
ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಿನಬೀಳು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಗೆ 11 ಲಕ್ಷ ರೂಪಾಯಿಯ ಒಂದು ಕೊಠಡಿಯ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯವನ್ನು ಕರ್ನಾಟಕ ವಿಧಾನಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ನೆರವೇರಿಸಿದರು.
ಈ ಶಾಲೆಗೆ ಇನ್ನು 3 ತರಗತಿ ಕೋಣೆಯನ್ನು ಆದಷ್ಟು ಬೇಗನೇ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಹಾವಿನಬೀಳು ಗ್ರಾಮದಲ್ಲಿ ಚಿಟ್ಟಟ್ಟೆಮನೆಯಿಂದ ಹೆಮ್ಮನಬೈಲ್ ವರೆಗಿನ ರಸ್ತೆಯು ಡಾಂಬರೀಕರಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಗ್ರಾಮವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಗ್ರಾಮ ಪಂಚಾಯತಿಯ ಸೌಲಭ್ಯವನ್ನು ಸಾರ್ವಜನಿಕರು ಮುತುವರ್ಜಿಯಿಂದ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಶ್ರೀ ನಾಗರಾಜ ನಾಯ್ಕ, ಅಣಲೆಬೈಲ್ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಎಮ್. ಈ. ಹೆಗಡೆ ಗೆಜ್ಜೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸದಾನಂದ ಸ್ವಾಮಿ, ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಶ್ರೀ ಪ್ರಸನ್ನ ಹೆಗಡೆ, ಮುಖ್ಯ ಅಭಿಯಂತರರು, ಸಿ.ಆರ್.ಪಿ.ಗಳಾದ ಶ್ರೀ ಮಂಜುನಾಥ ನಾಯ್ಕ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ, ಗ್ರಾ.ಪಂ. ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ, ಶ್ರೀ ವೆಂಕಟೇಶ ಭಟ್, ಶಾಲಾ ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.







At the beginning, I was still puzzled. Since I read your article, I have been very impressed. It has provided a lot of innovative ideas for my thesis related to gate.io. Thank u. But I still have some doubts, can you help me? Thanks.