5-ಅಂಕಿಯ ಸಂಖ್ಯೆಗಳು
ಮುಖ್ಯಾಂಶಗಳು
5-ಅಂಕಿಯ ಸಂಖ್ಯೆಗಳು
ಕೆಲವು 5-ಅಂಕಿಗಳ ಸಂಖ್ಯೆಗಳು ಮತ್ತು ಅವುಗಳನ್ನು ಪದಗಳಲ್ಲಿ ಬರೆಯುವ ಕ್ರಮವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಿದೆ. ಅವುಗಳನ್ನು ಓದಿರಿ.
ಸಂಖ್ಯೆಗಳು | ಪದಗಳಲ್ಲಿ |
10,001 | ಹತ್ತು ಸಾವಿರದ ಒಂದು |
10,010 | ಹತ್ತು ಸಾವಿರದ ಹತ್ತು |
11,279 | ಹನ್ನೊಂದು ಸಾವಿರದ ಎರಡು ನೂರ ಎಪ್ಪತ್ತೊಂಬತ್ತು |
20,100 | ಇಪ್ಪತ್ತು ಸಾವಿರದ ಒಂದು ನೂರು |
33,333 | ಮೂವತ್ಮೂರು ಸಾವಿರದ ಮೂರು ನೂರ ಮೂವತ್ಮೂರು |
45,698 | ನಲವತ್ತೈದು ಸಾವಿರದ ಆರು ನೂರ ತೊಂಬತ್ತೆಂಟು |
50,000 | ಐವತ್ತು ಸಾವಿರ |
61,030 | ಅರವತ್ತೊಂದು ಸಾವಿರದ ಮೂವತ್ತು |
75,032 | ಎಪ್ಪತ್ತೈದು ಸಾವಿರದ ಮೂವತ್ತೆರಡು |
80,574 | ಎಂಬತ್ತು ಸಾವಿರದ ಐದು ನೂರ ಎಪ್ಪತ್ನಾಲ್ಕು |
99,999 | ತೊಂಬತ್ತೊಂಬತ್ತು ಸಾವಿರದ ಒಂಬತ್ತು ನೂರ ತೊಂಬತ್ತೊಂಬತ್ತು |
ಕೆಳಗಿನ ಕೋಷ್ಟಕವನ್ನು ಗಮನಿಸಿ.
ಗರಿಷ್ಠ ಸಂಖ್ಯೆ | 1 ಸೇರಿಸಿದಾಗ | ಮೊತ್ತ | ತೀರ್ಮಾನ |
ಒಂದು ಅಂಕಿಯ ಗರಿಷ್ಠ ಸಂಖ್ಯೆ 9 | 9 + 1 | 10 | ಎರಡು ಅಂಕಿಗಳ ಕನಿಷ್ಠ ಸಂಖ್ಯೆ |
ಎರಡು ಅಂಕಿಗಳ ಗರಿಷ್ಠ ಸಂಖ್ಯೆ 99 | 99 + 1 | 100 | ಮೂರು ಅಂಕಿಗಳ ಕನಿಷ್ಠ ಸಂಖ್ಯೆ |
ಮೂರು ಅಂಕಿಗಳ ಗರಿಷ್ಠ ಸಂಖ್ಯೆ 999 | 999 + 1 | 1,000 | ನಾಲ್ಕು ಅಂಕಿಗಳ ಕನಿಷ್ಠ ಸಂಖ್ಯೆ |
ನಾಲ್ಕು ಅಂಕಿಗಳ ಗರಿಷ್ಠ ಸಂಖ್ಯೆ 9,999 | 9,999 + 1 | 10,000 | ಐದು ಅಂಕಿಗಳ ಕನಿಷ್ಠ ಸಂಖ್ಯೆ |
5-ಅಂಕಿ ಸಂಖ್ಯೆಯ ಸ್ಥಾನಬೆಲೆ ಕೋಷ್ಟಕ ಮತ್ತು ಅವುಗಳ ವಿಸ್ತಾರ ರೂಪ.
ಉದಾಹರಣೆ – 1
ಐವತ್ಮೂರು ಸಾವಿರದ ಇಪ್ಪತ್ತೈದರ ಸ್ಥಾನಬೆಲೆ ಮತ್ತು ವಿಸ್ತಾರ ರೂಪ ಬರೆಯಿರಿ.
ಸಾವಿರಗಳ ಗುಂಪು | ಘಟಕಗಳ ಗುಂಪು | |||
ಹತ್ತು ಸಾವಿರ | ಸಾವಿರ | ನೂರು | ಹತ್ತು | ಬಿಡಿ |
10,000 | 1,000 | 100 | 10 | 1 |
5 | 3 | 0 | 2 | 5 |
53,025 ರ ವಿಸ್ತಾರ ರೂಪ
5 x ಹತ್ತು ಸಾವಿರ + 3 x ಸಾವಿರ + 0 x ನೂರು + 2 x ಹತ್ತು + 5 x ಬಿಡಿ
= 5 x 10,000 + 3 x 1,000 + 0 x 100 + 2 x 10 + 5 x 1
= 50,000 + 3,000 + 0 + 20 + 5
ಉದಾಹರಣೆ – 2
98,431 ರ ವಿಸ್ತಾರ ರೂಪ
9 x ಹತ್ತು ಸಾವಿರ + 8 x ಸಾವಿರ + 4 x ನೂರು + 3 x ಹತ್ತು + 1 x ಬಿಡಿ
= 9 x 10,000 + 8 x 1,000 + 4 x 100 + 3 x 10 + 1 x 1
= 90,000 + 8,000 + 400 + 30 + 1
ವಿಸ್ತಾರ ರೂಪದಲ್ಲಿರುವ ಸಂಖ್ಯೆಯನ್ನು ಸಂಖ್ಯಾ ರೂಪದಲ್ಲಿ ಬರೆಯುವುದು
8 x ಹತ್ತು ಸಾವಿರ + 5 x ಸಾವಿರ + 2 x ನೂರು + 7 x ಹತ್ತು + 6 x ಬಿಡಿಯನ್ನು ಸಂಖ್ಯಾ ರೂಪದಲ್ಲಿ ಬರೆಯಿರಿ.
8 x ಹತ್ತು ಸಾವಿರ + 5 x ಸಾವಿರ + 2 x ನೂರು + 7 x ಹತ್ತು + 6 x ಬಿಡಿ
= 8 x 10,000 + 5 x 1,000 + 2 x 100 + 7 x 10 + 6 x 1
= 80,000 + 5,000 + 200 + 70 + 6 = 85,276
ಕೊಟ್ಟಿರುವ ಅಂಕಿಗಳಿಂದ 5-ಅಂಕಿಯ ಗರಿಷ್ಠ ಮತ್ತು ಕನಿಷ್ಠ ಸಂಖ್ಯೆಯನ್ನು ಬರೆಯುವುದು.
ಉದಾಹರಣೆ – 1
9, 4, 6, 1, 3 ಅಂಕಿಗಳನ್ನು ಪುನಃ ಉಪಯೋಗಿಸದೆ 5-ಅಂಕಿಯ ಗರಿಷ್ಠ ಮತ್ತು ಕನಿಷ್ಠ ಸಂಖ್ಯೆಯನ್ನು ಬರೆಯಿರಿ.
5-ಅಂಕಿಯ ಗರಿಷ್ಠ ಸಂಖ್ಯೆಯನ್ನು ಬರೆಯುವುದು.
• ಕೊಟ್ಟಿರುವ ಅಂಕಿಗಳನ್ನು ಹೋಲಿಸಿರಿ.
• ಆ ಅಂಕಿಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ 9, 6, 4, 3, 1.
• ಈಗ ಎಲ್ಲಾ ಅಂಕಿಗಳನ್ನು ಒಟ್ಟಾಗಿ ಬರೆದು ಗರಿಷ್ಠ ಸಂಖ್ಯೆಯನ್ನು ಪಡೆಯಿರಿ 96,431.
9, 4, 6, 1, 3 ಅಂಕಿಗಳನ್ನು ಪುನಃ ಉಪಯೋಗಿಸದೆ ಬರೆದ 5-ಅಂಕಿಯ ಗರಿಷ್ಠ ಸಂಖ್ಯೆಯು 96,431 ಆಗಿದೆ.
5-ಅಂಕಿಯ ಕನಿಷ್ಠ ಸಂಖ್ಯೆಯನ್ನು ಬರೆಯುವುದು.
• ಕೊಟ್ಟಿರುವ ಅಂಕಿಗಳನ್ನು ಹೋಲಿಸಿರಿ.
• ಆ ಅಂಕಿಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ 1, 3, 4, 6, 9.
• ಈಗ ಎಲ್ಲಾ ಅಂಕಿಗಳನ್ನು ಒಟ್ಟಾಗಿ ಬರೆದು ಕನಿಷ್ಠ ಸಂಖ್ಯೆಯನ್ನು ಪಡೆಯಿರಿ 13,469.
9, 4, 6, 1, 3 ಅಂಕಿಗಳನ್ನು ಪುನಃ ಉಪಯೋಗಿಸದೆ ಬರೆದ 5-ಅಂಕಿಯ ಕನಿಷ್ಠ ಸಂಖ್ಯೆಯು 13,469 ಆಗಿದೆ.
ಕೊಟ್ಟಿರುವ ಅಂಕಿಗಳಲ್ಲಿ ಒಂದು ಅಂಕಿಯು ಸೊನ್ನೆಯಾದಾಗ 5-ಅಂಕಿಯ ಕನಿಷ್ಠ ಸಂಖ್ಯೆಯನ್ನು ಬರೆಯುವುದು.
ಉದಾಹರಣೆ – 2
4, 8, 0, 2, 5 ಅಂಕಿಗಳನ್ನು ಪುನಃ ಉಪಯೋಗಿಸದೆ 5-ಅಂಕಿಯ ಕನಿಷ್ಠ ಸಂಖ್ಯೆಯನ್ನು ಬರೆಯಿರಿ.
• ಕೊಟ್ಟಿರುವ ಅಂಕಿಗಳನ್ನು ಹೋಲಿಸಿರಿ.
• ಆ ಅಂಕಿಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ 0, 2, 4, 5, 8.
• ಇವುಗಳಲ್ಲಿ ಸೊನ್ನೆ ಹಾಗೂ ನಂತರದ ಅಂಕಿಯ (2ರ) ಸ್ಥಾನವನ್ನು ಅದಲು ಬದಲು ಮಾಡಿ ಬರೆಯಿರಿ. 2, 0, 4, 5, 8.
• ಈ ಎಲ್ಲಾ ಅಂಕಿಗಳನ್ನು ಒಟ್ಟಾಗಿ ಬರೆದು ಕನಿಷ್ಠ ಸಂಖ್ಯೆ ಪಡೆಯಿರಿ 20,458.
4, 8, 0, 2, 5 ಅಂಕಿಗಳನ್ನು ಪುನಃ ಉಪಯೋಗಿಸದೆ ಬರೆದ 5-ಅಂಕಿಯ ಕನಿಷ್ಠ ಸಂಖ್ಯೆಯು 20,458 ಆಗಿದೆ.
ಕೊಟ್ಟಿರುವ 5-ಅಂಕಿ ಸಂಖ್ಯೆಯ ಹಿಂದಿನ ಮತ್ತು ಮುಂದಿನ ಸಂಖ್ಯೆಗಳು
ಈಗ ನಾವು 5-ಅಂಕಿಯ ಸಂಖ್ಯೆಗೆ ಹಿಂದಿನ ಹಾಗೂ ಮುಂದಿನ ಸಂಖ್ಯೆಯನ್ನು ಕಂಡು ಹಿಡಿಯುವ ಕ್ರಮವನ್ನು ಕಲಿಯೋಣ.
ಹಿಂದಿನ ಸಂಖ್ಯೆ (ಕೊಟ್ಟಿರುವ ಸಂಖ್ಯೆಗಿಂತ 1 ಕಡಿಮೆ) | ಕೊಟ್ಟಿರುವ ಸಂಖ್ಯೆ | ಮುಂದಿನ ಸಂಖ್ಯೆ (ಕೊಟ್ಟಿರುವ ಸಂಖ್ಯೆಗಿಂತ 1 ಹೆಚ್ಚು) |
83,652 | 83,653 | 83,654 |
25,047 | 25,048 | 25,049 |
46,789 | 46,790 | 46,791 |
19,999 | 20,000 | 20,001 |
ಸಮಾನ ಅಂತರವಿರುವ ಸಂಖ್ಯೆಗಳನ್ನು ಬರೆಯುವುದು (Skip numbers)
ಉದಾಹರಣೆ 1
ಕೆಳಗಿನವುಗಳಿಗೆ ಬಿಟ್ಟ ಸಂಖ್ಯೆಗಳನ್ನು ಬರೆಯಿರಿ.
23,450, 23,700 , 23,950, ………………………… , ………………………. .
23,700 ಮತ್ತು 23,450 ರ ನಡುವಿನ ವ್ಯತ್ಯಾಸ 250.
23,950 ಮತ್ತು 23,700 ರ ನಡುವಿನ ವ್ಯತ್ಯಾಸ 250.
23,950ಕ್ಕೆ 250 ಅನ್ನು ಸೇರಿಸಿದಾಗ ಅದರ ಮುಂದಿನ ಸಂಖ್ಯೆಯನ್ನು ಪಡೆಯುತ್ತೇವೆ.
23,950 + 250 = 24,200. 24,200 ಮುಂದಿನ ಸಂಖ್ಯೆ.
24,200ರ ಮುಂದಿನ ಸಂಖ್ಯೆಯು 24,200 + 250 = 24,450
ಆದ್ದರಿಂದ 24,200 ಹಾಗೂ 24,450 ಈ ಎರಡು ಸಂಖ್ಯೆಗಳನ್ನು ಬಿಟ್ಟ ಸ್ಥಳಗಳಲ್ಲಿ ಬರೆಯಬೇಕು.
∴ 23,450, 23,700, 23,950, 24,200, 24,450
ಉದಾಹರಣೆ 2
ಕೆಳಗಿನವುಗಳಿಗೆ ಬಿಟ್ಟ ಸಂಖ್ಯೆಗಳನ್ನು ಬರೆಯಿರಿ.
25,017, 35,017, …………………… , ……………….……, 65,017.
25,017 ಮತ್ತು 35,017 ಇವುಗಳ ನಡುವಿನ ವ್ಯತ್ಯಾಸ 10,000.
10,000 ವನ್ನು 35,017 ಸಂಖ್ಯೆಗೆ ಸೇರಿಸಿದಾಗ ಮುಂದಿನ ಸಂಖ್ಯೆಯನ್ನು ಪಡೆಯುತ್ತೇವೆ.
35,017 + 10,000 = 45,017. ∴ 45,017 ಮುಂದಿನ ಸಂಖ್ಯೆ.
45,017 ರ ಮುಂದಿನ ಸಂಖ್ಯೆಯು 45,017 + 10,000 = 55,017
ಆದ್ದರಿಂದ 45,017 ಹಾಗೂ 55,017 ಈ ಎರಡು ಸಂಖ್ಯೆಗಳನ್ನು ಬಿಟ್ಟ ಸ್ಥಳಗಳಲ್ಲಿ ಬರೆಯಬೇಕು.
5–ಅಂಕಿಯ ಅತಿ ಚಿಕ್ಕ ಮತ್ತು ಅತಿ ದೊಡ್ಡ ಸಂಖ್ಯೆಯನ್ನು ಗುರುತಿಸುವುದು.
ಉದಾಹರಣೆ 1
52,428 ಮತ್ತು 81,214 ಇವುಗಳಲ್ಲಿ ಚಿಕ್ಕ ಸಂಖ್ಯೆಯನ್ನು ಕಂಡುಹಿಡಿಯಿರಿ.
ಹತ್ತುಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಹತ್ತು ಸಾವಿರ ಸ್ಥಾನದ ಅಂಕಿಗಳು 5 ಮತ್ತು 8. ಇವುಗಳಲ್ಲಿ 5 ಚಿಕ್ಕ ಸಂಖ್ಯೆ.
ಆದ್ದರಿಂದ 52,428 ಮತ್ತು 81,214 ರಲ್ಲಿ 52,428 ಚಿಕ್ಕ ಸಂಖ್ಯೆ.
ಉದಾಹರಣೆ 2
12,234 ಮತ್ತು 11,484 ಇವುಗಳಲ್ಲಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಿರಿ.
ಕೊಟ್ಟಿರುವ ಸಂಖ್ಯೆಗಳಲ್ಲಿ ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದ್ದರೆ, ಸಾವಿರಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದೆ. ಆದ್ದರಿಂದ ಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಸಾವಿರಸ್ಥಾನದ ಅಂಕಿಗಳು 2 ಮತ್ತು 1. ಇವುಗಳಲ್ಲಿ 2 ದೊಡ್ಡ ಸಂಖ್ಯೆ.
ಆದ್ದರಿಂದ 12,234 ಮತ್ತು 11,484 ರಲ್ಲಿ 12,234 ದೊಡ್ಡ ಸಂಖ್ಯೆ.
5-ಅಂಕಿಯ ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಬರೆಯುವುದು.
ಉದಾಹರಣೆ 1
36,719, 36,952, 35,418, 43,709, 45,187 ಇವುಗಳನ್ನು ಏರಿಕೆಯ (ಆರೋಹಣ) ಕ್ರಮದಲ್ಲಿ ಬರೆಯಿರಿ.
ಕೊಟ್ಟಿರುವ ಸಂಖ್ಯೆಗಳಲ್ಲಿ ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದ್ದರೆ, ಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಕೊಟ್ಟಿರುವ ಸಂಖ್ಯೆಗಳನ್ನು ಏರಿಕೆ ಕ್ರಮದಲ್ಲಿ ಬರೆಯಿರಿ.
35,418, 36,719, 36,952, 43,709, 45,187 ಸಂಖ್ಯೆಗಳು ಏರಿಕೆ ಕ್ರಮದಲ್ಲಿವೆ.
5 ಅಂಕಿಯ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ.
ಉದಾಹರಣೆ 2
57,093, 52,169, 54,917, 57,298, 58,791 ಸಂಖ್ಯೆಗಳನ್ನು ಇಳಿಕೆ (ಅವರೋಹಣ) ಕ್ರಮದಲ್ಲಿ ಬರೆಯಿರಿ.
ಕೊಟ್ಟಿರುವ ಸಂಖ್ಯೆಗಳಲ್ಲಿ ಹತ್ತುಸಾವಿರ ಸ್ಥಾನದ ಅಂಕಿಗಳು ಸಮವಾಗಿದ್ದರೆ, ಸಾವಿರ ಸ್ಥಾನದ ಅಂಕಿಗಳನ್ನು ಹೋಲಿಸಿರಿ.
ಕೊಟ್ಟಿರುವ ಸಂಖ್ಯೆಗಳನ್ನು ಇಳಿಕೆ ಕ್ರಮದಲ್ಲಿ ಬರೆಯಿರಿ.
58,791 , 57,298 , 57,093 , 54,917 , 52,169 ಸಂಖ್ಯೆಗಳು ಇಳಿಕೆ ಕ್ರಮದಲ್ಲಿವೆ.