ವೃತ್ತಗಳು – ಅಧ್ಯಾಯ-7

ಚಟುವಟಿಕೆ 1 : ನಿಮ್ಮಲ್ಲಿರುವ ವೃತ್ತಾಕಾರದ ವಸ್ತುಗಳಾದ ಬಳೆ, ತಟ್ಟೆ, ನಾಣ್ಯ ಇತ್ಯಾಧಿಗಳನ್ನು ಬಳಸಿ ವೃತ್ತಗಳನ್ನು ಎಳೆಯಿರಿ. ಈ ವೃತ್ತಗಳ ಕೇಂದ್ರಗಳನ್ನು ಗುರುತಿಸಿ. ಈ ಬಿಂದುಗಳೇ ವೃತ್ತಕೇಂದ್ರಗಳೆಂದು ನಿಖರವಾಗಿ ಹೇಳಬಹುದೇ?

ಚಟುವಟಿಕೆ 2 : 1 ಸೆಂ.ಮೀ. 2.5 ಸೆಂ.ಮೀ, 4.2 ಸೆಂ.ಮೀ, 6ಸೆಂ.ಮೀ, ಈ ಅಳತೆಯ ತ್ರಿಜ್ಯದ ವೃತ್ತಗಳನ್ನು ಎಳೆಯಬೇಕಾಗಿದೆ. ಬಳೆ, ತಟ್ಟೆ, ನಾಣ್ಯ ಇವುಗಳ ಸಹಾಯದಿಂದ ಈ ತ್ರಿಜ್ಯಗಳ ವೃತ್ತಗಳನ್ನು ನಿಖರವಾಗಿ ಎಳೆಯಲು ಸಾಧ್ಯವೇ?

ಜ್ಯಾಮಿತಿ ಉಪಕರಣ ಪೆಟ್ಟಿಗೆ

(Geometrical instrument box) ಜ್ಯಾಮಿತಿ ಉಪಕರಣ ಪೆಟ್ಟಿಗೆ ವಿವಿಧ ರೇಖಾಕೃತಿಗಳನ್ನು ರಚಿಸಲು ಬೇಕಾಗುವ ವಿವಿಧ ಉಪಕರಣಗಳನ್ನು ಒಳಗೊಂಡಿದೆ.

ಈ ಉಪಕರಣಗಳ ಹೆಸರು ಮತ್ತು ಉಪಯೋಗಗಳ ಪಟ್ಟಿಯನ್ನು ನೀಡಲಾಗಿದೆ.

ಚಟುವಟಿಕೆ:
1) ಜ್ಯಾಮಿತಿ ಉಪಕರಣಗಳನ್ನು ನಿಖರವಾಗಿ ಬಳಸುವ ವಿಧಾನಗಳನ್ನು ಶಿಕ್ಷಕರ ಜೊತೆ ಚರ್ಚಿಸಿ ಅವುಗಳನ್ನು ಬಳಸಿ, ವಿವಿಧ ರಚನೆಗಳನ್ನು ಮಾಡಿ.
ಉದಾ:

2) ಕಪ್ಪುಹಲಗೆಯ ಮೇಲೆ ರೇಖಾಕೃತಿಗಳನ್ನು ಬಿಡಿಸಲು ನಿಮ್ಮ ಶಿಕ್ಷಕರು ಬಳಸುವ ಉಪಕರಣಗಳನ್ನು ಗಮನಿಸಿ, ಅವರು ಬಳಸುವ ಉಪಕರಣಗಳಿಗೂ ನೀವು ಬಳಸುವ ಉಪಕರಣಗಳಿಗೂ ಇರುವ ವ್ಯತ್ಯಾಸಗಳೇನು?

ವೃತ್ತ (Circle)

ಈ ಎಲ್ಲಾ ತ್ರಿಜ್ಯಗಳ ಅಳತೆಗಳು ಪರಸ್ಪರ ಹೇಗಿವೆ?
ಒಂದು ವೃತ್ತದ ಎಲ್ಲಾ ತ್ರಿಜ್ಯಗಳು ಸಮ. ಈ ತ್ರಿಜ್ಯವನ್ನು r (radius) ಎಂಬ ಸಂಕೇತದಿಂದ ಸೂಚಿಸುತ್ತೇವೆ. ಚಿತ್ರದಲ್ಲಿರುವ ವೃತ್ತದಲ್ಲಿ ತ್ರಿಜ್ಯ = r = ………………ಸೆಂ.ಮೀ.

ಗಮನಿಸಿ:
• ಪ್ರತಿಯೊಂದು ವೃತ್ತಕ್ಕೂ ಒಂದು ಕೇಂದ್ರ ಮತ್ತು ಒಂದು ನಿರ್ದಿಷ್ಟ ಅಳತೆಯ ತ್ರಿಜ್ಯ ಇರುತ್ತದೆ.
• ಕೇಂದ್ರ ಮತ್ತು ತ್ರಿಜ್ಯ ವೃತ್ತದ ಭಾಗಗಳಲ್ಲ. ಅವು ವೃತ್ತದ ಅಸ್ತಿತ್ವವನ್ನು ನಿರ್ದಿಷ್ಟಪಡಿಸುತ್ತವೆ.

ಕೊಟ್ಟ ಅಳತೆ ತ್ರಿಜ್ಯಕ್ಕೆ ವೃತ್ತದ ರಚನೆ.

ಕೈವಾರವನ್ನು ಬಳಸಿ ವೃತ್ತವನ್ನೆಳೆಯುವ ವಿಧಾನ ನಿಮಗೆ ತಿಳಿದಿದೆ. ಒಂದು ಕಾಗದದ ಮೇಲೆ ಕೈವಾರ ಮಾತ್ರ ಬಳಸಿ, ಬೇರೆ ಬೇರೆ ತ್ರಿಜ್ಯದ ವೃತ್ತಗಳನ್ನೆಳೆಯುವ ಮೂಲಕ ನಿಮಗಿಷ್ಟವಾದ ವಿನ್ಯಾಸವನ್ನು ರಚಿಸಿ.

ಈಗ 2 ಸೆಂಮೀ. ತ್ರಿಜ್ಯದ ವೃತ್ತ ರಚಿಸೋಣ.
ರಚನೆಯ ಹಂತಗಳು
ಹಂತ : 1) ಕೇಂದ್ರ ಬಿಂದು O ನ್ನು ಗುರುತಿಸಿ.
ಹಂತ : 2) ತ್ರಿಜ್ಯ = r = 2 ಸೆಂಮೀ. ಆಗಿರುವುದರಿಂದ ನಿಮ್ಮ ಕೈವಾರದ ಮೊನೆ ಹಾಗೂ ಪೆನ್ಸಿಲ್‍ನ ಮೊನೆಯನ್ನು ಅಳತೆ ಪಟ್ಟಿಯಲ್ಲಿ ಚಿತ್ರದಲ್ಲಿರುವಂತೆ ಹೊಂದಿಸಿ.

ಶಿಕ್ಷಕರ ಜೊತೆ ಚರ್ಚಿಸಿ :
• ಕೈವಾರವನ್ನು ಹಿಡಿಯುವ ಅನುಕೂಲಕರ ವಿಧಾನ ಯಾವುದು?
• ಅಂದವಾದ ವೃತ್ತ ರಚನೆಯಾಗಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು?

ಚಟುವಟಿಕೆ :
ರೀಟಾಳು 4 ಸೆಂ.ಮೀ. ತ್ರಿಜ್ಯದ ವೃತ್ತವನ್ನು ಎಳೆಯಬೇಕಾಗಿದೆ. ಆದರೆ ಆಕೆಯಲ್ಲಿರುವ ಅಳತೆಪಟ್ಟಿ ತುಂಡಾಗಿದೆ.ಆಕೆ ಕೈವಾರದ ಮೊನೆಯನ್ನು ತುಂಡಾದ ಅಳತೆಪಟ್ಟಿಯ ಮೇಲೆ ಚಿತ್ರದಲ್ಲಿರುವಂತೆ ಜೋಡಿಸಿದ್ದಾಳೆ. 4 ಸೆಂಮೀ. ತ್ರಿಜ್ಯದ ವೃತ್ತವನ್ನೆಳೆಯಬೇಕಾದರೆ ಪೆನ್ಸಿಲ್‍ನ ಮೊನೆಯನ್ನು ಅಳತೆಪಟ್ಟಿಯ ಯಾವ ಬಿಂದುವಿಗೆ ಜೋಡಿಸಬೇಕೆಂದು ಆ ಬಿಂದುವಿನ ಮೇಲೆ ಗೆರೆ ಎಳೆದು ಅವಳಿಗೆ ಸಹಾಯ ಮಾಡಿ.

ಚಟುವಟಿಕೆ:
• ನಿಮ್ಮಲ್ಲಿರುವ ಕೈವಾರದಿಂದ ಅತ್ಯಂತ ಚಿಕ್ಕ ಹಾಗೂ ಅತ್ಯಂತ ದೊಡ್ಡ ವೃತ್ತಗಳನ್ನೆಳೆದು ಅವುಗಳ ತ್ರಿಜ್ಯಗಳನ್ನು ಕಂಡುಹಿಡಿಯಿರಿ.
• ನಿಮ್ಮ ನೋಟ್ ಪುಸ್ತಕದಲ್ಲಿ ರಚಿಸಬಹುದಾದ ಅತ್ಯಂತ ದೊಡ್ಡ ವೃತ್ತದ ತ್ರಿಜ್ಯವೆಷ್ಟು?
• ಬಣ್ಣದ ಕಾಗದಗಳಲ್ಲಿ ಬೇರೆ ಬೇರೆ ತ್ರಿಜ್ಯದ ವೃತ್ತಗಳನ್ನು ರಚಿಸಿ ಅವುಗಳನ್ನು ಒಂದರ ಮೇಲೊಂದು ಜೋಡಿಸಿ.
• ಶಿಕ್ಷಕರು ಬಳಸುವ ಕೈವಾರದಿಂದ ಕಪ್ಪು ಹಲಗೆ ಹಾಗೂ ನೆಲದ ಮೇಲೆ ಬೇರೆ ಬೇರೆ ತ್ರಿಜ್ಯದ ವೃತ್ತಗಳನ್ನು ರಚಿಸಿ.
• ದಾರ, ತಂತಿ, ಅಳತೆ ಟೇಪುಗಳ ಸಹಾಯದಿಂದ ನೆಲದ ಮೇಲೆ, ಮೈದಾನದಲ್ಲಿ ಬೇರೆ ಬೇರೆ ತ್ರಿಜ್ಯದ ವೃತ್ತಗಳನ್ನು ರಚಿಸಿ.

ಸಂವೇದ ವಿಡಿಯೋ ಪಾಠಗಳು

Samveda – 5th – Maths – Circles (Part 1 of 2)

Samveda – 5th – Maths – Circles (Part 2 of 2)

ಪೂರಕ ವಿಡಿಯೋಗಳು

ವೃತ್ತಗಳು | ಐದನೇ ತರಗತಿ | ಗಣಿತ | ಅಧ್ಯಾಯ 7| Circles| Vruttagalu| 5th Class Maths Unit 7 | Part 1|

ವೃತ್ತಗಳು | ಐದನೇ ತರಗತಿ | ಗಣಿತ | ಅಧ್ಯಾಯ 7| Circles| Vruttagalu| 5th Class Maths Unit 7 | Part 2

ಅಭ್ಯಾಸಗಳು

ಅಭ್ಯಾಸ 7.1 ಮತ್ತು 7.2ಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.