‘ಹಕ್ಕು’ ಎಂದರೆ ನಾಗರಿಕರಿಗೆ ಸಲ್ಲಬೇಕಾದ ಅಧಿಕಾರ. ‘ಸ್ವಾಭಾವಿಕ ಹಕ್ಕು’ ಆಗಿರಬಹುದು. ಉದಾಹರಣೆ : ಬದುಕುವ ಹಕ್ಕು, ಜೀವರಕ್ಷಣೆಯ ಹಕ್ಕು. ಇಲ್ಲವೆ ‘ನ್ಯಾಯ ಸಮ್ಮತ ಹಕ್ಕು’ ಆಗಿರಬಹುದು. ಉದಾಹರಣೆ : ಸಮಾನತೆಯ ಹಕ್ಕು, ವಿದ್ಯಾಭ್ಯಾಸದ ಹಕ್ಕು.
ವ್ಯಕ್ತಿಯ ವಿಕಾಸಕ್ಕೆ ಮತ್ತು ರಾಷ್ಟ್ರದ ಅಭ್ಯುದಯಕ್ಕೆ ಕೆಲವು ಸ್ವಾತಂತ್ರ್ಯಗಳು ಮತ್ತು ಮೂಲಭೂತ ಹಕ್ಕುಗಳು ಅನಿವಾರ್ಯ. ಆದ್ದರಿಂದಲೇ ಸಂವಿಧಾನವು ಪ್ರಜೆಗಳಿಗೆ ಕೆಲವು ಮೂಲಭೂತ ಹಕ್ಕುಗಳನ್ನು ನೀಡಿದೆ.
ಮೂಭೂತ ಹಕ್ಕುಗಳ ಅರ್ಥ :-
ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕಾಗಿ ಸಂವಿಧಾನ ನೀಡಿರುವ ಅವಕಾಶಗಳನ್ನು ಮೂಲಭೂತ ಹಕ್ಕುಗಳೆಂದು ಕರೆಯಲಾಗುತ್ತದೆ.
ಮೂಲಭೂತ ಹಕ್ಕುಗಳ ವಿಧಗಳು :
- ಸಮಾನತೆಯ ಹಕ್ಕು
- ಸ್ವಾತಂತ್ರ್ಯದ ಹಕ್ಕು
- ಶೋಷಣೆಯ ವಿರುದ್ಧದ ಹಕ್ಕು
- ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
- ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು
- ಸಂವಿಧಾನಬದ್ಧ ಪರಿಹಾರದ ಹಕ್ಕು
ಮೂಲಭೂತ ಕರ್ತವ್ಯಗಳು :
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ‘ಕರ್ತವ್ಯ’ ಎಂದರೆ ವ್ಯಕ್ತಿಯು ತನ್ನ ದೇಶಕ್ಕಾಗಿ ಮಾಡಬೇಕಾದ ಹೊಣೆ. ಪ್ರಜೆಗಳು ತಮ್ಮ ಮೂಲಭೂತ ಕರ್ತವ್ಯಗಳನ್ನು ಸ್ವಯಂ ಸ್ಪೂರ್ತಿಯಿಂದ ಮಾಡಿದರೆ ದೇಶದ ಅಭ್ಯುದಯ ಸಾಧಿಸುವುದು ಸುಲಭ.
ಸಂವಿಧಾನದಲ್ಲಿ ಹನ್ನೊಂದು ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಗಿದೆ. ಅವುಗಳು ಹೀಗಿವೆ.
- ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
- ಸ್ವಾತಂತ್ರ್ಯ ಚಳುವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.
- ಭಾರತದ ಏಕತೆಯನ್ನು ರಕ್ಷಿಸುವುದು.
- ಮಾತೃಭೂಮಿಯನ್ನು ರಕ್ಷಿಸುವುದು.
- ಭಾರತೀಯರಾಧ ನಾವೆಲ್ಲಾ ಒಂದು ಎಂಬ ಭಾವನೆಯನ್ನು ಬೆಳೆಸುವುದು.
- ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು.
- ಪ್ರಾಕೃತಿಕ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವುದು.
- ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು.
- ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.
- ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.
- ಎಲ್ಲಾ ತಂದೆ ತಾಯಿಯರು ಹಾಗೂ ಪೋಷಕರು 6 ರಿಂದ 14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶಗಳನ್ನು ಒದಗಿಸುವುದು.
That’s good news
thank you