14-11-2019ರ ಶಾರದಾ ಪೂಜೆಯ ದಿನದಂದು ಎಸ್.ಡಿ.ಎಮ್.ಸಿ, ಅಂಗನವಾಡಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ನೆರವಿನೊಂದಿಗೆ ಮಕ್ಕಳ ಹಾಗೂ ಪಾಲಕರ ಸಮ್ಮಿಲನವನ್ನು ಏರ್ಪಡಿಸಲಾಯಿತು. ಈ ದಿನ ಅಂಗನವಾಡಿ, ಶಾಲಾ ಮಕ್ಕಳು ಹಾಗೂ ಎಲ್ಲಾ ಪಾಲಕರಿಗೆ ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಲಾಯಿತು. ಪಾಲಕರು ಹಾಗೂ ಗ್ರಾಮಸ್ಥರೆಲ್ಲರೂ ಉತ್ಸಾಹದಿಂದ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅಂಗನವಾಡಿ ಮಕ್ಕಳು, ಶಾಲಾ ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಆಟಗಳಲ್ಲಿ ಭಾಗವಹಿಸುವುದರ ಮೂಲಕ ಸಂಭ್ರಮಪಟ್ಟರೆ ಅತ್ತ ಪಾಲಕರು ಹಾಗೂ ಗ್ರಾಮಸ್ಥರು ಸಹ ವಿವಿಧ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷ. ನಿರೀಕ್ಷೆಗೂ ಮೀರಿ ಆಗಮಿಸಿದ ಗ್ರಾಮಸ್ಥರು ಶಾಲಾ ಆವರಣದಲ್ಲಿ ಕಿಕ್ಕಿರಿದು ಸೇರಿದ್ದರು. ಮಹಿಳೆಯರಿಗೆ ಆರತಿ ತಟ್ಟೆ ಸಿದ್ಧಪಡಿಸುವುದು, ರಂಗೋಲಿ ಸ್ಪರ್ಧೆ, ಸ್ಟಿಕ್ಕರ್ ಅಂಟಿಸುವುದು, ಗುಂಡು ಎಸೆತ, ಹಗ್ಗ-ಜಗ್ಗಾಟ, ಪುರುಷರಿಗೆ ಗುಂಡು ಎಸೆತ, ಹಗ್ಗ-ಜಗ್ಗಾಟ, ಹಾಗೂ slow bike riding ಆಟಗಳಲ್ಲಿ ಭಾಗವಹಿಸಿ ಸಂಭ್ರಮಪಟ್ಟರು. ಪ್ರಪ್ರಥಮ ಬಾರಿಗೆ ಗ್ರಾಮಸ್ಥರು ಜೊತೆಗೂಡಿ ಮನೋರಂಜನಾ ಆಟಗಳಲ್ಲಿ ಭಾಗವಹಿಸಿದ್ದು ವಿಶೇಷ. ಈ ದಿನ ಮಕ್ಕಳ ಹಾಗೂ ಪಾಲಕರ ಸಮ್ಮಿಲನ ಕಾರ್ಯಕ್ರಮ ಸಂಯೋಜನೆ ಮಾಡಿದ್ದು ಸಾರ್ಥಕವೆನಿಸಿತು. ಅದರ ಸುಂದರ ಕ್ಷಣಗಳು ಇಲ್ಲಿವೆ.
Thanks for sharing. I read many of your blog posts, cool, your blog is very good.
The point of view of your article has taught me a lot, and I already know how to improve the paper on gate.oi, thank you.