ಆಹಾರ-ಇದು ಎಲ್ಲಿಂದ ದೊರಕುತ್ತದೆ?

ಈ ದಿನ ನೀವು ಮನೆಯಲ್ಲಿ ಏನನ್ನು ತಿಂದಿರಿ? ನಿಮ್ಮ ಸ್ನೇಹಿತ / ಸ್ನೇಹಿತೆ ಈ ದಿನ ಏನನ್ನು ತಿಂದರು ಎಂಬುದನ್ನು ತಿಳಿದುಕೊಳ್ಳಿ. ನಿನ್ನೆ ಮತ್ತು ಇಂದು ನೀವು ಒಂದೇ ತರಹದ ಆಹಾರವನ್ನು ತಿಂದಿರ? ನಾವು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯ ಆಹಾರವನ್ನು ತಿನ್ನುತ್ತೇವೆ, ಅಲ್ಲವೆ?

1) ಆಹಾರ ವೈವಿಧ್ಯ

ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಬಹಳಷ್ಟು ವೈವಿಧ್ಯ ಇದೆ ಎಂದು ಕಾಣುತ್ತದೆ. ಈ ಆಹಾರ ಪದಾರ್ಥಗಳನ್ನು ಯಾವುದರಿಂದ ತಯಾರಿಸಲಾಗಿದೆ?

ಮನೆಯಲ್ಲಿ ಅನ್ನ ಮಾಡುವುದರ ಬಗ್ಗೆ ಆಲೋಚಿಸಿ. ನಾವು ಅಕ್ಕಿಯನ್ನು ನೀರಿನಲ್ಲಿ ಬೇಯಿಸುತ್ತೇವೆ. ಅನ್ನವನ್ನು ತಯಾರಿಸಲು ಕೇವಲ ಎರಡು ವಸ್ತುಗಳ ಅಥವಾ ಘಟಕಗಳ ಅವಶ್ಯಕತೆಯಿದೆ.

ಆದರೆ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸಲು ಅನೇಕ ವಸ್ತುಗಳು ಬೇಕಾಗುತ್ತವೆ. ತರಕಾರಿ ಸಾರನ್ನು ತಯಾರಿಸಲು ವಿವಿಧ ರೀತಿಯ ತರಕಾರಿಗಳು, ಉಪ್ಪು, ಮಸಾಲೆ ಪದಾರ್ಥಗಳು, ಎಣ್ಣೆ ಮುಂತಾದವುಗಳ ಅವಶ್ಯಕತೆಯಿದೆ.

2) ಆಹಾರ ವಸ್ತುಗಳು ಮತ್ತು ಮೂಲಗಳು

ಕೆಲವು ಘಟಕಾಂಶಗಳ ಮೂಲಗಳನ್ನು ಸುಲಭವಾಗಿ ಊಹೆ ಮಾಡಲು ನಮಗೆ ಸಾಧ್ಯವಾಗಬಹುದು. ಉದಾಹರಣೆಗೆ, ಹಣ್ಣುಗಳು ಮತ್ತು ತರಕಾರಿಗಳು ಎಲ್ಲಿಂದ ದೊರಕುತ್ತವೆ? ಹೌದು, ಸಸ್ಯಗಳಿಂದ! ಗೋಧಿ ಅಥವಾ ಅಕ್ಕಿಯ ಮೂಲಗಳು ಯಾವುವು? ನಮಗೆ ಈ ಧಾನ್ಯಗಳನ್ನು ಕೊಡುವ ಗೋಧಿ ಅಥವಾ ಭತ್ತದ ಗದ್ದೆಗಳಲ್ಲಿ ಸಾಲು ಸಾಲು ಸಸ್ಯಗಳನ್ನು ನೀವು ನೋಡಿರಬಹುದು.

ಆಹಾರ ಧಾನ್ಯಗಳ ಮೂಲ :-

ಭತ್ತದ ಗದ್ದೆ
ಧಾನ್ಯವನ್ನು ಸಾಗಿಸುತ್ತಿರುವುದು

ಹಾಲು, ಮೊಟ್ಟೆಗಳು ಮತ್ತು ಮಾಂಸವು ಪ್ರಾಣಿಗಳಿಂದ ದೊರಕುವ ಆಹಾರ ಪದಾರ್ಥಗಳಾಗಿವೆ.

ಪ್ರಾಣಿ ಮೂಲ

ಆಹಾರ ಘಟಕಾಂಶಗಳಾದ ದವಸ ಧಾನ್ಯ, ಕಾಳು, ತರಕಾರಿ ಮತ್ತು ಹಣ್ಣುಗಳಿಗೆ ಸಸ್ಯಗಳೇ ಮೂಲಗಳು. ಅದರಂತೆ ಹಾಲು, ಮೊಟ್ಟೆಗಳು ಮತ್ತು ಮಾಂಸದ ಉತ್ಪನ್ನಗಳನ್ನು ಪ್ರಾಣಿಗಳು ಒದಗಿಸುತ್ತವೆ. ನಮಗೆ ಹಾಲನ್ನು ಕೊಡುವ ಕೆಲವು ಸಾಮಾನ್ಯ ಪ್ರಾಣಿಗಳೆಂದರೆ ಹಸು, ಮೇಕೆ ಮತ್ತು ಎಮ್ಮೆ. ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಬೆಣ್ಣೆ, ಕ್ರೀಮ್ (ಕೆನೆ), ಗಿಣ್ಣು ಮತ್ತು ಮೊಸರನ್ನು ಉಪಯೋಗಿಸುವರು. ಹಾಲನ್ನು ಕೊಡುವ ಕೆಲವು ಬೇರೆ ಪ್ರಾಣಿಗಳನ್ನು ನೀವು ಹೆಸರಿಸುವಿರ?

ಸಸ್ಯ ಮೂಲ
ಹಾಲನ್ನು ಕೊಡುವ ಕೆಲವು ಬೇರೆ ಪ್ರಾಣಿಗಳು
ಹಾಲು ಮತ್ತು ಹಾಲಿನ ಉತ್ಪನ್ನಗಳು

3) ಆಹಾರವಾಗಿ ಸಸ್ಯದ ಭಾಗಗಳು ಮತ್ತು ಪ್ರಾಣಿ ಉತ್ಪನ್ನಗಳು

ನಮ್ಮ ಆಹಾರದ ಒಂದು ಮೂಲ-ಸಸ್ಯಗಳು. ಸಸ್ಯದ ಯಾವ ಭಾಗಗಳನ್ನು ನಾವು ಆಹಾರವಾಗಿ ಉಪಯೋಗಿಸುತ್ತೇವೆ?

ಅನೇಕ ಎಲೆ ತರಕಾರಿಗಳನ್ನು ನಾವು ತಿನ್ನುತ್ತೇವೆ. ಕೆಲವು ಸಸ್ಯಗಳ ಹಣ್ಣುಗಳನ್ನು, ಬೇರುಗಳನ್ನು ಇನ್ನೂ ಕೆಲವೊಮ್ಮೆ ಕಾಂಡಗಳನ್ನು ಮತ್ತು ಹೂಗಳನ್ನು ಸಹ ನಾವು ತಿನ್ನುತ್ತೇವೆ. ಅಕ್ಕಿಹಿಟ್ಟಿನ ದ್ರಾವಣದಲ್ಲಿ ಅದ್ದಿ, ಕರಿದ ಕುಂಬಳಕಾಯಿ ಹೂಗಳನ್ನು ನೀವು ಎಂದಾದರು ತಿಂದಿರುವಿರ? ಪ್ರಯತ್ನಿಸಿ!

ತಿನ್ನಬಹುದಾದ ಸಸ್ಯದ ಭಾಗಗಳು

ತಿನ್ನಬಹುದಾದ ಎರಡು ಅಥವಾ ಹೆಚ್ಚು ಭಾಗಗಳು ಕೆಲವು ಸಸ್ಯಗಳಲ್ಲಿ ಇರುತ್ತವೆ. ಸಾಸಿವೆ ಸಸ್ಯಗಳ ಬೀಜಗಳಿಂದ ನಮಗೆ ಎಣ್ಣೆ ದೊರೆಯುತ್ತದೆ ಮತ್ತು ಇದರ ಎಲೆಗಳನ್ನು ತರಕಾರಿಯಾಗಿ ಉಪಯೋಗಿಸುತ್ತೇವೆ. ಬಾಳೆಗಿಡದ ಬೇರೆ ಬೇರೆ ಭಾಗಗಳನ್ನು ಆಹಾರವಾಗಿ ಉಪಯೋಗಿಸುತ್ತಿರುವುದರ ಕುರಿತು ನೀವು ಆಲೋಚಿಸುವಿರ? ಒಂದು ಸಸ್ಯದ ಎರಡು ಅಥವಾ ಹೆಚ್ಚು ಭಾಗಗಳನ್ನು ಆಹಾರವಾಗಿ ಉಪಯೋಗಿಸುತ್ತಿರುವ ಕುರಿತು ಇನ್ನೂ ಹೆಚ್ಚು ಉದಾಹರಣೆಗಳ ಬಗ್ಗೆ ಆಲೋಚಿಸಿ.

ಒಣಗಿದ ಹೆಸರುಕಾಳು ಅಥವಾ ಕಡ್ಲೆಕಾಳುಗಳನ್ನು ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸ್ವಲ್ಪ ಕಾಳುಗಳನ್ನು ಹಾಕಿ. ಒಂದು ದಿನ ಹಾಗೆಯೆ ಇಡಿ. ಮರುದಿನ ಪಾತ್ರೆಯಲ್ಲಿರುವ ಎಲ್ಲ ನೀರನ್ನು ಬಸಿದು ಕಾಳುಗಳನ್ನು ತೇವವಾದ ಬಟ್ಟೆಯಿಂದ ಸುತ್ತಿ ಪಾತ್ರೆಯಲ್ಲಿಯೆ ಇಡಿ. ಮಾರನೆಯ ದಿನ ಕಾಳುಗಳಲ್ಲಿ ಏನಾದರು ಬದಲಾವಣೆಯನ್ನು ನೀವು ಗಮನಿಸುವಿರ?

ಒಣಗಿದ ಹೆಸರುಕಾಳು
ಮೊಳಕೆಕಾಳು

ಕಾಳುಗಳಿಂದ ಚಿಕ್ಕದಾದ ಬಿಳಿಯ ರಚನೆ ಬೆಳೆದು ಹೊರಬಂದಿರುವುದನ್ನು ಕಾಣಬಹುದು. ಹಾಗಿದ್ದರೆ ಕಾಳುಗಳು ಮೊಳಕೆಯೊಡೆದಿರುತ್ತವೆ. ಮೊಳಕೆ ಬರದೇ ಇದ್ದಲ್ಲಿ, ಕಾಳುಗಳನ್ನು ನೀರಿನಲ್ಲಿ ತೊಳೆದು ನೀರನ್ನು ಬಸಿದು ತೇವವಾದ ಬಟ್ಟೆಯಿಂದ ಮುಚ್ಚಿ, ಮತ್ತೊಂದು ದಿನ ಹಾಗೆಯೇ ಬಿಡಿ. ಕಾಳುಗಳು ಮೊಳಕೆಯೊಡೆದಿವೆಯೆ ಎಂಬುದನ್ನು ಮರುದಿನ ಗಮನಿಸಿ.

ಕಡ್ಲೆಕಾಳು
ಕಡ್ಲೆಕಾಳು ಮತ್ತು ಅವುಗಳ ಮೊಳಕೆಗಳು

ಮೊಳಕೆಕಾಳುಗಳನ್ನು ತೊಳೆದು ಅವುಗಳನ್ನು ನೀವು ತಿನ್ನಬಹುದು. ಅವುಗಳನ್ನು ಬೇಯಿಸಲೂಬಹುದು. ಬೇಯಿಸಿದ ಕಾಳುಗಳಿಗೆ ಸ್ವಲ್ಪ ಮಸಾಲೆಯನ್ನು ಹಾಕಿದರೆ, ತಿನ್ನುವುದಕ್ಕೆ ರುಚಿಕರವಾದ ಲಘು ತಿಂಡಿಯಾಗುತ್ತದೆ.

ಮೊಳಕೆಕಾಳುಗಳ ರುಚಿಕರವಾದ ಲಘು ತಿಂಡಿ

ಜೇನುತುಪ್ಪ ಎಲ್ಲಿಂದ ದೊರೆಯುತ್ತದೆ ಅಥವಾ ಹೇಗೆ ಉತ್ಪತ್ತಿಯಾಗುತ್ತದೆ ಎಂದು ನಿಮಗೆ ಗೊತ್ತಿದೆಯೆ? ಅನೇಕ ಜೇನುಹುಳುಗಳು ಝೇಂಕರಿಸುತ್ತಿರುವ ಜೇನುಗೂಡನ್ನು ನೀವು ಎಂದಾದರು ನೋಡಿರುವಿರ? ಜೇನುಹುಳುಗಳು ಹೂಗಳಿಂದ ಮಕರಂದ(ಸಿಹಿಯಾದ ರಸ)ವನ್ನು ಸಂಗ್ರಹಿಸುತ್ತವೆ. ಅದನ್ನು ಜೇನುತುಪ್ಪವಾಗಿ ಪರಿವರ್ತಿಸಿ ಜೇನುಗೂಡಿನಲ್ಲಿ ಸಂಗ್ರಹಿಸಿಡುತ್ತವೆ. ವರ್ಷದಲ್ಲಿ ಕೆಲವು ತಿಂಗಳುಗಳು ಮಾತ್ರ ಹೂಗಳು ಮತ್ತು ಅವುಗಳ ಮಕರಂದ ದೊರೆಯಬಹುದು. ಆದ್ದರಿಂದ ಜೇನು ಹುಳುಗಳು ಈ ಮಕರಂದವನ್ನು ವರ್ಷವಿಡಿ ಉಪಯೋಗಿಸಿಕೊಳ್ಳುವುದಕ್ಕಾಗಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಇಂತಹ ಜೇನುಗೂಡನ್ನು ನಾವು ಕಂಡಾಗ, ಜೇನುಹುಳುಗಳು ಆಹಾರವಾಗಿ ಸಂಗ್ರಹಿಸಿರುವ ಜೇನುತುಪ್ಪವನ್ನು ಪಡೆಯುತ್ತೇವೆ.

ಜೇನುತುಪ್ಪ

4) ಪ್ರಾಣಿಗಳು ಏನನ್ನು ತಿನ್ನುತ್ತವೆ?

ಯಾವುದಾದರು ಸಾಕು ಪ್ರಾಣಿಯನ್ನು ಅಥವಾ ಜಾನುವಾರುಗಳನ್ನು ನೀವು ಸಾಕುತ್ತಿರುವಿರಾ? ಮೇಕೆ, ಎಮ್ಮೆ, ಬೆಕ್ಕು ಅಥವಾ ನಾಯಿ? ಹಾಗಿದ್ದರೆ, ಆ ಪ್ರಾಣಿ ತಿನ್ನುವ ಆಹಾರದ ಬಗ್ಗೆ ಖಂಡಿತ ನಿಮಗೆ ಅರಿವಿರಬಹುದು. ಬೇರೆ ಪ್ರಾಣಿಗಳು ತಿನ್ನುವ ಆಹಾರದ ಬಗ್ಗೆ ತಿಳಿದಿದೆಯೆ? ಅಳಿಲು, ಪಾರಿವಾಳ, ಹಲ್ಲಿ ಅಥವಾ ಸಣ್ಣ ಕೀಟಗಳು ತಮ್ಮ ಆಹಾರವಾಗಿ ಏನನ್ನು ತಿನ್ನುತ್ತವೆ ಎಂಬುದನ್ನು ಎಂದಾದರು ನೀವು ವೀಕ್ಷಿಸಿರುವಿರ?

ಸಸ್ಯಗಳು ಮತ್ತು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಇವುಗಳನ್ನು ಸಸ್ಯಾಹಾರಿಗಳು (herbivores) ಎನ್ನುವರು. ಇನ್ನೂ ಕೆಲವು ಪ್ರಾಣಿಗಳು ಇತರ ಪ್ರಾಣಿಗಳನ್ನು ತಿನ್ನುತ್ತವೆ. ಇವುಗಳನ್ನು ಮಾಂಸಾಹಾರಿಗಳು (carnivores) ಎನ್ನುವರು. ಸಸ್ಯಗಳು ಮತ್ತು ಪ್ರಾಣಿಗಳನ್ನು ತಿನ್ನುವ ಕೆಲವು ಪ್ರಾಣಿಗಳನ್ನು ನೀವು ನೋಡಿರುವಿರಾ? ಇವುಗಳನ್ನು ಮಿಶ್ರಾಹಾರಿಗಳು (omnivores) ಎನ್ನುವರು.

ಸಸ್ಯಾಹಾರಿಗಳು (Herbivores) :-

ಸಸ್ಯಾಹಾರಿಗಳು (herbivores)
ಸಸ್ಯಾಹಾರಿಗಳು (herbivores)

ಮಾಂಸಾಹಾರಿಗಳು (Carnivores) :-

ಮಾಂಸಾಹಾರಿಗಳು (carnivores)
ಮಾಂಸಾಹಾರಿಗಳು (carnivores)

ಮಿಶ್ರಾಹಾರಿಗಳು (omnivores) :-

ಮಿಶ್ರಾಹಾರಿಗಳು (omnivores)

ಸಾಕಷ್ಟು ಆಹಾರ ದೊರೆಯದೆ ಇರುವ ಎಷ್ಟೊ ಜನರು ನಮ್ಮೊಂದಿಗಿರುವುದು ನಮಗೆ ತಿಳಿದಿದೆ. ದೇಶದಲ್ಲಿ ಹೆಚ್ಚು ಆಹಾರವನ್ನು ಉತ್ಪಾದಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಅವಶ್ಯಕತೆ ನಮಗಿದೆ. ಅಧಿಕ ಪ್ರಮಾಣದಲ್ಲಿ ಆಹಾರ ಉತ್ಪಾದಿಸಿದರೆ ಮಾತ್ರ ಸಾಲದು, ಪ್ರತಿಯೊಬ್ಬರಿಗೂ ಈ ಆಹಾರ ಸಿಗುವುದರ ಬಗ್ಗೆ ಖಚಿತಪಡಿಸಿಕೊಳ್ಳುವ ಮಾರ್ಗಗಳನ್ನು ನಾವು ಕಂಡುಕೊಳ್ಳುವ ಅವಶ್ಯಕತೆಯಿದೆ.

ಪ್ರಮುಖ ಪದಗಳು

ಘಟಕಾಂಶಗಳು

ತಿನ್ನಬಹುದಾದ

ಮಕರಂದ

ಮೊಳಕೆ ಕಾಳುಗಳು

ಸಸ್ಯಾಹಾರಿ

ಮಾಂಸಾಹಾರಿ

ಮಿಶ್ರಾಹಾರಿ

ವಿಡಿಯೋ ಪಾಠಗಳು

Samveda – Class 6 – KM Science – 01 ಆಹಾರ ಇದು ಎಲ್ಲಿಂದ ಬರುತ್ತದೆ

https://youtu.be/dmE-CwW0-iw

6th Science ಆಹಾರ ಇದು ಎಲ್ಲಿಂದ ದೊರೆಯುತ್ತದೆ Part 1 | 6th Science Chapter 1 in Kannada | ಈ ಪಾಠವನ್ನು ಸಂಪೂರ್ಣವಾಗಿ ವೀಕ್ಷಿಸಲಿ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/i2wOAK3aL3o

6th Science ಆಹಾರ ಇದು ಎಲ್ಲಿಂದ ದೊರೆಯುತ್ತದೆ | Part 2 Chapter 1 | Food Where does it come from Part 2 | ಈ ಪಾಠವನ್ನು ಸಂಪೂರ್ಣವಾಗಿ ವೀಕ್ಷಿಸಲಿ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸಾರಾಂಶ

● ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಆಹಾರ ಪದ್ಧತಿಯಲ್ಲಿ ಬಹಳ ವೈವಿಧ್ಯವಿದೆ.
● ಪ್ರಾಣಿಗಳು ಮತ್ತು ಸಸ್ಯಗಳು ನಮ್ಮ ಆಹಾರದ ಮುಖ್ಯ ಮೂಲಗಳು.
● ಸಸ್ಯಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಸಸ್ಯಾಹಾರಿಗಳು ಎನ್ನುವರು.
● ಪ್ರಾಣಿಗಳನ್ನು ಮಾತ್ರ ತಿನ್ನುವ ಪ್ರಾಣಿಗಳನ್ನು ಮಾಂಸಾಹಾರಿಗಳು ಎಂದು ಎನ್ನುವರು.
● ಸಸ್ಯಗಳು ಮತ್ತು ಪ್ರಾಣಿಗಳೆರಡನ್ನೂ ತಿನ್ನುವ ಪ್ರಾಣಿಗಳನ್ನು ಮಿಶ್ರಾಹಾರಿಗಳು ಎನ್ನುವರು.

ಸೂಚಿತ ಯೋಜನಾ ಕಾರ್ಯಗಳು ಮತ್ತು ಚಟುವಟಿಕೆಗಳು

1) ನಿಮ್ಮ ಮನೆಯ ಸುತ್ತಮುತ್ತ ಗಾರ್ಡನ್ ಹಲ್ಲಿ ಅಥವಾ ಓತಿಕ್ಯಾತ (garden lizard)ವನ್ನು ನೀವು ನೋಡಿರಬಹುದು. ಮುಂದೆ ಯಾವಾಗಲಾದರೂ ಅದನ್ನು ನೀವು ನೋಡಿದರೆ ಎಚ್ಚರಿಕೆಯಿಂದ ವೀಕ್ಷಿಸಿ. ಅದು ಏನನ್ನು ಆಹಾರವಾಗಿ ತಿನ್ನುತ್ತದೆ ಎಂಬುದನ್ನು ತಿಳಿಯಿರಿ. ಇದರ ಆಹಾರ ಮನೆ ಹಲ್ಲಿಯ ಆಹಾರಕ್ಕಿಂತ ವಿಭಿನ್ನವೆ?

Lizard Looking For Food | Nat Geo WILD
How Do Lizards Eat

2) ಭಾರತದ ವಿವಿಧ ಪ್ರದೇಶಗಳಲ್ಲಿರುವ ಜನರು ಸಾಮಾನ್ಯವಾಗಿ ತಿನ್ನುವ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿ (ಸಾಧ್ಯವಾದಲ್ಲಿ, ಚಿತ್ರಗಳ ಸಹಿತ). ನಿಮ್ಮ ತರಗತಿಯಲ್ಲಿ ಪ್ರದರ್ಶಿಸಲು, ಭಾರತದ ಒಂದು ದೊಡ್ಡ ರೇಖಾ ನಕ್ಷೆಯ ಮೇಲೆ ಆಹಾರ ಪದಾರ್ಥಗಳ ಚಿತ್ರಗಳನ್ನು ಇಡಿ.

29 STATES with 29 DELICACIES FAMOUS FOODS in INDIA | ಭಾರತದ ವಿವಿಧ ಪ್ರದೇಶಗಳಲ್ಲಿರುವ ಜನರು ಸಾಮಾನ್ಯವಾಗಿ ತಿನ್ನುವ ಆಹಾರ ಪದಾರ್ಥಗಳ ಪಟ್ಟಿ
ಭಾರತದ ವಿವಿಧ ಪ್ರದೇಶಗಳಲ್ಲಿರುವ ಜನರು ಸಾಮಾನ್ಯವಾಗಿ ತಿನ್ನುವ ಆಹಾರ ಪದಾರ್ಥಗಳ ಪಟ್ಟಿ
ಭಾರತದ ವಿವಿಧ ಪ್ರದೇಶಗಳಲ್ಲಿರುವ ಜನರು ಸಾಮಾನ್ಯವಾಗಿ ತಿನ್ನುವ ಆಹಾರ ಪದಾರ್ಥಗಳ ಪಟ್ಟಿ
ಭಾರತದ ವಿವಿಧ ಪ್ರದೇಶಗಳಲ್ಲಿರುವ ಜನರು ಸಾಮಾನ್ಯವಾಗಿ ತಿನ್ನುವ ಆಹಾರ ಪದಾರ್ಥಗಳ ಪಟ್ಟಿ
ಭಾರತದ ವಿವಿಧ ಪ್ರದೇಶಗಳಲ್ಲಿರುವ ಜನರು ಸಾಮಾನ್ಯವಾಗಿ ತಿನ್ನುವ ಆಹಾರ ಪದಾರ್ಥಗಳ ಪಟ್ಟಿ

3) ನೀರಿನಲ್ಲಿ ಬೆಳೆಯುವ ಆಹಾರ ಸಸ್ಯಗಳ ಹೆಸರುಗಳನ್ನು ತಿಳಿಯಿರಿ.

9 Herbs You Can Grow In Water Over And Over Again For Endless Supply

4) ಅಧ್ಯಾಯ 10ರಲ್ಲಿ ವಕ್ರರೇಖೆಗಳ ಉದ್ದವನ್ನು ಅಳೆಯುವ ಮಾರ್ಗಗಳನ್ನು ನೀವು ತಿಳಿಯುವಿರಿ. ಸ್ತಂಭ ನಕ್ಷೆಗಳ ರಚನೆಯನ್ನು ಗಣಿತ ತರಗತಿಗಳಲ್ಲಿ ನೀವು ಕಲಿಯುವಿರಿ. ಕಲಿತ ನಂತರ ಈ ಆಸಕ್ತಿದಾಯಕವಾದ ಯೋಜನಾ ಕಾರ್ಯವನ್ನು ಪ್ರಯತ್ನಿಸಿ. ಈ ಅಧ್ಯಾಯದಲ್ಲಿ ಚರ್ಚಿಸಿದಂತೆ, ಸ್ವಲ್ಪ ಹೆಸರುಕಾಳುಗಳನ್ನು ಮೊಳಕೆ ಮಾಡಿ ಪ್ರತಿದಿನ ಇವುಗಳನ್ನು ನೀರಿನಿಂದ ತೊಳೆಯಿರಿ ಮತ್ತು ಎಲ್ಲಾ ನೀರನ್ನು ಬಸಿಯಿರಿ. ಎಲ್ಲ ಕಾಳುಗಳು ಒಂದು ವಾರದವರೆಗೆ ಬೆಳೆದು ಎಳೆಯ ಸಸ್ಯಗಳಾಗುವವರೆಗೆ ಹಾಗೆಯೇ ಇಡಿ. ದಾರವನ್ನು ಬಳಸಿಕೊಂಡು ಪ್ರತಿದಿನ ಮೊಳಕೆಗಳ ಉದ್ದವನ್ನು ಅಳೆಯಿರಿ. ಅವು ಮುರಿಯದ ಹಾಗೆ ಕಾಳಜಿ ವಹಿಸಿ. ವಿವಿಧ ಉದ್ದವನ್ನು ಹೊಂದಿರುವ ಮೊಳಕೆಕಾಳುಗಳ ಸ್ತಂಭ ನಕ್ಷೆಯನ್ನು ರಚಿಸಿ.

How to Grow Beautiful Mung Bean Sprouts | ಹೆಸರುಕಾಳುಗಳ ಮೊಳಕೆ

ಆಲೋಚಿಸಬಹುದಾದದ್ದು

  1. ನಿಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ದೊರೆಯುತ್ತದೆಯೆ? ಇಲ್ಲವಾದರೆ, ಏಕೆ?

ನಮ್ಮ ಸುತ್ತಲಿರುವ ಪ್ರತಿಯೊಬ್ಬರಿಗೂ ತಿನ್ನಲು ಸಾಕಷ್ಟು ಆಹಾರ ಸಿಗುವುದಿಲ್ಲ. ದಿನಕ್ಕೆ ಕನಿಷ್ಠ ಒಂದು ಊಟವನ್ನಾದರೂ ಪಡೆಯಲು ಸಾಧ್ಯವಾಗದಷ್ಟು ಬಡವರಾಗಿರುವ ಅನೇಕ ಜನರಿದ್ದಾರೆ. ಶ್ರೀಮಂತರು ಅಗತ್ಯಕ್ಕಿಂತ ಹೆಚ್ಚಿನದನ್ನು ಹೊಂದಿರುವುದರಿಂದ ಆಹಾರವನ್ನು ವ್ಯರ್ಥ ಮಾಡುವುದನ್ನು ನಾವು ನೋಡಬಹುದು, ಆದರೆ ಸಮಾಜದಲ್ಲಿ ಒಂದು ಭಾಗವು ಯಾವುದೇ ಆಹಾರವಿಲ್ಲದೆ ನಿದ್ರಿಸುತ್ತದೆ. ತಿನ್ನಲು ಬ್ರೆಡ್ ಸೇರಿದಂತೆ ಜೀವನದಲ್ಲಿ ಮೂಲಭೂತ ಅವಶ್ಯಕತೆಗಳನ್ನು ಪಡೆಯಲು ಅವರಿಗೆ ಸಾಕಷ್ಟು ಇಲ್ಲ. ಸಮಾಜದಲ್ಲಿ ಆರ್ಥಿಕ ಅಸಮತೋಲನದಿಂದಾಗಿ ಇದು ಸಂಭವಿಸಿದೆ.

2) ಆಹಾರ ಪೋಲಾಗುವುದನ್ನು ತಡೆಯಲು ನಾವು ಆಲೋಚಿಸಬಹುದಾದ ಮಾರ್ಗಗಳಾವುವು?

ಆಹಾರ ವ್ಯರ್ಥವಾಗುವುದನ್ನು ನಾವು ತಡೆಯುವ ವಿಧಾನಗಳು :

  • ಸೀಮಿತ ಪ್ರಮಾಣದಲ್ಲಿ ಮಾತ್ರ ಆಹಾರ ಪದಾರ್ಥಗಳಿಗಾಗಿ ಶಾಪಿಂಗ್ ಮಾಡಿ.
  • ಹೆಚ್ಚು ಬೇಯಿಸಬೇಡಿ.
  • ರೆಫ್ರಿಜರೇಟರ್ನಲ್ಲಿ ಇರಿಸುವ ಮೂಲಕ ಸಂರಕ್ಷಿಸಲು ಪ್ರಯತ್ನಿಸಿ.
  • ಎಂಜಲುಗಳಿಂದ ಹೊಸ ಪಾಕವಿಧಾನಗಳನ್ನು ಮಾಡಲು ಪ್ರಯತ್ನಿಸಿ.
  • ಅಡುಗೆ ಮಾಡುವ ಮೊದಲು ನಿಮ್ಮ ಸೇವೆ ಮಾಡುವ ಸಂಖ್ಯೆಯನ್ನು ನೋಡಿ.
  • ಊಟದಲ್ಲಿ ಆಹಾರವನ್ನು ಬಿಡುವುದನ್ನು ತಡೆಯಬೇಕು.
  • ಸಾಮಾಜಿಕ ಕೂಟಗಳು ಅಥವಾ ಕಾರ್ಯಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟಬೇಕು.