ಹಬ್ಬ-ಜಾತ್ರೆ-ಸಮಾರಂಭ – ಸಮೀಕ್ಷೆ
ನೆನಪಿಡಿ :–
ಗೊತ್ತುಪಡಿಸಿದ ಶುಭದಿನದಂದು, ಬೇರೆ ಬೇರೆ ಧರ್ಮದವರು ತಮ್ಮದೇ ಆದ ವಿಧಾನದಲ್ಲಿ ದೇವರಿಗೆ ಪೂಜಾ, ಪಾರ್ಥನೆಗಳನ್ನು ಸಲ್ಲಿಸಿ, ವಿಶೇಷ ಅಡುಗೆಯೊಂದಿಗೆ ಸಡಗರದಿಂದ ಸಂಭ್ರಮಿಸುವುದೇ ‘ಹಬ್ಬ‘. ಉದಾ :- ದೀಪಾವಳಿ, ಕಿಸ್‍ಮಸ್, ರಂಜಾನ್
ಗೊತ್ತುಪಡಿಸಿದ ಶುಭದಿನದಂದು, ಸುತ್ತಲಿನ ಊರಿನವರೆಲ್ಲರೂ ಮತ್ತು ವಿವಿಧ ಧರ್ಮದವರು ಸಕಲ ಸಿದ್ಧತೆಗಳೊಂದಿಗೆ ಒಂದೆಡೆ ಸೇರಿ ಗ್ರಾಮ ದೇವರನ್ನು ಭಕ್ತಿ-ಭಾವದಿಂದ ಆರಾಧಿಸುವ ಪರಂಪರೆಯೇ ಜಾತ್ರೆ / ಉತ್ಸವ /ಉರುಸ್. ಉದಾ:- ಮೈಲಾರಲಿಂಗೇಶ್ವರ ಜಾತೆ, ಕರಗ ಉತ್ಸವ, ಖ್ವಾಜಾ ಬಂದೇ ನವಾಜ್ ಉರುಸು ಇತ್ಯಾದಿ.
ಒಂದು ಘಟನೆ ಅಥವಾ ಸಂದರ್ಭಕ್ಕೆ ಪೂರಕವಾಗಿ ಮನೆ ಅಥವಾ ಹೊರಾಂಗಣದಲ್ಲಿ ಹಲವು ಸದಸ್ಯರ ಪರಸ್ಪರ ಸಹಕಾರದೊಂದಿಗೆ ನಡೆಯುವ ಚಟುವಟಿಕೆಯೇ ‘ಸಮಾರಂಭ’ ಉದಾ :- ಹುಟ್ಟುಹಬ್ಬ, ಶಾಲಾ ವಾರ್ಷಿಕೋತ್ಸವ, ಗೃಹಪವೇಶ, ಮದುವೆ, ನಾಮಕರಣ ಇತ್ಯಾದಿ.
Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me? https://www.binance.com/el/register?ref=OMM3XK51