ಸರ್ಕಾರಿ ಶಾಲೆ ಸಬಲೀಕರಣ : ಹೊಸತನದ ಹೊಸ್ತಿಲಲಿ ನಲಿ-ಕಲಿ : ಹುಲ್ಕುತ್ರಿ ಶಾಲೆಗೆ ಕೊಡುಗೆ ನೀಡಿದ ದಾನಿಗಳು
ದಿನಾಂಕ : 16-07-2019 ರಂದು ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯಲ್ಲಿ ದಾನಿಗಳ, ಹಳೆಯ ವಿದ್ಯಾರ್ಥಿಗಳ ಸಂಘ, ಎಸ.ಡಿ.ಎಮ್.ಸಿ. ಹಾಗೂ ಹಾವಿನಬೀಳು ಗ್ರಾಮಸ್ಥರ ಸಹಕಾರದಿಂದ “ಸುಸಜ್ಜಿತ ನಲಿ-ಕಲಿ ತರಗತಿ ಕೋಣೆ ಉದ್ಘಾಟನಾ” ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ನಾಗರಾಜ ನಾಯ್ಕರವರು ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು. ಸುಸಂಸ್ಕøತ ವ್ಯಕ್ತಿ ಮಾಡುವಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಮಹತ್ವದ್ದು ಎಂದು ನುಡಿದರು. ಅಲ್ಲದೇ ಈ ಶಾಲೆಗೆ ಕೊಡುಗೆ ನೀಡಿದ ದಾನಿಗಳ ಸಹಕಾರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ದಾನಿಗಳಾದ ಶ್ರೀ ನಾರಾಯಣ ಎಮ್. ಹರಿಕಾಂತ, ಹೊನ್ನೆಬೈಲ್ ಅಂಕೋಲಾ (ಉ.ಕ) ಹಾಗೂ ಅವರ ಮಗ ಶ್ರೀ ದರ್ಶನ ಹರಿಕಾಂತ (ಶಾಲಾ ಶಿಕ್ಷಕರು) ಇವರು ಅಂದಾಜು 32000/- ರೂಪಾಯಿಗಳಲ್ಲಿ ಶಾಲೆಗೆ ಎರಡು ಟೇಬಲ್‍ಗಳು, ನಲಿ-ಕಲಿಗೆ 5 ಟೇಬಲ್‍ಗಳು, ನಕಾಶೆ ಸ್ಟ್ಯಾಂಡ್, ರ್ಯಾಕ್, ಶಾಲೆ ಹಾಗೂ ಅಂಗನವಾಡಿಗೆ ನಾಮಫಲಕ ನೀಡಿದರೆ, ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರುಗಳು 6500/- ರೂ.ಗಳ ನಲಿ-ಕಲಿ ಕಾರ್ಡಗಳನ್ನು ಇಡುವ ಬಾಕ್ಸ್ ನೀಡಿದ್ದಾರೆ. ಅದೇ ರೀತಿಯಾಗಿ ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ನಾಗರಾಜ ನಾಯ್ಕರವರು 7000/-ಗೆ ಗ್ರೀನ್ ಬೋರ್ಡ ಒದಗಿಸಿದ್ದಾರೆ. ಶ್ರೀ ನಾರಾಯಣ ಗೋವಿಂದ ಗೌಡ ಅಶಿಹದ್ದ, ಬೆಂಗಳೂರು ಇವರು 5000/- ರೂ.ಗೆ ನಲಿ-ಕಲಿ ತರಗತಿ ಮಕ್ಕಳಿಗೆ 20 ಬೇಬಿ ಚೇರ್‍ಗಳನ್ನು ನೀಡಿದ್ದಾರೆ. ಎಸ್.ಡಿ.ಎಮ್.ಸಿ ಹಾಗೂ ಶ್ರೀ ವೆಂಕಟೇಶ ಭಟ್ಟ, ಹಾವಿನಬೀಳು ಇವರುಗಳಿಂದ ಅಂದಾಜು 5600/-ರೂ. ಗಳಲ್ಲಿ ನಲಿ-ಕಲಿ ತರಗತಿ ಕೋಣೆಗೆ ನೆಲಹಾಸು ಹಾಗೂ ಶ್ಯಾಡೋ ನೆಟ್ ನೀಡಿದ್ದಾರೆ. ಕಾರ್ಯಕ್ರಮದ ನಿರ್ವಹಣೆಗಾಗಿ ಹಾವಿನಬೀಳು ಗ್ರಾಮಸ್ಥರಿಂದ ಕಾರ್ಯಕ್ರಮದ ನಿರ್ವಹಣೆಗಾಗಿ ಅಂದಾಜು 7000/- ನೀಡಿ ಸಹಕರಿಸಿರುತ್ತಾರೆ.

ಇದರಿಂದಾಗಿ ತಾಲ್ಲೂಕಿನಿಂದ 28 ಕಿ.ಮೀ. ದೂರದ ಕುಗ್ರಾಮದಲ್ಲಿರುವ ಹುಲ್ಕುತ್ರಿ ಶಾಲೆಯು ಖಾಸಗಿ ಶಾಲೆಯಲ್ಲಿ ಇರುವಂತ ಸುಸಜ್ಜಿತ ವ್ಯವಸ್ಥೆ ಹೊಂದಿರುವಂತ ತರಗತಿಯಾಗಿದೆ. ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ನಾಗರಾಜ ನಾಯ್ಕರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ ಇವರು ವಹಿಸಿದ್ದರು. ಮುಖ್ಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತರವರು ಸ್ವಾಗತಿಸಿದರು, ಶಾಲಾ ಶಿಕ್ಷಕರಾದ ಕು. ಮೈತ್ರಿ ಚಂದ್ರಶೇಖರ ಹೆಗಡೆ ಇವರು ನಿರೂಪಿಸಿದರು. ಅತಿಥಿಗಳಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಾಜಾರಾಮ ಭಟ್ಟ, ಬಿಳಗಿ ಸಿ.ಆರ್.ಪಿ.ಗಳಾದ ಶ್ರೀ ಮಂಜುನಾಥ ನಾಯ್ಕ, ಹೆಮ್ಮನಬೈಲ್ ದೇವಸ್ಥಾನದ ಮೊಕೇಸರರಾದ ಶ್ರೀ ಗಜಾನನ ಹೆಗಡೆ, ಪಂಚಾಯತ ಕಾರ್ಯದರ್ಶಿಗಳಾದ ಶ್ರೀ ಮಂಜಪ್ಪ ಟಿ. ನಾಯ್ಕ, ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟರಮಣ ಗೌಡ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ಪದ್ಮನಾಭ ಗೌಡ ಹಾಗೂ ಉಪಾಧ್ಯಕ್ಷರಾದ ಶ್ರೀ ಮಹೇಶ ತಿಮ್ಮ ಗೌಡ, ಹಾದ್ರಿಮನೆ ಶಾಲೆಯ ಶಿಕ್ಷಕರಾದ ಶ್ರೀ ಪ್ರಕಾಶ ಮೌರ್ಯ, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.








I don’t think the title of your article matches the content lol. Just kidding, mainly because I had some doubts after reading the article. https://www.binance.com/lv/register?ref=T7KCZASX