ದಿನಾಂಕ : 08-02-2021
ಸ್ಥಳ : ಸ.ಹಿ.ಪ್ರಾ. ಶಾಲೆ, ಹುಲ್ಕುತ್ರಿ
ಇಲಾಖೆಯು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಒಂದು ದಿನದ ತರಬೇತಿಯನ್ನು ಶಾಲಾ ಹಂತದಲ್ಲಿ ನೀಡಲು ನಿರ್ದೇಶನ ನೀಡಿತ್ತು ಅದರಂತೆ ನಮ್ಮ ಶಾಲೆಯಲ್ಲಿ ದಿನಾಂಕ 08-02-2021, ಸೋಮವಾರದಂದು ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ತರಬೇತಿ ಕಾರ್ಯಗಾರವನ್ನು ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ ಹುಲ್ಕುತ್ರಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತರವರು ಎಸ್.ಡಿ.ಎಮ್.ಸಿ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ – ಸಂಕ್ಷಿಪ್ತ ಹಿನ್ನಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆಯ ವಿಧಿ-ವಿಧಾನಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪ್ರಕಾರ್ಯಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕರ್ತವ್ಯಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧಿಕಾರಗಳು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಸುವ ವಿಧಾನಗಳನ್ನು ತಿಳಿಸಿದರು.
ಕಾರ್ಯಗಾರದಲ್ಲಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಚರ್ಚಿಲಾಯಿತು, ಈ ಕೆಳಗಿನಂತೆ ಯೋಜನೆಗಳನ್ನು ಸಿದ್ಧಪಡಿಸಿ ಮುಂದಿನ ದಿನಗಳಲ್ಲಿ ಈಡೇರಿಸಲು ಪ್ರಯತ್ನಿಸುವುದಾಗಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಶಾಲೆಯ ಮುಂಭಾಗದಲ್ಲಿ ನೀರಿನ ವ್ಯವಸ್ಥೆಯೊಂದಿಗೆ ಉತ್ತಮ ಉದ್ಯಾನವನ ನಿರ್ಮಿಸುವುದು.
4 ರಿಂದ 7ನೇ ತರಗತಿಗೆ ಉತ್ತಮ ಗುಣಮಟ್ಟದ ಕಬ್ಬಿಣದ ಡೆಸ್ಕ್ – ಬೇಂಚ್ ವ್ಯವಸ್ಥೆಗೊಳಿಸುವುದು. ಇದಕ್ಕೆ ಎಲ್ಲಾ ಗ್ರಾಮಸ್ಥರು ನೆರವು ನೀಡುವುದು.
ಶಾಲೆಗೆ ತುರ್ತಾಗಿ ಇನ್ನು ಎರಡು ಕೋಣೆಗಳನ್ನು ಮಂಜೂರಿಸಲು ಪ್ರಯತ್ನಿಸುವುದು.
ಸಮಿತಿ ಸದಸ್ಯರಿಗೆ ಮನರಂಜನೆಯ ಸಲುವಾಗಿ ಸ್ಮರಣ ಶಕ್ತಿ ಸ್ಪರ್ಧೆಯನ್ನು ಹಾಗೂ ಮಹಿಳಾ ಸದಸ್ಯರಿಗೆ ಪೇಪರ್ ಕ್ರಾಫ್ಟ್ ಕಾರ್ಯವನ್ನು ಶಾಲಾ ಸಹ ಶಿಕ್ಷಕಿಯರಾದ ಕು. ಮೈತ್ರಿ ಹೆಗಡೆ ಹಾಗೂ ಕು. ರಂಜನಾ ಭಂಡಾರಿ ಆಯೋಜಿಸಿದರು.