ಜಿಲ್ಲಾ ಮಟ್ಟಕ್ಕೆ ತೇಜಸ್ವಿ ಆಯ್ಕೆ

2022-23ನೇ ಸಾಲಿನ ಪ್ರತಿಭಾ ಕಾರಂಜಿಯು ಹಿರಿಯ ಪ್ರಾಥಮಿಕ ಶಾಲೆ ಬಿಳಗಿಯಲ್ಲಿ ನಡೆದಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ 14 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು 8 ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ಕನ್ನಡ ಕಂಠಪಾಠ – ಜೆ. ಅಕ್ಷರ – ಪ್ರಥಮ, ಹಿಂದಿ ಕಂಠಪಾಠ – ಸೃಜನ್ ವೆಂಕಟೇಶ ಭಟ್ಟ – ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ ಕಿರಿಯ – ತೇಜಸ್ವಿ ರಾಮಚಂದ್ರ ಹೆಗಡೆ – ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ ಹಿರಿಯ – ಪ್ರಣವ್ ಪ್ರಕಾಶ ಹೆಗಡೆ – ಪ್ರಥಮ, ಕಥೆ ಹೇಳುವುದು ಕಿರಿಯ – ನವ್ಯಶ್ರೀ ಕೃಷ್ಣಮೂರ್ತಿ ಹೆಗಡೆ – ತೃತೀಯ, ಕ್ಲೇ ಮಾಡಲಿಂಗ್ ಹಿರಿಯ – ಜೆ. ಅಕ್ಷರ – ದ್ವಿತೀಯ, ಆಶು ಭಾಷಣ – ಕಿರಿಯ – ತೇಜಸ್ವಿ ರಾಮಚಂದ್ರ ಹೆಗಡೆ – ಪ್ರಥಮ, ಭಾಷಣ – ಹಿರಿಯ – ಪ್ರಣವ್ ಪ್ರಕಾಶ ಹೆಗಡೆ – ಪ್ರಥಮ ಬಹುಮಾನ ಪಡೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಜಿಲ್ಲಾ ಮಟ್ಟಕ್ಕೆ ತೇಜಸ್ವಿ ಆಯ್ಕೆ

ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಸಿದ್ದಾಪುರ ತಾಲೂಕಿನ ಹಾಳದಕಟ್ಟಾ ಹಿರಿಯ ಹಾಗೂ ಪ್ರೌಢ ಶಾಲೆಯಲ್ಲಿ ನಡೆದಿತ್ತು. ನಮ್ಮ ಶಾಲೆಯಿಂದ ಒಟ್ಟು ನಾಲ್ಕು ವಿದ್ಯಾರ್ಥಿಗಳು 6 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅವರಲ್ಲಿ 4ನೇ ತರಗತಿಯ ಕು. ತೇಜಸ್ವಿ ರಾಮಚಂದ್ರ ಹೆಗಡೆ ಕಿರಿಯರ ಆಶು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ  ಹಾಗೂ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕರು, ಎಸ್.ಡಿ.ಎಮ್.ಸಿ. ಸಮಿತಿ ಹಾಗೂ ಹಾವಿನಬೀಳು ಗ್ರಾಮಸ್ಥರು ಅಭಿನಂದಿಸಿದ್ದಾರೆ.

******************