ಬೀಸೋಕಲ್ಲಿನ ಪದ (ಪದ್ಯ) – ಪಾಠ – 7

ಕಲಿಕೆಗೆ ದಾರಿ:
ಜೋಗುಳ ಹಾಡು, ಗೀಗೀ ಪದ, ಸೋಬಾನೆ ಪದ, ಇವುಗಳಲ್ಲಿ ನಿನಗೆ ಗೊತ್ತಿರುವ ಯಾವುದಾದರೊಂದು ಹಾಡನ್ನು ತರಗತಿಯಲ್ಲಿ ಗೆಳೆಯರೊಡಗೂಡಿ ಹಾಡು.

ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯ
ಜಲ್ಲಜಲ್ಲಾನೆ ಉದುರಮ್ಮ| ನಾ ನಿನಗೆ
ಬೆಲ್ಲಾದಾರತಿಯಾ ಬೆಳಗೇನು ||

ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲು
ಚಂದ್ರಮತಿಯೆಂಬ ಹಿಡಿಗೂಟ | ಹಿಡುಕೊಂಡು
ತಂದೆ ತಾಯಿಗಳ ನೆನೆದೇನ ||

ರಾಗಿಯು ಮುಗಿದಾವು ರಾಜಾನ್ನ ಹೆಚ್ಚ್ಯಾವು
ನಾನ್ಹಿಡಿದ ಕೆಲಸ ವದಗ್ಯಾವು| ರಾಗೀಕಲ್ಲೆ
ನಾ ತೂಗಿ ಬಿಡುತೀನಿ ಬಲದೋಳು ||

ಕಲ್ಲು ಬಿಟ್ಟೇನೆಂದು ಸಿಟ್ಯಾಕೆ ಸರಸತಿಯೇ
ಕುಕ್ಕೇಲಿ ರಾಗಿ ಬೆಳೆಯಾಲಿ | ತಕ್ಕೊಂಡು
ಮತ್ತೆ ರಾತ್ರೀಗೆ ಬರುತೀನಿ ||

-ಜನಪದ

ಜನವಾಣಿ ಬೇರು, ಕವಿವಾಣಿ ಹೂವು.

ಪದಗಳ ಅರ್ಥ

ಪಲ್ಲಕ್ಕಿ – ಮೇನೆ, ಡೋಲಿ;
ಉದುರು – ಕೆಳಗೆ ಬೀಳು;
ಕುಕ್ಕೆ – ಬಿದಿರಿನ ಬುಟ್ಟಿ ;

ಟಿಪ್ಪಣಿ

ರಾಜಾನ್ನ – ಸುವಾಸನೆಯುಳ್ಳ ಅಕ್ಕಿ.
ಸೊಸಿ – ಸೊಸೆ, ಮಗನ ಹೆಂಡತಿ.

ಸಂವೇದ ವಿಡಿಯೋ ಪಾಠಗಳು

Samveda 4th Kannada Bisokallin Pada – 4 FLK

ಪೂರಕ ವಿಡಿಯೋಗಳು

Bisokallina pada | ಬೀಸೋಕಲ್ಲಿನ ಪದ | 4ನೇ ತರಗತಿ | 4th standard Kannada| Class 04 Kannada Lesson & Poem

ಪದ್ಯದ ಮಾದರಿ ಗಾಯನ

ಬೀಸೋಕಲ್ಲಿನ ಪದ 4ನೇ ತರಗತಿ ಕನ್ನಡ ಭಾಷೆಯ ಮೂರನೇ ಪದ್ಯ. 4th Standard Kannada Poem Beesokallina Pada.

ಪ್ರಶ್ನೋತ್ತರಗಳು ಹಾಗೂ ಭಾಷಾ ಚಟುವಟಿಕೆಗಳು

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.