ಸಿದ್ದಾಪುರ: ಕಾರವಾರದ ಸೀಬರ್ಡ್ ನೌಕಾ ನೆಲೆಯಲ್ಲಿ ನೇವಿ ಡೇ ನಿಮಿತ್ತ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಉಚಿತ ವೀಕ್ಷಣೆಯ ಪ್ರಯೋಜವನ್ನು ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಶಾಲಾ ಮಕ್ಕಳು ಪಡೆದುಕೊಂಡರು.

ಶನಿವಾರ ನಡೆದ ಪ್ರದರ್ಶನದಲ್ಲಿ ಹುಲ್ಕುತ್ರಿ ಶಾಲಾ ವಿದ್ಯಾರ್ಥಿಗಳು ಐ.ಎನ್.ಎಸ್. ವಿಶಾಖಪಟ್ಟಣಂ ಯುದ್ಧನೌಕೆ ವೀಕ್ಷಿಸುವ ಸದವಕಾಶವನ್ನು ಪಡೆದರು. ಅಲ್ಲದೇ ವಿವಿಧ ನೌಕೆಗಳಾದ ಡೆಸ್ಟ್ರಾಯರ್, ಪ್ರಿಗೇಡ್ಸ್, ಕಾರ್ವೇಟ್ಸ್ ಹಾಗೂ ಐ.ಎನ್.ಎಸ್ ವಿಕ್ರಾಂತ ಏರ್ ಕ್ರಾಫ್ಟ್ ಕ್ಯಾರಿಯರ್ ಹಡಗುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಐ.ಎನ್.ಎಸ್. ವಿಶಾಖಪಟ್ಟಣಂ ನೌಕೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಮಕ್ಕಳಿಗೆ ನೌಕೆಯಲ್ಲಿ ಅಳವಡಿಸಿರುವ ಅತ್ಯಾಧಾನಿಕ ರಡಾರ್ ವ್ಯವಸ್ಥೆ, ಮಿಸೈಲ್ ಗಳು, ಕ್ಯಾಪ್ಟನ್ ಅವರ ಕಾರ್ಯ, ವಿವಿಧ ಬಗೆಯ ಗನ್ ಗಳಾದ ನೆಗೆವ್, ಕಾರ್ಬಿನ್, ಮಸಾಡ್ ಪಿಸ್ತೂಲ್ ಹಾಗೂ ಸಿಗ್ ರೈಫಲ್ ಗಳು ಹಾಗೂ ಹ್ಯಾಲಿಪ್ಯಾಡ್ ಇವುಗಳ ಕುರಿತಾಗಿ ಮಾಹಿತಿ ನೀಡಿದರು. ಈ ಎಲ್ಲ ಯುದ್ಧ ಹುಡುಗುಗಳನ್ನು ನೋಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಶಾಲೆಯ 2 ನೇ ತರಗತಿಯಿಂದ 7 ನೇ ತರಗತಿವರೆಗಿನ 24 ವಿದ್ಯಾರ್ಥಿಗಳೊಂದಿಗೆ ಶಾಲೆಯ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ, ಸಹಶಿಕ್ಷಕರಾದ ಮೈತ್ರಿ ಹೆಗಡೆ, ರಂಜನಾ ಭಂಡಾರಿ ಹಾಗೂ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಸುರೇಶ ಬಂಗಾರ್ಯ ಗೌಡ ಉಪಸ್ಥಿತರಿದ್ದರು.

https://www.facebook.com/share/v/1DpeEVBotX

ಕಾರವಾರದ ಸೀಬರ್ಡ್ ನೌಕಾನೆಲೆಗೆ ಸಿದ್ದಾಪುರದ ಶಾಲಾ ವಿದ್ಯಾರ್ಥಿಗಳ ಭೇಟಿ