ನಮ್ಮ ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಶಾಲಾ ವಿದ್ವಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ ಇವರು ಧ್ವಜಾರೋಹಣವನ್ನು ನೆರವೇರಿಸಿದರು.

ನಂತರ ನೆರವೇರಿದ ಸರಳ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಹುಲ್ಕುತ್ರಿ ಶಾಲೆಗೆ ಸಹಕಾರ ನೀಡುತ್ತಿರುವವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅಕ್ಟೋಬರ್ 2, 2021ರಂದು ತನ್ನ ಕೊಟ್ಟಿಗೆ ಮನೆ ಹೊತ್ತಿ ಉರಿಯುತ್ತಿದನ್ನು ಕಂಡು ಅದನ್ನು ನಂದಿಸಿದ 3ನೇ ತರಗತಿಯ ಶಾಲಾ ಬಾಲಕನಾದ ಕು. ಸಮರ್ಥ ವೆಂಕಟ್ರಮಣ ಗೌಡ ಈತನನ್ನು ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು. ಹುಲ್ಕುತ್ರಿ ಶಾಲೆಗೆ ನಿರಂತರವಾಗಿ ಸಹಕರಿಸುತ್ತಿರುವ ಸೋವಿನಕೊಪ್ಪ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಗಿರೀಶ ಶೇಟ್ ಆಲ್ಮನೆ ಹಾಗೂ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಾಲಾ ಶಿಕ್ಷಕಿ ಕು. ರಂಜನಾ ಭಂಡಾರಿ ಇವರನ್ನು ಗ್ರಾಮಸ್ಥರರು ಸನ್ಮಾನಿಸಿದರು. ಈ ನಡುವೆ ಶಾರದಾ ಪೂಜೆಯನ್ನು ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ, ಸೋವಿನಕೊಪ್ಪ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ, ಶ್ರೀ ಗಿರೀಶ ಶೇಟ್ ಆಲ್ಮನೆ, ಶ್ರೀ ರಾಮಚಂದ್ರ ಶಿವರಾಮ ಹೆಗಡೆ, ಶಾಲಾ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.