ಜಿಲ್ಲೆ

ಉತ್ತರ ಕನ್ನಡ

ತಾಲೂಕು

ಸಿದ್ದಾಪುರ

ಗ್ರಾಮ

ಹಾವಿನಬೀಳು

ವೆಬ್‌ಸೈಟ್ ಉದ್ದೇಶ

ಡಿಜಿಟಲ್ ಮಾರ್ಕೆಟಿಂಗ್ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ವೇಗದ ಜಗತ್ತಿನ ಹೊಸ ವಿಷಯಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಡಿಜಿಟಲ್ ಮಾರ್ಕೆಟಿಂಗ್ ಅರಿವು ಪ್ರಾಥಮಿಕ ಶಿಕ್ಷಣದಿಂದಲೇ ಸಿಗಬೇಕು ಎನ್ನುವ ಉದ್ದೇಶಕ್ಕೆ ಹುಲ್ಕುತ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಬ್‌ಸೈಟ್ ಆರಂಭಿಸಲಾಗಿದೆ.

ಶಾಲೆಯ ಪರಿಚಯ

ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ಪಟ್ಟಣದಿಂದ ಅಂದಾಜು 28 ಕಿ.ಮೀ. ದೂರದಲ್ಲಿ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮದಲ್ಲಿದೆ. ಶಾಲೆ 1964 ರಲ್ಲಿ ಸ್ಥಾಪನೆಯಾಗಿದೆ.  ತರಗತಿಗೊಂದು ಡಿಜಿಟಲ್ ಟಿವಿ ಅನ್ನು ಸಜ್ಜುಗೊಳಿಸಲಾಗಿದೆ. ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಅವರು ಈ ವೆಬ್‌ಸೈಟ್ ಆರಂಭಿಸಿದ್ದಾರೆ.

ಗುಣಮಟ್ಟದ ಶಿಕ್ಷಣ

ಪಟ್ಟಣದಿಂದ ದೂರ ಇರುವ ಹುಲ್ಕುತ್ರಿ ಗ್ರಾಮವು ಪಶ್ಚಿಮ ಘಟ್ಟದ ಅರಣ್ಯದ ನಡುವೆ ಇದ್ದರೂ ಇಲ್ಲಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ಕೊರತೆ ಇಲ್ಲ. ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪ್ರತೀ ವರ್ಷ ಭತ್ತದ ಬಿತ್ತನೆಯಿಂದ ಹಿಡಿದು ಕೊಯ್ಲು ವರೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡಲಾಗುತ್ತದೆ. ಪರಿಸರ ಪ್ರವಾಸ, ವೆಬ್‌ಸೈಟ್ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.

WWW

ನಮ್ಮ ಶಾಲೆಯ ಡಿಜಿಟಲ್ ಶಿಕ್ಷಣದ ವಿಶೇಷ

ಎಲ್ಲಿಯಾದರೂ, ಯಾವ ಸಮಯದಲ್ಲಾದರೂ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಬಹುದು.

ಸಂಪೂರ್ಣ ಪಠ್ಯಕ್ರಮ ಡಿಜಿಟಲ್ ರೂಪದಲ್ಲಿ ಲಭ್ಯವಿದೆ.

ಆಕರ್ಷಕ ಚಿತ್ರಗಳು, ಸಂವೇದ ಪಾಠಗಳೊಂದಿಗೆ ಪೂರಕ ವಿಡಿಯೋಗಳು ಲಭ್ಯ.

ವ್ಯಾಕರಣ, ಶಬ್ದಾರ್ಥ, ಪ್ರಶ್ನೋತ್ತರಗಳು, ನಕಾಶೆ, ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು ಲಭ್ಯ

ಶಿಕ್ಷಕರಿಗೆ ತರಗತಿ ಕೋಣೆಯಲ್ಲಿ ಪಾಠ ಬೋಧನೆಗೆ ಅತ್ಯುಪಯುಕ್ತ

ಶಿಕ್ಷಕರ ಸಹಾಯವಿಲ್ಲದೇ ಕಲಿಕೆಗೆ ಅವಕಾಶ

About US

ಶಾಲೆಯ ಸಾಧನೆ

ರಾಜ್ಯದಲ್ಲಿಯೇ ಮೊದಲ ಬಾರಿಗೆ ಸರಕಾರಿ ಶಾಲೆ ಹೆಸರಿನಲ್ಲಿ ವೆಬ್‌ಸೈಟ್ ಆರಂಭಿಸಿರುವುದು ನಮ್ಮ ಶಾಲೆಯ ಹೆಗ್ಗಳಿಕೆ. ಇದನ್ನು ಗಮನಿಸಿ ರಾಜ್ಯದ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆ ಡೆಕ್ಕನ್ ಹೆರಾಲ್ಡ್ ನಮ್ಮ ಶಾಲೆ ಮತ್ತು ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಅವರ ಕುರಿತು ಡಾಕ್ಯುಮೆಂಟರಿ ಮಾಡಿದೆ. ಅಲ್ಲದೆ, 2022ನೇ ಸಾಲಿನ ಚೇಂಜ್ ಮೇರ‍್ರ್ಸ್ ಎನ್ನುವ ಸಾಧಕರ ಸಾಲಿನಲ್ಲಿಯೂ ಆಯ್ಕೆ ಮಾಡಿದೆ.

Students

School Start

Teachers

Website start

ADDMISSION

ಇಂದಿನ ಪಾಠಗಳು

ಆಶು ಭಾಷಣದಲ್ಲಿ ಹುಲ್ಕುತ್ರಿಯ ತೇಜಸ್ವಿಗೆ ಪ್ರಥಮ ಸ್ಥಾನ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ 2025-26 ಶಿರಸಿಯ ಶ್ರೀ ಮಾರಿಕಾಂಬ ಸರಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ 2025-26ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆದಿತ್ತು. ಹಿರಿಯ ಪ್ರಾಥಮಿಕ ವಿಭಾಗದ ಆಶು ಭಾಷಣ ಸ್ಪರ್ಧೆಯಲ್ಲಿ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ...

ವಿದ್ಯಾರ್ಥಿಗಳಿಂದ ಗದ್ದೆಕೊಯ್ಲು

ಕೃಷಿ ಅಧ್ಯಯನ 2025-26 ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತ ವ್ಯಾಪ್ತಿಯ ಹುಲ್ಕುತ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಕೋ ಕ್ಲಬ್ ನ ಅಡಿಯಲ್ಲಿ ಗದ್ದೆ ಕೊಯ್ಲು ಮಾಡಿದರು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತಾವೇ ನಾಟಿ ಮಾಡಿದ ಸಸಿಯನ್ನು ಕೊಯ್ಲು ಮಾಡುವ ಮೂಲಕ ಸಂಪೂರ್ಣ ಕೃಷಿ ಅಧ್ಯಯನ ನಡೆಸಿದರು....

ತೇಜಸ್ವಿ ಹೆಗಡೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ 2025-26 ಸಿದ್ದಾಪುರ ಹಾಳದಕಟ್ಟಾ ಪ್ರೌಢಶಾಲೆಯಲ್ಲಿ ನಡೆದ 2025-26ನೇ ಸಾಲಿನ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ತೇಜಸ್ವಿ ರಾಮಚಂದ್ರ ಹೆಗಡೆ ಹಿರಿಯ ವಿಭಾಗದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ...

ವಿದ್ಯಾರ್ಥಿಗಳಿಂದ ಕೊಡಗಿನ ಕೆ.ಎಚ್. ಬಿ-11 ಸಸಿ ನಾಟಿ

ಕೃಷಿ ಅಧ್ಯಯನ 2025-26 ಸಿದ್ಧಾಪುರ: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯ ವಿದ್ಯಾರ್ಥಿಗಳು ಇಕೋ ಕ್ಲಬ್ ನ ಅಡಿಯಲ್ಲಿ ಭತ್ತದ ಸಸಿ ನಾಟಿ ಮಾಡಿ ಕೃಷಿ ಅಧ್ಯಯನ ಪ್ರಾರಂಭಿಸಿದರು. ರಜಾ ದಿನವಾದ ಭಾನುವಾರದಂದು ಶಾಲೆಯ ಪಕ್ಕದ ಊರಾದ ಹೆಮಜೆನಿಯ ಲೋಕೇಶ ಪದ್ಮನಾಭ ಗೌಡರ ಗದ್ದೆಯಲ್ಲಿ ಶಾಲೆಯ ಆಸಕ್ತ...

ಮೊಘಲರು ಹಾಗೂ ಮರಾಠರು – 6ನೇ ತರಗತಿ ಸಮಾಜ ವಿಜ್ಞಾನ

ಮೊಘಲರು ಹಾಗೂ ಮರಾಠರು - ಅಧ್ಯಾಯ 15 ಪಾಠದ ಪರಿಚಯ ಸಾ.ಶ.1526ರಲ್ಲಿ ಬಾಬರ್ ಭಾರತದ ಮೇಲೆ ದಂಡೆತ್ತಿ ಬಂದು, ದಿಲ್ಲಿ ಸುಲ್ತಾನರ ಆಳ್ವಿಕೆಯನ್ನು ಕೊನೆಗೊಳಿಸಿ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಈ ಅಧ್ಯಾಯದಲ್ಲಿ ಅಕ್ಬರ್ ಮತ್ತು ಔರಂಗಜೇಬನ ಆಳ್ವಿಕೆಯನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಮೊಘಲರ ಆಡಳಿತ ಮತ್ತು ಸಾಂಸ್ಕೃತಿಕ...

ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ರಾಜ್ಯ – 6ನೇ ತರಗತಿ ಸಮಾಜ ವಿಜ್ಞಾನ

ವಿಜಯನಗರ ಸಾಮ್ರಾಜ್ಯ ಹಾಗೂ ಬಹಮನಿ ರಾಜ್ಯ - ಅಧ್ಯಾಯ 14 ಪಾಠದ ಪರಿಚಯದಿಲ್ಲಿ ಸುಲ್ತಾನರ ಸೈನಿಕ ಕಾರ್ಯಾಚರಣೆಗಳಿಂದಾಗಿ ದಕ್ಷಿಣ ಭಾರತದ ಸೇವುಣ (ಮಹಾರಾಷ್ಟ್ರ), ಹೊಯ್ಸಳ (ಕರ್ನಾಟಕ), ಕಾಕತೀಯ (ತೆಲಂಗಾಣ) ಮತ್ತು ಪಾಂಡ್ಯ (ತಮಿಳುನಾಡು) ರಾಜ್ಯಗಳು ಅಳಿದವು. ಬಲಿಷ್ಠವಾದ ರಾಜಸತ್ತೆಯಿಲ್ಲದೆ ಜನಜೀವನ, ಸಂಸ್ಕೃತಿ ಏರುಪೇರಾಯಿತು. ಇಂಥ...

ವಿದ್ಯಾರ್ಥಿಗಳಿಂದ ಕೊಡಗಿನ ಕೆ.ಎಚ್. ಬಿ-11 ಸಸಿ ನಾಟಿ

ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯ ವಿದ್ಯಾರ್ಥಿಗಳು ಇಕೋ ಕ್ಲಬ್ ನ ಅಡಿಯಲ್ಲಿ ಭತ್ತದ ಸಸಿ ನಾಟಿ ಮಾಡಿ ಕೃಷಿ ಅಧ್ಯಯನ ಪ್ರಾರಂಭಿಸಿದರು. ರಜಾ ದಿನವಾದ ಭಾನುವಾರದಂದು ಶಾಲೆಯ ಪಕ್ಕದ ಊರಾದ ಹೆಮಜೆನಿಯ ಲೋಕೇಶ ಪದ್ಮನಾಭ ಗೌಡರ ಗದ್ದೆಯಲ್ಲಿ ಶಾಲೆಯ ಆಸಕ್ತ 11 ವಿದ್ಯಾರ್ಥಿಗಳು ನಾಟಿ...

ದೆಹಲಿಯ ಸುಲ್ತಾನರು – 6ನೇ ತರಗತಿ ಸಮಾಜ ವಿಜ್ಞಾನ

ದೆಹಲಿಯ ಸುಲ್ತಾನರು – ಅಧ್ಯಾಯ 13 ಪಾಠದ ಪರಿಚಯ11-12ನೇ ಶತಮಾನಗಳಲ್ಲಿ ಭಾರತದ ಮೇಲೆ ಟರ್ಕರು ಪದೇ ಪದೇ ಎಸಗುತ್ತಿದ್ದ ಸೈನಿಕ ಕಾರ್ಯಾಚರಣೆಗಳು ಅಂತಿಮವಾಗಿ ದೆಹಲಿಯ ಸುಲ್ತಾನರ ಆಳ್ವಿಕೆಗೆ (ಸಾ.ಶ. 1206-1526) ನಿಮಿತ್ತವಾದುವು. ಈ ಅಧ್ಯಾಯದಲ್ಲಿ ದೆಹಲಿಯ ಸುಲ್ತಾನರ ಧೋರಣೆ, ಆಡಳಿತ, ಅವರ ಕಾಲದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು...

ಸ್ವಾತಂತ್ರ್ಯ ಚಳುವಳಿ (ಸಾ.ಶ. 1885-1919) – 7ನೇ ತರಗತಿ ಸಮಾಜ ವಿಜ್ಞಾನ

ಸ್ವಾತಂತ್ರ್ಯ ಚಳುವಳಿ (ಸಾ.ಶ. 1885-1919) - ಅಧ್ಯಾಯ 17 ಪಾಠದ ಪರಿಚಯ ಬ್ರಿಟಿಷರ ಶೋಷಣಾತ್ಮಕ ನೀತಿಗಳಿಂದಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ರಾಷ್ಟ್ರೀಯತೆ ಚಿಗುರೊಡೆಯಿತು. ಇಂಗ್ಲಿಷ್ ಶಿಕ್ಷಣ ಪಡೆದ ಹೊಸ ವಿದ್ಯಾವಂತ ವರ್ಗವು ಬ್ರಿಟಿಷ್ ಆಳ್ವಿಕೆಯ ನಿಜವಾದ ಉದ್ದೇಶವನ್ನು ಅರ್ಥಮಾಡಿಕೊಂಡಿತು. ರೈತಾಪಿಗಳು, ಆದಿವಾಸಿಗಳು...

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಾ.ಶ. 1857-58) – 7ನೇ ತರಗತಿ ಸಮಾಜ

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (ಸಾ.ಶ. 1857-58) - ಅಧ್ಯಾಯ 16 ಪಾಠದ ಪರಿಚಯಆಧುನಿಕ ಭಾರತದ ಇತಿಹಾಸದಲ್ಲಿ ಸಾ.ಶ. 1857ರ ಸಂವತ್ಸರವು ಒಂದು ಪ್ರಮುಖ ಐತಿಹಾಸಿಕ ಮೈಲಿಗಲ್ಲಾಗಿದೆ. ಬ್ರಿಟಿಷರು ಸಾ.ಶ. 1857ರ ಐತಿಹಾಸಿಕ ಘಟನೆಯನ್ನು ಕೇವಲ ಸಿಪಾಯಿಗಳ ದಂಗೆ ಎಂದು ಪರಿಗಣಿಸಿದರೆ, ಭಾರತೀಯ ರಾಷ್ಟ್ರೀಯವಾದಿಗಳು ಗಟ್ಟಿದನಿಯಲ್ಲಿ...

ನಮ್ಮ ಶಾಲೆಗೆ ಸ್ವಾಗತ

ಕಲಿಕಾ ವಿಭಾಗದಲ್ಲಿ ಡಿಜಿಟಲ್ ಪಾಠಗಳಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ, ಕಾರ್ಯಕ್ರಮಗಳು ಹಾಗೂ ಲೇಖನಗಳಿಗೆ ಸಬ್ ಸ್ಕ್ರೈಬ್ ಆಗಬಹುದು. ಕಲಿಕೆಯ ಹೊಸ ಅನುಭವಕ್ಕಾಗಿ ನಮ್ಮ ಅಂರ್ಜಾಲ ಸಂಪರ್ಕಿಸಿರಿ.

ಬನ್ನಿ ನಮ್ಮೊಂದಿಗೆ