ಹಣ – ಅಧ್ಯಾಯ-5
ನೀವು ಈ ಅಧ್ಯಾಯದ ಅಧ್ಯಯನದ ನಂತರ ಕೆಳಗಿನ ಸಾಮರ್ಥ್ಯಗಳನ್ನು ಗಳಿಸುವಿರಿ.
* ರೂಪಾಯಿಗಳು ಮತ್ತು ಪೈಸೆಗಳನ್ನು ದಶಮಾಂಶ ಭಿನ್ನರಾಶಿ ರೂಪದಲ್ಲಿ ಬರೆಯುವುದು.
* ಗಣಿತದ ನಾಲ್ಕೂ ಮೂಲ ಕ್ರಿಯೆಗಳನ್ನು ಒಳಗೊಂಡ ಹಣವನ್ನು ಆಧರಿಸಿದ ಸಮಸ್ಯೆಗಳನ್ನು ಬಿಡಿಸುವುದು.
* ಹಣವನ್ನು ಸಂಪಾದಿಸುವ, ಖರ್ಚು ಮಾಡುವ ಹಾಗೂ ಸರಿಯಾಗಿ ಉಪಯೋಗಿಸುವ ಅವಶ್ಯಕತೆಗಳನ್ನು ತಿಳಿಯುವುದು.
* ವಸ್ತುಗಳನ್ನು ಕೊಂಡುಕೊಳ್ಳುವಾಗ, ಕೊಂಡ ವಸ್ತುಗಳ ಪಟ್ಟಿಯನ್ನು ಪರೀಕ್ಷಿಸುವುದು.
* ಮಾರುಕಟ್ಟೆಯಲ್ಲಿನ ವಸ್ತುವಿನ ಬೆಲೆಯನ್ನು ತಿಳಿದುಕೊಂಡ ನಂತರ ಇದಕ್ಕೆ ಅನುಗುಣವಾಗಿ ವಸ್ತುವನ್ನು ಕೊಂಡುಕೊಳ್ಳುವುದು.
* ಕೊಂಡ ವಸ್ತುಗಳಿಗೆ ನೀಡಬೇಕಾದ ಹಣದ ರಶೀದಿ (ಬಿಲ್)ಯ ಅವಶ್ಯಕತೆ ತಿಳಿಯುವುದು.
* ಹಣದ ರಶೀದಿ (ಬಿಲ್)ಯನ್ನು ತಯಾರಿಸುವುದು.
* ಹಣದ ರಶೀದಿಯನ್ನು ಓದುವುದು ಮತ್ತು ಅದರಲ್ಲಿನ ಮಾಹಿತಿಯನ್ನು ಪತ್ತೆಹಚ್ಚುವುದು.
ಸಂವೇದ ವಿಡಿಯೋ ಪಾಠಗಳು
ಅಭ್ಯಾಸಗಳು
* * * * * * * * * * *