ಹನಿಗೂಡಿದರೆ . . . . . – ಪಾಠ – 6
ಭೂಮಿಯ ಮೂರು ಭಾಗವೆಲ್ಲ ನೀರು ತುಂಬಿದೆ,
ಸೂರ್ಯಶಾಖದಿಂದ ಕಾದು ಆವಿಯಾಗಿದೆ;
ಆವಿ ಮೇಲೆ ಏರಿ ಮುಗಿಲ ಎಡೆಗೆ ಸಾಗಿದೆ,
ತಂಪು ಗಾಳಿ ತಗುಲಿ ಆವಿ ಹನಿಗಳಾಗಿದೆ;
ಹನಿಗಳೆಲ್ಲ ಒಂದುಗೂಡಿ ಮೋಡವಾಗಿದೆ,
ಮೋಡವೆಲ್ಲ ಗಗನದಲ್ಲಿ ತೇಲತೊಡಗಿದೆ;
ಮೋಡದ ಹನಿಗಳೆಲ್ಲಾ ಸೇರಿ ದೊಡ್ಡದಾಗಿವೆ,
ಹನಿಗಳೆಲ್ಲ ಧರೆಗೆ ಇಳಿದು ಮಳೆಯ ಸುರಿಸಿವೆ;
ಮಳೆಯ ನೀರು ಹರಿದು ಹಳ್ಳಕೊಳ್ಳ ಸೇರಿದೆ,
ಇದರ ನೀರು ಮತ್ತೆ ಕಾದು ಆವಿಯಾಗಿದೆ.
ಈ ಹಾಡು ಹೇಳುತ್ತಾ ಮುಂದಿನ ಚಿತ್ರ ಗಮನಿಸು.
ಓದಿ-ತಿಳಿ
ನೀರು ಒಂದು ದ್ರವ. ಇದು ಕಾದಾಗ ಆವಿಯಾಗುತ್ತದೆ. ಇದು ನೀರಿನ ಅನಿಲ ಸ್ಥಿತಿ. ನೀರು ದ್ರವ ಸ್ಥಿತಿಯಿಂದಅನಿಲ ಸ್ಥಿತಿಗೆ ಬರುವುದನ್ನುಆವೀಕರಣ ಎನ್ನುತ್ತಾರೆ.
ಮಾಡಿ-ನೋಡು
ಒಂದು ಸಣ್ಣ ಪ್ಲಾಸ್ಟಿಕ್ ಚೀಲವನ್ನು ತೆಗೆದುಕೋ. ಅದರಲ್ಲಿ ಸ್ವಲ್ಪ ನೀರು ಹಾಕಿ ಅದರ ತುದಿಯನ್ನು ದಾರದಿಂದ ಕಟ್ಟು. ಚೀಲವನ್ನು ಬಿಸಿಲಿನಲ್ಲಿ ಇಡು. ಒಂದೆರಡು ಗಂಟೆಗಳ ನಂತರ ಗಮನಿಸು.
ಓದಿ-ತಿಳಿ :
ಸೂರ್ಯನ ಶಾಖದಿಂದ ನೀರು ಕಾದು ಆವಿಯಾಗಿ ಮೇಲೆ ಹೋಗುತ್ತದೆ. ನೀರಾವಿಗೆ ತಂಪು ಗಾಳಿ ತಗುಲಿದಾಗ ನೀರ ಹನಿಗಳಾಗುತ್ತದೆ. ಹೀಗೆ ನೀರಾವಿ ತಂಪಾಗಿ ದ್ರವಸ್ಥಿತಿಗೆ ಬದಲಾಗುವುದನ್ನು ಸಾಂದ್ರೀಕರಣ ಎನ್ನುವರು.
ಓದಿ-ತಿಳಿ :
ಮಳೆಯ ಹನಿಗಳು ಹೆಚ್ಚು ತಂಪಾದಾಗ ಮಂಜುಗಡ್ಡೆಯ ಸಣ್ಣ ಗೋಲಗಳಾಗಿ ಭೂಮಿಗೆ ಬೀಳುತ್ತವೆ. ಇವೇ ಆಲಿಕಲ್ಲುಗಳು.
ಓದಿ-ತಿಳಿ
ಜೀವಿಗಳ ದಿನನಿತ್ಯದ ಕೆಲಸಗಳಿಗಲ್ಲದೆ ಬೇಸಾಯಕ್ಕೆ, ಕಾರ್ಖಾನೆಗಳಿಗೆ, ಜಲಸಾರಿಗೆಗೆ, ಕಟ್ಟಡ ನಿರ್ಮಾಣದ ಕೆಲಸಗಳಿಗೆ, ವಿದ್ಯುತ್ ಉತ್ಪಾದನೆಗೆ ನೀರು ಅತಿ ಅಗತ್ಯ.
ಓದಿ-ತಿಳಿ
ನಿನಗಿಷ್ಟೇ
ನೀರು ಭೂಮಿಯಲ್ಲಿ ನೀರಿನ ಪ್ರಮಾಣ 100 ಚಮಚ ಇದೆಯೆಂದು ತಿಳಿದುಕೊ. ಅದರಲ್ಲಿ 97ಕ್ಕಿಂತ ಹೆಚ್ಚು ಚಮಚ ಉಪ್ಪು ನೀರು. 2 ಚಮಚದಷ್ಟು ನೀರು ಮಂಜುಗಡ್ಡೆಯಾಗಿದೆ. 1 ಚಮಚಕ್ಕಿಂತ ಕಡಿಮೆ ನೀರು ಮಾತ್ರ ದಿನನಿತ್ಯದ ಕೆಲಸಗಳಿಗೆ ಬಳಸಲಷ್ಟೇ ಸಾಧ್ಯ.
ಓದಿ-ತಿಳಿ
ಪಾತ್ರೆ, ಬಟ್ಟೆ ಮತ್ತು ತರಕಾರಿಗಳನ್ನು ತೊಳೆದ ನೀರನ್ನು ಗಿಡಗಳಿಗೆ ಹಾಯಿಸುವ ಮೂಲಕ ಒಮ್ಮೆ ಬಳಸಿದ ನೀರನ್ನು ಮತ್ತೆ ಬಳಸಬಹುದು. ನೀರಿನ ಮರುಬಳಕೆಯಿಂದ ನೀರನ್ನು ಉಳಿಸಬಹುದು.
ನಿನಗಿದು ಗೊತ್ತೆ?
* ಜಲ ಸಂಪನ್ಮೂಲದಲ್ಲಿ ಭಾರತ ಪ್ರಪಂಚದಲ್ಲೇ ಅತೀ ಶ್ರೀಮಂತ ರಾಷ್ಟ್ರ.
* ಭೂಮಿಯಲ್ಲಿ ದೊರೆಯುವ ಸಿಹಿನೀರಿನ ಹೆಚ್ಚಿನ ಭಾಗ ಮಂಜುಗಡ್ಡೆಯಾಗಿರುತ್ತದೆ.
* ನೀರು ಗಾಳಿಯಲ್ಲಿ ಆವಿಯ ರೂಪದಲ್ಲಿದೆ.
* ಜಲಾಶಯಗಳ ನೀರನ್ನು ಶುದ್ಧೀಕರಿಸಲು ಮೀನು ಸಾಕುತ್ತಾರೆ.
* ನೀರು ಸಸ್ಯ ಮತ್ತು ಪ್ರಾಣಿಗಳ ದೇಹದ ಆಕಾರವನ್ನು ಕಾಯ್ದುಕೊಳ್ಳುತ್ತದೆ.
* ಮಾನವರ ಶರೀರದಲ್ಲಿ ಸುಮಾರು ಶೇಕಡ 65 ಭಾಗ ನೀರಿದೆ. ಇತರ ಜೀವಿಗಳಲ್ಲಿ ಶೇಕಡ 40 ರಿಂದ 90 ಭಾಗ ನೀರಿದೆ, ಎಲೆಗಳಲ್ಲಿ ಶೇಕಡ 80ಕ್ಕೂ ಹೆಚ್ಚಿನ ಭಾಗ ನೀರಿದೆ.
* ನಾವು ದಿನಕ್ಕೆ ಎರಡು ಲೀಟರ್‍ಗಳಷ್ಟಾದರೂ ನೀರನ್ನು ಕುಡಿಯಬೇಕು.
* ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಮೇಘಾಲಯ ರಾಜ್ಯದ ಮೌಸಿನ್ ರಾಮ್.
* ಕರ್ನಾಟಕದ ಆಗುಂಬೆಯಲ್ಲಿ ಹೆಚ್ಚಿನ ಮಳೆಯಾಗುತ್ತದೆ.
Reading your article has greatly helped me, and I agree with you. But I still have some questions. Can you help me? I will pay attention to your answer. thank you.