ಹುಲ್ಕುತ್ರಿಯಲ್ಲಿ ಉದ್ಘಾಟನೆಗೊಂಡ ನಿಸರ್ಗ ಕಲಿಕಾ ಕಾನು ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಸಿದ್ದಾಪುರದ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಸರ್ಗ ಕಲಿಕಾ ಕಾನು ಉದ್ಘಾಟಿಸಲಾಯಿತು. ಶಾಲೆಯ ಪಕ್ಕದ ಕಾಡಿನಲ್ಲಿ ಪರಿಸರ ಅಧ್ಯಯನದಲ್ಲಿನ ಪಾಠಗಳನ್ನು ಪರಿಸರದ ಜೊತೆ ಕಲಿಯುವಂತೆ ರೂಪಿಸಲಾದ ಪಠ್ಯಾಧಾರಿತ ನಿಸರ್ಗ ಕಲಿಕಾ ಕಾನನ್ನು ಕ್ಯಾದಗಿ ವಲಯ ಅರಣ್ಯಾಧಿಕಾರಿಗಳಾದ...

ಯಶಸ್ವಿ 6ನೇ ವರ್ಷದ ‘ಮಕ್ಕಳ ಸಂತೆ’ ಕಾರ್ಯಕ್ರಮ

ದಿನಾಂಕ 27-೦2-2023 ಮಂಗಳವಾರದಂದು ನಮ್ಮ ಶಾಲೆಯಲ್ಲಿ 6ನೇ ವರ್ಷದ ಮಕ್ಕಳ ಸಂತೆ ನಡೆಯಿತು. ಸಂತೆಯಲ್ಲಿ ಸಾವಯವ ಪದಾರ್ಥಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಮುಖ್ಯವಾಗಿ ಸ್ಥಳೀಯವಾಗಿ ದೊರೆಯುವ ವಸ್ತುಗಳಾದ ಬಾಳೆಕಾಯಿ, ಎಳನೀರು, ಕಾಮಕಸ್ತೂರಿ, ಎಳ್ಳು ನೀರು ತಂಪು, ರಾಗಿ ತಂಪು, ಲಿಂಬು ಶರಬತ್, ಸೋಡಾ ಶರಬತ್ತು, ಮಜ್ಜಿಗೆ...

2022-23 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಮುಖ್ಯ ಅಡುಗೆಯವರಾಗಿ ನಿವೃತ್ತಿಗೊಂಡ ಶ್ರೀಮತಿ ಪಾರ್ವತಿ ನಾರಾಯಣ ಗೌಡ ಇವರಿಗೆ ಸನ್ಮಾನ ಹಾಗೂ ಆಹಾರ ಮೇಳ ಕಾರ್ಯಕ್ರಮ.

ದಿನಾಂಕ 24-02-2023 ಶುಕ್ರವಾರದಂದು ನಮ್ಮ ಶಾಲೆಯಲ್ಲಿ 2022-23 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಮುಖ್ಯ ಅಡುಗೆಯವರಾಗಿ ನಿವೃತ್ತಿಗೊಂಡ ಶ್ರೀಮತಿ ಪಾರ್ವತಿ ನಾರಾಯಣ ಗೌಡ ಇವರಿಗೆ ಸನ್ಮಾನ ಹಾಗೂ ಆಹಾರ ಮೇಳ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಧಾಟನೆಯನ್ನು ನೆರವೇರಿಸಿದ ಸೋವಿನಕೊಪ್ಪ ಗ್ರಾಮ ಪಂಚಾಯತ...

ಕ್ಲಸ್ಟರ್ ಹಾಗೂ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ 2022-23 : ವಿದ್ಯಾರ್ಥಿಗಳ ಸಾಧನೆ

ಜಿಲ್ಲಾ ಮಟ್ಟಕ್ಕೆ ತೇಜಸ್ವಿ ಆಯ್ಕೆ 2022-23ನೇ ಸಾಲಿನ ಪ್ರತಿಭಾ ಕಾರಂಜಿಯು ಹಿರಿಯ ಪ್ರಾಥಮಿಕ ಶಾಲೆ ಬಿಳಗಿಯಲ್ಲಿ ನಡೆದಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ 14 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು 8 ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಕನ್ನಡ ಕಂಠಪಾಠ – ಜೆ. ಅಕ್ಷರ – ಪ್ರಥಮ, ಹಿಂದಿ ಕಂಠಪಾಠ...

ಸಂಭ್ರಮದಿಂದ ಜರುಗಿದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ

76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಎಸ್.ಡಿ.ಎಮ್.ಸಿ. ಸಮಿತಿ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಈ ದಿನ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ‍್ರೀ ಸುರೇಶ ಬಂಗಾರ್ಯ ಗೌಡ ಇವರು ಧ್ವಜಾರೋಹಣ ಮಾಡುವುದರ ಮೂಲಕ ನೆರವೇರಿಸಿದರು. ನಂತರ ವಿವಿಧ ಘೋಷಣೆ ಹಾಗೂ...