ಸಮರ್ಥ ವೆಂಕಟ್ರಮಣ ಗೌಡ

ಅಂದು ಶನಿವಾರ ಅಕ್ಟೋಬರ್ 2. ನಮ್ಮ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ 9 ವರ್ಷದ ಬಾಲಕ ಕು. ಸಮರ್ಥ ವೆಂಕಟ್ರಮಣ ಗೌಡ ಶಾಲೆಯಲ್ಲಿ ಗಾಂಧೀ ಜಯಂತಿ ನಿಮಿತ್ತ ನಡೆದ ಶ್ರಮದಾನವನ್ನು ಪೂರೈಸಿ ಮನೆಗೆ ತೆರಳಿದ್ದಾನೆ. ಮನೆ ಸಮೀಪಿಸುತ್ತಿದ್ದಂತೆ ತಮ್ಮ ಮನೆಯ ಸುತ್ತ-ಮುತ್ತ ಹೊಗೆಯಾಡುತ್ತಿರುವುದನ್ನು ಕಂಡಿದ್ದಾನೆ. ಹತ್ತಿರ ಹೋಗಿ ನೋಡಿದಾಗ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆ ಮನೆಗೆ ಬೆಂಕಿಬಿದ್ದಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತಾವು ವಾಸಿಸುವ ಮನೆಗೂ ಬೆಂಕಿ ವ್ಯಾಪಿಸುವುದರಲ್ಲಿತ್ತು. ಮನೆಯಲ್ಲಿ ತಂದೆ-ತಾಯಿಗಳಿಲ್ಲದ್ದನ್ನು ತಿಳಿದ ಸಮರ್ಥ ಧೃತಿಗೆಡದೆ ತಕ್ಷಣ ಕಾರ್ಯಪ್ರವರ್ತನಾಗಿದ್ದಾನೆ. ಹತ್ತಿರದಲ್ಲೇ ಇದ್ದ ನೀರನ್ನು ಬಳಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿ ಯಶಸ್ವಿಯಗಿದ್ದಾನೆ. ನಂತರ ಪಕ್ಕದ ಊರಿನಲ್ಲಿ ಅಡಿಕೆ ಸುಲಿಯಲು ಹೋಗಿದ್ದ ತನ್ನ ತಾಯಿಯ ಬಳಿ ಹೋಗಿ ನಡೆದ ಘಟನೆಯನ್ನು ತಿಳಿಸಿದ್ದಾನೆ.

ಘಟನೆಯಲ್ಲಿ ಅಲ್ಲಿದ್ದ ಅಡಿಕೆಗಳು, ಚಾಲಿ ಹಾಗೂ ಹಿಂಡಿ ಚೀಲ ಎಲ್ಲವೂ ಬೆಂಕಿಗೆ ಆಹುತಿಯಾಗಿತ್ತು. ಬಾಲಕನ ಸಮಯಪ್ರಜ್ಞೆಯಿಂದಾಗಿ ಭಾರಿ ಅಗ್ನಿ ದುರಂತವೊಂದು ತಪ್ಪಿದೆ. ಬಾಲಕನ ಧೈರ್ಯ ಹಾಗೂ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://circle.page/post/9063157?utm_source=an&person=5849842

ಸುದ್ದಿ ವೀಕ್ಷಿಸಲು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.