ಕುಟುಂಬ – ಪಾಠ – 2

ಕುಟುಂಬದ ಸದಸ್ಯರು ಸಂಬಂಧಿಗಳಾಗಿರುತ್ತಾರೆ ಮತ್ತು ಒಟ್ಟಾಗಿ ವಾಸಿಸುತ್ತಾರೆ ಎಂದು ನಿನಗೀಗಾಗಲೇ ತಿಳಿದಿದೆ. ಕೆಲವೊಮ್ಮೆ ಕುಟುಂಬದ ಸದಸ್ಯರು ವಿವಾಹ, ಉದ್ಯೋಗ, ಶಿಕ್ಷಣ ಹೀಗೆ ಬೇರೆ ಬೇರೆ ಕಾರಣಗಳಿಂದ ಮೂಲ ಕುಟುಂಬವನ್ನು ಬಿಟ್ಟು ತಮ್ಮದೇ ಆದ ಪ್ರತ್ಯೇಕ ಕುಟುಂಬವನ್ನು ರಚಿಸಿಕೊಳ್ಳುತ್ತಾರೆ. ಕಾಲದಿಂದ ಕಾಲಕ್ಕೆ ಕುಟುಂಬದ ಸ್ವರೂಪದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ.

ವಂಶವೃಕ್ಷ
ನಾನು ಮನು. ವಂಶವೃಕ್ಷದ ಮೂಲಕ ನನ್ನ ಕುಟುಂಬದ ಪರಿಚಯ ಮಾಡಿಕೊಡುವೆ. ಮುಂದಿನ ಪುಟದಲ್ಲಿ ನನ್ನ ವಂಶವೃಕ್ಷ ಇದೆ. ಅದರಲ್ಲಿ ನಾನು ಹಸಿರು ಬಣ್ಣದ ಚೌಕದಲ್ಲಿದ್ದೇನೆ. ನನ್ನ ವಂಶದ ಎಲ್ಲಾ ಸದಸ್ಯರ ಹೆಸರನ್ನು ಓದು.

ಮೇಲೆ ನೀಡಿರುವ ವಂಶವೃಕ್ಷದಲ್ಲಿರುವ ಹೆಸರುಗಳನ್ನು ಕೆಳಗಿನ ಪಟ್ಟಿಯಲ್ಲಿ ನೀಡಿದೆ ಮನು ನೀನೇ ಎಂದು ಭಾವಿಸಿ, ಈ ವಂಶವೃಕ್ಷದಲ್ಲಿರುವ ವ್ಯಕ್ತಿಗಳ ಸಂಬಂಧಗಳನ್ನು ಬರೆ.

ನನ್ನ ಕುಟುಂಬದಲ್ಲಿ ನಾಲ್ಕು ತಲೆಮಾರಿನ ಸದಸ್ಯರಿದ್ದಾರೆ. ನಾವೆಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತೇವೆ. ಎಲ್ಲರೂ ಒಟ್ಟಾಗಿ ಊಟ ಮಾಡುತ್ತೇವೆ. ಎಲ್ಲರೂ ಸೇರಿ ಹಬ್ಬ ಇತ್ಯಾದಿ ಕಾರ್ಯಗಳನ್ನು ಆಚರಿಸುತ್ತೇವೆ. ಮುತ್ತಜ್ಜ ಮತ್ತು ಮುತ್ತಜ್ಜಿಯ ಪ್ರೀತಿ ನಮಗೆಲ್ಲರಿಗೂ ಸಿಗುತ್ತದೆ. ಅವರನ್ನು ಎಲ್ಲರೂ ಗೌರವದಿಂದ ನೋಡಿಕೊಳ್ಳುತ್ತಾರೆ. ಅವರ ಮಾರ್ಗದರ್ಶನದಿಂದ ನನ್ನ ಕುಟುಂಬದವರು ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಹೀಗೆ 2ಕ್ಕಿಂತ ಹೆಚ್ಚು ತಲೆಮಾರಿನವರು ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ಅವಿಭಕ್ತ ಕುಟುಂಬ ಎನಿಸಿಕೊಳ್ಳುವುದು.

ಸೋದರತ್ತೆ ಪ್ರೇಮಾಳ ಕುಟುಂಬದಲ್ಲಿ ಕೇವಲ ನಾಲ್ಕು ಜನರಿದ್ದಾರೆ. ಅತ್ತೆ ಪ್ರೇಮ, ಮಾವ ಅಶೋಕ ಹಾಗೂ ಅವರ ಇಬ್ಬರು ಮಕ್ಕಳು. ಪ್ರೇಮತ್ತೆಯ ಅತ್ತೆ, ಮಾವ ಬೇರೆ ಊರಿನಲ್ಲಿ ಇದ್ದಾರೆ. ಹೀಗಾಗಿ ಅವರದು ಚಿಕ್ಕ ಕುಟುಂಬ. ಈ ರೀತಿ 2 ತಲೆಮಾರಿನವರು ವಾಸಿಸುವ ಚಿಕ್ಕ ಕುಟುಂಬವು ವಿಭಕ್ತ ಕುಟುಂಬ ಎನಿಸಿಕೊಳ್ಳುವುದು.

ನಿನ್ನ ಕುಟುಂಬದ ವಿಧ ಯಾವುದೆಂದು ತಿಳಿಯಬೇಕೆ?
ಹಾಗಾದರೆ ಈ ಲಕ್ಷಣಗಳಿಗೆ (ಸರಿ) ಅಥವಾ (ತಪ್ಪು) ಎಂದು ಗುರ್ತಿಸು. (ಸರಿ) ಗುರುತು ಹೆಚ್ಚು ಬಂದರೆ ನಿನ್ನದು ವಿಭಕ್ತ ಕುಟುಂಬ, (ತಪ್ಪು) ಗುರುತು ಹೆಚ್ಚು ಬಂದರೆ ಅದು ಅವಿಭಕ್ತ ಕುಟುಂಬ.

ನಿನಗಿದು ಗೊತ್ತೆ?
* ವಂಶವೃಕ್ಷವನ್ನು ರಚಿಸುವಾಗ ಮಕ್ಕಳ ಹೆಸರುಗಳನ್ನು ಹಿರಿತನಕ್ಕೆ ಅನುಗುಣವಾಗಿ ಅನುಕ್ರಮವಾಗಿ ಬರೆಯಲಾಗುತ್ತದೆ.
* ವಂಶವೃಕ್ಷದಲ್ಲಿ ಆ ವಂಶದ ಮಕ್ಕಳಲ್ಲಿ ಹಿರಿಯರಿಂದ ಪ್ರಾರಂಭಿಸಿ ಕಿರಿಯರವರೆಗೆ ಹೆಸರನ್ನು ಮೊದಲು ಬರೆದು ನಂತರ ಅವರ ಪತಿ/ಪತ್ನಿಯ ಹೆಸರನ್ನು ಬರೆಯಲಾಗುತ್ತದೆ.
* ವಂಶವೃಕ್ಷ ಎಂಬ ಪದವು ಮರದ ಕಲ್ಪನೆಯಂತೆ ತಲೆಮಾರುಗಳಿಗೆ ಹರಡುತ್ತಾ ಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ. ಆದರೆ ಸಾಮಾನ್ಯವಾಗಿ ವಂಶವೃಕ್ಷವನ್ನು ಬರೆಯುವಾಗ ಹಿರಿಯರಿಂದ ಕಿರಿಯರವರೆಗೆ ಮೇಲಿನಿಂದ ಕೆಳಗೆ ಬರೆಯಲಾಗುತ್ತದೆ. ಹಿರಿಯರ ನಂತರದ ಪೀಳಿಗೆಯನ್ನು ಸೂಚಿಸಲು ಹೀಗೆ ಬರೆಯಲಾಗುತ್ತದೆ.

ಈ ಕೆಳಗಿನ ಅಂಶಗಳನ್ನು ಓದಿ, ಇದು ನನ್ನ ಕುಟುಂಬ ಮತ್ತು ಇತರರು ಎಂದು ವಿಂಗಡಿಸು. ಅದನ್ನು ಮುಂದಿನ ಪುಟದಲ್ಲಿ ಕೊಟ್ಟಿರುವ ಚೌಕದಲ್ಲಿ ಬರೆ.
* ಪಾಲನೆ ಮತ್ತು ರಕ್ಷಣೆ
* ಯೋಗ್ಯ ಶಿಕ್ಷಣ ಕೊಡಿಸುವುದು.
* ಆಹಾರ ವಸ್ತುಗಳನ್ನು (ದಿನಸಿ) ನೀಡುವುದು.
* ಪಾಠವನ್ನು ಕಲಿಸುವುದು.
* ಆಟದಲ್ಲಿ ಸೋತಾಗ ಸಮಾಧಾನ ಮಾಡುವುದು.
* ರೋಗ ಬಂದಾಗ ಚಿಕಿತ್ಸೆ ಮಾಡುವುದು.
* ಪ್ರೀತಿ ವಾತ್ಸಲ್ಯ ತೋರುವುದು.
* ಅವಶ್ಯಕತೆಗಳನ್ನು ಪೂರೈಸುವುದು.
* ಅಮ್ಮ ಇಲ್ಲದಿದ್ದಾಗ ನೆರವಾಗುವುದು.
* ಹೆಚ್ಚಿನ ಸಮಯ ಇರುವುದು.

ನನ್ನ ಕುಟುಂಬಇತರರು

ನಮ್ಮ ಕುಟುಂಬದ ಸದಸ್ಯರೊಂದಿಗೆ ಇತರರು, ನೆರೆಯವರೂ ಸಹ ನಮಗೆ ಸಹಾಯ ಮಾಡುತ್ತಾರೆ.

ಹಾಡಿ-ನಲಿ
ಕುಟುಂಬ, ಕುಟುಂಬ ನನ್ನ ಕುಟುಂಬ
ನಾನು ಹುಟ್ಟಿ ಬೆಳೆದ ಕುಟುಂಬ
ನಗುತ ಕಾಲ ಕಳೆದ ಕುಟುಂಬ
ಅಪ್ಪ, ಅಮ್ಮ, ತಮ್ಮ ಇರುವ ಕುಟುಂಬ
ಪ್ರೀತಿ, ವಾತ್ಸಲ್ಯ ತುಂಬಿದ ಕುಟುಂಬ
ಕುಟುಂಬವಿಲ್ಲದೆ ನಾನಿಲ್ಲ
ಕುಟುಂಬಗಳಿಲ್ಲದೆ ಜಗವಿಲ್ಲ.

ವಿಡಿಯೋ ಪಾಠಗಳು

Samveda – 5th – EVS – Kutumba (Part 1 of 2) | ಭಾಗ – 1
Samveda – 5th – EVS – Kutumba (Part 2 of 2) | ಭಾಗ – 2

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.