ಒಂದು ಕಾಲದಲ್ಲಿ ತನ್ನ ಸ್ವಂತ ತಾಲೂಕಿಗೂ ಸರಿಯಾಗಿ ಪರಿಚಯವಿರದ ‘ಹುಲ್ಕುತ್ರಿ’ ಎಂಬ ಕುಗ್ರಾಮ, ಇಂದು ಈ ಊರಿನ ಶಾಲೆಯ ಕುರಿತು ರಾಜ್ಯದ ಪ್ರಖ್ಯಾತ ಇಂಗ್ಲೀಷ್ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಸಾಕ್ಷ್ಯಚಿತ್ರ ಹಾಗೂ ವರದಿ ಮೂಡಿ ಬಂದಿದೆ.
ಡೆಕ್ಕನ್ ಹೆರಾಲ್ಟ್ – “Changemakers” ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 22 ಜನ ವ್ಯಕ್ತಿಗಳನ್ನು ಪರಿಚಯಿಸುವ ಕಾರ್ಯಕ್ರಮವಾಗಿದೆ. ಇದರಲ್ಲಿ ನಮ್ಮ ಶಾಲೆ ಹಾಗೂ ಶಿಕ್ಷಕರಾದ ದರ್ಶನ ಹರಿಕಾಂತ ಅವರ ಬಗ್ಗೆಯೂ ಇದೆ ಎಂದು ಹೇಳಲು ಅತೀವ ಸಂತೋಷ ಉಂಟಾಗುತ್ತಿದೆ.
ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಅವರು ಈ ಶಾಲೆಯ ಹೆಸರಿನಲ್ಲಿ ಸ್ಥಾಪಿಸಿದ hulkutrischool.in ವೆಬ್ ಸೈಟ್ ಎಲ್ಲರ ಗಮನಸೆಳೆದಿದೆ. ಇದು ರಾಜ್ಯದ ಪ್ರತಿಷ್ಠಿತ ಆಂಗ್ಲ ದಿನಪತ್ರಿಕೆಯಾದ ‘ಡೆಕ್ಕನ್ ಹೆರಾಲ್ಡ್” ಗಮನಿಸಿತ್ತು. ಈ ಕುರಿತು ಕಳೆದ ಸೆಪ್ಟೆಂಬರ್ 2021ರಲ್ಲಿ ತನ್ನ ಸ್ಪೆಕ್ಟ್ರಮ್ ಕಾಲಂ ನಲ್ಲಿ A resourceful website for a unique school ಎಂಬ ವರದಿಯನ್ನು ಪ್ರಕಟಿಸಿತ್ತು. ಇದು ಸಿದ್ದಾಪುರ ತಾಲೂಕಿನಲ್ಲಿರುವ ಹುಲ್ಕುತ್ರಿ ಶಾಲೆಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು.
ಇದಾದ ಎರಡು ತಿಂಗಳ ನಂತರ ಶಾಲಾ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ, 2022ನೇ ಸಾಲಿನ “Deccan Herald “Changemakers Award” ನಿಮ್ಮನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಸಮಗ್ರ ವರದಿಗಾಗಿ ನಿಮ್ಮನ್ನ ಸಂಪರ್ಕಿಸಲಿದ್ದೇವೆ ಎಂದು ತಿಳಿಸಿದ್ದರು. ಅದರಂತೆ ನವೆಂಬರ್ ತಿಂಗಳಲ್ಲಿ ಹುಬ್ಬಳ್ಳಿಯಿಂದ ಡೆಕ್ಕನ್ ಹೆರಾಲ್ಡ್ ನ ಹಿರಿಯ ಜರ್ನಲಿಸ್ಟ್ ಗಳಾದ ಶ್ರೀಮತಿ ದಿವ್ಯಶ್ರೀ ಮುದಕವಿ ಹಾಗೂ ಶ್ರೀ ಪವನಕುಮಾರ್ ಹಾಗೂ ಫೋಟೋಗ್ರಾಫರ್ ಶ್ರೀ ಗೋವಿಂದರಾಜ ಜವಳಿ ಇವರು ಹುಲ್ಕುತ್ರಿ ಶಾಲೆಗೆ ಆಗಮಿಸಿ ದರ್ಶನ ಹರಿಕಾಂತ ಅವರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ 18 ವರ್ಷಗಳ ಸಾಧನೆಯ ಕುರಿತು ಸಂದರ್ಶನ ನಡೆಸಿತ್ತು.
ಇದಾದ ಒಂದು ವಾರದ ನಂತರ ಬೆಂಗಳೂರಿನಿಂದ ವಿಡಿಯೋ ಜರ್ನಲಿಸ್ಟ್ ತಂಡ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿತು. ವಿಡಿಯೋ ಜರ್ನಲಿಸ್ಟ್ ಗಳಾದ ಶ್ರೀ ಪ್ರದೀಪ ಕೆ.ಎಸ್. ಬೆಂಗಳೂರು ಹಾಗೂ ಶ್ರೀ ರಜತ ಶರ್ಮಾ, ಬೆಂಗಳೂರು ಇವರು ಶಾಲೆಯ ದೈನಂದಿನ ಚಟುವಟಿಕೆಗಳು, ಶಾಲೆಯ ಕಾರ್ಯಕ್ರಮಗಳಾದ ಕೃಷಿ ಅಧ್ಯಯನ, ಹೊರಸಂಚಾರ, ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳು ಶಾಲಾ ವೆಬ್ ಸೈಟ್ ನ ಪಾಠ ವೀಕ್ಷಿಸಲು ಬೆಟ್ಟ ಏರಿ ಪಾಠ ಕಲಿಯುತ್ತಿರುವುದು, ವಿದ್ಯಾರ್ಥಿಗಳ, ಶಿಕ್ಷಕರ ಸಂದರ್ಶನ ಪಡೆದಿದ್ದರು.
ಇದೀಗ ಲೇಖನದ ವರದಿಯನ್ನು ಹೊಸ ವರ್ಷಕ್ಕೆ ಬಿಡುಗಡೆಗೊಳಿಸಿದರೆ, ಚಿತ್ರೀಕರಿಸಿದ ಪ್ರೋಮೋ ವಿಡಿಯೋವನ್ನೂ ಬಿಡುಗಡೆ ಮಾಡಿದೆ.
ಚೇಂಜ್ ಮೇಕರ್ ಅವಾರ್ಡ್ ಗೆ ಆಯ್ಕೆಯಾಗಿರುವುದಕ್ಕೆ ಶಾಲೆಯ ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಈ ಶಾಲೆ ಹಾಗೂ ಶಿಕ್ಷಕರನ್ನು ಗುರುತಿಸಿದ್ದಕ್ಕೆ ಡೆಕ್ಕನ್ ಹೆರಾಲ್ಡ್ ಗೆ ಶಾಲಾ ಶಿಕ್ಷಕರು ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
https://22in22.deccanherald.com/darshan-harikant
ಲೇಖನ ಓದಲು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಚಿತ್ರೀಕರಣದ ಸುಂದರ ಕ್ಷಣಗಳು
ಪ್ರೋಮೋ ವಿಡಿಯೋ
Deccan Herald Change Maker Award 2022
It’ѕ a grеat arena pⅼuѕ game when іt’s workіng,
hοwever it’ѕ extremely slow.
At tһᥙs momеnt I am going aԝay to do
my breakfast, ⅼater than having mʏ breakfast cߋming yet
аgain tо reaԀ othеr news.
Ԍreat game, although уou ᴡon’t bе high on the leaderboard withоut spending real money.
Awesome
Fantastic, insightful, and efficient
thank you..