ಬೆರಳ ತುದಿಯಲ್ಲಿನ್ನು ಕುಗ್ರಾಮದ ಶಾಲೆಯ ಶೈಕ್ಷಣಿಕ ಚಟುವಟಿಕೆ
ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಶಾಲೆ ತನ್ನ ಅಧಿಕೃತ ವೆಬ್‍ಸೈಟ್‍ವೊಂದನ್ನು ಸ್ಥಾಪಿಸಿ ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ದರ್ಶನ ಹರಿಕಾಂತರವರು ಶಾಲೆಗೆ ವೆಬ್‍ಸೈಟ್‍ನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ವಿಶೇಷವಾಗಿ ಸಿದ್ದಾಪುರ ತಾಲೂಕಿನಲ್ಲಿ ಖಾಸಗಿ ಶಾಲೆಯೂ ಹೊಂದಿರದ ವೆಬ್‍ಸೈಟ್‍ವೊಂದನ್ನು ತಾಲೂಕಿನ ಅತ್ಯಂತ ಒಳ ಹಳ್ಳಿಯಲ್ಲಿರುವ ಸರಕಾರಿ ಶಾಲೆಯೊಂದು ತನ್ನ ಅಧಿಕೃತ ವೆಬ್‍ಸೈಟ್ ಹೊಂದಿರುವುದು ವಿಶೇಷ.
ಈ ಸುಂದರ ಹಾಗೂ ಅಪರೂಪದ ಕಾರ್ಯಕ್ರಮದ ಕೆಲವು ಸುಂದರ ಕ್ಷಣಗಳು