ತೆಪ್ಪಸಾಲು ಅರಣ್ಯದೊಳಗಿನ ಮರಳಿನ ತೀರ : ಪಶ್ಚಿಮ ಘಟ್ಟದ ವಂಡರ್ ಬೀಚ್

ಮರಳಿನ ಮೇಲಿನ ಆಟ, ಕಡಲಿನ ತೀರ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರವಾಸದಲ್ಲಿ ವಿಶೇಷ ಅನುಭವ ಕೊಡುವ ಪ್ರಕೃತಿಯ ವಿಸ್ಮಯ ತಾಣಗಳು ಅವು. ಮರಳು ಎಂದ ಕೂಡಲೆ ನಮಗೆ ಮೊದಲು ನೆನಪಾಗುವುದು ಸಮುದ್ರದ ತೀರಗಳು. ಆದರೆ, ಅರಣ್ಯದೊಳಗೆ ಸಮುದ್ರ ತೀರದಲ್ಲಿ ಇರುವಂತೆ ವಿಶಾಲವಾದ ಮರಳಿನ ತೀರ ಇರುವುದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾವಿನಬೀಳು ಗ್ರಾಮದ ‘ತೆಪ್ಪಸಾಲಿನಲ್ಲಿ’ ಅಘನಾಶಿನಿ ನದಿ ದಡದಲ್ಲಿರುವ ಈ ಪ್ರದೇಶ ಸಮುದ್ರದ ಮರಳಿನ ತೀರದಂತೆ ವಿಶಾಲವಾಗಿಯೂ, ಮನೋಹರವಾಗಿಯೂ ಕಾಣುತ್ತದೆ. ಈ ಸ್ಥಳದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹುಲ್ಕುತ್ರಿ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಎಸ್.ಡಿ.ಎಮ್.ಸಿ. ಸಮಿತಿ, ಪಾಲಕ-ಪೋಷಕರು ಹಾಗೂ ಊರನಾಗರಿಕರ ಸಹಕಾರದೊಂದಿಗೆ ಹೊರಸಂಚಾರವನ್ನು ಏರ್ಪಡಿಸಲಾಗಿತ್ತು.
ಮಕ್ಕಳು ಪ್ರಕೃತಿಯೊಂದಿಗೆ ಇಂಪಾದ ಸಂವಾದ, ತಿಳಿಯಾದ ನೀರಿನಾಟ ಹಾಗೂ ಮರಳಿನಾಟ ಆಡುತ್ತ ನಿಸರ್ಗದ ಸೌಂದರ್ಯವನ್ನು ಸವಿದರು. ನದಿ ತೀರದ ಒಂದು ಬದಿಯಲ್ಲಿ ಮರಗಳ ನೆರಳಿನಲ್ಲಿ ಸಹ ಭೋಜನ ಸವಿದರು.

ಕರಾವಳಿ ಮುಂಜಾವು ದಿನಪತ್ರಿಕೆಯಲ್ಲಿ