲ್ಲ ರೈತರ ಭೂಕಂದಾಯಕ್ಕೆ ಹೊಣೆಗಾರನಾಗಿರುತ್ತಿದ್ದ. 19ನೇ ಶತಮಾನದಲ್ಲಿ ಜಾರಿಗೆ ಬಂದ ಈ ಪದ್ಧತಿಯು ಉತ್ತರ ಪ್ರದೇಶ, ಮಧ್ಯ ಪ್ರದೇಶದ ಕೆಲವು ಭಾಗಗಳು ಮತ್ತು ಪಂಜಾಬಿನಲ್ಲಿ ಚಾಲ್ತಿಯಲ್ಲಿತ್ತು.

ಭೂಕಂದಾಯ ಪದ್ಧತಿಗಳ ಒಟ್ಟು ಪರಿಣಾಮಗಳು

• ಜಮೀನನ್ನು ಮಾರಾಟದ ವಸ್ತುವನ್ನಾಗಿ ಬ್ರಿಟಿಷರು ಪರಿವರ್ತಿಸಿದರು.

• ಜಮೀನಿನ ಹರಾಜು ಮತ್ತು ಮಾರಾಟ ಪ್ರಕರಣಗಳು ಹೆಚ್ಚಿದವು.

• ಭೂಕಂದಾಯವನ್ನು ನಿಗದಿತ ರೂಪದಲ್ಲಿ ನೀಡುತ್ತಿದ್ದ ಕಾರಣ ಹಣದ ಮಹತ್ವ ಹೆಚ್ಚಾಯಿತು.

• ಆದಾಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹಲವಾರು ಜಮೀನ್ದಾರರು ಆಹಾರ ಧಾನ್ಯಗಳಿಗೆ ಬದಲಾಗಿ ಹತ್ತಿ, ಸೆಣಬು, ನೆಲಗಡಲೆ, ಕಬ್ಬಿನಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲು ರೈತರನ್ನು ಒತ್ತಾಯಿಸಿದರು. ವಾಣಿಜ್ಯ ಬೆಳೆಗಳು ರಫ್ತಿಗೆ ಯೋಗ್ಯವಾಗಿದ್ದು ಆಮೂಲಕ ಬ್ರಿಟಿಷರಿಗೆ ಲಾಭದಾಯಕವೆನಿಸಿತು. ಇದರ ಫಲವಾಗಿ ಆಹಾರ ವಸ್ತುಗಳ ಕೊರತೆ ತಲೆದೋರಿತು.

• ಜಮೀನ್ದಾರಿ ಪದ್ಧತಿಯಲ್ಲೇ ಅನೇಕ ಹೊಸ ರೈತ ವರ್ಗಗಳು ಹುಟ್ಟಿಕೊಂಡವು.

7.4 ಇಂಗ್ಲಿಷ್ ಶಿಕ್ಷಣ

ಶಿಕ್ಷಣವು ಪ್ರತಿ ವ್ಯಕ್ತಿಯನ್ನು ಸ್ವತಂತ್ರವನ್ನಾಗಿಸುವ ಸಾಧನ. ಶಿಕ್ಷಣದ ಮೂಲಕ ದೊರೆಯುವ ಅರಿವಿನಿಂದ ಬದುಕನ್ನು ಸುಮಧುರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಿಸುತ್ತದೆ. ಇಂಗ್ಲಿಷ್ ಸರಕಾರ, ಕ್ರೈಸ್ತ ಮಿಶನರಿಗಳು ಹಾಗೂ ಅನೇಕ ಭಾರತೀಯರು ಇಂಗ್ಲಿಷ್ ಶಿಕ್ಷಣದ ಪ್ರಸರಣದಲ್ಲಿ ಭಾಗಿಯಾದರು. ಇಂಗ್ಲಿಷ್ ಸರಕಾರ ಮತ್ತು ಕ್ರೈಸ್ತ ಮಿಶನರಿಗಳು ಆಡಳಿತ ನಿರ್ವಹಣೆ ಮತ್ತು ತಮ್ಮ ಧರ್ಮಪ್ರಸಾರಕ್ಕೆ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೆ ತಂದರು. ಅವರು ಇಂಗ್ಲಿಷ್ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿದ್ದರಿಂದ ಭಾರತೀಯರು ಅದರ ಲಾಭವನ್ನು ಪಡೆದರು. ಎಲ್ಲ ವರ್ಗದವರಿಗೂ ಶಿಕ್ಷಣ ದೊರೆಯುವಂತಾಯಿತು.

1813ರ ಚಾರ್ಟರ್ ಕಾಯ್ದೆಯಲ್ಲಿ ಭಾರತೀಯರ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಮೀಸಲಿಡಲಾಯಿತು. ಆದರೆ ಈ ಹಣದಲ್ಲಿ ಸರ್ಕಾರವು 1823ರ ತನಕ ಒಂದು ರೂಪಾಯಿಯನ್ನು ಕೂಡ ಶಿಕ್ಷಣಕ್ಕಾಗಿ ಖರ್ಚು ಮಾಡಿರಲಿಲ್ಲ. ಭಾರತೀಯ ಚಿಂತಕರು ಮತ್ತು ವಿದೇಶಿ ಕ್ರೈಸ್ತ ಮತ ಪ್ರಚಾರಕರು ಆಧುನಿಕ ಶಿಕ್ಷಣ ನೀಡಿಕೆಯ ಪರವಾಗಿ ಚಳವಳಿ ನಡೆಸಿದರು. ಈ ನಿಟ್ಟಿನಲ್ಲಿ ಕಂಪನಿಯ ಲೆಕ್ಕಾಚಾರ ಭಿನ್ನವಾಗಿತ್ತು. ತನ್ನ ಆಡಳಿತದಲ್ಲಿ ಕೆಳ ಹಂತದ ಸರ್ಕಾರಿ ನೌಕರರಾಗಿ ಕೆಲಸಮಾಡಲು ಅದಕ್ಕೆ ಇಂಗ್ಲಿಷ್ ಬಲ್ಲ ಭಾರತೀಯರು ಕಡಿಮೆ ವೇತನದಲ್ಲಿ ಬೇಕಾಗಿದ್ದರು. ತಮಗೆ ನಿಷ್ಠರಾಗಿರುವ ಭಾರತೀಯ ವಿದ್ಯಾವಂತ ವರ್ಗವನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದವರು ಲಾರ್ಡ್ ಮೆಕಾಲೆ ಮತ್ತು ಚಾಲ್ರ್ಸ್‍ವುಡ್.

ಲಾರ್ಡ್ ಮೆಕಾಲೆ

Charles wood

ಶಿಕ್ಷಣ ಮಾಧ್ಯಮದ ಬಗೆಗಿನ ವಿವಾದ

ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕೆಲವು ಆಂಗ್ಲ ವಿದ್ವಾಂಸರು ಭಾರತೀಯ ಭಾಷೆಗಳ ಮೂಲಕ ಭಾರತೀಯ ವಿಷಯಗಳನ್ನು ಕಲಿಸಬೇಕೆಂದು ವಾದಿಸಿದರು. ಇನ್ನು ಕೆಲವರು ಪಾಶ್ಚಾತ್ಯ ವಿಜ್ಞಾನ ಮತ್ತು ಸಾಹಿತ್ಯವನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡಬೇಕೆಂದು ವಾದಿಸಿದರು. ವಿವಾದವು ಅಂತಿಮವಾಗಿ ಇತ್ಯಥ್ರ್ಯಗೊಂಡು (1835ರಲ್ಲಿ), ಗವರ್ನರ್ ಜನರಲ್ ವಿಲಿಯಂ ಬೆಂಟಿಂಕನು ಪಾಶ್ಚಾತ್ಯ ವಿಜ್ಞಾನ ಮತ್ತು ಇಂಗ್ಲಿಷ್ ಮಾಧ್ಯಮದ ಪರವಾಗಿ ಶಿಕ್ಷಣ ನೀತಿಯನ್ನು ಘೋಷಿಸಿದನು.

ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ

ಕೆಲವು ಐರೋಪ್ಯ ವಿದ್ವಾಂಸರು ಪ್ರಾಚೀನ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪಶ್ಚಿಮದ ಜಗತ್ತಿಗೆ ಪರಿಚಯಿಸಿದರು. 1784ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಿ ಬಂದ ಸರ್ ವಿಲಿಯಂ ಜೋನ್ಸನು ಕಲ್ಕತ್ತದಲ್ಲಿ `ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ಸ್ಥಾಪಿಸಿದನು. ಸಂಸ್ಕೃತ ಭಾಷೆಯ ಹಿರಿಮೆಯನ್ನು ಸಾರಿದನು. ಸರ್ ಚಾಲ್ರ್ಸ್ ವಿಲ್ಕಿನ್ಸ್ 1785ರಲ್ಲಿ ಭಗವದ್ಗೀತೆಯನ್ನು ಇಂಗ್ಲಿಷಿಗೆ ಭಾಷಾಂತರಿಸಿದನು. ಮಾಕ್ಸ್ ಮುಲ್ಲರ್ ಋಗ್ವೇದ ಮತ್ತು ಇತರ ಕೃತಿಗಳನ್ನು ಭಾಷಾಂತರಿಸಿದನು.

ಮಾಕ್ಸ್ ಮುಲ್ಲರ್

ಬೆಂಟಿಂಕನ ಘೋಷಣೆಗೆ ಆತನ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಮೆಕಾಲೆಯ ಟಿಪ್ಪಣಿ ಆಧಾರವಾಗಿತ್ತು. ಮೆಕಾಲೆ ಓರ್ವ ಕಟ್ಟಾ ಆಂಗ್ಲವಾದಿಯಾಗಿದ್ದ. ಭಾರತೀಯ ಜ್ಞಾನವು ಕೀಳುಮಟ್ಟದ್ದೆಂದು ಆತನ ವಾದ. ಸಂಸ್ಕೃತ ವ್ಯಾಕರಣವನ್ನು ಆತ ಕಟುವಾಗಿ ಅಪಹಾಸ್ಯ ಮಾಡಿದನು. ಭಾರತೀಯರನ್ನು ಅವರ ಸಾಂಸ್ಕೃತಿಕ ಬೇರುಗಳಿಂದ ದೂರಮಾಡುವುದು ಅವನ ಅಂತಿಮ ಗುರಿಯಾಗಿತ್ತು. “ಒಂದು ಒಳ್ಳೆಯ ಐರೋಪ್ಯ ಗ್ರಂಥಾಲಯದ ಒಂದು ಕಪಾಟಿನ ಒಂದು ಸಾಲಿನ ಪುಸ್ತಕಗಳು ಇಡೀ ಪೂರ್ವದ ಜ್ಞಾನ ಭಂಡಾರಕ್ಕೆ ಸರಿಸಾಟಿಯಲ್ಲ” ಎನ್ನುವ ಅವನ ಮಾತುಗಳು ಅವನಲ್ಲಿನ ಪೂರ್ವಾಗ್ರಹವನ್ನು ತೋರಿಸುತ್ತದೆ.

1854ರಲ್ಲಿ ಬ್ರಿಟಿಷರು ಭಾರತಕ್ಕೆ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದರು. ಇದು ಚಾಲ್ರ್ಸ್ ವುಡ್ ವರದಿಯನ್ನು ಆಧರಿಸಿತ್ತು. ಅಲ್ಪಕಾಲದಲ್ಲೇ ಕಲ್ಕತ್ತ, ಮುಂಬೈ ಮತ್ತು ಮದ್ರಾಸುಗಳಲ್ಲಿ ವಿಶ್ವವಿದ್ಯಾಲಯಗಳನ್ನು (1857) ಸ್ಥಾಪನೆ ಮಾಡಲಾಯಿತು. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು, ವಿಶ್ವವಿದ್ಯಾಲಯ ಹೀಗೆ ಹಂತಹಂತವಾಗಿ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು. ಶಿಕ್ಷಣ ಕ್ಷೇತ್ರದ ಮೇಲ್ವಿಚಾರಣೆಗಾಗಿ ಶಿಕ್ಷಣ ಇಲಾಖೆಗಳನ್ನು ಪ್ರಾಂತಗಳಲ್ಲಿ ರಚಿಸಲಾಯಿತು. 1844ರಲ್ಲಿ ಇಂಗ್ಲಿಷ್ ಭಾಷೆಯು ಆಡಳಿತದ ಅಧಿಕೃತ ಭಾಷೆಯಾಯಿತು.

ಪಾಶ್ಚಾತ್ಯ ಶಿಕ್ಷಣದ ಪರಿಣಾಮ

ಹೊಸ ಶಿಕ್ಷಣ ಕ್ರಮದಿಂದ ವಿವಿಧ ಭಾಷಿಕ ಭಾರತೀಯರು ಇಂಗ್ಲಿಷ್ ಭಾಷೆಯಲ್ಲಿ ಪರಸ್ಪರ ಸಂವಾದಿಸಲು ಸಾಧ್ಯವಾಯಿತು. ಇದು ರಾಷ್ಟ್ರೀಯತೆಯ ಭಾವನೆಯನ್ನು ಜನರಲ್ಲಿ ಬೆಳೆಸಲು ಸಹಕಾರಿಯಾಯಿತು. ಯುರೋಪಿನ ಬೌದ್ಧಿಕ ಚಿಂತನೆಗಳು ಕ್ರಮೇಣ ಭಾರತೀಯ ಸಮಾಜವನ್ನು ಪ್ರವೇಶಿಸಿ ದೂರಗಾಮಿ ಪರಿಣಾಮಗಳನ್ನುಂಟು ಮಾಡಿದವು. ಭಾರತೀಯ ಸಾಹಿತ್ಯದ ಮೇಲೂ ಗಂಭೀರ ಪರಿಣಾಮವನ್ನುಂಟು ಮಾಡಿ ಹೊಸ ಸಾಹಿತ್ಯಕ ಚಳವಳಿಗಳಿಗೆ ಈ ಶಿಕ್ಷಣ ಪದ್ಧತಿ ಕಾರಣವಾಯಿತು.

7.5 ವ್ಯಾಪಾರ ಮತ್ತು ವಾಣಿಜ್ಯ

18 ಮತ್ತು 19ನೇ ಶತಮಾನದಲ್ಲಾದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯು ಭಾರತದ ವ್ಯಾಪಾರ ಮತ್ತು ವಾಣಿಜ್ಯದ ಮೇಲೆ ಗಂಭೀರ ಪರಿಣಾಮಗಳನ್ನುಂಟು ಮಾಡಿತು. 1600ರಿಂದ 1757ರ ತನಕ ಕಂಪನಿಯು ಕೇವಲ ಒಂದು ವ್ಯಾಪಾರಿ ಕಂಪನಿಯಾಗಿತ್ತು. ಪ್ಲಾಸಿ ಕದನದ (1757) ಬಳಿಕ ಅದು ಭಾರತದ ವ್ಯಾಪಾರ ಮತ್ತು ಉತ್ಪಾದನೆಯ ಮೇಲೆ ಏಕಸ್ವಾಮ್ಯವನ್ನು ಸಾಧಿಸುವುದಕ್ಕೆ ಬಂಗಾಳದಲ್ಲಿನ ತನ್ನ ರಾಜಕೀಯ ಅಧಿಕಾರವನ್ನು ಚೆನ್ನಾಗಿ ಬಳಸಿಕೊಂಡಿತು. ಅದೇ ವೇಳೆ ಕಚ್ಚಾಹತ್ತಿಯ ಮಾರಾಟದ ಮೇಲೂ ಅದು ಏಕಸ್ವಾಮ್ಯ ಸ್ಥಾಪಿಸಿತು. ಇದರ ಪರಿಣಾಮವಾಗಿ ನೇಕಾರರು ಕಚ್ಚಾವಸ್ತುವನ್ನು ದುಬಾರಿ ಬೆಲೆಗೆ ಕೊಳ್ಳುವಂತಾಯಿತು. ಒಟ್ಟಿನಲ್ಲಿ ಬ್ರಿಟಿಷ್ ವಾಣಿಜ್ಯ ನೀತಿಯ ಗುರಿ ಬ್ರಿಟಿಷ್ ಕೈಗಾರಿಕೆಯ ಅವಶ್ಯಕತೆಯನ್ನು ಪೂರೈಸುವುದಲ್ಲದೆ ಬೇರೇನೂ ಆಗಿರಲಿಲ್ಲ. ಭಾರತವು ಬ್ರಿಟನ್ನಿನ ಯಂತ್ರ ನಿರ್ಮಿತ ಸರಕುಗಳ ಆಮದುದಾರ ಮತ್ತು ಬ್ರಿಟನ್ನಿಗೆ ಬೇಕಾದ ಕಚ್ಚಾವಸ್ತುಗಳ ರಫ್ತುದಾರ ಆಗಬೇಕೆಂಬುದಷ್ಟೇ ಅದರ ಮುಖ್ಯ ಗುರಿಯಾಗಿತ್ತು. ಮುಕ್ತ ವ್ಯಾಪಾರ ನೀತಿಯನ್ನು ಜಾರಿಗೊಳಿಸುವ ಮೂಲಕ ಭಾರತದ ಗುಡಿ ಕೈಗಾರಿಕೆಗಳನ್ನು ಅವನತಿಯತ್ತ ದೂಡಿತು.

ಬ್ರಿಟಿಷ್ ಆಳ್ವಿಕೆಯ ವೇಳೆ ಭಾರತವು ಬಡ ರಾಷ್ಟ್ರವಾಗಿ ಮಾರ್ಪಾಡುಗೊಳ್ಳಲು ಮುಖ್ಯ ಕಾರಣವೆಂದರೆ ದೇಶದ ಸಂಪತ್ತು ಇಂಗ್ಲೆಂಡಿಗೆ ಸೋರಿ ಹೋದದ್ದು. ಇಂಗ್ಲೆಂಡಿಗೆ ಹಣ ರವಾನೆಯು ದಾದಾಭಾಯಿ ನವರೋಜಿಯವರು ಹೇಳುವಂತೆ ಸಂಪತ್ತಿನ ಸೋರಿಕೆಗೆ (drain of wealth) ಮುಖ್ಯ ಕಾರಣವಾಗಿತ್ತು. ಭಾರತದಲ್ಲಿನ ಬ್ರಿಟಿಷ್ ನಾಗರಿಕರು ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿ ಗಳಿಸಿದ ಲಾಭವು ಸಂಪತ್ತಿನ ಸೋರಿಕೆಗೆ ಇನ್ನೊಂದು ಪ್ರಮುಖ ಮೂಲವಾಗಿತ್ತು.

ದಾದಾಭಾಯಿ ನವರೋಜಿ

ಸಂಪತ್ತಿನ ಸೋರಿಕೆಯ ಮುಖ್ಯ ಪರಿಣಾಮವಾಗಿ ಭಾರತ ಬಡ ರಾಷ್ಟ್ರವಾಯಿತಲ್ಲದೆ ದೇಶದಲ್ಲಿ ಬಂಡವಾಳದ ಕೊರತೆ ಉಂಟಾಯಿತು. ಇದರಿಂದ ಇಲ್ಲಿನ ಕೈಗಾರಿಕಾ ಅಭಿವೃದ್ಧಿಗೆ ಅಡ್ಡಿಯಾಯಿತು. `ಅರ್ಥಶಾಸ್ತ್ರದ ಪಿತಾಮಹ’ ಆಡಂ ಸ್ಮಿತ್ ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರನ್ನು `ಸುಲಿಗೆಕೋರರು’ ಎಂದು ಬಣ್ಣಿಸಿದ್ದಾನೆ.

ಅರ್ಥಶಾಸ್ತ್ರದ ಪಿತಾಮಹ’ ಆಡಂ ಸ್ಮಿತ್

18 ಮತ್ತು 19ನೇ ಶತಮಾನದಲ್ಲಾದ ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ

1835 ರಲ್ಲಿ ಗ್ರೇಟ್ ಬ್ರಿಟನ್‌ನ ನೇಯ್ಗೆ ಶೆಡ್‌ನಲ್ಲಿ ರಾಬರ್ಟ್ಸ್ ಮಗ್ಗ

1747 ರಲ್ಲಿ ವಿಲಿಯಂ ಹೊಗಾರ್ತ್‌ನ ಕೈಗಾರಿಕೆ ಮತ್ತು ಆಲಸ್ಯದಿಂದ ಕೈಮಗ್ಗ ನೇಯ್ಗೆ


ಡರ್ಬಿಯಲ್ಲಿ ಜಾನ್ ಲೊಂಬೆ ಅವರ ರೇಷ್ಮೆ ಗಿರಣಿ ಸ್ಥಳವನ್ನು ಡರ್ಬಿ ಸಿಲ್ಕ್ ಮಿಲ್ ಆಗಿ ಮರುನಿರ್ಮಾಣ

ಕೈಗಾರಿಕಾ ಕ್ರಾಂತಿಯ ಪ್ರಾರಂಭದಲ್ಲಿ ಯುರೋಪಿಯನ್ ವಸಾಹತುಶಾಹಿ ಸಾಮ್ರಾಜ್ಯಗಳು, ಆಧುನಿಕ ರಾಜಕೀಯ ಗಡಿಗಳ ಮೇಲೆ ಹೇರಲ್ಪಟ್ಟವು

ನರ್ನ್‌ಬರ್ಗ್‌ನಲ್ಲಿ ಒಬ್ಬ ನೇಕಾರ , ಸಿ  1524

ವುಪ್ಪರ್ಟಾಲ್‌ನಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ನೂಲುವ ಜೆನ್ನಿಯ ಮಾದರಿ . 1764 ರಲ್ಲಿ ಜೇಮ್ಸ್ ಹಾರ್ಗ್ರೀವ್ಸ್ ಕಂಡುಹಿಡಿದ , ತಿರುಗುವ ಜೆನ್ನಿ ಕ್ರಾಂತಿಯನ್ನು ಪ್ರಾರಂಭಿಸಿದ ನಾವೀನ್ಯತೆಗಳಲ್ಲಿ ಒಂದಾಗಿದೆ.

ಆವಿಷ್ಕಾರಕ ಸ್ಯಾಮ್ಯುಯೆಲ್ ಕ್ರೋಂಪ್ಟನ್ ನಿರ್ಮಿಸಿದ ನೂಲುವ ಹೇಸರಗತ್ತೆಯ ಏಕೈಕ ಉಳಿದಿರುವ ಉದಾಹರಣೆ, ಹೇಸರಗತ್ತೆ ಕನಿಷ್ಠ ಕಾರ್ಮಿಕರೊಂದಿಗೆ ಉತ್ತಮ-ಗುಣಮಟ್ಟದ ದಾರವನ್ನು ಉತ್ಪಾದಿಸಿತು, ಈಗ ಗ್ರೇಟರ್ ಮ್ಯಾಂಚೆಸ್ಟರ್‌ನ ಬೋಲ್ಟನ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.

ಪಶ್ಚಿಮ ಯಾರ್ಕ್‌ಷೈರ್‌ನ ಲೀಡ್ಸ್‌ನಲ್ಲಿರುವ ಮಾರ್ಷಲ್‌ನ ಟೆಂಪಲ್ ವರ್ಕ್ಸ್‌ನ ಒಳಭಾಗ

ಪ್ರತಿಧ್ವನಿ ಕುಲುಮೆಯು ಗಣಿಗಾರಿಕೆ ಮಾಡಿದ ಕಲ್ಲಿದ್ದಲನ್ನು ಬಳಸಿಕೊಂಡು ಎರಕಹೊಯ್ದ ಕಬ್ಬಿಣವನ್ನು ಉತ್ಪಾದಿಸಬಹುದು ; ಸುಡುವ ಕಲ್ಲಿದ್ದಲು ಕಬ್ಬಿಣದಿಂದ ಪ್ರತ್ಯೇಕವಾಗಿ ಉಳಿಯಿತು, ಆದ್ದರಿಂದ ಇದು ಕಬ್ಬಿಣವನ್ನು ಸಲ್ಫರ್ ಮತ್ತು ಸಿಲಿಕಾದಂತಹ ಕಲ್ಮಶಗಳಿಂದ ಕಲುಷಿತಗೊಳಿಸಲಿಲ್ಲ, ಇದು ಕಬ್ಬಿಣದ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಯಿತು.

ಇಂಗ್ಲೆಂಡಿನ ಶ್ರಾಪ್‌ಶೈರ್‌ನಲ್ಲಿರುವ ಕಬ್ಬಿಣದ ಸೇತುವೆ , ಕಬ್ಬಿಣದಿಂದ ನಿರ್ಮಿಸಲಾದ ವಿಶ್ವದ ಮೊದಲ ಸೇತುವೆ, 1781 ರಲ್ಲಿ ಪ್ರಾರಂಭವಾಯಿತು

ಒಂದು ವ್ಯಾಟ್ ಸ್ಟೀಮ್ ಇಂಜಿನ್ , ಜೇಮ್ಸ್ ವ್ಯಾಟ್ ಕಂಡುಹಿಡಿದನು , ಅವರು ಉಗಿ ಎಂಜಿನ್ ಅನ್ನು ಪರಸ್ಪರ ಚಲನೆಯಿಂದ ಪರಿವರ್ತಿಸಿದರು , ಇದನ್ನು ಕೈಗಾರಿಕಾ ಅನ್ವಯಿಕೆಗಳಿಗೆ ಸೂಕ್ತವಾದ ತಿರುಗುವ ಚಲನೆಗೆ ಪಂಪ್ ಮಾಡಲು ಬಳಸಲಾಗುತ್ತದೆ ; ವ್ಯಾಟ್ ಮತ್ತು ಇತರರು ಸ್ಟೀಮ್ ಇಂಜಿನ್ನ ದಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸಿದರು.

ನ್ಯೂಕೋಮೆನ್‌ನ ಉಗಿ-ಚಾಲಿತ ವಾತಾವರಣದ ಎಂಜಿನ್ ಮೊದಲ ಪ್ರಾಯೋಗಿಕ ಪಿಸ್ಟನ್ ಸ್ಟೀಮ್ ಎಂಜಿನ್ ಆಗಿತ್ತು; ನಂತರದ ಉಗಿ ಯಂತ್ರಗಳು ಕೈಗಾರಿಕಾ ಕ್ರಾಂತಿಗೆ ಶಕ್ತಿ ತುಂಬಿದವು.

ಮೌಡ್ಸ್ಲೇಯ ಆರಂಭಿಕ ಸ್ಕ್ರೂ-ಕಟಿಂಗ್ ಲ್ಯಾಥ್ಸ್ , 1790 ರ ದಶಕದ ಅಂತ್ಯದಲ್ಲಿ ಅಭಿವೃದ್ಧಿಪಡಿಸಲಾಯಿತು

ಥೇಮ್ಸ್ ಸುರಂಗ , ಇದು 1843 ರಲ್ಲಿ ಪ್ರಾರಂಭವಾಯಿತು; ಕಾಂಕ್ರೀಟ್ ಅನ್ನು ವಿಶ್ವದ ಮೊದಲ ನೀರೊಳಗಿನ ಸುರಂಗದಲ್ಲಿ ಬಳಸಲಾಯಿತು.

1823 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೊದಲ ಮೆಕಾಡಮ್ ರಸ್ತೆಯ ನಿರ್ಮಾಣ. ಮುಂಭಾಗದಲ್ಲಿ, ಕಾರ್ಮಿಕರು “6 ಔನ್ಸ್ ತೂಕವನ್ನು ಮೀರದಂತೆ ಅಥವಾ ಎರಡು ಇಂಚಿನ ಉಂಗುರವನ್ನು ಹಾದುಹೋಗಲು” ಕಲ್ಲುಗಳನ್ನು ಒಡೆಯುತ್ತಿದ್ದಾರೆ. 

1830 ರಲ್ಲಿ ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ರೈಲ್ವೆಯ ಪ್ರಾರಂಭವನ್ನು ಚಿತ್ರಿಸುವ ಭಾವಚಿತ್ರ , ಇದು ವಿಶ್ವದ ಮೊದಲ ಇಂಟರ್-ಸಿಟಿ ರೈಲ್ವೆ ಮತ್ತು ಅದರ ಯಶಸ್ಸಿನ ಕಾರಣದಿಂದ ರೈಲ್ವೆ ಉನ್ಮಾದವನ್ನು ಹುಟ್ಟುಹಾಕಿತು

1853 ರಲ್ಲಿ ವಿಂಚೆಸ್ಟರ್‌ನ ಹೈ ಸ್ಟ್ರೀಟ್; ಹೈ ಸ್ಟ್ರೀಟ್‌ಗಳ ಸಂಖ್ಯೆಯು 18 ನೇ ಶತಮಾನದಲ್ಲಿ ಬ್ರಿಟನ್‌ನಲ್ಲಿ ಪಟ್ಟಣಗಳು ​​ಮತ್ತು ನಗರಗಳಲ್ಲಿ ಚಿಲ್ಲರೆ ವ್ಯಾಪಾರಕ್ಕಾಗಿ ಪ್ರಾಥಮಿಕ ರಸ್ತೆಯಾಗಿದೆ

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನ ಪಶ್ಚಿಮಕ್ಕೆ ಕಪ್ಪು ದೇಶ

ಕಾಟೊನೊಪೊಲಿಸ್ , ಮ್ಯಾಂಚೆಸ್ಟರ್‌ನ ಕಾರ್ಖಾನೆಯ ಚಿಮಣಿಗಳ 1840 ರ ಭಾವಚಿತ್ರ

ಗಣಿ ಗ್ಯಾಲರಿಯ ಉದ್ದಕ್ಕೂ ಕಲ್ಲಿದ್ದಲು ತೊಟ್ಟಿಯನ್ನು ಎಳೆಯುತ್ತಿರುವ ಯುವ “ಡ್ರಾಯರ್”. ಬ್ರಿಟನ್‌ನಲ್ಲಿ, 1842 ಮತ್ತು 1844 ರಲ್ಲಿ ಜಾರಿಗೆ ಬಂದ ಕಾನೂನುಗಳು ಗಣಿ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಿದವು.

ಸರ್ ಹೆನ್ರಿ ಬೆಸ್ಸೆಮರ್ನ ಬೆಸ್ಸೆಮರ್ ಪರಿವರ್ತಕ , 1850 ರಿಂದ 1950 ರವರೆಗಿನ ಉಕ್ಕಿನ ತಯಾರಿಕೆಯ ಪ್ರಮುಖ ತಂತ್ರವಾಗಿದೆ , ಇದು ಶೆಫೀಲ್ಡ್ನಲ್ಲಿದೆ .

ಪ್ರಶ್ನೋತ್ತರಗಳು

https://youtu.be/-V_sk4PCZtY

ಬ್ರಿಟಿಷ್ ಆಳ್ವಿಕೆಯ ಪರಿಣಾಮ, 7 ನೇ ತರಗತಿ ಸಮಾಜ ವಿಜ್ಞಾನ, ಪಠ್ಯ ಪ್ರಶ್ನೆ ಮತ್ತು ಉತ್ತರಗಳು (ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ)

**********