ವೃತ್ತಗಳು – ಅಧ್ಯಾಯ-7

ನೀನು ಹಿಂದಿನ ತರಗತಿಯಲ್ಲಿ ವೃತ್ತಾಕಾರವನ್ನು ಹೋಲುವ ವಸ್ತುಗಳ ಬಗ್ಗೆ ಪರಿಚಯ ಮಾಡಿಕೊಂಡಿರುವೆ.
ದೈನಂದಿನ ಜೀವನದಲ್ಲಿ ನೀನು ಗಮನಿಸಿರುವ ವೃತ್ತಾಕಾರವನ್ನು ಹೋಲುವ ಕೆಲವು ವಸ್ತುಗಳನ್ನು ಪಟ್ಟಿಮಾಡು.
ಉದಾಹರಣೆ
1) ಗಾಜಿನ ಬಳೆ
2) ………………….
3) ………………….
4) ………………….

ಚಟುವಟಿಕೆ : ಪ್ರಶಾಂತವಾದ ನೀರಿನ ಕೊಳದಲ್ಲಿ ಒಂದು ಚಿಕ್ಕ ಕಲ್ಲನ್ನು ಹಾಕು. ಅಲ್ಲಿ ಕಂಡುಬರುವ ಅಲೆಗಳನ್ನು ಗಮನಿಸು. ಅವು ಯಾವ ಆಕೃತಿಯನ್ನು ಹೋಲುತ್ತದೆ?

ವೃತ್ತಗಳ ರಚನೆ ಒಂದು ಬಳೆಯನ್ನು ತೆಗೆದುಕೊ. ಇದರಿಂದ ವೃತ್ತ ರಚಿಸಲು ಸಾಧ್ಯವೇ? ಪ್ರಯತ್ನಿಸು.

ಬಳೆಯನ್ನು ತೆಗೆದುಕೊಂಡು ಚಿತ್ರ 1 ರಲ್ಲಿ ತೋರಿಸಿರುವಂತೆ ಹಾಳೆಯ ಮೇಲೆ ಇಡು.
ಚಿತ್ರ 2 ರಲ್ಲಿ ತೋರಿಸಿರುವಂತೆ ಬಳೆಯ ಸುತ್ತಲೂ ಪೆನ್ಸಿಲ್‍ನಿಂದ ಗುರುತು ಹಾಕು. ನಂತರ ಬಳೆಯನ್ನು ತೆಗೆ. ಈಗ ಮೂಡಿರುವ ಆಕೃತಿ ಯಾವುದು? ಇದೇ ವೃತ್ತ
ನೀನು ಪ್ರತಿನಿತ್ಯ ಗಮನಿಸುವ ಯಾವ ಯಾವ ವಸ್ತುಗಳಿಂದ ಸರಿ ಸುಮಾರು ವೃತ್ತ ರಚಿಸಬಹುದು? ಕೆಲವನ್ನು ಪಟ್ಟಿ ಮಾಡು.
1) …………………………………………………………
2) …………………………………………………………
3) …………………………………………………………
4) …………………………………………………………

ಮುಂದೆ ನೀಡಿರುವ ಬಿಂದುಗಳನ್ನು ಸೇರಿಸು. ಬರುವ ಆಕೃತಿ ಯಾವುದು? ಗಮನಿಸು.

ನಿನ್ನ ಬಳಿ ಇರುವ ರೇಖಾಗಣಿತ ಉಪಕರಣ ಪೆಟ್ಟಿಗೆ ತೆಗೆ. ಅದರಲ್ಲಿರುವ ಯಾವ ಉಪಕರಣದಿಂದ ವೃತ್ತ ರಚಿಸಬಹುದು? ಯೋಚಿಸು.

ಕೈವಾರ ಉಪಯೋಗಿಸಿ ವೃತ್ತ ರಚಿಸುವ ವಿಧಾನ

* ಚಿತ್ರದಲ್ಲಿ ತೋರಿಸಿರುವಂತೆ ಕೈವಾರಕ್ಕೆ ಪೆನ್ಸಿಲ್ ಅಳವಡಿಸು. ಲೋಹದ ಮೊನೆ ಮತ್ತು ಪೆನ್ಸಿಲ್ ತುದಿಯ ನಡುವೆ ಸ್ವಲ್ಪ ಅಂತರವಿರುವಂತೆ ತೆಗೆದುಕೊ.

* ಲೋಹದ ಮೊನೆಯನ್ನು ಹಾಳೆಯ ಮೇಲೆ ಇರಿಸು.

* ಪೆನ್ಸಿಲ್ ಮೊನೆಯನ್ನು ಹಾಳೆಗೆ ತಾಕಿಸುತ್ತಾ ಕೈವಾರವನ್ನು ಒಂದು ಪೂರ್ಣ ಸುತ್ತು ತಿರುಗಿಸು.

ಈಗ ಯಾವ ಆಕೃತಿ ಮೂಡಿ ಬಂದಿದೆ?

ಈ ಆಕೃತಿಯೇ ವೃತ್ತ. ಈ ರೀತಿ ಕೈವಾರವನ್ನು ಉಪಯೋಗಿಸಿ ವೃತ್ತ. ರಚಿಸಬಹುದು.
ಲೋಹದ ಮೊನೆ ಇರಿಸಿರುವ ಬಿಂದುವನ್ನು ಏನೆಂದು ಕರೆಯುವರು? ಯೋಚಿಸು. ಇದೇ ವೃತ್ತ ಕೇಂದ್ರ. `0′ ವೃತ್ತ ಕೇಂದ್ರ.

ಗಮನಿಸು :
* ಕೈವಾರದ ಲೋಹದ ಮೊನೆ ಚೂಪಾಗಿರುವುದರಿಂದ ಎಚ್ಚರ ವಹಿಸಿ ಉಪಯೋಗಿಸು.
* ಕೈವಾರಕ್ಕೆ ಪೆನ್ಸಿಲ್ ಅಳವಡಿಸಿದ ನಂತರ ಲೋಹದ ಮೊನೆ ಮತ್ತು ಪೆನ್ಸಿಲ್ ತುದಿ ಎರಡನ್ನೂ ಚಿತ್ರದಲ್ಲಿ ತೋರಿಸಿರುವಂತೆ ಹತ್ತಿರಕ್ಕೆ ತಂದು ಎರಡೂ ಒಂದೇ ಸಮತಲದಲ್ಲಿರುವಂತೆ ಪರಿಶೀಲಿಸಿಕೊಳ್ಳಬೇಕು.
* ಲೋಹದ ಮೊನೆ ಮತ್ತು ಪೆನ್ಸಿಲ್ ಸ್ಥಿರವಾಗಿಟ್ಟುಕೊಂಡು ಪುಸ್ತಕವನ್ನು ಒಂದು ಪೂರ್ಣ ಸುತ್ತು ತಿರುಗಿಸಬಾರದು.

ಚಟುವಟಿಕೆ :
ಕೈವಾರ ಬಳಸದೇ ನಿನ್ನ ರೇಖಾಗಣಿತ ಉಪಕರಣ ಪೆಟ್ಟಿಗೆಯಲ್ಲಿರುವ ಮತ್ಯಾವ ಉಪಕರಣ ಉಪಯೋಗಿಸಿ ವೃತ್ತ ರಚಿಸಬಹುದು? ನಿನ್ನ ಶಿಕ್ಷಕರೊಂದಿಗೆ ಚರ್ಚಿಸಿ ತಿಳಿದುಕೊ.

ವೃತ್ತದ ತ್ರಿಜ್ಯ

ಒಂದು ವೃತ್ತ ರಚಿಸು

ವೃತ್ತದ ಮೇಲೆ ಚಿತ್ರದಲ್ಲಿ ತೋರಿಸಿರುವಂತೆ A, B, C, D ಬಿಂದುಗಳನ್ನು ಗುರ್ತಿಸು.

`O’ ಯಿಂದ A, B, C, D ಬಿಂದುಗಳ ದೂರವನ್ನು ಅಳತೆ ಮಾಡು

OA = …………………………………. ಸೆಂಮೀ

OB = …………………………………. ಸೆಂಮೀ

OC = …………………………………. ಸೆಂಮೀ

OD = …………………………………. ಸೆಂಮೀ

ಅದೇ ರೀತಿ ಇನ್ನೂ ಕೆಲವು ಬಿಂದುಗಳನ್ನು ಗುರ್ತಿಸಿ `O’ ನಿಂದ ದೂರವನ್ನು ಕಂಡುಹಿಡಿ.

ನಿನ್ನ ತೀರ್ಮಾನವೇನು?

ವೃತ್ತಕೇಂದ್ರದಿಂದ ವೃತ್ತದ ಮೇಲಿನ ಎಲ್ಲಾ ಬಿಂದುಗಳು ಸಮದೂರದಲ್ಲಿರುತ್ತವೆ.

OA, OB, OC, OD ಯನ್ನು ಏನೆಂದು ಕರೆಯುತ್ತಾರೆ? ಇವನ್ನು ವೃತ್ತದ ತ್ರಿಜ್ಯ ಎಂದು ಕರೆಯುತ್ತಾರೆ.

ಚಟುವಟಿಕೆ :
ಒಂದು ವೃತ್ತ ರಚಿಸು. ಆ ವೃತ್ತಕ್ಕೆ ಎಷ್ಟು ತ್ರಿಜ್ಯಗಳನ್ನು ಎಳೆಯಬಹುದು? ಎಳೆದು ನೋಡು. ಇದರಿಂದ ಏನು ತಿಳಿಯುತ್ತದೆ? ನಿನ್ನ ತೀರ್ಮಾನವೇನು?

ವೃತ್ತದ ವ್ಯಾಸ

ಮುಂದಿನ ಚಿತ್ರ ಗಮನಿಸು.

A, B, C, D ಬಿಂದುಗಳನ್ನು ವೃತ್ತದ ಮೇಲೆ ಗುರ್ತಿಸಿದೆ.

A ಮತ್ತುB ಯನ್ನು ಸೇರಿಸು. ಅದೇ ರೀತಿ C ಮತ್ತು D ಯನ್ನು ಸೇರಿಸು.

AB ಮತ್ತು CD ಯಾವ ಬಿಂದುವಿನ ಮೂಲಕ ಹಾದು ಹೋಗುತ್ತಿದೆ? ಗಮನಿಸು.

ವೃತ್ತ ಕೇಂದ್ರದ ಮೂಲಕ ಹಾದುಹೋಗುತ್ತಿದೆ.

AB ಮತ್ತು CD ಯನ್ನು ಏನೆಂದು ಕರೆಯುವರು?

ಇದನ್ನು ವೃತ್ತದ ವ್ಯಾಸ ಎಂದು ಕರೆಯುವರು.

AB ಮತ್ತು CD ವೃತ್ತದ ವ್ಯಾಸವಾಗಿದೆ.

ಚಟುವಟಿಕೆ :
ಒಂದು ವೃತ್ತ ರಚಿಸು. ಅದರಲ್ಲಿ ಎಷ್ಟು ವ್ಯಾಸಗಳನ್ನು ಎಳೆಯಬಹುದು? ಎಳೆದು ನೋಡು.

ನಿನಗಿದು ತಿಳಿದಿರಲಿ :
* ವ್ಯಾಸವು ವೃತ್ತವನ್ನು ಎರಡು ಸಮಭಾಗಗಳಾಗಿ ವಿಭಾಗಿಸುತ್ತದೆ.
* ಒಂದು ವೃತ್ತದ ಯಾವುದಾದರೂ ಎರಡು ವ್ಯಾಸಗಳು ಛೇದಿಸುವ ಬಿಂದುವೇ ವೃತ್ತ
ಕೇಂದ್ರ.

ಚಟುವಟಿಕೆ :
ಒಂದು ಹಾಳೆಯ ಮೇಲೆ ಕೈವಾರ ಉಪಯೋಗಿಸದೆ ವೃತ್ತ ರಚಿಸಿದಾಗ ವೃತ್ತ ಕೇಂದ್ರ, ತ್ರಿಜ್ಯ, ವ್ಯಾಸ ಗುರ್ತಿಸುವುದು ಹೇಗೆ? ಯೋಚಿಸು.
ನಿನ್ನ ಶಿಕ್ಷಕರ ಮಾರ್ಗದರ್ಶನದಲ್ಲಿ ಹಾಳೆ ಮಡಚುವ ವಿಧಾನದಿಂದ ತಿಳಿದುಕೊ.

ಚಟುವಟಿಕೆ :
ಆಟದ ಮೈದಾನದಲ್ಲಿ ದೊಡ್ಡ ವೃತ್ತ ರಚಿಸಲು ಯಾವ ವಿಧಾನ ಅನುಸರಿಸುವೆ? ನಿನ್ನ ಶಿಕ್ಷಕರೊಂದಿಗೆ ಚರ್ಚಿಸು.

ವಿಡಿಯೋ ಪಾಠಗಳು

ವೃತ್ತಗಳು | ಅಧ್ಯಯ 7 | ಗಣಿತ | 4th standard maths | chapter 7 | CIRCLE |

ಅಭ್ಯಾಸಗಳು

ಅಭ್ಯಾಸ 7.1 ಮತ್ತು 7.2ಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ