ಅಪವರ್ತನಗಳು ಮತ್ತುಅಪವರ್ತ್ಯಗಳು – ಅಧ್ಯಾಯ – 4
ಸಂಖ್ಯೆಯ ಅಪವರ್ತನಗಳು ಮತ್ತು ಅಪವರ್ತ್ಯಗಳು
ಗುಂಪಿನ ಜೊತೆಯಾಟದಲ್ಲಿ ಹನ್ನೆರಡು ವಿದ್ಯಾರ್ಥಿಗಳು ಇರುತ್ತಾರೆ. ಈ ವಿದ್ಯಾರ್ಥಿಗಳು ವೃತ್ತಾಕಾರದ ಪಥದಲ್ಲಿ ಸುತ್ತುತ್ತಿರುತ್ತಾರೆ. ಒಂದು ಸಂಖ್ಯೆಯನ್ನು ಹೇಳಲಾಗುತ್ತದೆ. ಆಗ ವಿದ್ಯಾರ್ಥಿಗಳು ಹೇಳಿದ ಸಂಖ್ಯೆಯಷ್ಟಿರುವ ವಿದ್ಯಾರ್ಥಿಗಳ ಗುಂಪನ್ನು ರಚನೆ ಮಾಡುತ್ತಾರೆ. ಹೇಳಿದ ಸಂಖ್ಯೆಗಿಂತ ಹೆಚ್ಚು ಅಥವಾ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ಗುಂಪನ್ನು ರಚನೆ ಮಾಡಿದರೆ ಆ ಗುಂಪಿನ ವಿದ್ಯಾರ್ಥಿಗಳು ಆಟದಿಂದ ಹೊರ ಹೋಗಬೇಕು.
ಎರಡು ಅಥವಾ ಹೆಚ್ಚಿನ ಸಂಖ್ಯೆಗಳನ್ನು ಗುಣಾಕಾರ ಮಾಡಿದಾಗ ಗುಣಲಬ್ಧ ಬರುತ್ತದೆ. ಈ ರೀತಿ ಗುಣಿಸಿದ ಸಂಖ್ಯೆಗಳನ್ನು ಗುಣಲಬ್ಧ ಸಂಖ್ಯೆಯ ಅಪವರ್ತನಗಳು ಎನ್ನುತ್ತೇವೆ.
ಒಂದು ಸಂಖ್ಯೆಯನ್ನು ಕೊಟ್ಟಿರುವ ಸಂಖ್ಯೆಯ ಅಪವರ್ತನ ಎಂದು ಕರೆಯಬೇಕಾದರೆ ಅದು ಕೊಟ್ಟಿರುವ ಸಂಖ್ಯೆಯನ್ನು ನಿಶ್ಶೇಷವಾಗಿ ಭಾಗಿಸಬೇಕು ಎಂದು ತೀರ್ಮಾನಿಸಬಹುದು.
ಅಪವರ್ತನ ವೃಕ್ಷ
ಯಾವುದೇ ಸಂಖ್ಯೆಯನ್ನು ಎರಡು ಸಂಖ್ಯೆಗಳ ಗುಣಲಬ್ಧವಾಗಿ ಬರೆಯಬಹುದು (ಅಪವರ್ತನಗಳು). ಇದನ್ನು ಚಿತ್ರದ ಮೂಲಕ ಈ ಕೆಳಗಿನಂತೆ ನಿರೂಪಿಸುವುದನ್ನು ಅಪವರ್ತನ ವೃಕ್ಷ ಎನ್ನುತ್ತೇವೆ.
ಉದಾಹರಣೆ 1
ಉದಾಹರಣೆ 2
ಉದಾಹರಣೆ 3
ನೆನಪಿನಲ್ಲಿಡಿ
- ಪ್ರತಿ ಸಂಖ್ಯೆಯು 1 ರ ಅಪವರ್ತ್ಯ.
- ಒಂದು ಸಂಖ್ಯೆಯ ಅಪವರ್ತ್ಯ ಅದೇ ಸಂಖ್ಯೆಗೆ ಸಮ ಇಲ್ಲವೆ ಸಂಖ್ಯೆಗಿಂತ ದೊಡ್ಡದು ಆಗಿರುತ್ತದೆ.
- 1 ಎಲ್ಲಾ ಸಂಖ್ಯೆಗಳ ಅಪವರ್ತನ.
- ಪ್ರತಿ ಸಂಖ್ಯೆಯು ಅದೇ ಸಂಖ್ಯೆಯ ಅಪವರ್ತನ.
Sooooooooooooooooooooooooooooper friend,,
thank you…
ಸೂಪರ್ ಸರ್
thank you….
It’s very helpful class thank you
thank you….