ವೆಬ್‌ಸೈಟ್ ಉದ್ದೇಶ

ಡಿಜಿಟಲ್ ಮಾರ್ಕೆಟಿಂಗ್ ಎನ್ನುವುದು ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಅದೊಂದು ಹೊಸ ಉದ್ಯಮ ಕ್ಷೇತ್ರವಾಗಿದೆ. ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಹಳ್ಳಿಗೆ ಸೀಮಿತವಾಗಿರದೆ ವೇಗದ ಜಗತ್ತಿನ ಹೊಸ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಡಿಜಿಟಲ್ ಮಾರ್ಕೆಟಿಂಗ್ ಅರಿವು ಪ್ರಾಥಮಿಕ ಶಿಕ್ಷಣದಿಂದಲೇ ಶುರುವಾಗಬೇಕು ಎನ್ನುವ ಉದ್ದೇಶಕ್ಕೆ ಹುಲ್ಕುತ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ವೆಬ್‌ಸೈಟ್ ಆರಂಭಿಸಲಾಗಿದೆ.
ಈ ವೆಬ್‌ಸೈಟ್ ನಲ್ಲಿ ವಿದ್ಯಾರ್ಥಿಗಳು ತಮ್ಮ ಬರಹಗಳನ್ನು ಪೋಸ್ಟ್ ಮಾಡಬಹುದು. ಶಿಕ್ಷಕರು ಪಠ್ಯ ವಸ್ತುಗಳನ್ನು ಇದರಲ್ಲಿ ಪೋಸ್ಟ್ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಪಠ್ಯ, ವಿಷಯ ಸಂಗ್ರಹ ಈ ಒಂದು ವೆಬ್‌ಸೈಟ್‌ನಲ್ಲಿ ಸಿಗಲಿದೆ.

ಶಾಲೆಯ ಪರಿಚಯ

ಸಿದ್ದಾಪುರ ಪಟ್ಟಣದಿಂದ ಅತ್ಯಂತ ದೂರದಲ್ಲಿದ್ದರೂ ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಮಟ್ಟ ಶಿಕ್ಷಣದಿಂದ ದೂರವಾಗಿಲ್ಲ. 1964 ರಲ್ಲಿ ಸ್ಥಾಪನೆಯಾದ ನಮ್ಮ ಶಾಲೆಯಲ್ಲಿ  ಈಗ 44 ವಿದ್ಯಾರ್ಥಿಗಳಿದ್ದಾರೆ. ತಾಲೂಕು ಕೇಂದ್ರದಿಂದ ಅಂದಾಜು 28 ಕಿ.ಮೀ. ದೂರದಲ್ಲಿದೆ. ಶಾಲೆ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮದಲ್ಲಿದೆ. 50,000/- ವೆಚ್ಚದಲ್ಲಿ Smart Calss, Smart TV ಸಜ್ಜುಗೊಳಿಸಲಾಗಿದೆ.
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನವೋದಯ, ಮೊರಾರ್ಜಿ ಶಾಲೆ ಮತ್ತು ಆಳ್ವಾಸ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಕೇಂದ್ರಗಳಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ದರ್ಶನ ಹರಿಕಾಂತ ಅವರು ಮುಖ್ಯ ಶಿಕ್ಷಕರಾಗಿದ್ದಾಗ ಈ ವೆಬ್‌ಸೈಟ್ ಆರಂಭಿಸಲಾಗಿದೆ.

Contact

+91 94488 06661
Dharshan, Harikantra, Head Master

Location

Havinabeelu Village
Siddapura, Uttara Kannada