ವ್ಯಾಪಾರ ವಹಿವಾಟು ನಡೆಸುವ ಮೂಲಕ ಗಣಿತ ವಿಷಯದಲ್ಲಿ ಹೆಚ್ಚು ಆಸಕ್ತಿವಹಿಸಲು, ಸಾರ್ವಜನಿಕರೊಂದಿಗೆ ವ್ಯವಹಾರ ನಡೆಸುವ ಕಲೆ ಕರಗತ ಮಾಡಿಕೊಳ್ಳಲು ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚುಸಲು ದಿನಾಂಕ 06-02-2018, ಮಂಗಳವಾರದಂದು ಶಾಲಾ ಆವರಣದಲ್ಲಿ 4ನೇ ವರ್ಷದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.
ಉದ್ಘಾಟನೆ : ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯರಾದ ಮಾನ್ಯ ಶ್ರೀ ನಾಗರಾಜ ನಾಯ್ಕ, ಬೇಡ್ಕಣಿ ಇವರು, ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೇ ಅವರಿಗೆ ಸೃಜನಶೀಲತೆ, ವ್ಯವಹಾರಿಕ ಜ್ಞಾನ ತಿಳಿಸಬೇಕು. ಜೊತೆಗೆ ಅವರಲ್ಲಿರುವ ಪ್ರತಿಭೆ ಗುರುತಿಸಬೇಕು ಎಂದರು.
ಉಪಸ್ಥಿತಿ : ಸೋವಿನಕೊಪ್ಪ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀ ಮೋಹನ ಗೌಡ ಇವರು ಅಧ್ಯಕ್ಷತೆ ವಹಿಸಿದ್ದರು. ಪಾ.ಪಂ. ಸದಸ್ಯರಾದ ಶ್ರೀಮತಿ ಗಿರಿಜಾ ಗೌಡ, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ, ರಾಮಚಂದ್ರ ನಾಯ್ಕ, ಬಿಳಗಿ ಗ್ರಾ.ಪಂ. ಅಧ್ಯಕ್ಷರಾದ ಶ್ರೀ ಆದರ್ಶ ಪೈ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ರಮೇಶ ಹಾರ್ಸಿಮನೆ, ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಂ.ಕೆ. ನಾಯ್ಕ ಕಡಕೇರಿ ಹಾಗೂ ಶ್ರೀ ಸತೀಶ ಹೆಗಡೆ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಜನಾರ್ಧನ ಗಣಪ ಗೌಡ, ಸಿ.ಆರ್.ಪಿ.ಗಳಾದ ಶ್ರೀ ಮಂಜುನಾಥ ನಾಯ್ಕ ಹಾಗೂ ಶ್ರೀ ಜನಾರ್ಧನ ಗೌಡ, ಶ್ರೀ ಸುರೇಶ ಕಡಕೇರಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಧ ಶ್ರೀ ಜಗದೀಶ ಪದ್ಮನಾಭ ಗೌಡ ಉಪಸ್ಥಿತರಿದ್ದರು.
ಸಂತೆಯಲ್ಲಿ ಸಂತಸದಿಂದ ಪಾಲ್ಗೊಂಡ ಮಕ್ಕಳು, ಶಿಕ್ಷಕರ ಮತ್ತು ಮಕ್ಕಳ ಮಾರ್ಗದರ್ಶನದಲ್ಲಿ ವಿವಿಧ ಸಾಮಾನು ಸರಂಜಾಮುಗಳೊಂದಿಗೆ ಅಂಗಡಿ ತೆರೆದು ವ್ಯಾಪಾರ ನಡೆಸಿದರು.
ಸಂತೆಯಲ್ಲಿ ಸಿಹಿ ತಿಂಡಿ, ಹಪ್ಪಳ-ಸಂಡಿಗೆ, ಹೋಳಿಗೆ, ತರಕಾರಿ, ಗಡ್ಡೆ-ಗೆಣಸು, ಪತಂಜಲಿ ಸಾಮಾನು, ಹಣ್ಣು, ತಂಪು ಪಾನೀಯ, ಮಸಾಲೆ ಮಂಡಕ್ಕಿ, ಬೇಯಿಸಿದ ಜೋಳ, ಮಿರ್ಚಿ ಭಜೆ, ಶಾಲೆ ಪರಿಕರಗಳು ಹೀಗೆ ವಿವಿಧ ವಸ್ತುಗಳು ಅಂಗಡಿಯಲ್ಲಿದ್ದವು. ಪೋಷಕರು, ಸುತ್ತಲಿನ ಸ್ಥಳೀಯ ಜನ, ಜನಪ್ರತಿನಿಧಿಗಳು ಪಾಲ್ಗೊಂಡು ಮಕ್ಕಳಿಗೆ ತೂಕ-ಅಳತೆ, ಲೆಕ್ಕಾಚಾರದ ಕುರಿತು ಮಾಹಿತಿ ನೀಡುತ್ತ ಸಾಮಾನುಗಳನ್ನು ಖರೀದಿಸಿ ಪ್ರೋತ್ಸಾಹಿಸುತ್ತಿದ್ದರು.