ದೇಶವನ್ನು ಪರಕೀಯರ ಆಕ್ರಮಣಗಳಿಂದ ರಕ್ಷಿಸುವುದು ರಾಷ್ಟ್ರದ ಪ್ರಥಮ ಕರ್ತವ್ಯ. ಈ ಕಾರ್ಯವನ್ನು ರಕ್ಷಣಾಪಡೆಗಳಿಗೆ ನೀಡಲಾಗಿದೆ. ಆದುದರಿಂದ ರಕ್ಷಣಾಪಡೆಗಳ ಪಾತ್ರ ಮಹತ್ವದ್ದಾಗಿದೆ.

ಭಾರತವು ಶಿಸ್ತು, ಸಾಮರ್ಥ್ಯ ಹೊಂದಿದ ಹಾಗೂ ಪರಾಕ್ರಮಶಾಲಿಯಾದ ರಕ್ಷಣಾಪಡೆಯನ್ನು ಹೊಂದಿರುವುದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಬಂದ ಮೇಲೆ ನಮ್ಮ ದೇಶದ ಸಮಗ್ರತೆಗೆ ಸವಾಲುಗಳು ಎದುರಾದಾಗ ನಾವು ಅವನ್ನು ಸಮರ್ಥವಾಗಿ ಎದುರಿಸಿದ್ದೇವೆ. (ಚೀನಾ ಮತ್ತು ಪಾಕಿಸ್ತಾನದ ದಾಳಿಗಳು). ನಮ್ಮ ಸೇನಾಪಡೆಗಳು ತಾಯಿನಾಡಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ ಎಂಬುದನ್ನು ಕಾರ್ಗಿಲ್ ಯುದ್ಧದಲ್ಲಿ ಪ್ರದರ್ಶಿಸಿದ್ದೇವೆ.

* ಭಾರತವು 15,200 ಕಿ.ಮೀ. ಭೂಗಡಿ ಪ್ರದೇಶವನ್ನು ಮತ್ತು 7516.5 ಕಿ.ಮೀ. ಜಲಗಡಿ ಪ್ರದೇಶವನ್ನು ಹೊಂದಿದೆ.

* ದೇಶದ ರಕ್ಷಣಾ ವ್ಯವಸ್ಥೆಗೆ ಆಯವ್ಯಯದ ಶೇ.25-30ರಷ್ಟು ಹಣಕಾಸನ್ನು ಮೀಸಲು ಇಡಲಾಗುತ್ತದೆ.

ಭೂಗಡಿ ಪ್ರದೇಶ
ಜಲಗಡಿ ಪ್ರದೇಶ

ದೇಶದ ಗಡಿಪ್ರದೇಶಗಳ ರಕ್ಷಣೆ.

ದೇಶದ ಸಮಗ್ರತೆಯನ್ನು ಕಾಪಾಡುವುದು.

ಕಳ್ಳಸಾಗಾಣಿಕೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವುದು.

ಭಾರತದ ರಾಷ್ಟ್ರಪತಿಯವರಿಗೆ ನಮ್ಮ ರಕ್ಷಣಾಪಡೆಗಳ ಸರ್ವೋಚ್ಚ ಅಧಿಕಾರ ನೀಡಲಾಗಿದೆ. ರಕ್ಷಣಾ ವ್ಯವಸ್ಥೆಯು ಮೂರು ವಿಭಾಗಗಳನ್ನು ಹೊಂದಿದೆ: ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ. ರಕ್ಷಣಾಪಡೆಗಳು ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪಾಲ್ಗೊಂಡು ತಮ್ಮ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.

ರಕ್ಷಣಾಪಡೆಗಳ ತರಬೇತಿ ಕೇಂದ್ರಗಳು:

ರಾಷ್ಟ್ರೀಯ ರಕ್ಷಣಾ ಕಾಲೇಜು, ನವದೆಹಲಿ,

ರಾಷ್ಟ್ರೀಯ ರಕ್ಷಣಾ ಕಾಲೇಜು, ನವದೆಹಲಿ

ರಕ್ಷಣಾ ಸೇವಾ ಸಿಬ್ಬಂದಿ ತರಬೇತಿ ಕೇಂದ್ರ, ಉದಕಮಂಡಲ,

ಭಾರತೀಯ ಮಿಲಿಟರಿ ಅಕಾಡೆಮಿ, ಡೆಹರಾಡೂನ್ ಮತ್ತು

ಭಾರತೀಯ ಮಿಲಿಟರಿ ಅಕಾಡೆಮಿ, ಡೆಹರಾಡೂನ್

ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕ್‍ವಾಸ್ಲಾ, ಪುಣೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕ್‍ವಾಸ್ಲಾ

ಭಾರತೀಯ ಭೂಸೇನೆ: ಭಾರತದ ಭೂಸೇನೆಯು ವಿಶ್ವದಲ್ಲಿಯೇ ಎರಡನೆಯ ಅತಿದೊಡ್ಡ ಭೂಸೇನಾಪಡೆಯಾಗಿದೆ. ಭೂಸೇನೆಯು ಪದಾತಿದಳ (ಸೈನಿಕ), ಅಶ್ವದಳ, ಫಿರಂಗಿದಳ, ಒಂಟೆದಳ ಮತ್ತು ಯುದ್ಧ ಟ್ಯಾಂಕ್‍ಗಳನ್ನು ಹೊಂದಿದೆ.

ಭೂಸೇನೆಯಲ್ಲಿ ಒಟ್ಟು ಸುಮಾರು 12,37,117 ಯೋಧರಿದ್ದಾರೆ. ಸುಮಾರು 9,60,000ದಷ್ಟು ಕಾಯ್ದಿಟ್ಟ ಯೋಧರಿದ್ದಾರೆ.

ಭೂಸೇನೆಯ ಮುಖ್ಯಸ್ಥರನ್ನು ದಂಡನಾಯಕ (ಜನರಲ್) ಎಂದು ಕರೆಯುವರು. ಇವರು ಸೇನೆಯ ನಿಯಂತ್ರಣ, ತರಬೇತಿ, ಕಾರ್ಯಾಚರಣೆ ಮತ್ತು ಆಡಳಿತ ವ್ಯವಸ್ಥೆಯನ್ನು ಹೊಸದಿಲ್ಲಿಯಲ್ಲಿರುವ ಭೂಸೇನೆಯ ಪ್ರಧಾನ ಕಚೇರಿಯಿಂದ ನಿರ್ವಹಿಸುತ್ತಾರೆ.

ದೇಶದ ಗಡಿಗಳ ರಕ್ಷಣೆಯ ಜೊತೆಗೆ ನೈಸರ್ಗಿಕ ವಿಕೋಪಗಳಾದ ಭೂಕಂಪ, ಪ್ರವಾಹ, ಬರಗಾಲ, ಭೂಕುಸಿತ, ಬಿರುಗಾಳಿ ಮುಂತಾದ ಸಂದರ್ಭಗಳಲ್ಲಿ ಮಾನವೀಯ ಕಾರ್ಯಗಳನ್ನು ಭೂಸೇನೆ ನಿರ್ವಹಿಸುತ್ತದೆ. ಭೂಸೇನೆಯು ತಾಂತ್ರಿಕವಾಗಿ ಅತ್ಯಂತ ಮುಂದುವರಿದಿದೆಯಲ್ಲದೆ ಬೇಹುಗಾರಿಕೆ ವ್ಯವಸ್ಥೆಯನ್ನೂ ಹೊಂದಿದೆ.

ಭಾರತೀಯ ನೌಕಾಪಡೆ: ಕರಾವಳಿ ತೀರವನ್ನು ಹಾಗೂ ದ್ವೀಪಗಳನ್ನು ರಕ್ಷಿಸಲು ನೌಕಾಪಡೆಯ ಅಗತ್ಯವಿದೆ. ಭಾರತದ ನೌಕಾಪಡೆಯು ಜಗತ್ತಿನಲ್ಲಿ ಆರನೆಯ ಅತಿ ದೊಡ್ಡ ನೌಕಾದಳವಾಗಿದೆ. ಅದರ ಮುಖ್ಯಸ್ಥರನ್ನು ಆಡ್ಮಿರಲ್ ಎಂದು ಕರೆಯುತ್ತಾರೆ. ನೌಕಾಪಡೆಯ ಮುಖ್ಯ ಕಚೇರಿ ಹೊಸದಿಲ್ಲಿಯಲ್ಲಿದೆ.

ನೌಕಾಪಡೆಯು ಆಧುನಿಕ ಮಾದರಿಯ ಕ್ಷಿಪಣಿ ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಹೊಂದಿದೆ. ಅವುಗಳಲ್ಲಿ ಐ.ಎನ್.ಎಸ್.ವಿಭೂತಿ ಮತ್ತು ಐ.ಎನ್.ಎಸ್. ಗೋದಾವರಿ, ಪ್ರಮುಖವಾದವುಗಳು. ಅಲ್ಲದೆ ಐ.ಎನ್.ಎಸ್.ವಿರಾಟ್ ಮತ್ತು ಐ.ಎನ್.ಎಸ್. ಶಿವಾಲಿಕ್ ನಂತಹ ವಿಮಾನವಾಹಕಗಳನ್ನು ಹೊಂದಿರುವ ನೌಕಾಪಡೆ ಸುಸಜ್ಜಿತವಾಗಿದೆ. ಕರ್ನಾಟಕದ ಕಾರವಾರದಲ್ಲಿ `ಸೀಬರ್ಡ್’ ನೌಕಾನೆಲೆಯನ್ನು ಸ್ಥಾಪಿಸಲಾಗಿದೆ.

ಐ.ಎನ್.ಎಸ್. ಗೋದಾವರಿ
ಐ.ಎನ್.ಎಸ್. ಶಿವಾಲಿಕ್
INS Vikrant

ಭಾರತೀಯ ವಾಯುಪಡೆ: ಭಾರತವು ಪ್ರಪಂಚದಲ್ಲಿಯೇ ನಾಲ್ಕನೆಯ ಅತಿ ದೊಡ್ಡ ವಾಯುಪಡೆಯನ್ನು ಹೊಂದಿದೆ. ಇದರ ಮುಖ್ಯಸ್ಥರನ್ನು ಏರ್ ಚೀಫ್ ಮಾರ್ಷಲ್ ಎನ್ನುವರು. ಇದರ ಕೇಂದ್ರ ಕಚೇರಿ ಹೊಸದಿಲ್ಲಿಯಲ್ಲಿದೆ. ಆಡಳಿತದ ಅನುಕೂಲಕ್ಕಾಗಿ ವಾಯುಪಡೆಯನ್ನು ಏಳು ಕಮಾಂಡಗಳಾಗಿ ವಿಂಗಡಿಸಲಾಗಿದೆ.

ಬೆಂಗಳೂರು, ಹೈದರಾಬಾದ್ ಮತ್ತು ದಿಂಡಿಗಲ್‍ನಲ್ಲಿ (ತಮಿಳುನಾಡು) ವಾಯುಪಡೆಗೆ ತರಬೇತಿ ನೀಡುವ ಪ್ರಮುಖ ಕೇಂದ್ರಗಳಿವೆ. ವಾಯುಪಡೆಯು ತಂತ್ರಜ್ಞಾನದ ಅಳವಡಿಕೆಯಿಂದ ಅನೇಕ ಹೊಸ ಯುದ್ಧ ವಿಮಾನಗಳನ್ನು ಹೊಂದಿ ಶಸ್ತ್ರಸನ್ನದ್ಧವಾಗಿದೆ.

ನಮ್ಮ ವಾಯುಪಡೆಯು ಜಾಗ್ವಾರ್, ರಾಫೆಲ್‍ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಹೊಂದಿದೆ. ಅದು ಒಟ್ಟು ಸುಮಾರು 1,00,000ರಷ್ಟು ಯೋಧರು ಮತ್ತು ಸುಮಾರು 1330ರಷ್ಟು ಯುದ್ಧ ವಿಮಾನಗಳನ್ನು ಹೊಂದಿದೆ. ವಾಯುಪಡೆಯು ಬಲಾಢ್ಯವಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.

ಪೂರಕ ರಕ್ಷಣಾಪಡೆಗಳು:

ರಕ್ಷಣಾಪಡೆಗಳಲ್ಲದೆ ಅವುಗಳಿಗೆ ವಿಷಮ ಸಂದರ್ಭಗಳಲ್ಲಿ ನೆರವಾಗಲು ಪೂರಕ ರಕ್ಷಣಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ.

• ಗಡಿಭದ್ರತಾ ಪಡೆ Border Security Force): ಭಾರತದ ಗಡಿಪ್ರದೇಶಗಳನ್ನು ರಕ್ಷಿಸುವುದು ಗಡಿಭದ್ರತಾ ಪಡೆಯ ಪ್ರಮುಖ ಕಾರ್ಯವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಗಡಿಭದ್ರತಾ ಪಡೆಯು ಪರ್ವತದ ಎತ್ತರದವರೆಗೆ ಸೇನೆಯ ಜೊತೆಗೂಡಿ ಹೋರಾಟ ಮಾಡಿತು. ತಮ್ಮ ಪ್ರಾಣ ಇರುವವರೆಗೆ ಕರ್ತವ್ಯ (Duty Until Death) ಎಂಬುದು ಇದರ ಧ್ಯೇಯ ವಾಕ್ಯವಾಗಿದೆ.

• ಗಡಿರಸ್ತೆಗಳ ಸಂಘಟನೆ (Border Roads Organisation): ಗಡಿರಸ್ತೆಗಳ ಸಂಘಟನೆಯು ಮುಚ್ಚಿರುವ ರಸ್ತೆಗಳನ್ನು ತೆರವು ಮಾಡಿ ಸೈನಿಕ ಕಾರ್ಯಾಚರಣೆಗಳಿಗೆ ತಕ್ಷಣದ ಸಹಾಯವನ್ನು ಮಾಡುತ್ತದೆ. ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ಮತ್ತು ಒಳಚರಂಡಿ ನಿರ್ಮಾಣದಂತಹ ಕಾರ್ಯಗಳನ್ನು ಈ ಸಂಘಟನೆ ಮಾಡುತ್ತದೆ.

• ಕರಾವಳಿ ಪಹರೆಯವರು (Coast Guards): ಇದೊಂದು ಅರೆಮಿಲಿಟರಿ ಪಡೆಯಾಗಿದೆ. ಇದರ ಪ್ರಧಾನ ಕಚೇರಿ ಹೊಸದೆಹಲಿಯಲ್ಲಿದೆ. ಕರಾವಳಿ ತೀರವನ್ನು ರಕ್ಷಿಸುವುದು ಇದರ ಜವಾಬ್ದಾರಿಯಾಗಿದೆ. ಬಿರುಗಾಳಿ, ಚಂಡಮಾರುತ, ಸುನಾಮಿಯಂತಹ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತದೆ. ಅಕ್ರಮ ಒಳನುಸುಳುವಿಕೆ, ಕಳ್ಳಸಾಗಣೆ ಮುಂತಾದವುಗಳನ್ನು ತಡೆಗಟ್ಟುವುದು ಇದರ ಪ್ರಮುಖ ಕಾರ್ಯವಾಗಿದೆ.

ಕರಾವಳಿ ಪಹರೆಯು ಸುಮಾರು 1402 ಅತ್ಯಾಧುನಿಕ ಹಡಗುಗಳು ಮತ್ತು ಸುಮಾರು 381 ವಿಮಾನ ಹಾಗೂ ಸುಮಾರು 60 ಹೆಲಿಕಾಪ್ಟರ್‍ಗಳನ್ನು ಹೊಂದಿದೆ. ಸುಮಾರು 12,585 ಯೋಧರು ಕರಾವಳಿ ಪಹರೆಯಲ್ಲಿದ್ದಾರೆ.

• ಕೇಂದ್ರ ಕೈಗಾರಿಕಾ ಭದ್ರತಾಪಡೆ (Central Industrial Security Force): ಇದು ವಿಶ್ವದ ಅತಿದೊಡ್ಡ ಕೈಗಾರಿಕಾ ಭದ್ರತಾಪಡೆ. ಸುಮಾರು 1,45,000 ಯೋಧರು ಇದರಲ್ಲಿದ್ದಾರೆ. ಇದು ದೇಶದಲ್ಲಿರುವ ಸುಮಾರು 300ಕ್ಕೂ ಹೆಚ್ಚು ಸರಕಾರಿ, ಖಾಸಗಿ ಕೈಗಾರಿಕಾ ಘಟಕಗಳು ಮತ್ತು ಪ್ರಯೋಗಾಲಯಗಳಿಗೆ ಭದ್ರತೆಯನ್ನು ಒದಗಿಸುತ್ತದೆ. ಇದಲ್ಲದೆ ವಿಮಾನ ನಿಲ್ದಾಣ, ಬಂದರುಗಳು, ರೈಲ್ವೆ ನಿಲ್ದಾಣಗಳು, ಐತಿಹಾಸಿಕ ಸಂರಕ್ಷಿತ ಸ್ಮಾರಕಗಳಿಗೂ ಮತ್ತು ಅಣುಶಕ್ತಿ ಕೇಂದ್ರಗಳಿಗೂ ಭದ್ರತೆಯನ್ನು ಒದಗಿಸುತ್ತದೆ.

ಸಹಾಯಕ ರಕ್ಷಣಾ ಸೇವೆಗಳು:

ದೇಶದಾದ್ಯಂತ ಯುವಕರಲ್ಲಿ ಸೇವೆ ಮತ್ತು ದೇಶಪ್ರೇಮವನ್ನು ಬೆಳೆಸಲು ಶಾಲಾ ಮತ್ತು ಕಾಲೇಜುಗಳಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಎನ್.ಸಿ.ಸಿ. ಒಂದು ಪ್ರಮುಖ ಚಟುವಟಿಕೆ.

• ಎನ್‍ಸಿಸಿ ನ್ಯಾಷನಲ್ ಕ್ಯಾಡೆಟ್ ಕೋರ್ (National Cadet Corps): ಸಾಮೂಹಿಕ ಜೀವನದ ಪ್ರಾಧಾನ್ಯ, ನಾಯಕತ್ವ ಮುಂತಾದ ಗುಣಗಳನ್ನು ಎನ್‍ಸಿಸಿ ಕಲಿಸುತ್ತದೆ. ಈ ತರಬೇತಿ ಪಡೆದವರಿಗೆ ಸೇನೆಯನ್ನು ಸೇರಲು ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ. ಉನ್ನತ ವ್ಯಾಸಂಗಕ್ಕೂ ವಿದ್ಯಾರ್ಥಿಗಳಿಗೆ ಇದರಿಂದ ಮೀಸಲಾತಿ ದೊರೆಯುತ್ತದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಯುವಕರು ಮತ್ತು ಯುವತಿಯರು ಎನ್‍ಸಿಸಿಯನ್ನು ಸೇರಬಹುದು. ಒಟ್ಟಿನಲ್ಲಿ ರಾಷ್ಟ್ರ ರಕ್ಷಣೆಯ ಹೊಣೆಗಾರಿಕೆಯನ್ನು ಮೂಡಿಸುವುದು ಇದರ ಪ್ರಮುಖ ಗುರಿಯಾಗಿದೆ. ‘ಶಿಸ್ತು ಮತ್ತು ಒಗ್ಗಟ್ಟು’ ಇದರ ಧ್ಯೇಯ ವಾಕ್ಯವಾಗಿದೆ.

• ಭಾರತೀಯ ರೆಡ್‍ಕ್ರಾಸ್ ಸಂಸ್ಥೆ (Indian Red Cross Society): ರೆಡ್‍ಕ್ರಾಸ್ ಚಿಹ್ನೆ ರೆಡ್‍ಕ್ರಾಸ್ ಸಂಸ್ಥೆಯು ಭಾರತದಾದ್ಯಂತ 1100 ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತ್ತಿದೆ. ರಾಷ್ಟ್ರಾಧ್ಯಕ್ಷರು ಇದರ ಅಧ್ಯಕ್ಷರಾಗಿದ್ದಾರೆ. ರೆಡ್‍ಕ್ರಾಸ್ ಸಂಸ್ಥೆಯ ಮುಖ್ಯ ಧ್ಯೇಯವೆಂದರೆ `ಮಾನವೀಯತೆ ಮತ್ತು ಸ್ವಯಂಸೇವೆ’.

• ನಾಗರಿಕ ಪೊಲೀಸ್ ಪಡೆಗಳು (Civil Defence): ಪೊಲೀಸ್ ಪಡೆಗಳು ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿವೆ. ರಾಜ್ಯ ಪೊಲೀಸ್ ಪಡೆಯ ವ್ಯಾಪ್ತಿ ರಾಜ್ಯಕ್ಕೆ ಸೀಮಿತವಾಗಿದೆ. ಕೇಂದ್ರ ಸರಕಾರವು ತನ್ನದೇ ಪೊಲೀಸ್ ಪಡೆಗಳನ್ನು ಸ್ಥಾಪಿಸಿದೆ.

ರಾಷ್ಟ್ರೀಯ ರಕ್ಷಣಾ ದಳ: ರಾಷ್ಟ್ರೀಯ ರಕ್ಷಣಾ ದಳವು ಗಣ್ಯರಿಗೆ ರಕ್ಷಣೆಯನ್ನು ನೀಡುತ್ತದೆ. ಇದು ದೇಶದಲ್ಲಿಯ ಆಂತರಿಕ ಭದ್ರತೆಗೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚು ಒತ್ತು ನೀಡುತ್ತದೆ. ಬಾಂಬ್ ನಿಷ್ಕ್ರಿಯ ದಳ ಇದಕ್ಕೆ ಪೂರಕವಾಗಿದೆ.

• ಗೃಹರಕ್ಷಕ ದಳ (Home Guards): ಇದು ಪೊಲೀಸ್ ಪಡೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಇದರ ಕಾರ್ಯಗಳು: ಆಂತರಿಕ ಭದ್ರತೆ ಒದಗಿಸುವಲ್ಲಿ ನೆರವಾಗುವುದು; ಮತ್ತು ತುರ್ತುಪರಿಸ್ಥಿತಿ, ಪ್ರಕೃತಿ ವಿಕೋಪ ಮುಂತಾದ ಸಮಯದಲ್ಲಿ ಸಹಾಯ ಮಾಡುವುದು.

* ಭೂಸೇನೆಯ ಉನ್ನತ ಅಧಿಕಾರಿಗಳು: ಜನರಲ್, ಲೆಫ್ಟೆನಂಟ್ ಜನರಲ್, ಮೇಜರ್ ಜನರಲ್, ಬ್ರಿಗೇಡಿಯರ್, ಕರ್ನಲ್, ಲೆಫ್ಟೆನಂಟ್ ಕರ್ನಲ್, ಮೇಜರ್, ಕ್ಯಾಪ್ಟನ್ ಮತ್ತು ಲೆಫ್ಟೆನಂಟ್. ನೌಕಾದಳ ಮತ್ತು ವಾಯುಪಡೆಯಲ್ಲಿ ಕೂಡ ಅದರದೇ ಆದ ಉನ್ನತ ಅಧಿಕಾರಿಗಳ ರ್ಯಾಂಕ್‍ಗಳಿವೆ. ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರೆಂದು ಕರೆಯುತ್ತಾರೆ.

SAMVEDA-7th-Social Science-Indian Defence
ರಕ್ಷಣಾ ಪಡೆಗಳು🔥 | 7ನೇ ತರಗತಿ | ಪ್ರಶ್ನೋತ್ತರ ಸಮಾಜ ವಿಜ್ಞಾನ | Part 2 | Rakshanaa padegalu notes social