ದಿನಾಂಕ 24-02-2023 ಶುಕ್ರವಾರದಂದು ನಮ್ಮ ಶಾಲೆಯಲ್ಲಿ 2022-23 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಮುಖ್ಯ ಅಡುಗೆಯವರಾಗಿ ನಿವೃತ್ತಿಗೊಂಡ ಶ್ರೀಮತಿ ಪಾರ್ವತಿ ನಾರಾಯಣ ಗೌಡ ಇವರಿಗೆ ಸನ್ಮಾನ ಹಾಗೂ ಆಹಾರ ಮೇಳ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಧಾಟನೆಯನ್ನು ನೆರವೇರಿಸಿದ ಸೋವಿನಕೊಪ್ಪ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಕೋರಿದರು.

ನಂತರ 18 ವರ್ಷಗಳ ಕಾಲ ಮುಖ್ಯ ಅಡುಗೆಯವರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಪಾರ್ವತಿ ನಾರಾಯಣ ಗೌಡ ಇವರಿಗೆ ಶಾಲೆಯ ಎಸ್.ಡಿ.ಎಮ್.ಸಿ. ಸಮಿತಿ ಹಾಗೂ ಶಾಲಾ ಶಿಕ್ಷಕರ ವತಿಯಿಂದ ಸನ್ಮಾನ ನಡೆಯಿತು.

ಗಮನ ಸೆಳೆದ ಆಹಾರ ಮೇಳ ಕಾರ್ಯಕ್ರಮ

ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಸ್ಥಳೀಯವಾಗಿ ದೊರೆಯುವ ಸಸ್ಯಗಳಿಂದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಅಂದಾಜು 22 ಬಗೆಯ ಪದಾರ್ಥಗಳು ಪ್ರದರ್ಶನದಲ್ಲಿದ್ದವು. ಅವುಗಳಲ್ಲಿ ಹಲಸಿನಕಾಯಿ ಪಲ್ಯ, ಕರಡಿ ಸೊಪ್ಪಿನ ರೊಟ್ಟಿ, ಒಂದಾನೆ ಜಡೆ ತಂಬುಳಿ, ಕುಚಗಾಯಿ ಚಟ್ನಿ, ಬಾಳೆ ಕುಂಡಿಗೆ ಪಲ್ಯ, ಪತ್ರೆ ಎಲೆ ತಂಬುಳಿ, ಕರಡಿ ಸೊಪ್ಪಿನ ಪಲ್ಯ, ಅರಶಿಣ ಕೊಂಬು ತಂಬುಳಿ, ಗೋಳಿ ಸೊಪ್ಪಿನ ಪಲ್ಯ, ಆಲೂಗಡ್ಡೆ ಜಂಪು, ಅರಶಿಣ ಗೊಜ್ಜು, ಎಲವರಿಗೆ ತಂಬುಳಿ, ಬಾಳೆ ದಿಂಡಿನ ಕೋಸಂಬರಿ, ಗೋಳಿಸೊಪ್ಪಿನ ಹಶಿ, ಈರುಳ್ಳಿ ಗೋಳಿ ಸೊಪ್ಪಿನ ಹಶಿ, ಮುರುಗಲು ಹಣ್ಣಿನ ಸಾಂಬಾರ್, ಬಾಳೆ ಹೂವಿನ ಸಾಸಿವೆ, ದಾಳಿಂಬೆ ಕುಡಿಯ ಚಟ್ನಿ, ನೆಲನೆಲ್ಲಿ ಸೊಪ್ಪಿನ ತಂಬುಳಿ, ಸಾಂಬಾರ್ ಸೊಪ್ಪಿನ ಹಶಿ, ಬಿಪಿ ಕುಡಿಯ ಗೊಜ್ಜು ಹೀಗೆ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಂದ ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ದರ್ಶನ ಹರಿಕಾಂತ ಇವರು ಸ್ಥಳೀಯವಾಗಿ ದೊರೆಯುವ ವಸ್ತುಗಳನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು. ತಾಯಂದಿರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಮಾ ವೆಂಕಟೇಶ ಭಟ್ಟ ಇವರು ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡಬೇಕಾದುದು ನಮ್ಮಲ್ಲರ ಜವಾಬ್ದಾರಿ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಸುರೇಶ ಬಂಗಾರ್ಯ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿ ಮಂಜುನಾಥ ಗೌಡ, ಸೋವಿನಕೊಪ್ಪ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ, ತಾಯಂದಿರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಮಾ ವೆಂಕಟೇಶ ಭಟ್ವ, ಉಪಾಧ್ಯಕ್ಷರಾದ ಶ್ರೀಮತಿ ವಾಣಿ ನಿತ್ಯಾನಂದ ಗೌಡ ಹಾಗೂ ಶ್ರೀ ವೆಂಕಟೇಶ ಭಟ್ಟ ಉಪಸ್ಥಿತರಿದ್ದರು.

ಕೊನೆಯಲ್ಲಿ ತಾಯಂದಿರು ತಂದಂತಹ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಉಣಬಡಿಸಲಾಯಿತು.