ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು – ಅಧ್ಯಾಯ 15

ಪಾಠದ ಪರಿಚಯ

ಪಾಶ್ಚಿಮಾತ್ಯ ಶಿಕ್ಷಣದ ಅನುಷ್ಠಾನ ಭಾರತೀಯರಲ್ಲಿ ಒಂದು ಹೊಸ ಜಾಗೃತಿಯನ್ನು ಮೂಡಿಸಿತು. ಭಾರತೀಯರು ತಮ್ಮ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಹಲವಾರು ಮಾರ್ಗಗಳನ್ನು ಹುಡುಕತೊಡಗಿದರು. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭಾರತೀಯ ಸಮಾಜವನ್ನು ಸುಧಾರಿಸಲು ಶ್ರಮಿಸಿದ 19ನೇ ಶತಮಾನದ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರ ಕಾರ್ಯಗಳನ್ನು ನಾವೀಗ ಅಭ್ಯಸಿಸೋಣ.

ಆಧುನಿಕ ಪಾಶ್ಚಿಮಾತ್ಯ ವಿಚಾರಧಾರೆಯ ಪರಿಣಾಮವಾಗಿ ಭಾರತದಲ್ಲಿ ಒಂದು ನೂತನ ಜಾಗೃತಿ ಉಂಟಾಯಿತು. ಪಾಶ್ಚಿಮಾತ್ಯ ಸಂಸ್ಕೃತಿ, ವೇಷಭೂಷಣ, ನಡಾವಳಿಗಳು, ಸಮಾಜ, ಧಾರ್ಮಿಕ ವಿಚಾರಗಳು, ನಂಬಿಕೆಗಳು ಮತ್ತು ಆಂಗ್ಲರ ಸಾಮಾಜಿಕ ಆದರ್ಶಗಳು ಭಾರತೀಯರ ಮೇಲೆ ಗಾಢವಾದ ಪ್ರಭಾವ ಬೀರಿದವು. ವಿಶೇಷವಾಗಿ ಭಾರತೀಯರು ಪಾಶ್ಚಿಮಾತ್ಯರ ವೈಜ್ಞಾನಿಕ ವಿಚಾರಧಾರೆ, ಮಾನವತಾವಾದ ಹಾಗೂ ಕಾರ್ಯಕಾರಣ ಸಿದ್ಧಾಂತಗಳಿಂದ ಪ್ರಭಾವಿತರಾದರು. ಈ ಬೆಳವಣಿಗೆಗಳ ಪರಿಣಾಮವು ವಸಾಹತುಶಾಹಿ ಕಾಲದ ಭಾರತದಲ್ಲಿ ಪುನರುಜ್ಜೀವನದ ಹುಟ್ಟಿಗೆ ನಾಂದಿಯಾಯಿತು. ಸಮಾನತೆಯ ಆಶಯಗಳನ್ನು ಸಾರುವ ಹೊಸ ಅರಿವೇ ಈ ಪುನರುಜ್ಜೀವನ ಚಳವಳಿ. ಇದನ್ನು ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಯ ಹೆಸರಿನಿಂದಲೂ ಕರೆಯುವರು. ಈ ಚಳವಳಿಗಳು ದಲಿತ ಮತ್ತು ಮಹಿಳಾ ವರ್ಗಗಳ ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದವು. ಬ್ರಿಟಿಷರು ಇಂಗ್ಲಿಷ್ ಶಿಕ್ಷಣವನ್ನು ಭಾರತೀಯರ ವಿಮೋಚನೆಗೆ ದಾರಿಯಾಗಿದೆಯೆಂದು ಪ್ರತಿಪಾದಿಸುತ್ತಲೆ, ವಸಾಹತು ಸಿದ್ಧಾಂತವನ್ನು ಭಾರತೀಯರ ಮೇಲೆ ಹೇರುತ್ತಾ ಹೋದರು.

ಬ್ರಹ್ಮ ಸಮಾಜ (1828)

ಆಧುನಿಕ ಕಾಲಘಟ್ಟದ ಭಾರತದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದವರಲ್ಲಿ ರಾಜಾ ರಾಮಮೋಹನ ರಾಯ್ ಮೊದಲಿಗರು. ಇವರನ್ನು `ಭಾರತದ ಪುನರುಜ್ಜೀವನ ಪಿತಾಮಹ’ ಎಂದು ರವೀಂದ್ರನಾಥ ಟಾಗೋರ್ ಕರೆದಿರುವುದು ಸಮರ್ಥನೀಯವಾಗಿದೆ.

ಜಡ ಭಾರತೀಯ ಸಮಾಜದಲ್ಲಿ ಚೇತನ ತುಂಬುವ ರಾಜಾ ರಾಮಮೋಹನ ರಾಯ್ ಉದ್ದೇಶವನ್ನು ಹೊಂದಿದ್ದ ರಾಜಾ ರಾಮಮೋಹನ ರಾಯ್ 1814ರಲ್ಲಿ `ಆತ್ಮೀಯ ಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು 1819ರ ವೇಳೆಗೆ ಸ್ಥಗಿತಗೊಂಡಿತು. ನಂತರ 1828ರಲ್ಲಿ `ಬ್ರಹ್ಮಸಭಾ’ವನ್ನು ಸ್ಥಾಪಿಸಿದರು. ಅದು ಮರು ವರ್ಷ `ಬ್ರಹ್ಮ ಸಮಾಜ’ ಎಂದು ನಾಮಕರಣಗೊಂಡಿತು. ರಾಜಾ ರಾಮ ಮೋಹನ ರಾಯ್ ಪೂರ್ವ ಮತ್ತು ಪಶ್ಚಿಮದ ಚಿಂತನೆಗಳ ಸಮನ್ವಯದ ಪ್ರತಿನಿಧಿಯಾಗಿದ್ದರು. ಸತಿ ಪದ್ಧತಿ, ಜಾತಿ ಪದ್ಧತಿ, ಮೂರ್ತಿ ಪೂಜೆ, ಬಹುಪತ್ನಿತ್ವ, ಬಾಲ್ಯ ವಿವಾಹ ಹಾಗೂ ಎಲ್ಲಾ ತರದ ಮೂಢ ನಂಬಿಕೆಗಳನ್ನು ಬ್ರಹ್ಮ ಸಮಾಜವು ಬಲವಾಗಿ ವಿರೋಧಿಸಿತು. ರಾಮಮೋಹನ ರಾಯ್ ಮತ್ತು ಅವರ ಸಹವರ್ತಿಗಳು ಅರ್ಥಹೀನ ಸತಿ ಪದ್ಧತಿಯನ್ನು ನಿರ್ಮೂಲನಗೊಳಿಸುವಂತೆ ಬ್ರಿಟಿಷ್ ಸರ್ಕಾರವನ್ನು ಕೋರಿದರು. ಇದರಿಂದ ಅಂದಿನ ಗವರ್ನರ್ ಜನರಲ್ ಆಗಿದ್ದ ವಿಲಿಯಮ್ ಬೆಂಟಿಂಕ್‍ನು ಸತಿ ಪದ್ಧತಿ ಆಚರಣೆಯನ್ನು ಕಾನೂನುಬಾಹಿರವೆಂದು ಘೋಷಿಸಿದನು (1829). ಪಾಶ್ಚಿಮಾತ್ಯ ಶಿಕ್ಷಣವನ್ನು ಪ್ರತಿಪಾದಿಸಿದ ರಾಮಮೋಹನ ರಾಯ್ ಆ ಮೂಲಕ ಅಮಾನವೀಯ ಪದ್ಧತಿಗಳನ್ನು ತೊಡೆದು ಹಾಕಬಹುದೆಂದು ಬಲವಾಗಿ ನಂಬಿದ್ದರು. ವಿಧವಾ ವಿವಾಹ ಮತ್ತು ಏಕದೇವತಾರಾಧನೆಯ ಪರವಾಗಿದ್ದ ರಾಮಮೋಹನ ರಾಯ್ ಅವರು `ಸಂವಾದ ಕೌಮುದಿ’ ಪತ್ರಿಕೆಯ ಮೂಲಕ ಸಾಮಾಜಿಕ ಸುಧಾರಣಾ ಚಳವಳಿಯ ಪ್ರಕ್ರಿಯೆಯನ್ನು ಆರಂಭಿಸಿದರು.

ವೈಚಾರಿಕತೆಯ ಮೂಲಕ ಹಿಂದೂ ಧರ್ಮವನ್ನು ಪರಿಶುದ್ಧಗೊಳಿಸಲು ರಾಮಮೋಹನ ರಾಯ್ ಯತ್ನಿಸಿದರು. ತಮ್ಮ ವಿಚಾರವನ್ನು ಸಮರ್ಥಿಸಲು ಐದು ಉಪನಿಷತ್ತುಗಳನ್ನು ಸಂಸ್ಕೃತದಿಂದ ಬಂಗಾಳಿಗೆ ಭಾಷಾಂತರಿಸಿದರು.

ರಾಮಮೋಹನ ರಾಯ್ ಇಂಗ್ಲಿಷ್ ಶಿಕ್ಷಣವನ್ನು ಪ್ರತಿಪಾದಿಸಿದ ಮೊದಲಿಗರಲ್ಲಿ ಒಬ್ಬರು. ತಮ್ಮ ಖರ್ಚಿನಲ್ಲಿ ಇಂಗ್ಲಿಷ್ ಶಾಲೆ ನಡೆಸುತ್ತಿದ್ದರು. ಅವರು ವೇದಾಂತ ಕಾಲೇಜನ್ನು ಕೂಡ ಸ್ಥಾಪಿಸಿದರು. ರಾಮಮೋಹನ ರಾಯ್ ಭಾರತೀಯ ಪತ್ರಿಕೋದ್ಯಮದ ಆದ್ಯ ಪ್ರವರ್ತಕರಲ್ಲಿ ಒಬ್ಬರಾಗಿದ್ದಾರೆ. ಹಲವು ನಿಯತಕಾಲಿಕೆಗಳನ್ನು ಅವರು ಪ್ರಕಟಿಸಿದರು. ಒಟ್ಟಿನಲ್ಲಿ ಅವರು ಜೀವನವಿಡೀ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಿದರು. ಅವರ ಸಮಾಜಮುಖಿ ಕಾರ್ಯಗಳನ್ನು ಮುಂದೆ ದೇವೇಂದ್ರನಾಥ ಟಾಗೋರ್ ಮತ್ತು ಕೇಶವ್‍ಚಂದ್ರ ಸೇನ್ ಮುಂದುವರಿಸಿದರು.

ನಿಮಗೆ ತಿಳಿದಿರಲಿ : `ರಾಜಾ’ ಎಂಬುದು ರಾಮಮೋಹನ ರಾಯ್ ಅವರಿಗೆ ಮೊಗಲ್ ಬಾದಷಹ 1829ರಲ್ಲಿ ನೀಡಿದ ಬಿರುದಾಗಿತ್ತು.

ಪ್ರಾರ್ಥನಾ ಸಮಾಜ (1867)

ಪ್ರಾರ್ಥನಾ ಸಮಾಜವನ್ನು ಆತ್ಮಾರಾಮ್ ಪಾಂಡುರಂಗರು ಮಹಾದೇವ ಗೋವಿಂದ ರಾನಡೆ ಪ್ರಾರಂಭಿಸಿದರು. ಇದು ಬ್ರಹ್ಮ ಸಮಾಜದ ನಂತರ ಮುಂಬೈ ಪ್ರದೇಶದಲ್ಲಿ ಪ್ರಾರಂಭವಾದ ಪ್ರಮುಖ ಸಮಾಜ ಸುಧಾರಣಾ ಸಂಸ್ಥೆ. ಬಾಳಾ ವಾಗಳೆ, ಎನ್.ಜಿ. ಚಂದಾವರ್ಕರ್, ಎಂ.ಜಿ. ರಾನಡೆ ಮತ್ತು ಇತರರು ಇದರ ಪ್ರಮುಖ ನಾಯಕರು. ಇವರು ವಿಧವಾ ವಿವಾಹ, ಅಂತರ್ಜಾತಿ ವಿವಾಹ, ಮಹಿಳೆಯರ ಸ್ಥಾನಮಾನದ ಉನ್ನತೀಕರಣ ಮತ್ತು ಶೋಷಿತ ವರ್ಗದವರ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದರು. ಅಲ್ಲದೆ ನಿರ್ಗತಿಕರಿಗೆ ಮತ್ತು ಅನಾಥರಿಗೆ ಆಶ್ರಮಗಳನ್ನು ಸ್ಥಾಪಿಸಿದರು. ವಿಧವೆಯರ ಉದ್ಧಾರಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದರು.

ಸತ್ಯಶೋಧಕ ಸಮಾಜ (1873)

ಮಹಾತ್ಮ ಜ್ಯೋತಿಬಾ ಫುಲೆ (1827-1890) ರವರಿಂದ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳವಳಿ ಆರಂಭವಾಯಿತು. ಮಹಾರಾಷ್ಟ್ರದ ಕೆಳವರ್ಗದವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಅಸ್ಪ್ರಶ್ಯರು, ಅನಾಥರು ಮತ್ತು ವಿಧವೆಯರಿಗಾಗಿ ಶಾಲೆಗಳನ್ನು ತೆರೆದರು. ಬ್ರಾಹ್ಮಣ ಪುರೋಹಿತಶಾಹಿಯನ್ನು ಖಂಡಿಸಿದ ಅವರು `ಗುಲಾಮಗಿರಿ’ ಎಂಬ ಕೃತಿಯನ್ನು ರಚಿಸಿ ತಮ್ಮ ಚಿಂತನೆಗಳನ್ನು ಸಂವಾದದ ರೂಪದಲ್ಲಿ ವಿವರಿಸಿದರು. ಪತ್ನಿ ಸಾವಿತ್ರಿಬಾಯಿಯ ಜೊತೆಗೂಡಿ ಪುಣೆಯಲ್ಲಿ ಬಾಲಕಿಯರ ಶಾಲೆಯನ್ನು ಆರಂಭಿಸಿದರು. ಬಾಲ ವಿಧವೆಯರಿಗೆ 1863ರಲ್ಲಿ ಪುನರ್‍ವಸತಿ ಕೇಂದ್ರವನ್ನು ತೆರೆಯುವ ಮೂಲಕ ನಡೆಯುತ್ತಿದ್ದ ಶಿಶುಹತ್ಯೆ ಪ್ರಕರಣಗಳನ್ನು ಕೊನೆಗಾಣಿಸುವ ಪ್ರಯತ್ನ ಮಾಡಿದರು. ವಿಧವಾ ವಿವಾಹವನ್ನು ಉತ್ತೇಜಿಸಿದರು. ವಾಸ್ತವವಾಗಿ ಫುಲೆ ಅವರನ್ನು ಬಿ.ಆರ್. ಅಂಬೇಡ್ಕರ್ ತಮ್ಮ ತಾತ್ವಿಕ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿದ್ದರು.

ತರುಣ ಬಂಗಾಲಿ ಚಳವಳಿ

ರಾಜಾ ರಾಮಮೋಹನ ರಾಯ್ ಅವರ ಸುಧಾರಣಾ ತುಡಿತ ಬಂಗಾಳದ ಅನೇಕ ಯುವ ಚಿಂತನಶೀಲರನ್ನು ಪ್ರೇರೇಪಿಸಿತು. ಇದು ‘ತರುಣ ಬಂಗಾಲಿ’ ಚಳವಳಿಗೆ ನಾಂದಿಯಾಯಿತು. ಆಂಗ್ಲೋ-ಇಂಡಿಯನ್ ಯುವಕ ಹೆನ್ರಿ ವಿವಿಯನ್ ಡಿರೋಜಿಯೊರವರು ಈ ಚಳವಳಿಯ ನೇತಾರರಾಗಿದ್ದರು. ಸ್ವಂತಿಕೆ ಮತ್ತು ವಿವೇಚನೆಯಿಂದ ಅಲೋಚಿಸುವಂತೆ ಅವರು ಯುವಕರಿಗೆ ಕರೆ ನೀಡಿದರು. ಆದರೆ ಭಾರತೀಯರು ಆ ಸಮಯದಲ್ಲಿ ಅವರ ಕರೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ.

ಆರ್ಯ ಸಮಾಜ (1875)

ಸ್ವಾಮಿ ದಯಾನಂದ ಸರಸ್ವತಿ (1824-1883) ಆರ್ಯ ಸಮಾಜವನ್ನು ಸ್ಥಾಪಿಸಿದರು. ಅವರ ಮೊದಲ ಹೆಸರು ಮೂಲಶಂಕರ ಎಂದಾಗಿತ್ತು. ವೇದಗಳ ಕಾಲದ ಭಾರತದ ಆದರ್ಶ ಸಮಾಜ ಪುನಃ ಸ್ಥಾಪನೆಯಾಗಬೇಕು ಎಂಬುದು ಅವರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ದಯಾನಂದ ಸರಸ್ವತಿಯವರು “ವೇದಗಳಿಗೆ ಹಿಂದಿರುಗಿ” ಎಂದು ಕರೆ ನೀಡಿದರು. ಮೂರ್ತಿಪೂಜೆ, ಅಸ್ಪ್ರಶ್ಯತೆ, ಬಾಲ್ಯವಿವಾಹ ಮತ್ತು ಜಾತಿ ಪದ್ಧತಿಯನ್ನು ಅವರು ಖಂಡಿಸಿದರು. ದಯಾನಂದ ಸರಸ್ವತಿಯವರು ಅಂತರ್ಜಾತೀಯ ಮತ್ತು ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು. ಅಲ್ಲದೆ ಏಕದೇವತಾರಾಧನೆಯನ್ನು ಪ್ರತಿಪಾದಿಸಿದರು.

ದಯಾನಂದ ಸರಸ್ವತಿಯವರು ತಮ್ಮ ವಿಚಾರಧಾರೆಯನ್ನು ಪ್ರಸಿದ್ಧ ಕೃತಿಯಾದ `ಸತ್ಯಾರ್ಥ ಪ್ರಕಾಶ’ದಲ್ಲಿ ಅಭಿವ್ಯಕ್ತಿಸಿದ್ದಾರೆ. ಆರ್ಯ ಸಮಾಜವು ಭಾರತೀಯ ಶಿಕ್ಷಣಾಭಿವೃದ್ದಿಗೆ ಶ್ರಮಿಸಿದ್ದಲ್ಲದೆ, ರಾಷ್ಟ್ರೀಯ ಚಳವಳಿಗೆ ಸ್ಫೂರ್ತಿ ನೀಡಿತು. ಆರ್ಯ ಸಮಾಜದ ನಾಯಕರಾದ ಲಾಲಾ ಹಂಸರಾಜ್ ಅವರು ಲಾಹೋರಿನಲ್ಲಿ “ದಯಾನಂದ ಆಂಗ್ಲೋವೇದಿಕ್ ಶಾಲೆ” (D.A.V.1886) ಯನ್ನು ಸ್ಥಾಪಿಸಿದರು. ತಿಲಕ್, ಲಾಲಾ ಲಜಪತ್ ರಾಯ್‍ರಂತಹ ರಾಷ್ಟ್ರೀಯ ನಾಯಕರು ಆರ್ಯ ಸಮಾಜದ ತತ್ವ ಮತ್ತು ಚಿಂತನೆಗಳಿಂದ ಗಾಢವಾಗಿ ಪ್ರಭಾವಿತರಾದರು. ಮತಾಂತರಗೊಂಡಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವುದಕ್ಕಾಗಿ ದಯಾನಂದರ ಶಿಷ್ಯರಾದ ಶ್ರದ್ಧಾನಂದರು “ಶುದ್ಧಿ ಚಳವಳಿ”ಯನ್ನು ಆರಂಭಿಸಿದರು.

ದಯಾನಂದರು ಕೇವಲ ಜನ್ಮದ ಆಧಾರದಲ್ಲಿ ಬ್ರಾಹ್ಮಣರು ಅಧಿಕಾರ ಪಡೆಯುವುದನ್ನು ತಿರಸ್ಕರಿಸಿದರು. ಸ್ತ್ರೀಯರ ಸಹಿತ ಎಲ್ಲರಿಗೂ ವೇದಗಳನ್ನು ಕಲಿಯುವ ಅಧಿಕಾರವಿದೆಯೆಂದು ಘೋಷಿಸಿದರು. ಗೋಪೂಜೆಯನ್ನು ಪ್ರತಿಪಾದಿಸಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ ಆರ್ಯ ಸಮಾಜವು ಸ್ವರಾಜ್ಯ ಮತ್ತು ಸ್ವದೇಶಿ ಭಾವನೆಯನ್ನು ಪ್ರಚೋದಿಸಿದ ಒಂದು ಆಂದೋಲನವಾಗಿತ್ತು.

ರಾಮಕೃಷ್ಣ ಮಿಷನ್ (1897)

“ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ”. ಇದು ಸ್ವಾಮಿ ವಿವೇಕಾನಂದರು ಭಾರತೀಯ ಯುವಜನತೆಗೆ ನೀಡಿದ ಕರೆ. ಇವರ ಮೊದಲ ಹೆಸರು ನರೇಂದ್ರನಾಥ ದತ್ತ. ಇವರು ಕೊಲ್ಕತಾಯಲ್ಲಿ 1863 ಜನವರಿ 12ರಂದು ಜನಿಸಿದರು. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಇವರು ತದನಂತರದಲ್ಲಿ ಸಂನ್ಯಾಸತ್ವ ಸ್ವೀಕರಿಸಿದರು. ರಾಮಕೃಷ್ಣರ ಮರಣದ ನಂತರ ಅವರ ಶಿಷ್ಯರನ್ನು ಒಗ್ಗೂಡಿಸಿ ಮಾರ್ಗದರ್ಶನ ನೀಡುವ ಜವಾಬ್ದಾರಿ ನರೇಂದ್ರನಾಥ ದತ್ತರ ಹೆಗಲ ಮೇಲೆ ಬಿತ್ತು. 1892ರಲ್ಲಿ ಖೇತ್ರಿಯ ರಾಜರ ಸಲಹೆಯ ಮೇರೆಗೆ ನರೇಂದ್ರನಾಥ ದತ್ತರ ಹೆಸರು ಸ್ವಾಮಿ ವಿವೇಕಾನಂದ ಎಂದು ನಾಮಕರಣವಾಯಿತು. ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ಪ್ರಥಮ ವಿಶ್ವ ಧರ್ಮ ಸಮ್ಮೇಳನದಲ್ಲಿ (1893) ಅವರು ಹಿಂದೂ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಅಲ್ಲಿ ಅವರು ವೇದಾಂತವನ್ನು ಕುರಿತು ಮಾಡಿದ ಭಾಷಣ ಅವರನ್ನು ವಿಶ್ವವಿಖ್ಯಾತರನ್ನಾಗಿಸಿತು. ಪಶ್ಚಿಮ ಸಂಸ್ಪ್ರತಿಯ ಹಲವು ಸಾಧನೆಗಳು, ಮಹಿಳಾ ಸಮಾನತೆಯ ಆಶಯಗಳು ಅವರಿಗೆ ಹಿಡಿಸಿದವು.

ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದ ವಿವೇಕಾನಂದರು ಭಾರತದ ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಕಂಡು ಮರುಗಿದರು. ಎಲ್ಲಿಯವರೆಗೆ ಜನರು ಹಸಿವು, ಬಡತನ ಮತ್ತು ಅಜ್ಞಾನದಲ್ಲಿರುವರೋ ಅಲ್ಲಿಯವರೆಗೆ ನಾನು ಮತ್ತೆ ಮತ್ತೆ ಜನ್ಮತಾಳಿ ಅದನ್ನು ಹೋಗಲಾಡಿಸಲು ಶ್ರಮಿಸುತ್ತೇನೆ ಎನ್ನುತ್ತಿದ್ದರು.

ಪಂಡಿತ ಈಶ್ವರಚಂದ್ರ ವಿದ್ಯಾಸಾಗರರವರು ಬ್ರಾಹ್ಮಣೇತರ ವಿದ್ಯಾರ್ಥಿಗಳಿಗಾಗಿ ಸಂಸ್ಕೃತ ಕಾಲೇಜನ್ನು ತೆರೆದರು. 1856ರಲ್ಲಿ ಮೊದಲಬಾರಿಗೆ ಮೇಲ್ವರ್ಗದಲ್ಲಿ ಕಾನೂನುಬದ್ಧ ವಿಧವಾ ಪುನರ್‍ವಿವಾಹವು ಕೊಲ್ಕತಾದಲ್ಲಿ ವಿದ್ಯಾಸಾಗರರ ನೇತೃತ್ವದಲ್ಲಿ ನಡೆಯಿತು.

ಮಾನವಹಿತ ಮತ್ತು ಸಮಾಜ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಅವರು ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಸ್ತ್ರೀಯರ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವ ಹೊಂದಿದ ಸ್ವಾಮೀಜಿಯವರು, “ಸ್ತ್ರೀಯರ ಉದ್ಧಾರ ನಮ್ಮ ರಾಷ್ಟ್ರದ ಉದ್ಧಾರ” ಎಂದು ಒತ್ತಿಹೇಳಿದರು. `ದರಿದ್ರ ನಾರಾಯಣ’ರ (ಬಡವರ) ಸೇವೆಗೆ ಕರೆನೀಡಿದರು. ಒಟ್ಟಾರೆ ಭಾರತದ ಉನ್ನತಿಯ ಕನಸನ್ನು ಕಂಡರು.

ಸ್ವಾಮಿ ವಿವೇಕಾನಂದರನ್ನು ಬಾಲ ಗಂಗಾಧರ ತಿಲಕರು `ಭಾರತದ ರಾಷ್ಟ್ರೀಯತೆಯ ನಿಜವಾದ ಪಿತಾಮಹ’ ಎಂದು ಬಣ್ಣಿಸಿದ್ದಾರೆ. ಸುಭಾಷಚಂದ್ರ ಬೋಸರನ್ನು ಒಳಗೊಂಡಂತೆ ಅನೇಕ ರಾಷ್ಟ್ರೀಯ ಹೋರಾಟಗಾರರು ಇವರ ಬರವಣಿಗೆಗಳಿಂದ ಪ್ರೇರಣೆಗೊಂಡರು.

ಸ್ವಾಮಿ ವಿವೇಕಾನಂದರು ವಿಶ್ವ ಧರ್ಮಸಮ್ಮೇಳನಕ್ಕೆ ಹೋಗುವ ಮುನ್ನ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದರು. ವಿವೇಕಾನಂದರನ್ನು ತಮ್ಮ ಅರಮನೆಗೆ ಆಹ್ವಾನಿಸಿದ 10ನೇ ಚಾಮರಾಜ ಒಡೆಯರ್ ಅವರು ಸಮ್ಮೇಳನಕ್ಕೆ ಹೋಗಲು ಧನಸಹಾಯ ನೀಡಿದರು. ವಿವೇಕಾನಂದರ ಸಲಹೆ ಮೇರೆ ದಲಿತರಿಗೆ ಮೂರು ಪ್ರತ್ಯೇಕ ಶಾಲೆಗಳನ್ನು ಮೈಸೂರು ಒಡೆಯರ್ ತೆರೆದರು.

ಥಿಯಸಾಫಿಕಲ್ ಸೊಸೈಟಿ (1875)

ಥಿಯಸಾಫಿಕಲ್ ಸೊಸೈಟಿ (ಬ್ರಹ್ಮವಿದ್ಯಾ ಸಮಾಜ)ಯನ್ನು ರಷ್ಯನ್ ಮಹಿಳೆ ಮ್ಯಾಡಂ ಎಚ್.ಪಿ. ಬ್ಲಾವಟ್‍ಸ್ಕಿ ಮತ್ತು ಅಮೆರಿಕದ ಕರ್ನಲ್ ಎಚ್.ಎಸ್. ಆಲ್ಕಾಟ್ ಇವರು ನ್ಯೂಯಾರ್ಕ್‍ನಲ್ಲಿ ಸ್ಥಾಪಿಸಿದರು. ಭಾರತಕ್ಕೆ ಆಗಮಿಸಿ ಚೆನ್ನೈ ಬಳಿಯ ಅಡಯಾರ್ ಎಂಬ ಸ್ಥಳದಲ್ಲಿ ಸೊಸೈಟಿಯ ಅಂತರ್‍ರಾಷ್ಟ್ರೀಯ ಕೇಂದ್ರವನ್ನು ಆರಂಭಿಸಿದರು ನಂತರ ಡಾ. ಆ್ಯನಿ ಬೆಸೆಂಟ್ ಇದರ ಅಧ್ಯಕ್ಷರಾಗಿದ್ದರು. ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದ ಅವರು ಭಗವದ್ಗೀತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದರು. `ನ್ಯೂ ಇಂಡಿಯಾ’ ಮತ್ತು `ಕಾಮನ್‍ವೆಲ್ತ್’ ಎಂಬ ಪತ್ರಿಕೆಗಳನ್ನು ಹೊರಡಿಸಿದರು. ಭಾರತದಲ್ಲಿ ಥಿಯಸಾಫಿಕಲ್ ಚಳವಳಿಯ ಕೇಂದ್ರ ಶಕ್ತಿಯಾಗಿ ಮುನ್ನಡೆಸಿದರು.

ಮ್ಯಾಡಂ ಎಚ್.ಪಿ. ಬ್ಲಾವಟ್‍ಸ್ಕಿ

ಡಾ. ಆ್ಯನಿ ಬೆಸೆಂಟ್

ಥಿಯಸಾಫಿಕಲ್ ಸೊಸೈಟಿಯ ಉದ್ದೇಶಗಳೆಂದರೆ:

1. ಭೇದವೆಲ್ಲವ ಬಿಟ್ಟು ವಿಶ್ವ ಭಾತೃತ್ವವನ್ನು ನೆಲೆಗೊಳಿಸುವುದು.

2. ಧರ್ಮ, ತತ್ತ್ವಶಾಸ್ತ್ರ ಮತ್ತು ವಿಜ್ಞಾನ ಇವುಗಳ ತುಲನಾತ್ಮಕ ಅಧ್ಯಯನ ನಡೆಸುವುದು.

3. ಪ್ರಕೃತಿಯ ನಿಗೂಢ ತತ್ವಗಳು ಮತ್ತು ಮನುಷ್ಯನಲ್ಲಿ ಅಡಗಿರುವ ಸುಪ್ತಶಕ್ತಿಗಳನ್ನು ಕುರಿತು ಶೋಧ ನಡೆಸುವುದು.

ಆ್ಯನಿ ಬೆಸೆಂಟ್ ಬನಾರಸ್‍ನಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಿದರು. ಇದೇ ಮುಂದೆ ಬನಾರಸ್ ಹಿಂದೂ ಯುನಿವರ್ಸಿಟಿ (B.H.U.) ಎಂಬ ಹೆಸರನ್ನು ಪಡೆಯಿತು. ಅವರು ಮುಂದೆ ಹೋಂರೂಲ್ ಚಳವಳಿಯನ್ನು ಸಹ ಆರಂಭಿಸಿದರು. ಹಾಗೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. (1917)

ಅಲಿಘರ್ ಚಳವಳಿ ಮತ್ತು ಸರ್ ಸಯ್ಯದ್ ಅಹ್ಮದ್‍ಖಾನ್

ಬಹುತೇಕ ಮುಸ್ಲಿಮರು ಪಾಶ್ಚಾತ್ಯ ಶಿಕ್ಷಣವನ್ನು ಸರ್ ಸಯ್ಯದ್ ಅಹ್ಮದ್ ಖಾನ್ ಸಂಶಯದಿಂದ ನೋಡುತ್ತಿದ್ದರು ಮತ್ತು ತಮ್ಮ ಧರ್ಮ ಹಿತಾಸಕ್ತಿಗೆ ಮಾರಕವೆಂದು ನಂಬಿದ್ದರು. ಆರಂಭದಲ್ಲಿ ನವಾಬ್ ಅಬ್ದುಲ್ ಲತೀಫರು 1863ರಲ್ಲಿ `ಮಹಮಡನ್ ಲಿಟರರಿ ಸೊಸೈಟಿ’ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಮುಸ್ಲಿಮರಲ್ಲಿ ಇಂಗ್ಲಿಷ್ ಶಿಕ್ಷಣ ವಿಸ್ತರಿಸಲು ಪ್ರಯತ್ನಿಸಿದರು. ಜೊತೆಗೆ ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯ ತರುವ ಪ್ರಯತ್ನ ಮಾಡಿದರು. ಈ ಪ್ರಯತ್ನಕ್ಕೆ ಚಳವಳಿಯ ಸ್ವರೂಪ ನೀಡಿದವರು ಸರ್ ಸಯ್ಯದ್ ಅಹ್ಮದ್ ಖಾನ್. 1817ರಲ್ಲಿ ದಿಲ್ಲಿಯಲ್ಲಿ ಜನಿಸಿದ ಇವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ನೇಮಕಗೊಂಡರು. ತನ್ನ ಸಮುದಾಯ ಇಂಗ್ಲಿಷ್ ಶಿಕ್ಷಣದಿಂದ ವಂಚಿತರಾಗಿ ಆರ್ಥಿಕ ಹಾಗೂ ಸಾಮಾಜಿಕ ಅವಕಾಶಗಳನ್ನು ಕಳೆದುಕೊಂಡಿದ್ದಾರೆ ಎಂದು ಭಾವಿಸಿದರು. ಶಿಕ್ಷಣವನ್ನು ಪಡೆಯುವ ಮೂಲಕ ಸರ್ಕಾರದಲ್ಲಿ ಮುಸ್ಲಿಂ ಸಮುದಾಯ ಸೂಕ್ತ ಪ್ರಾತಿನಿಧ್ಯ ಪಡೆಯಬೇಕೆಂಬುದು ಅವರ ಮಹದಾಸೆಯಾಗಿತ್ತು.

ಅಂತೆಯೇ ಒಬ್ಬ ಸಮಾಜ ಸುಧಾರಕರಾಗಿ ಪರ್ದಾಪದ್ಧತಿ, ಬಹುಪತ್ನಿತ್ವ ಹಾಗೂ ವಿವಾಹ ವಿಚ್ಛೇದನ ಪದ್ಧತಿಗಳನ್ನು ವಿರೋಧಿಸಿದರು. ಇಂಗ್ಲಿಷಿನ ವೈಜ್ಞಾನಿಕ ಮತ್ತು ಸಾಹಿತ್ಯಕ ಕೃತಿಗಳನ್ನು ಉರ್ದುವಿಗೆ ಭಾಷಾಂತರಿಸಲು `ಟ್ರಾನ್ಸ್‍ಲೇಷನ್ ಸೊಸೈಟಿ’ಯನ್ನು ಪ್ರಾರಂಭಿಸಿದರು. ಅನಂತರದಲ್ಲಿ ಈ ಸಂಸ್ಥೆ `ಸೈಂಟಿಫಿಕ್ ಸೊಸೈಟಿ’ ಎಂದು ನಾಮಕರಣಗೊಂಡಿತು. ವೈಜ್ಞಾನಿಕ ಆಲೋಚನೆಗಳನ್ನು ಮುಸ್ಲಿಮರಲ್ಲಿ ಪ್ರಚಾರ ಪಡಿಸಲು `ಅಲಿಘರ್ ಇನ್ಸ್‍ಟಿಟ್ಯುಟ್ ಗೆಝೆಟ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು.

1875ರಲ್ಲಿ ಮಹಮಡನ್ ಆಂಗ್ಲೊ ಓರಿಯಂಟಲ್ ಕಾಲೇಜನ್ನು ಆರಂಭಿಸಿದರು. ಈ ಸಂಸ್ಥೆಯೇ 1920ರಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವಾಗಿ ಮಾರ್ಪಟ್ಟಿತು.

ಶ್ರೀ ನಾರಾಯಣಗುರು

ಶ್ರೀ ನಾರಾಯಣಗುರು ಓರ್ವ ಪ್ರಮುಖ ಸಂತ ಮತ್ತು ಸಮಾಜ ಸುಧಾರಕರಾಗಿ ಪ್ರಸಿದ್ಧಿ ಹೊಂದಿದ್ದಾರೆ. ಅವರು 1854ರಲ್ಲಿ ತಿರುವಾಂಕೂರಿನ `ಏಳವ’ ಸಮುದಾಯದ ಕುಟುಂಬವೊಂದರಲ್ಲಿ ಜನಿಸಿದರು. “ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ” ಎಂಬ ಸಂಸ್ಥೆಯನ್ನು 1903ರಲ್ಲಿ ಸ್ಥಾಪಿಸಿದರು. ಅದರ ಮೂಲಕ ಅವರು ಕೇರಳದ ಏಳವರು ಸೇರಿದಂತೆ ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಗತಿಗಾಗಿ ಶ್ರಮಿಸಿದರು. ಜಾತಿ ಪದ್ಧತಿ, ಪ್ರಾಣಿಬಲಿಯನ್ನು ವಿರೋಧಿಸಿದರು. ಸಂಸ್ಕೃತ ಶಾಲೆಗಳನ್ನು ತೆರೆದು ಅಲ್ಲಿ ಜಾತಿಮತ ಭೇದರಹಿತವಾಗಿ ಎಲ್ಲರಿಗೂ ಪ್ರವೇಶ ನೀಡಿದರು. ಅವರು ಸುಮಾರು ಮೂವತ್ತು ದೇವಸ್ಥಾನಗಳನ್ನು ನಿರ್ಮಿಸಿದರು. ಕೇರಳದ ಅಸ್ಪ್ರಶ್ಯರೂ ಸೇರಿದಂತೆ ಎಲ್ಲಾ ಜಾತಿಯವರಿಗೂ ಪ್ರವೇಶ ಕಲ್ಪಿಸಿದರು. ದೇವಾಲಯಗಳಲ್ಲಿ ಎಲ್ಲ ಮತಧರ್ಮಗಳ ಗ್ರಂಥಗಳನ್ನು ಒಳಗೊಂಡ ಉತ್ತಮ ಗ್ರಂಥಾಲಯ ಇರಬೇಕೆಂದು ಬಯಸಿದರು. ಶ್ರೀ ನಾರಾಯಣಗುರು ಅವರ ಆಶಯವು ಈ ಹೇಳಿಕೆಯಲ್ಲಿ ವ್ಯಕ್ತವಾಗುತ್ತದೆ: “ಒಬ್ಬ ದೇವರು, ಒಂದು ಧರ್ಮ ಮತ್ತು ಒಂದು ಜಾತಿ” (One God, One Religion and One Caste). ಇವರ ಪ್ರಭಾವ ಕರ್ನಾಟಕದ ಮೇಲೂ ಉಂಟಾಗಿರುವುದನ್ನು ಗಮನಿಸಬಹುದು. ನಾರಾಯಣಗುರು ಅವರು 1928ರಲ್ಲಿ ನಿಧನರಾದರು.

ಚಟುವಟಿಕೆ

ಮಹಾದೇವ ಗೋವಿಂದ ರಾನಡೆ, ಜ್ಯೋತಿಬಾ ಫುಲೆ, ರಾಜಾ ರಾಮ ಮೋಹನ ರಾಮ್, ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ, ಸರ್ ಸಯ್ಯದ್ ಅಹ್ಮದ್ ಖಾನ್ ಮತ್ತು ಶ್ರೀ ನಾರಾಯಣಗುರು ಇವರ ಜೀವನ ಚರಿತ್ರೆಯನ್ನು ಓದಿರಿ.

ಮಹಾದೇವ ಗೋವಿಂದ ರಾನಡೆ

(ಮಾಹಿತಿ ವಿಕಿಪೀಡಿಯಾದಿಂದ..)

ರಾವ್ ಬಹದ್ದೂರ್
ಮಹಾದೇವ ಗೋವಿಂದ ರಾನಡೆ
ಹುಟ್ಟು18 ಜನವರಿ 1842
ನಿಫಾದ್ , ನಾಸಿಕ್ ಜಿಲ್ಲೆ , ಬಾಂಬೆ ಪ್ರೆಸಿಡೆನ್ಸಿ , ಬ್ರಿಟಿಷ್ ಇಂಡಿಯಾ (ಈಗ ಮಹಾರಾಷ್ಟ್ರ , ಭಾರತ )
ನಿಧನರಾದರು16 ಜನವರಿ 1901 (ವಯಸ್ಸು 58)
ಬಾಂಬೆ ಪ್ರೆಸಿಡೆನ್ಸಿ , ಬ್ರಿಟಿಷ್ ಇಂಡಿಯಾ (ಈಗ ಮಹಾರಾಷ್ಟ್ರ , ಭಾರತ )
ಪೌರತ್ವಬ್ರಿಟಿಷ್ ಭಾರತೀಯ
ಅಲ್ಮಾ ಮೇಟರ್ಬಾಂಬೆ ವಿಶ್ವವಿದ್ಯಾಲಯ
ಉದ್ಯೋಗ(ಗಳು)ವಿದ್ವಾಂಸ, ಸಮಾಜ ಸುಧಾರಕ, ಲೇಖಕ
ಹೆಸರುವಾಸಿಯಾಗಿದೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಹ-ಸಂಸ್ಥಾಪಕರು
ಶೀರ್ಷಿಕೆರಾವ್ ಬಹದ್ದೂರ್
ರಾಜಕೀಯ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿಯರಮಾಬಾಯಿ ರಾನಡೆ

ರಾವ್ ಬಹದ್ದೂರ್ ಮಹಾದೇವ್ ಗೋವಿಂದ್ ರಾನಡೆ (18 ಜನವರಿ 1842 – 16 ಜನವರಿ 1901), ಜನಪ್ರಿಯವಾಗಿ ನ್ಯಾಯಮೂರ್ತಿ ರಾನಡೆ ಅಥವಾ ನ್ಯಾಯಮೂರ್ತಿ ರಾನಡೆ ಎಂದು ಕರೆಯುತ್ತಾರೆ , ಅವರು ಭಾರತೀಯ ವಿದ್ವಾಂಸರು, ಸಮಾಜ ಸುಧಾರಕರು , ನ್ಯಾಯಾಧೀಶರು ಮತ್ತು ಲೇಖಕರಾಗಿದ್ದರು . ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು ಮತ್ತು ಬಾಂಬೆ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯ ಮತ್ತು ಕೇಂದ್ರದಲ್ಲಿ ಹಣಕಾಸು ಸಮಿತಿಯ ಸದಸ್ಯನಂತಹ ಹಲವಾರು ಪದನಾಮಗಳನ್ನು ಹೊಂದಿದ್ದರು. ಅವರು ಮಹಾರಾಷ್ಟ್ರದ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರೂ ಆಗಿದ್ದರು .

ಪ್ರಸಿದ್ಧ ಸಾರ್ವಜನಿಕ ವ್ಯಕ್ತಿಯಾಗಿ, ಶಾಂತ ಮತ್ತು ತಾಳ್ಮೆಯ ಆಶಾವಾದಿಯಾಗಿ ಅವರ ವ್ಯಕ್ತಿತ್ವವು ಬ್ರಿಟನ್‌ನೊಂದಿಗಿನ ವ್ಯವಹರಣೆ ಮತ್ತು ಭಾರತದಲ್ಲಿನ ಸುಧಾರಣೆಯ ಬಗ್ಗೆ ಅವರ ಮನೋಭಾವವನ್ನು ಪ್ರಭಾವಿಸಿತು. ಅವರ ಜೀವಿತಾವಧಿಯಲ್ಲಿ ಅವರು ಪೂನಾ ಸರ್ವಜನಿಕ ಸಭಾ , ಮಹಾರಾಷ್ಟ್ರ ಗ್ರಂಥೋತ್ತೇಜಕ ಸಭಾ ಮತ್ತು ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಲು ಸಹಾಯ ಮಾಡಿದರು . ಅವರು ಬಾಂಬೆ ಆಂಗ್ಲೋ-ಮರಾಠಿ ದೈನಿಕ ಪತ್ರಿಕೆಯನ್ನು ಸಂಪಾದಿಸಿದ್ದಾರೆ – ದಿ ಇಂದೂಪ್ರಕಾಶ್ , ಅವರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯ ಸಿದ್ಧಾಂತದ ಮೇಲೆ ಸ್ಥಾಪಿಸಲಾಯಿತು.

ಅವರಿಗೆ ರಾವ್ ಬಹದ್ದೂರ್ ಎಂಬ ಬಿರುದು ನೀಡಲಾಯಿತು .


ಆರಂಭಿಕ ಜೀವನ ಮತ್ತು ಕುಟುಂಬ

ಮಹಾದೇವ ಗೋವಿಂದ್ ರಾನಡೆಯವರು ನಾಸಿಕ್ ಜಿಲ್ಲೆಯ ನಿಫಾಡ್ ಎಂಬ ತಾಲೂಕಿನ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು . ಅವರು ಕೊಲ್ಲಾಪುರದ ಮರಾಠಿ ಶಾಲೆಯಲ್ಲಿ ಓದಿದರು ಮತ್ತು ನಂತರ ಆಂಗ್ಲ-ಮಾಧ್ಯಮ ಶಾಲೆಗೆ ಸ್ಥಳಾಂತರಗೊಂಡರು. 14 ನೇ ವಯಸ್ಸಿನಲ್ಲಿ, ಅವರು ಬಾಂಬೆಯ ಎಲ್ಫಿನ್‌ಸ್ಟೋನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು ಬಾಂಬೆ ವಿಶ್ವವಿದ್ಯಾನಿಲಯದ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಸೇರಿದವರು. 1862 ರಲ್ಲಿ, ಅವರು ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಬಿಎ ಪದವಿಯನ್ನು ಪಡೆದರು ಮತ್ತು 1864 ರಲ್ಲಿ ಇತಿಹಾಸದಲ್ಲಿ ಎಂಎ ಪಡೆದರು. ಮೂರು ವರ್ಷಗಳ ನಂತರ, ಅವರು 1866 ರಲ್ಲಿ ತಮ್ಮ LLB ಪಡೆದರು.


ನ್ಯಾಯಾಧೀಶರು

1866 ರಲ್ಲಿ ಕಾನೂನು ಪದವಿಯನ್ನು ( LLB ) ಪಡೆದ ನಂತರ, ರಾನಡೆ 1871 ರಲ್ಲಿ ಪುಣೆಯಲ್ಲಿ ಅಧೀನ ನ್ಯಾಯಾಧೀಶರಾದರು . ಅವರ ರಾಜಕೀಯ ಚಟುವಟಿಕೆಗಳನ್ನು ಪರಿಗಣಿಸಿ, ಬ್ರಿಟಿಷ್ ವಸಾಹತುಶಾಹಿ ಅಧಿಕಾರಿಗಳು 1895 ರವರೆಗೆ ಬಾಂಬೆ ಹೈಕೋರ್ಟ್‌ಗೆ ಬಡ್ತಿಯನ್ನು ವಿಳಂಬಗೊಳಿಸಿದರು.


ಸಾಮಾಜಿಕ ಕ್ರಿಯಾಶೀಲತೆ

ರಾನಡೆ ಅವರು ಪ್ರಗತಿಪರ ಸಾಮಾಜಿಕ ಕಾರ್ಯಕರ್ತರಾಗಿದ್ದರು , ಅವರ ಚಟುವಟಿಕೆಗಳು ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ವಸಾಹತುಶಾಹಿ ರಾಜ್ಯದಿಂದ ಆಳವಾಗಿ ಪ್ರಭಾವಿತವಾಗಿವೆ. ಅವರ ಚಟುವಟಿಕೆಗಳು ಧಾರ್ಮಿಕ ಸುಧಾರಣೆಯಿಂದ ಸಾರ್ವಜನಿಕ ಶಿಕ್ಷಣದವರೆಗೆ ಭಾರತೀಯ ಕುಟುಂಬದಲ್ಲಿ ಸುಧಾರಣೆಯವರೆಗೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ, ಅವರು ಭಾರತೀಯ ಸಂಪ್ರದಾಯ ಮತ್ತು ಸಂಪ್ರದಾಯದಲ್ಲಿ ಸ್ವಲ್ಪ ಸದ್ಗುಣವನ್ನು ಕಾಣುವ ಪ್ರವೃತ್ತಿಯನ್ನು ಹೊಂದಿದ್ದರು ಮತ್ತು ವಿಷಯವನ್ನು ಚಾಲ್ತಿಯಲ್ಲಿರುವ ಅಚ್ಚಿನಲ್ಲಿ ಮರುರೂಪಿಸಲು ಶ್ರಮಿಸಿದರು. ಪಶ್ಚಿಮ. ಅವರು ಸ್ವತಃ ಭಾರತೀಯ ಸಮಾಜ ಸುಧಾರಣಾ ಚಳವಳಿಯ ಧ್ಯೇಯವನ್ನು “ಮಾನವೀಯಗೊಳಿಸುವುದು, ಸಮೀಕರಿಸುವುದು ಮತ್ತು ಆಧ್ಯಾತ್ಮಿಕಗೊಳಿಸುವುದು” ಎಂದು ಸಂಕ್ಷಿಪ್ತಗೊಳಿಸಿದರು, ಅಸ್ತಿತ್ವದಲ್ಲಿರುವ ಭಾರತೀಯ ಸಮಾಜವು ಈ ಗುಣಗಳನ್ನು ಹೊಂದಿಲ್ಲ ಎಂಬುದು ಇದರ ಅರ್ಥವಾಗಿದೆ.

ಸ್ತ್ರೀ ವಿಮೋಚನೆ

ಭಾರತೀಯ ಸಮಾಜವನ್ನು “ಮಾನವೀಕರಿಸಲು ಮತ್ತು ಸಮೀಕರಿಸಲು” ಅವರ ಪ್ರಯತ್ನಗಳು ಮಹಿಳೆಯರಲ್ಲಿ ಅದರ ಪ್ರಾಥಮಿಕ ಗಮನವನ್ನು ಕಂಡುಕೊಂಡವು. ಅವರು ‘ ಪರ್ದಾ ವ್ಯವಸ್ಥೆ ‘ (ಮಹಿಳೆಯರನ್ನು ಮುಸುಕಿನ ಹಿಂದೆ ಇಡುವುದು) ವಿರುದ್ಧ ಪ್ರಚಾರ ಮಾಡಿದರು. ಅವರು ಸೋಶಿಯಲ್ ಕಾನ್ಫರೆನ್ಸ್ ಆಂದೋಲನದ ಸಂಸ್ಥಾಪಕರಾಗಿದ್ದರು, ಅವರು ಸಾಯುವವರೆಗೂ ಬೆಂಬಲಿಸಿದರು, ಬಾಲ್ಯವಿವಾಹ , ವಿಧವೆಯರ ದೌರ್ಜನ್ಯ , ಮದುವೆಗಳು ಮತ್ತು ಇತರ ಸಾಮಾಜಿಕ ಕಾರ್ಯಗಳ ಭಾರೀ ವೆಚ್ಚ ಮತ್ತು ವಿದೇಶ ಪ್ರವಾಸದ ಮೇಲಿನ ಜಾತಿ ನಿರ್ಬಂಧಗಳ ವಿರುದ್ಧ ಅವರ ಸಾಮಾಜಿಕ ಸುಧಾರಣೆಯ ಪ್ರಯತ್ನಗಳನ್ನು ನಿರ್ದೇಶಿಸಿದರು. ವಿಧವಾ ಪುನರ್ವಿವಾಹ ಮತ್ತು ಸ್ತ್ರೀ ಶಿಕ್ಷಣವನ್ನು ಅವರು ತೀವ್ರವಾಗಿ ಪ್ರತಿಪಾದಿಸಿದರು. 1861 ರಲ್ಲಿ, ಅವರು ಇನ್ನೂ ಹದಿಹರೆಯದವರಾಗಿದ್ದಾಗ, ರಾನಡೆ ಅವರು ‘ವಿಧವೆ ವಿವಾಹ ಸಂಘ’ವನ್ನು ಸಹ-ಸ್ಥಾಪಿಸಿದರು. ಇದು ಹಿಂದೂ ವಿಧವೆಯರ ವಿವಾಹವನ್ನು ಉತ್ತೇಜಿಸಿತು ಮತ್ತು ಅಂತಹ ವಿವಾಹಗಳನ್ನು ಅನುಮತಿಸುವ ಕಾನೂನನ್ನು ಅಂಗೀಕರಿಸುವ ವಸಾಹತುಶಾಹಿ ಸರ್ಕಾರದ ಯೋಜನೆಗೆ ಸ್ಥಳೀಯ ಒಡನಾಡಿಗಳಾಗಿ ಕಾರ್ಯನಿರ್ವಹಿಸಿತು. ಅವರು ತಮ್ಮ ಅಭಿಪ್ರಾಯಗಳನ್ನು ಒತ್ತಾಯಿಸುವ ಬದಲು ಪಂಚ-ಹೌದ್ ಮಿಷನ್ ಪ್ರಕರಣದಲ್ಲಿ ಪ್ರಾಯಶ್ಚಿತ್ತವನ್ನು (ಧಾರ್ಮಿಕ ತಪಸ್ಸು) ತೆಗೆದುಕೊಳ್ಳಲು ನಿರ್ಧರಿಸಿದರು.

ವೈಯಕ್ತಿಕ ಜೀವನ

ರಾನಡೆ ಅವರ ಮೊದಲ ಪತ್ನಿ ತೀರಿಕೊಂಡಾಗ ಅವರಿಗೆ 30 ವರ್ಷ. ಅವನ ಕುಟುಂಬವು ಅವನನ್ನು ಮರುಮದುವೆ ಮಾಡಲು ಬಯಸಿತು, ವಿಶೇಷವಾಗಿ ಅವನಿಗೆ ಮಕ್ಕಳಿಲ್ಲದ ಕಾರಣ. 1861ರಷ್ಟು ಹಿಂದೆಯೇ ‘ವಿಧವೆ ವಿವಾಹ ಸಂಘ’ವನ್ನು ಸಹ-ಸಂಸ್ಥಾಪಿಸಿದ್ದ ಅವರು ತಮ್ಮ ಸ್ವಂತ ಧರ್ಮೋಪದೇಶದ ಪ್ರಕಾರ ನಡೆದುಕೊಂಡು ವಿಧವೆಯನ್ನು ಮದುವೆಯಾಗಬೇಕೆಂದು ಅವರ ಸುಧಾರಕ ಸ್ನೇಹಿತರು ನಿರೀಕ್ಷಿಸಿದ್ದರು. ಆದಾಗ್ಯೂ, ರಾನಡೆಯವರು ತಮ್ಮ ಕುಟುಂಬದ ಇಚ್ಛೆಗೆ ಮಣಿದರು ಮತ್ತು ಕೇವಲ ಹನ್ನೊಂದು ವರ್ಷ ವಯಸ್ಸಿನ ಮತ್ತು ಇಪ್ಪತ್ತು ವರ್ಷಗಳು ಚಿಕ್ಕವಳಾದ ರಮಾಬಾಯಿಯನ್ನು ಮದುವೆಯಾಗಲು ಸಂಪ್ರದಾಯಕ್ಕೆ ಅನುಗುಣವಾಗಿರುತ್ತಾರೆ. ರಾನಡೆಯವರು ತಮ್ಮ ವಿಧವಾ ವಿವಾಹ ಸಂಘವನ್ನು ಸ್ಥಾಪಿಸಿದ ಸುಮಾರು ಒಂದು ವರ್ಷದ ನಂತರ 1862 ರಲ್ಲಿ ರಮಾಬಾಯಿ ಜನಿಸಿದರು. ಅವನು ಈಗಾಗಲೇ ಮದುವೆಯಾದ ಮಹಿಳೆಯನ್ನು ಮದುವೆಯಾದರೆ, ಅವಳಿಗೆ ಜನಿಸಿದ ಮಕ್ಕಳನ್ನು ತನ್ನ ಸಮಾಜದಿಂದ ನ್ಯಾಯಸಮ್ಮತವಲ್ಲದ ಬಹಿಷ್ಕಾರ ಎಂದು ಪರಿಗಣಿಸಬಹುದೆಂದು ಅವನು ನಿರೀಕ್ಷಿಸಿದ್ದರಿಂದ ಅವನು ಮದುವೆಗೆ ಒಪ್ಪಿಕೊಂಡನು. ಈ ಸಂಬಂಧದ ವಿಪರ್ಯಾಸವೆಂದರೆ ರಾನಡೆಯವರು ಅಪಹಾಸ್ಯ ಮತ್ತು ಬೂಟಾಟಿಕೆಗಳ ಆರೋಪಗಳನ್ನು ಎದುರಿಸುತ್ತಿರುವಾಗ, ಅವರ ಉತ್ಕಟ ಬಯಕೆಯು ಈಡೇರಲಿಲ್ಲ: ಅವರ ಎರಡನೇ ಮದುವೆಯೂ ಮಕ್ಕಳಿಲ್ಲದೆ ಉಳಿಯಿತು.

ಸಂಪೂರ್ಣ ಸಂಪ್ರದಾಯದಂತೆ ಮದುವೆ ನಡೆದಿದ್ದು, ಸಂತಸದಿಂದ ಕೂಡಿತ್ತು. ರಾನಡೆಯವರ ಜಾತಿ ಮತ್ತು ಸಾಮಾಜಿಕ ಸ್ತರಕ್ಕೆ ಸೇರಿದ ಕುರ್ಲೇಕರ್ ಕುಟುಂಬದ ಮಗಳು ರಮಾಬಾಯಿ. ದಂಪತಿಗಳು ಸಂಪೂರ್ಣವಾಗಿ ಸಾಮರಸ್ಯ ಮತ್ತು ಸಾಂಪ್ರದಾಯಿಕ ವಿವಾಹವನ್ನು ಹೊಂದಿದ್ದರು. ರಾನಡೆ ಅವರು ತಮ್ಮ ಪತ್ನಿ ಶಿಕ್ಷಣವನ್ನು ಪಡೆಯುವುದನ್ನು ಖಾತ್ರಿಪಡಿಸಿಕೊಂಡರು, ಅವರು ಆರಂಭದಲ್ಲಿ ಉತ್ಸುಕರಾಗಿರಲಿಲ್ಲ. ಆದಾಗ್ಯೂ, ಆ ಕಾಲದ ಎಲ್ಲಾ ಭಾರತೀಯ ಮಹಿಳೆಯರಂತೆ, ಅವಳು ತನ್ನ ಗಂಡನ ಇಚ್ಛೆಗೆ ಅನುಗುಣವಾಗಿ ಮತ್ತು ತನ್ನ ಹೊಸ ಜೀವನದಲ್ಲಿ ಬೆಳೆದಳು. ರಾನಡೆಯವರ ಮರಣದ ನಂತರ, ರಮಾಬಾಯಿ ರಾನಡೆ ಅವರು ಪ್ರಾರಂಭಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣಾ ಕಾರ್ಯವನ್ನು ಮುಂದುವರೆಸಿದರು.

ಜ್ಯೋತಿಬಾ ಫುಲೆ

ಮಹಾತ್ಮ ಜ್ಯೋತಿಬಾ ಫುಲೆ (೧೮೨೭ – ೧೮೯೦) ಅವರು ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು. ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆ ಪಟ್ಟವರು.ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ಕನ್ನಡದಲ್ಲಿರುವ ಬಹುತೇಕ ಕೃತಿಗಳಲ್ಲಿ “ಜ್ಯೋತಿಬಾ ಫುಲೆ” ಎಂಬ ಹೆಸರೆ ಬಳಕೆಯಲ್ಲಿದೆ. ಆದರೆ ಆಂಗ್ಲ ಮತ್ತು ಮರಾಠಿ ಭಾಷೆಗಳಲ್ಲಿ ಅವರ ಹೆಸರು ‘ಜ್ಯೋತಿರಾವ್ ಫುಲೆ’ ಎಂದಿದೆ.

ಹೆಸರಿನ ವಿಶೇಷತೆ

ಮಹಾರಾಷ್ಟ್ರದ ಕೊಲ್ಲಾಪುರದ ಹತ್ತಿರ “ಜ್ಯೋತಿಬಾ” ಹೆಸರಿನ ಒಂದು ದೇವಿ ಗುಡಿ ಗುಡ್ಡದ ಮೇಲಿದೆ. ಅದನ್ನು ‘ಜ್ಯೋತಿಬಾ ಗುಡ್ಡ’ ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಅನೇಕರು ಈ ದೇವಿಯನ್ನು ಕುಲದೇವತೆಯೆಂದು ನಂಬಿದ್ದಾರೆ. ಈ ಗುಡ್ಡದ ಮೇಲೆ (ಮಹಾರಾಷ್ಟ್ರದ ಪಂಚಾಂಗ ರೀತ್ಯಾ) ಚೈತ್ರ ಶುಕ್ಲ ಪೂರ್ಣಿಮೆಯಂದು ಜಾತ್ರೆಯಾಗುತ್ತದೆ. ಆ ದೇವಿಯ ಹೆಸರನ್ನೇ ಸ್ಮರಿಸಿ ಇವರನ್ನು “ಜ್ಯೋತಿಬಾ” ಎಂದು ಕರೆಯಲಾಗಿದೆ. “ಫುಲೆ” ಎಂದರೆ ಸಮುದಾಯದ ಹೆಸರು (ಹೂ ಮಾರುವ ಹೂವಾಡಿಗ). ಜ್ಯೋತಿಬಾ ಫುಲೆಯವರನ್ನು ‘ಜ್ಯೋತಿರಾವ್ ಫುಲೆ’ ಎಂದು ಕರೆಯುವುದು ವಾಡಿಕೆ. ಆದರೆ ‘ರಾವ್’, ‘ರಾಜ’ ಅಥವಾ ‘ರಾಯ’ ಶಬ್ಞ ಸಮಾನಾರ್ಥವಾಗಿದ್ದರೂ ‘ಜ್ಯೋತಿರಾವ್’ ಗಿಂತ ‘ ಜ್ಯೋತಿಬಾ ಫುಲೆ’ ಹೆಸರು ಬಲು ಸುಂದರವಾಗಿದೆ. ಮರಾಠಿ ಭಾಷೆಯಲ್ಲಿ ‘ಬಾ’ ಪ್ರೀತ್ಯಾದಾರ ಸೂಚಕ ಪ್ರತ್ಯಯ.

ಜನನ, ಜೀವನ ಕ್ರಮ

ಏಪ್ರಿಲ್ ೧೧, ೧೮೨೭ ನೇ ಇಸವಿಯಲ್ಲಿ ಮಹಾರಾಷ್ಟ್ರದ ‘ಕಟಗುಣ’ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್, ತಾಯಿ ಚಿಮಣಾಬಾಯಿ. ಜ್ಯೋತಿಬಾ ಜನಿಸಿದ ಕೆಲವೇ ತಿಂಗಳಲ್ಲಿ ಇವರ ತಾಯಿ ಚಿಮಣಾಬಾಯಿ ಕೊನೆಯುಸಿರೆಳೆದರು. ಹಾಗಾಗಿ ಜ್ಯೋತಿಬಾ ಅವರ ಲಾಲನೆ ಪಾಲನೆ ಮಾಡಲು ಚಿಮಣಾಬಾಯಿ ಸೋದರಿ ಸಗುಣಾಬಾಯಿ ಮುಂದಾಗಿ, ಇವರನ್ನು ಸಾಕಿ ಸಲಹುತ್ತಾರೆ. ಸಗುಣಾಬಾಯಿ ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆಯ ಬೀಜಾರ್ಪಣ ಮಾಡಿದರು.

ಆ ಕಾಲದ ಶಿಕ್ಷಣ ವ್ಯವಸ್ಥೆ

ಆ ಕಾಲದಲ್ಲಿ ಮೇಲುಜಾತಿಯವರಿಗೆ ಮಾತ್ರ ಶಿಕ್ಷಣ ಮೀಸಲಾಗಿತ್ತು. ಕೆಲವು ಹಳ್ಳಿಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಪಾಠಶಾಲೆಗಳಿದ್ದುವು. ಆದರೆ ಅಂತಹ ಶಾಲೆಗಳಲ್ಲಿ ವ್ಯಾಪಾರಿಗಳ, ಹಣವಂತರ ಮಕ್ಕಳಿಗೆ ಮಾತ್ರ ಶಿಕ್ಷಣ ಲಭ್ಯವಾಗುತ್ತಿತ್ತು. ಕ್ರೈಸ್ತಪಾದ್ರಿಗಳು ೧೮೨೪ರಿಂದಲೇ ಪುಣೆಯಲ್ಲಿ ಮರಾಠಿಶಾಲೆಯನ್ನು ಶುರು ಮಾಡಿದರು. ನಂತರ ೧೮೩೬ ನೇ ಇಸವಿಯಲ್ಲಿ ಸರ್ಕಾರದ ವತಿಯಿಂದ ಪುಣೆ ಜಿಲ್ಲೆಯಲ್ಲಿ ಹಾಗೂ ಕೆಲವು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡಲಾಯಿತು. ಲಾರ್ಡ್ ಬೆಂಟಿಕ್ ನ ಆಳ್ವಿಕೆಯಲ್ಲಿ ಭಾರತೀಯರಿಗೆ ಪಾಶ್ವಾತ್ಯ ಸಾಹಿತ್ಯ ಮತ್ತು ಶಾಸ್ತ್ರಗಳನ್ನೇ ಬೋಧಿಸುವುದು ಸರ್ಕಾರದ ಮೂಲ ಧ್ಯೇಯವಾಗಬೇಕೆಂದು ಸರ್ಕಾರವು ನಿರ್ಧಾರ ಮಾಡಿತು. ೧೮೩೩ ರಲ್ಲಿ ಪುಣೆಯಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಒಂದು ಪ್ರಯೋಗ ನಡೆಯಿತು.

ವಿದ್ಯಾಭ್ಯಾಸ, ವಿವಾಹ

ಜ್ಯೋತಿಬಾರ ತಂದೆ ಗೋವಿಂದರಾವ್ ಮಗನನ್ನು ಶಾಲೆಗೆ ಸೇರಿಸಿದರು. ಆಗ ಅವರಿಗೆ ಏಳು ವರ್ಷ ವಯಸ್ಸಾಗಿತ್ತು. ಆ ಕಾಲದ ಕೆಲವು ಜನರು ಕ್ರೈಸ್ತಪಾದ್ರಿಗಳ ಶಾಲೆಗಳಲ್ಲಿ ಪ್ರವೇಶ ಪಡೆದರೆ ಮಕ್ಕಳು ಧರ್ಮ ಭ್ರಷ್ಟರಾಗುತ್ತಾರೆಂದು ನಂಬಿದ್ದರು. ಹಾಗಾಗಿ ಜ್ಯೋತಿಬಾ ಶಾಲೆಯನ್ನು ಅರ್ಧಕ್ಕೆ ಬಿಡಬೇಕಾಗಿ ಬರುತ್ತದೆ. ಜ್ಯೋತಿಬಾಗೆ ೧೩ ವರ್ಷವಾದಾಗ ಅವರ ತಂದೆ ಗೋವಿಂದರಾವ್ ಮಗನಿಗೆ ಬಾಲ್ಯವಿವಾಹ ಮಾಡಿಸುತ್ತಾರೆ. ಸತಾರಾ ಜಿಲ್ಲೆಯ ನಾಯಗಾಂವ್ ನಿವಾಸಿ ಶ್ರೀ ನೇವಸೆ ಪಾಟೀಲರ ಮಗಳು ಸಾವಿತ್ರಿಬಾಯಿಯೊಂದಿಗೆ ಜ್ಯೋತಿಬಾ ಅವರ ವಿವಾಹ ವಾಗುತ್ತದೆ. ಆಗ ವಧುವಿಗೆ ಎಂಟು ವರ್ಷ. ಮುಂದೆ ಮುಂಶಿಯವರ ಮಾತಿಗೆ ಬದ್ದರಾದ ಗೋವಿಂದರಾವ್ ಮಗ ಶಿಕ್ಷಣ ಮುಂದುವರಿಸಲು ಅನುಮತಿ ನೀಡುತ್ತಾರೆ. ೧೮೪೧ರಲ್ಲಿ ಜ್ಯೋತಿಬಾ ಅವರನ್ನು ಸ್ಕಾಟಿಶ್ ಮಿಶನ್ ಸ್ಕೂಲಿಗೆ ಸೇರಿಸಲಾಗುತ್ತದೆ. ಆಗ ಅವರಿಗೆ ೧೪ ವರ್ಷ. ಇಂಗ್ಲೀಷ್ ಶಿಕ್ಷಣದ ವಿದ್ಯಾಭ್ಯಾಸ ಅವರ ಜೀವನದ ಮಹತ್ವಪೂರ್ಣ ಘಟ್ಟ. ಜ್ಯೋತಿಬಾ ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ಕೊಟ್ಟು ವಿದ್ಯಾವಂತರಾಗಿ ಮಾಡುತ್ತಾರೆ. ಸಾವಿತ್ರಿಬಾಯಿಗೆ ಮನೆಯೇ ಮೊದಲ ಪಾಠಶಾಲೆ ಗಂಡನೆ ಪರಮಗುರು.

ಸಮಾಜ ಸುಧಾರಣಾ ಕಾರ್ಯಗಳು

ಆ ಕಾಲದಲ್ಲಿ ಜ್ಯೋತಿಬಾ ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು. ಕ್ರಮೇಣ ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಹೈಕೋರ್ಟಿನ ಪ್ರಮುಖ ನ್ಯಾಯಾಧೀಶರು ಆಗಬಹುದಿತ್ತು. ಆದರೆ ಅವರು ಸ್ಥಾಯಿಯಾಗಿ ಉಳಿದದ್ದು ಸಮಾಜ ಸುಧಾರಣಾ ಕಾರ್ಯಗಳಲ್ಲಿ.

 1. ೧೮೪೭ ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ರವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿ ತರಬೇತಿ ಪಡೆದು ಮಹಾರಾಷ್ಟ್ರದ ಮೊಟ್ಟಮೊದಲ ಶಿಕ್ಷಕಿಯಾದರು.
 2. ೧೮೪೮ ರ ಆಗಸ್ಟ್ ತಿಂಗಳಲ್ಲಿ ಜ್ಯೋತಿಬಾ ಪುಣೆಯ ಬುಧವಾರಪೇಟೆಯಲ್ಲಿ ಶ್ರೀ ಭಿಡೆಯವರ ಭವನದಲ್ಲಿ ಕನ್ಯಾಪಾಠಶಾಲೆ ಆರಂಭಿಸಿದರು. ಯಾರ ಹಂಗಿಲ್ಲದೆ ಕನ್ಯಾಪಾಠಶಾಲೆ ಆರಂಭಿಸಿದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
 3. ವಿಧವೆಯರ ಮಕ್ಕಳಿಗಾಗಿ ಅನಾಥಾಲಯ ಸ್ಥಾಪನೆ – ೧೮೬೩
 4. ೧೮೬೪ ರಲ್ಲಿ ವಿಧವಾ ವಿವಾಹ ನೆರವೇರಿಸಿದರು.
 5. ಸತ್ಯಶೋಧಕ ಸಮಾಜದ ಸ್ಥಾಪನೆ – ೧೮೭೩
 6. ರಾಯಗಢದಲ್ಲಿ ಶಿವಾಜಿ ಸಮಾಧಿಯ ಜಿರ್ಣೋದ್ಧಾರ -ಮುಂತಾದುವು.

ರಾಜಾ ರಾಮ ಮೋಹನ ರಾಮ್

ರಾಮ್ ಮೋಹನ್ ರಾಯ್
ರಾಮ್ ಮೋಹನ್ ರಾಯ್ ನವಭಾರತದ ಪ್ರವಾದಿ
ಜನನ೧೪ ಆಗಸ್ಟ್ ೧೭೭೪
ರಾಧಾನಗರ, ಹೂಗ್ಲಿ ಜಿಲ್ಲೆ
ಮರಣSeptember 27, 1833 (aged 59)
ಸ್ಟೆಪ್ಲಿಟನ್ , ಬ್ರಿಸ್ಟೋಲ್
ಮರಣಕ್ಕೆ ಕಾರಣMeningitis
Resting placeಕೊಲ್ಕತ್ತ, ಭಾರತ
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುಗಳುಹೆರಾಲ್ಡ್ ಆಫ್ ನ್ಯೂವ್ ಏಜ್
ಇದಕ್ಕೆ ಖ್ಯಾತರುಬೆಂಗಾಲ ಪುನರುಜ್ಜೀವನದಜನಕಬ್ರಹ್ಮ ಸಮಾಜ{socio, political reforms
Titleರಾಜಾ
ಉತ್ತರಾಧಿಕಾರಿದ್ವಾರಕನಾಥ ಟಾಗೋರ್
ಪೋಷಕರುರಮಾಕಾತ್ ರಾಯ್ ತಾರಿಣಿ ದೇವಿ

ರಾಮ್ ಮೋಹನ್ ರಾಯ್

ರಾಜ ರಾಮ್ ಮೋಹನ್ ರಾಯ್ (ಮೇ 22,೧೭೭೪ – ಸೆಪ್ಟೆಂಬರ್ ೨೭,೧೮೩೩). ಬ್ರಾಹ್ಮೋ ಸಭದ ಸಂಸ್ಥಾಪಕರು ಈ ಸಮಾಜದ ಸಂಸ್ಥಾಪನೆಗೆ ಅವರ ಜೊತೆಗೆ ದ್ವಾರಕನಾಥ್ ಟ್ಯಾಗೋರ್ ಮತ್ತು ಇತರ ಬೆಂಗಾಲಿ ಬ್ರಾಹ್ಮಣರ ಜೊತೆಗಿದ್ದರು. ರಾಜನೀತಿ, ಸಾರ್ವಜನಿಕ ಆಡಳಿತ ಮತ್ತು ವಿದ್ಯಾಭ್ಯಾಸ ಹಾಗೆ ಧರ್ಮದೊಂದಿಗೆ, ಅವರ ಪ್ರಭಾವ ಅಪಾರವಾಗಿತ್ತು. ಹಿಂದೂ ಧರ್ಮದ ಉತ್ತರ ಕ್ರಿಯಾ ಪದ್ಧತಿಯಲ್ಲಿ, ಸತಿಪದ್ಧತಿಯನ್ವಯ ವಿಧವೆಯನ್ನು ಗಂಡಂದಿರ ಅಗ್ನಿ ಚಿತೆಯ ಮೇಲೆ ಬಲವಂತವಾಗಿ ಸುಡುತ್ತಿದ್ದ ‘ಸತಿ’ ಪದ್ಧತಿಯನ್ನು ರದ್ದು ಮಾಡಲು ಹೋರಾಡಿ ಜಯಶೀಲರಾದರು. ೧೮೧೬ ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ “ಹಿಂದುಯಿಸಂ” ಶಬ್ದವನ್ನು ಪರಿಚಯಿಸಿ, ಸೇರಿಸಿದವರಲ್ಲಿ ಮೊದಲಿಗರು. ಸಮಾಜಕ್ಕೆ ವಿವಿಧ ರೀತಿಯಲ್ಲಿ ಅವರು ಸಲ್ಲಿಸಿದ ಕೊಡುಗೆಯಿಂದಾಗಿ , ರಾಜಾ ರಾಮ್ ಮೋಹನ್ ರೋಯ್ ಬಂಗಾಳದ ಪುನರುಜ್ಜೀವನದ ಒಬ್ಬ ಪ್ರಮುಖ ವ್ಯಕ್ತಿಯಾಗಿ, ಗೌರವಕ್ಕೆ ಪಾತ್ರರಾಗುತ್ತಾರೆ. ಹಿಂದೂಧರ್ಮದ ರಕ್ಷಣೆ ಮತ್ತು ಭಾರತೀಯರ ಹಕ್ಕುಗಳ ರಕ್ಷಣೆಯಲ್ಲಿ ಬ್ರಿಟಿಶ್ ಸರ್ಕಾರದಲ್ಲಿ ಭಾಗವಹಿಸಿದ, ಅವರ ಶ್ರಮದ ಪ್ರತಿಫಲವಾಗಿ ಅವರು ಬಂಗಾಲದ ಪುನರುಜ್ಜೀವನದ ಜನಕ ಅಥವಾ “ಭಾರತದ ನವೋದಯದ ಪಿತಾಮಹ” ಭಾರತದ ಪುನರುಜ್ಜೀವನದ ತಂದೆ ಎಂಬ ಬಿರುದನ್ನು ಗಳಿಸಿದರು.

ಬಾಲ್ಯ ಜೀವನ ಮತ್ತು ಶಿಕ್ಷಣ (೧೭೭೪ – ೧೭೯೬)

 • ವೈಷ್ಣವ ಬ್ರಾಹ್ಮಣ ಜಾತಿಯ ಕುಟುಂಬದಲ್ಲಿ ,ಬಂಗಾಳದ ರಾಧಾ ನಗರದಲ್ಲಿ , ಆಗಸ್ಟ್ ೧೪ (ಕೆಲವರು ಹೇಳಿದಂತೆ ೧೭ ಆಗಸ್ಟ್) ೧೭೭೪ (ಕೆಲವು ಮೂಲಗಳನ್ವಯ ೧೭೭೨) ರಾಯ್)ಜನಿಸಿದರು. ಇವರ ಕುಟುಂಬ ವಿಭಿನ್ನ ಧಾರ್ಮಿಕ ಸಂಪ್ರದಾಯದಿಂದ ಕೊಡಿದ್ದು,ತಂದೆ ರಮಾಕಾಂತ ವೈಷ್ಣವರಾಗಿದ್ದರೆ , ಅವನ ತಾಯಿ ತಾರಿಣಿದೇವಿ ಶೈವ ಕುಟುಂಬದಿಂದ ಬಂದವರಾಗಿದ್ದರು. ಅಂದಿನ ದಿನಗಳಲ್ಲಿ, ಈ ರೀತಿ ವೈಷ್ಣವರು ಸಾಮಾನ್ಯವಾಗಿ, ಶೈವರನ್ನು ಮದುವೆಯಾಗುವ ಸಂಪ್ರದಾಯ ಇರಲಿಲ್ಲ.
 • ಹೀಗಾಗಿ ಒಬ್ಬರ ಬಯಕೆಯಂತೆ ವಿದ್ವಾಂಸ, ಶಾಸ್ತ್ರಿ ಗಳಾಗುವ ನಿಟ್ಟಿನಲ್ಲಿ ಬೆಳಸಿದರೆ , ಇನ್ನೊಬ್ಬರು ಪ್ರಪಂಚದ ಲೌಕಿಕ ಅಥವಾ ಸಾಮಾಜಿಕ ಜೀವನ ನಡೆಸಲು ಬೇಕಾದ ರೀತಿಯಲ್ಲಿ ತಯಾರಿ ಮಾಡುತ್ತಾ ಸಾರ್ವಜನಿಕ ಆಡಳಿತ ನೀಡುವತ್ತ ಗಮನ ಹರಿಸಿದರು. ತಂದೆ-ತಾಯಿಯರ ಈ ರೀತಿಯ ಭಿನ್ನ ಅಭಿಪ್ರಾಯದಿಂದಾಗಿ, ರಾಮಮೋಹನ್‍ನ ಬಾಲ್ಯದಲ್ಲಿನ ಬದುಕು ಇಡೀ ಮುಂದಿನ ಜೀವನದ ಮೇಲೆ ಪ್ರಭಾವ ಬೀರಿದ್ದು ಎರಡೂ ಬಗೆಯ ಜೀವನ ನಡೆಸುವಂತಾಗಿದೆ.

ಪ್ರಾರಂಭಿಕ ಜೀವನ

 • ರಾಮ್ ಮೋಹನ್ ರಾಯರಿಗೆ ೧೦ ವರ್ಷ ತುಂಬುವಲ್ಲಿ ೩ ಬಾರಿ ಮದುವೆಯಾಗುತ್ತದೆ.ತಮ್ಮ ಜಾತಿಯ ಸಂಪ್ರದಾಯ ಪದ್ಧತಿಯನ್ವಯ ಬಹುಪತ್ನಿತ್ವದ ಶಿಸ್ತಿನ ಆವರಣದೊಳಕ್ಕೆ ಅವರು ನಿಲ್ಲುವಂತಾಯಿತು. ಅವರ ಮೊದಲನೇ ಪತ್ನಿ ತನ್ನ ಬಾಲ್ಯ ಜೀವನದ ಆರಂಭದಲ್ಲಿಯೇ ನಿಧನ ಹೊಂದಿದಳು. ೧೮೦೦ ರಲ್ಲಿ ರಾಧಾಪ್ರಸಾದ್ ಮತ್ತು ೧೮೧೨ ರಲ್ಲಿ ರಾಮಪ್ರಸಾದ್ ಎಂಬುವವರು, ಇವರಿಗೆ ಎರಡು ಗಂಡು ಮಕ್ಕಳಿದ್ದು, ಅವರ ಎರಡನೇ ಹೆಂಡತಿಯಲ್ಲಿ ಜನಿಸಿದವರು. ಈಕೆ ೧೮೨೪ ರಲ್ಲಿ ನಿಧನ ಹೊಂದಿದಳು. ರಾಯರ ಮೂರನೇ ಹೆಂಡತಿ ಅವರಿಗಿಂತ ಹೆಚ್ಚು ಕಾಲ ಬದುಕಿದರು.
 • ರಾಯರ ಮೊದಲ ವಿದ್ಯಾಭ್ಯಾಸದ ವಿವರ ವಿವಾದದಿಂದ ಕೂಡಿದೆ. ಒಂದು ಸಾಮಾನ್ಯ ವರದಿಯನ್ವಯ ರಾಮಮೋಹನ್ ರ ಸಾಂಪ್ರದಾಯಿಕ ವಿಸ್ಯಾಭ್ಯಾಸ ಅವರು ವಾಸವಾಗಿದ್ದ ಹಳ್ಳಿಯಲ್ಲಿನ ಪಾಠಶಾಲೆಯಲ್ಲಿ ಬಂಗಾಳಿ ಮತ್ತು ಸಂಸ್ಕೃತ ಹಾಗೂ ಪರ್ಷಿಯನ್ ಭಾಷೆಗಳನ್ನು ಕಲಿತರು. ತದನಂತರ ಅವರ ೯ನೆಯ ವರ್ಷದಲ್ಲಿ ಪರ್ಷಿಯನ್ ಮತ್ತು ಅರೇಬಿಕ್‍ಗಳನ್ನು ಪಾಟ್ನಾದಲ್ಲಿ ಮದರಸಾದಲ್ಲಿ ಕಲಿತಿರಬಹುದೆಂದೂ ನಂತರ ಬನಾರಸ್ (ಕಾಶಿ)ಗೆ ಕಳುಹಿಸಲ್ಪಟ್ಟರು. ಅಲ್ಲಿ ಅವರು ಸಂಸ್ಕೃತದ ವ್ಯಾಕರಣವನ್ನೂ, ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನೂ, ವೇದ ಮತ್ತು ಉಪನಿಷತ್ತುಗಳನ್ನೂ ಕಲಿತಿರಬಹುದೆಂದು ಊಹಿಸಲಾಗಿದೆ. ಇವರ ಈ ಎರಡೂ ಸ್ಥಳಗಳಲ್ಲಿನ ವಾಸದ ಸಮಯದ ವಿಚಾರದಲ್ಲಿ ಗೊಂದಲವಿದೆ. ಅವಿಗೆ ಆಗ ಇನ್ನೂ ಇಮಗ್ಲಿಷ್ ಪರಿಚಯವಿರಲಿಲ್ಲ.
 • ಅವರು 22 ನೇ ವಯಸ್ಸಿನಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿತರು. ಅವರು ಯೂಕ್ಲಿಡ್ ಮತ್ತು ಅರಿಸ್ಟಾಟಲ್ ಮುಂತಾದ ತತ್ವಜ್ಞಾನಿಗಳ ಕೃತಿಗಳನ್ನು ಓದಿದರು, ಅದು ಅವರ ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯದಲ್ಲಿ ಸ್ವಂತವಿಚಾರನ್ನು ರೂಪಿಸಲು ನೆರವಾಯಿತು.
 • ಆತನ ನಂಬಿಕಸ್ಥ ಸಮಕಾಲೀನ ಜೀವನ ಚರಿತ್ರಾಕಾರರು ಬರೆಯುವಂತೆ, ರಾಮಮೋಹನ್‍ರವರಿಗೆ, ಇತರೆ ಬ್ರಾಹ್ಮಣರಿಗೆ ದೊರೆಯದ ಮದರಸ ಶಿಕ್ಷಣದಿಂದ ‘ಅರೇಬಿಕ್’ ಜ್ಞಾನದಿಂದ ಖುರಾನ್ ತಿಳಿವು ಉಂಟಾಗಿ, ಅದರಲ್ಲಿನ ಏಕದೇವ ವಾದ ಇವರಲ್ಲಿ ಬದಲಾವಣೆಯನ್ನು ಮಾಡಿತು. ಆದರೆ ಅವನ ತಾಯಿ ಅವನ ಮಾರ್ಗದಲ್ಲಿ ಬಂದಳು. ಇದರಿಂದ ರಾಮಮೋಹನ್‍ರ ತಾಯಿ ತಾರಿಣಿ ದೇವಿ ಆತಂಕಕ್ಕೆ ಒಳಗಾಗಿ ,ತನ್ನ ಮಗನನ್ನು ಬನಾರಸ್‍ಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಯಲ ಕಳುಹಿಸಿದರು. ಇದರಿಂದಾಗಿ ರಾಯರು ತಮ್ಮ ವಿಚಾರ ಬದಲಾಯಿಸುವ ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೊದಲು ತಾಯಿ ಕಾರ್ಯ ಪ್ರವೃತ್ತರಾದರು. ಬನಾರಸ್‍ನಲ್ಲಿ, ರಾಮಮೋಹನರ ಕ್ರಾಂತಿಕಾರಕ ಮನೋಭಾವ ಬದಲಾಗದೆ, ಉಪನಿಷತ್‍ಗಳನ್ನೂ ಪ್ರಶ್ನಿಸುತ್ತಾ, ಪವಿತ್ರವಾದ ಖುರಾನಿನ ಏಕದೇವವಾದವನ್ನು ಎತ್ತಿ ಹಿಡಿದು ಹಿಂದೂಗಳ ಮೂರ್ತಿ ಪೂಜೆಯನ್ನು ವಿರೋಧಿಸಿದರು.
 • ಸಂಪ್ರದಾಯವಾದಿ ಹಿಂದೂಗಳ ಆಧ್ಯಾತ್ಮಿಕ ನೆಲೆಯೇ ಬನಾರಸ್ ಆಗಿದ್ದು, ಹಲವಾರು ದೇವಸ್ಥಾನಗಳಿಂದ ಕೂಡಿದ್ದು, ಕೋಟ್ಯಾಂತರ ಹಿಂದೂಗಳಿಗೆ ಸೇವೆಯ ದೇವಮಂದಿರವಾಗಿದ್ದು, ರಾಮಮೋಹನ್ ರಾಯರು ಅಲ್ಲಿ ತಮ್ಮ ಸಂಪ್ರದಾಯಸ್ಥ ವೇದಾಂತ ವಿದ್ಯಾಭ್ಯಾಸವನ್ನು ಮುಗಿಸಲು ಆಗಲಿಲ್ಲ. ಬದಲಾಗಿ ಇವರು ಹೆಚ್ಚಾಗಿ ಸಂಚಾರಕ್ಕೆ ಆಧ್ಯತೆ ನೀಡಿದರು, ಆದರೆ ಎಲ್ಲೆಲ್ಲಿ ಹೋದರು ಎಂದು ತಿಳಿಯದೆ ಇದ್ದರೂ, ಈ ಸಮಯದಲ್ಲಿ ಬುದ್ಧನ ತತ್ವ ಸಿದ್ಧಾಂತಗಳ ಬಗ್ಗೆ ಹೆಚ್ಚೆಚ್ಚು ತಿಳಿದರೆಂದು ತಿಳಿಯಲ್ಪಟ್ಟಿದೆ. ಆಗ ಬುದ್ಧನ ಅನುಯಾಯಿಗಳ ಜೊತೆ ಇರುವಂತಾಯಿತು. ನಂತರ ತಂದೆಯವರ ಹುಡುಕಾಟದ ಪ್ರಯತ್ನದಿಂದಾಗಿ ತಮ್ಮ ಕುಟುಂಬಕ್ಕೆ ೧೭೯೪ ರಲ್ಲಿ ವಾಪಸ್ಸಾದರು. ಅವರನ್ನು ಪುನಃ ಬನಾರಸ್ಸಿಗೆ ಕಳುಹಿಸಿದರು. ಆದರೆ ಅವರ ತಾಯಿ ಅಡ್ಡ ಬಂದರು.೧೭೯೪ ಮತ್ತು ೧೭೯೫ ರ ನಡುವೆ ರಾಮಮೋಹನ ರಾಯರು ತಮ್ಮ ಕುಟುಂಬದ ಜೊತೆಯಿದ್ದು, ಕುಟುಂಬದ ಜಮೀನನ್ನು ನೋಡಿಕೊಂಡಿದ್ದರು. ರಾಮಮೋಹನ್ ಮತ್ತು ಅವರ ತಂದೆಯೊಡನೆ ಯಾವಾಗಲೂ ಸಂಪ್ರದಾಯದ ವಿಚಾರದಲ್ಲಿ ಗಣನೀಯವಾದ ಘರ್ಷಣೆಗಳಿದ್ದುವು. ಅವರ ತಂದೆಯವರು ಸುಮಾರು ೧೭೯೬ ರಲ್ಲಿ ನಿಧನರಾಗಿ, ತಮ್ಮ ಮಕ್ಕಳ ಪಾಲಿಗೆ ಆಸ್ತಿಯನ್ನು ಹಂಚಿಕೊಳ್ಳಲು ಬಿಟ್ಟು ಹೋಗಿದರು.

ಸತಿ ಪದ್ದತಿಗೆ ವಿರೋಧ ಮತ್ತು ನಿಷೇಧ ಕಾನೂನು

 • ರಾಮಮೋಹನನ ಸಹೋದರ ಜಗ್ಮೋಹನ್ ನಿಧನರಾದರು. ಅವರ ಹೆಂಡತಿ ಅಲಕಮಂಜರಿ ಅವರು ‘ಸಹಾರಾನ್’ – ‘ಸತಿಹೋಗುವುದು'(ಅಂದರೆ, ಪತಿ ಸತ್ತನಂತರ ಪತ್ನಿಯನ್ನು ಜೀವಂತವಾಗಿ ಸುಟ್ಟುಹಾಕಬೇಕೆಂಬ ನಿಯಮ) ಕಣ್ಣಾರೆ ನೋಡಬೇಕಾಯಿತು. ಶ್ಮಶಾನದಲ್ಲಿ ರಾಜ ಮೋಹನರ ಸೋದರನ ಪತ್ನಿಯನ್ನು ಸುಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಎಲ್ಲಾ ಸಂಬಂಧಿಕರು ಒಟ್ಟುಗೂಡಿದರು. ಅಲಕಮಂಜರಿಗೆ (ಲೇಪಿತ)-ಒಂದು ಸೀರೆಯನ್ನು ಉಡಿಸಿದರು ಮತ್ತು ಅವಳ ಹಣೆಯ ಮೇಲೆ ‘ಕುಂಕುಮ’ ಇಟ್ಟರು. (‘ಕುಂಕುಂ’ ಹಣೆಯ ಮೇಲೆ ಹಚ್ಚುವ ಕೆಂಪು ಬಿಂದು- ಹಿಂದೂ ಹೆಂಡತಿಯರು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ, ಅದು ಅವಳ ಪತಿ ಜೀವಂತವಾಗಿರುವ ಒಂದು ಸೂಚನೆಯಾಗಿದೆ.) ಅವಳ ಕೂದಲಜಡೆಯನ್ನು ಬಿಚ್ಚಲಾಯಿತು. ಭಯವನ್ನು ಅವಳ ಮುಖದ ಮೇಲೆ ಎದ್ದು ತೋರಿತು. ಅವಳ ಪತಿಯ ಶವವನ್ನು ಸಮಾಧಿ ಸ್ಥಳಕ್ಕೆ ತರಲಾಯಿತು. ರಾಮಮೋಹನ್ ತನ್ನ ಅತ್ತಿಗೆ ‘ಸತಿ’ಯನ್ನು ಆಚರಿಸಬಾರದು ಎಂದು ಬೇಡಿಕೊಂಡರು. ಸಂಬಂಧಿಗಳು ರಾಮಮೋಹನ ಮಾತುಗಳನ್ನು ವಿರೋಧಿಸಿದರು. ಅವರು ಅವಳನ್ನು ಶವವಕ್ಕೆ ಬಂಧಿಸಿ ಶವಸಂಸ್ಕಾರದೊಂದಿಗೆ ಅಂತ್ಯಕ್ರಿಯೆ ಚಿತೆಯಲ್ಲಿ ಅವಳನ್ನೂ ಇರಿಸಿದರು. ಚಿತೆಗೆ ಬೆಂಕಿಯಲ್ಲಿ ಹಾಕಲಾಯಿತು. ಅಲಕಮಂಜರಿ ಹೆದರಿ, ಭಯದಲ್ಲಿ ಅರಚಿದಳು, ಆದರೆ ಅವಳನ್ನು ಮುಕ್ತ ಮಾಡಲಿಲ್ಲ. ಆಕೆಯ ಪತಿಯೊಂದಿಗೆ ಸುಟ್ಟುಹಾಕಲಾಯಿತು. ಎಲ್ಲಾ ಸಂಬಂಧಿಕರು ಅವಳನ್ನು ‘ಮಹಾ ಸತಿ’ ಎಂದು ಘೋಷಿಸಿದರು. ಮಹಾ ಸತಿ! ‘(ಶ್ರೇಷ್ಠ ಹೆಂಡತಿ) ಮತ್ತು ಹಿಂತಿರುಗಿ ಹೋಗಿ ಎಂದು ಹೊರಟುಹೊದರು . ತನ್ನ ಸಹೋದರಿಯ ಧಾರ್ಮಿಕ ಪದ್ದತಿಯ “ಸತಿ” ಯ ಈ ಹೃದಯದ ಒಡೆಯುವ ದೃಶ್ಯವು ರಾಮಮೋಹನ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿತು. ನಂತರ ಮತ್ತು ಅಲ್ಲಿ ಅವರು ಆ ಭಯಾನಕ ಪದ್ದತಿಯನ್ನು ಕೊನೆಗೊಳಿಸಲು ಒಂದು ಶಪಥ ತೆಗೆದುಕೊಂಡರು. ಪತಿಯೊಂದಿಗೆ ಹೆಂಡತಿ ಸಾಯಬೇಕೆಂದು ಗ್ರಂಥಗಳು ಹೇಳಿವೆ ಎಂದು ಕೆಲವರು ನಂಬಿದ್ದರು. ರಾಮಮೋಹನರು ಎಲ್ಲಾ ಪವಿತ್ರ ಪುಸ್ತಕಗಳನ್ನು ಉಲ್ಲೇಖಿಸಿದರು. ಆದರೆ, ಹೆಂಡತಿ ‘ಸತಿ’ಯನ್ನು ಅನುಸರಿಸ ಬೇಕೆಂಬುದು ಎಲ್ಲಿಯೂ ಇಡಲಿಲ್ಲ. ಈ ಸಂಪ್ರದಾಯವು ಕೆಲವು ಕಾಲದನಂತರ ಅಭ್ಯಾಸಕ್ಕೆ ಬಂದಿತು. ಅದನ್ನು ತಿಳಿದಿದ್ದ ಕೆಲವರು ತಪ್ಪು ಎಂದು ಹೇಳಲು ಧೈರ್ಯವನ್ನು ಹೊಂದಿರಲಿಲ್ಲ. ಕೆಚ್ಚೆದೆಯ ರಾಮಮೋಹನರು ಈ ಕಷ್ಟಕರ ಕೆಲಸವನ್ನು ಕೈಗೊಂಡರು. ಆದರೆ ಅವರ ಕೆಲಸ ಸುಲಭವಲ್ಲ. ಲಕ್ಷಗಟ್ಟಲೆ ಜನರು ‘ಸತಿ’ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದರು. ಅನೇಕ ಜನರು ರಾಮಮೋಹನನ್ನು ವಿರೋಧಿಸಿದರು ಮತ್ತು ಅವರನ್ನು ನಿಂದಿಸಿದರು. ಕೆಲವರು ಅವನನ್ನು ಕೊಲ್ಲಲು ಪ್ರಯತ್ನಿಸಿದರು. ಆದರೆ ರಾಮಮೋಹನ್ ಹಿಂಜರಿಯಲಿಲ್ಲ. ಈ ಎಲ್ಲವನ್ನೂ ನೋಡಿದ ಪಶ್ಚಿಮದ ಜನರು ಸಹ ಆಶ್ಚರ್ಯಪಟ್ಟರು, ಈ ವಿಷಯದಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡಲು ಭಯಭೀತವಾಗಿದ್ದರೂ, ರಾಮಮೋಹನರು ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿಕೊಂಡರು ಮತ್ತು ಈ ಕೆಟ್ಟ ಆಚರಣೆಯ ರದ್ದಿಗೆ ಹೋರಾಡಿದರು. ಕೊನೆಯಲ್ಲಿ, ಅವರು ಗೆದ್ದರು.
 • ಅವರು ತಮ್ಮ ಟೀಕೆ ವಿರೋಧಳನ್ನು ತಾಳ್ಮೆ ಮತ್ತು ಯಾರೊಬ್ಬರ ಭಾವನೆಗಳನ್ನು ಗಾಯಗೊಳಿಸದೆ ಮಂಡಿಸುತ್ತಿದ್ದರು. ಹೀಗಾಗಿ ಪತ್ರಿಕೆಗಳ ನಂತರದ ಸಂಪಾದಕರಿಗೆ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಆ ದಿನಗಳಲ್ಲಿ ನ್ಯಾಯಾಲಯವು ಸಾರ್ವಜನಿಕ ತೀರ್ಪುಗಾರರ ಹಾಜರಿ ಪ್ರಯೋಗಗಳನ್ನು ನಡೆಸಿತು. ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಕೆಲವು ಜನರನ್ನು ಆಹ್ವಾನಿಸಲಾಯಿತು. ಕೊನೆಯಲ್ಲಿ, ಈ ವ್ಯಕ್ತಿಗಳು ಪ್ರಕರಣದ ಬಗ್ಗೆ ನ್ಯಾಯಾಧೀಶರು ತಮ್ಮ ಅಭಿಪ್ರಾಯಗಳನ್ನು ನೀಡಿದರು. ಈ ಪುರುಷರನ್ನು ‘ಜ್ಯೂರಿ’ ಎಂದು ಕರೆಯಲಾಗುತ್ತಿತ್ತು. ಕೆಳ ನ್ಯಾಯಾಲಯಗಳಿಗೆ ಭಾರತೀಯ ಜ್ಯೂರಿಗಳನ್ನು ಆಹ್ವಾನಿಸಲಾಯಿತು. ಆದರೆ ಉನ್ನತ ನ್ಯಾಯಾಲಯಗಳಿಗೆ ಇಂಗ್ಲಿಷ್ ಜ್ಯೂರಿಗಳನ್ನ ಆಹ್ವಾನಿಸಲಾಯಿತು. ಈ ಅಭ್ಯಾಸದ ವಿರುದ್ಧ ಈ ಪದ್ದತಿಯನ್ನು ಕೊನೆಗಳಿಸಲು ರಾಮಮೋಹನರು ಸರ್ಕಾರಕ್ಕೆ ಬರೆದರು; ಅವರು ಈ ಪದ್ದತಿ ಭಾರತೀಯರಿಗೆ ಅವಮಾನ ಎಂದು ವಾದಿಸಿದರು. ಅಂತಿಮವಾಗಿ, ಸರ್ಕಾರ ಈ ತಾರತಮ್ಯದ ಕೆಟ್ಟ ಸತಿ ಪದ್ದತಿಯನ್ನು ಕಾನೂನುಮಾಡಿ ಕೊನೆಗೊಳಿಸಿತು.

ಧಾರ್ಮಿಕ ಸುಧಾರಣೆ

 • ಬ್ರಹ್ಮ ಸಮಾಜದಲ್ಲಿ ಕೆಲವು ರಾಮ ಮೋಹನರಾಯರ ಧಾರ್ಮಿಕ ಸುಧಾರಣೆಗಳ ಕುರಿತು, ರಾಜನಾರಾಯಣ ಬಸು ಅವರಿಂದ ವಿಸ್ತೃತ ವಿವರಣೆಗಳು:-
 • ಬ್ರಹ್ಮೋಸ್ನಂಬುವಂತೆ ‘ಬ್ರಹ್ಮಯಿಸಂ’- ಬ್ರಹ್ಮಸಿದ್ದಾಂತದ ಸಿದ್ದಾಂತವಾದದ ಮೂಲತತ್ವ ಇರುವುದು ಧರ್ಮದ ಮೂಲದಲ್ಲಿ,- ಮಾನವರಿಂದ ಪ್ರತಿಪಾದಿಸಲ್ಪಡುತ್ತದೆ.
 • ಬ್ರಹ್ಮೋಗಳು ‘ಒಂದು ಅತೀತ ದೈವಶಕ್ತಿಯನ್ನು’ ನಂಬುತ್ತಾರೆ. “ದೇವರು ಒಂದು ನಿಶ್ಚಿತವಾದ ವ್ಯಕ್ತಿತ್ವದಿಂದ ಯುಕ್ತವಾಗಿದ್ದು, ಪ್ರಕೃತಿ ಧರ್ಮದಂತೆ ನೈತಿಕತೆಯ ಲಕ್ಷ ಣೀಕರಣವಾಗಿದ್ದು ಅವರ ಸ್ವಭಾವಕ್ಕೆ ಸಮನಾಗಿರುತ್ತದೆ, ಮತ್ತು ಬುದ್ಧಿವಂತಿಕೆ ಉಳ್ಳವನಾಗಿರುತ್ತಾನೆ; ಹಾಗೂ ವಿಶ್ವದ ಸೂತ್ರದಾರ ಮತ್ತು ರಕ್ಷಕನಾಗಿರುತ್ತಾನೆ. “ಅಂತಹವನನ್ನು ಮಾತ್ರ ಆರಾಧಿಸಿ.
 • ಬ್ರಹ್ಮೋಸ್ ನಂಬುವಂತೆ ದೇವರಿಗೆ ನಿಶ್ಚಿತವಾದ ಕಾಲ ಅಥವಾ ಸ್ಥಳಗಳು ಇಲ್ಲ. “ನಾವು ಅವನನ್ನು ಯಾವಾಗಲಾದರೂ, ಯಾವ ಸಮಯ, ಸ್ಥಳದಲ್ಲಾದರೂ ಆರಾಧಿಸಬಹುದು, ಆ ಸ್ಥಳ ಮತ್ತು ಸಮಯ ನಮ್ಮ ಮನಸ್ಸನ್ನು ಅವನೆಡೆಗೆ ಲೆಕ್ಕಾಚಾರದಂತೆ ಒಟ್ಟಾಗಿ ಮನಸ್ಸಿಟ್ಟು, ಅವನ ಕಡೆ ಮನಸ್ಸನ್ನು ಹರಿಸಬೇಕು ಅಷ್ಟೇ.”

ರಾಮಮೋಹನ್ ರವರ ಸಾಮಾಜಿಕ ಸುಧಾರಣೆ

 • ಸಾಮಾಜಿಕ ಅನಿಷ್ಟಗಳಾದ ‘ಸತಿ’, ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹಗಳ ವಿರುದ್ಧ ಹೋರಾಟ: ಹೆಂಗಸರಿಗೆ ಆಸ್ತಿಯಲ್ಲಿನ ಹಕ್ಕಿನ ಪರದ ಹೋರಾಟ.
 • ಬಂಗಾಳಿ ಬ್ರಾಹ್ಮಣರ ಸುಧಾರಣೆಗಾಗಿ ಹಾಗು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಲು ೧೮೨೮ ರಲ್ಲಿ ಬ್ರಹ್ಮಸಭಾ ಅಸ್ತಿತ್ವಕ್ಕೆ ಬಂತು ಮತ್ತು ಆ ಚಳುವಳಿ ರಾಯರ ರಾಜಕೀಯ ಹಿನ್ನೆಲೆಯ ಕಾರಣದಿಂದ ಅವರ ಸಾಮಾಜಿಕ ಮತ್ತು ಹಿಂದೂ ಧಾರ್ಮಿಕ ಸುಧಾರಣೆಗೆ ಕಾರಣವಾಯಿತು. ಅವರು ಬರೆಯುತ್ತಾ:

“ಈಗಿರುವ ಹಿಂದೂಗಳ ಪದ್ಧತಿಯು ಅವರ ರಾಜಕೀಯ ಬೆಳವಣಿಗೆಗೆ ಅನುಕೂಲವಾಗಿರುವುದಿಲ್ಲ…, ಅವರ ಧರ್ಮದಲ್ಲಿ ಕೆಲವೊಂದು ಬದಲಾವಣೆಗಳು ಆಗಬೇಕು, ಕಡೇ ಪಕ್ಷ ಅವರ ರಾಜಕೀಯ ಆಶೋತ್ತರಗಳ ಹಾಗು ಸಾಮಾಜಿಕ ಸೌಲಭ್ಯಗಳಿಗೋಸ್ಕರವಾಗಿಯಾದರೂ… ”

 • ಬ್ರಿಟಿಷ್ ಸರ್ಕಾರದೊಂದಿಗೆ ಕೆಲಸ ಮಾಡುವ ರಾಮ್ ಮೋಹನ್ ರಾಯ್ ಅವರ ಅನುಭವವು, ಹಿಂದೂ ಸಂಪ್ರದಾಯಗಳನ್ನು ಹೆಚ್ಚಾಗಿ ಪಾಶ್ಚಾತ್ಯ ಮಾನದಂಡಗಳಿಂದ ನಂಬಲಾಗುವುದಿಲ್ಲ ಅಥವಾ ಗೌರವಿಸುವುದಿಲ್ಲವೆಂದು ಅವರಿಗೆ ಕಲಿಸಿಕೊಟ್ಟಿತು ಮತ್ತು ಇದು ಅವರ ಧಾರ್ಮಿಕ ಸುಧಾರಣೆಗಳ ಮೇಲೆ ಪರಿಣಾಮ ಬೀರಿದೆ.
 • ಬ್ರಿಟಿಷರ ಸರ್ಕಾರದ ಜೊತೆಗಿನ ರಾಮ್ ಮೋಹನ್ ರಾಯರ ಅನುಭವದಿಂದ, ಅವರಿಗೆ ತಿಳಿದು ಬಂದಿದ್ದೇನೆಂದರೆ, ಹಿಂದೂ ಧಾರ್ಮಿಕ ಪದ್ಧತಿಯಿಂದ ಬ್ರಿಟಿಷರಿಗೆ ನಂಬುಗೆಯುಳ್ಳದ್ದಾಗಲೀ, ಗೌರವ ತರುವಂತದ್ದಾಗಲೀ, ಆಗದೇ ಇದ್ದು, ಪಶ್ಚಿಮ ರಾಷ್ಟ್ರ ನೀತಿಗಳ ಪರವಿಲ್ಲದೇ ಇದ್ದುದು, ಅವರ ಧಾರ್ಮಿಕ ಸುಧಾರಣೆಗೆ ಅಡ್ಡಿಯಾಯಿತು. ಹಿಂದೂ ಸಂಪ್ರದಾಯಗಳನ್ನು ಕ್ರಮಬದ್ಧಗೊಳಿಸಿ,ಯೂರೋಪಿನ ಪರಿಚಿತರೊಡನೆ ರುಜುವಾತು ಪಡಿಸಲು “ಹಿಂದೂ ಧರ್ಮವನ್ನು ವಿರೂಪಗೊಳಿಸುವ ಮೂಢನಂಬಿಕೆಯ ಆಚರಣೆಗಳು, ಅದರ ಶಾಸ್ತ್ರ ಸೂಕ್ತಿಗಳು ಹೇಳಿದ ಶುದ್ಧ ಆತ್ಮದ ವಿಷಯದಲ್ಲಿ ಏನೂ ಸಂಬಂಧವಿರದು” ಎಂದು ಅವರು ತಮ್ಮ ಯುರೋಪಿಯನ್ ಪರಿಚಿತರಿಗೆ ಹಿಂದೂ ಸಂಪ್ರದಾಯಗಳನ್ನು ನ್ಯಾಯಸಮ್ಮತಗೊಳಿಸಲು ಬಯಸಿದ್ದರು! “ಮೂಢ ನಂಬಿಕೆಗಳ ಆಚರಣೆಯಲ್ಲಿ” ‘ಸತಿ’, ಜಾತಿಯ ಬಿಗಿತ, ಬಹುಪತ್ನಿತ್ವ ಮತ್ತು ಬಾಲ್ಯ ವಿವಾಹಗಳನ್ನು ರಾಮ್ ಮೋಹನ್ ರಾಯರು ವಿರೋಧಿಸಿದರು.
 • ಈ ಆಚರಣೆಗಳಿಂದ ಬ್ರಿಟಿಶ್ ಅಧಿಕಾರಿಗಳು ಭಾರತದ ಮೇಲೆ ಹೆಚ್ಚು ಹೆಚ್ಚಾಗಿ ನೈತಿಕ ನಡೆತೆಯ ಶ್ರೇಷ್ಟತೆಯನ್ನು ವಹಿಸುತ್ತಾ ಹೋದರು. ರಾಮ್ ಮೋಹನ್ ರಾಯರ ದೃಷ್ಟಿಯಲ್ಲಿ, ಧರ್ಮವೆಂದರೆ ನ್ಯಾಯ ಮತ್ತು ವಾಸ್ತವ ಸಮಾಜ ಎನ್ನುವ ಮಾನವೀಯ ಗುಣಗಳನ್ನು ಅಭ್ಯಾಸ ಮಾಡುವುದೇ ಆಗಿದ್ದು, ಕ್ರಿಶ್ಚಿಯನ್ನರ ಆದರ್ಶಗಳಿಗೆ ಸಮನಾಗಿದ್ದು, ಅದರಿಂದ ಆಧುನಿಕ ಪ್ರಪಂಚದಲ್ಲಿ ಹಿಂದೂ ಧರ್ಮವನ್ನು ಕ್ರಮಬದ್ಧಗೊಳಿಸುವುದೇ ಆಗಿತ್ತು.

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ
ಚಿಕಾಗೋದಲ್ಲಿ ವಿವೇಕಾನಂದರು, ಸೆಪ್ಟೆಂಬರ್ ೧೮೯೩. On the left, Vivekananda wrote: “”One infinite pure and holy – beyond thought beyond qualities I bow down to thee”.”.[೧]
ಜನನ೧೨ ಜನವರಿ ೧೮೬೩
ಕಲ್ಕತ್ತಾಬಂಗಾಳ ಪ್ರೆಸಿಡೆನ್ಸಿಬ್ರಿಟಿಷ್ ಇಂಡಿಯಾ
(ಈಗ ಕೋಲ್ಕತಾ, ಪಶ್ಚಿಮ ಬಂಗಾಳ, ಭಾರತ)
ಮರಣಟೆಂಪ್ಲೇಟು:Death date 1902-7-1, and parents ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ
ಬೇಲೂರು ಮಠ,ಬಂಗಾಲ ಪ್ರಾಂತ್ಯಬ್ರಿಟಿಷ್ ಇಂಡಿಯಾ
(ಈಗ ಪಶ್ಚಿಮ ಬಂಗಾಲ, ಭಾರತ)
ಜನ್ಮ ನಾಮನರೇಂದ್ರನಾಥ ದತ್ತ
ಸಂಸ್ಥಾಪಕರುಬೇಲೂರು ಮಠ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್
ಗುರುರಾಮಕೃಷ್ಣ ಪರಮಹಂಸ
ತತ್ವಶಾಸ್ತ್ರವೇದಾಂತ
ಪ್ರಮುಖ ಕೃತಿಗಳುರಾಜ ಯೋಗಕರ್ಮ ಯೋಗ,ಭಕ್ತಿ ಯೋಗ ಮತ್ತು ಜ್ಞಾನ ಯೋಗ
ಪ್ರಮುಖ ಶಿಷ್ಯರು/ಅನುಯಾಯಿಗಳುಸ್ವಾಮೀ ಅಶೋಕಾನಂದಸ್ವಾಮಿ ವಿರಜಾನಂದಸ್ವಾಮಿ ಪರಮಾನಂದಅಳಸಿಂಗ ಪೆರುಮಾಳ್ಸ್ವಾಮೀ ಅಭಯಾನಂದಸೋದರಿ ನಿವೇದಿತಾ, ಸ್ವಾಮಿ ಸದಾನಂದ
ವಿಸ್ತರಿಸಲುInfluence on
ನುಡಿಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.
ಹಸ್ತಾಕ್ಷರ

ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ – ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ “ಯುವದಿನ”ವೆಂದು ಆಚರಿಸಲಾಗುತ್ತದೆ.

ಜನನ

ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ‘ವಿವೇಕಾನಂದ’ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ‍ ರಾಮಕೃಷ್ಣರ ಒಡನಾಟ :

 • ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ “ದ ಎ‍ಕ್ಸಕರ್ಶನ್” ಎಂಬ ಕವಿತೆಯಲ್ಲಿನ “ಸಮಾಧಿ” ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು.
 • ೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ.
 • ೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು.
 • ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. ೧೮೮೪ ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು.
 • ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು.
 • ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲಷ್ಟೇ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು.
 • ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು.

ರಾಮಕೃಷ್ಣ ಮಠದ ಸ್ಥಾಪನೆ

 • ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು.
 • ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ “ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು.
 • ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು” ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ “ಸಂಗೀತ ಕಲ್ಪತರು “ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ..

ವಿವೇಕಾನಂದರ ಭಾರತ ಪರ್ಯಟನೆ

೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ “ದಿ ಇಮಿಟೆಶ್ನ್ ಆಫ್ ಕ್ರೈಸ್ತ್” ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.

ಉತ್ತರ ಭಾರತ

೧೮೮೮ ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು “ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ” ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.

ಅದ್ವೈತ ಸಿದ್ಧಾಂತದ ಉಪಯುಕ್ತತೆ

 • ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು.
 • ಇದೇ ಅವರ ಮಂತ್ರವಾಯಿತು ಮತ್ತು ಅವರ “ದರಿದ್ರ ನಾರಾಯಣ ಸೇವೆ’ ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು.
 • ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.

ವಿವೇಕಾನಂದರ ವಿಶ್ವಪರ್ಯಟನೆ

ವಿವೇಕಾನಂದ 1893- ದಿ ಈಸ್ಟ್ ಇಂಡಿಯನ್/ ಪೂರ್ವಭಾರತದ ತಂಡದೊಂದಿಗೆ
 • ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು.
 • ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು.
 • ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು.
 • ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು.
 • ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.

ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ

Swami Vivekananda, World Parliament of Religion, 1893, Addresses at the Parliament of Religions, 1, Speechವಿವೇಕಾನಂದರ ಚಿಕಗೊ ಸ್ವಾಗತ ಭಾಷಣ

ವೀರ್‍ಚಂದ್ ಗಾಂಧಿ, ಹೆವಿವಿಟಾರ್ನೆ ಧರ್ಮಪಾಲ(Hewivitarne Dharmapala) ಅವರೊಂದಿಗೆ ಧರ್ಮ ಸಂಸತ್ತಿನಲ್ಲಿ ವಿವೇಕಾನಂದ
 • ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ “ಅಮೆರಿಕದ ಸಹೋದರ ಸಹೋದರಿಯರೇ” ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.

‘ವಿಶ್ವದ ಧರ್ಮಗಳ ಸಂಸತ್ತು’ ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, “ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ” ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು”ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ”) ನಂತರ “ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!” ಎಂದು ಸಂಬೋಧಿಸಿ ಮಾತು ಆರಂಭಿಸಿದರು. ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ ‘ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ’ ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. “ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!” (ಭಾರತಕ್ಕಿಂತ ಅವು ಕಿರಿಯ / ಯುವ ರಾಷ್ಟ್ಟ್ರಗಳು)

 • ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ‘ಪೂರ್ವ ದೇಶದ ವಿಚಿತ್ರ ಧರ್ಮ’ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ‘ನ್ಯೂಯಾರ್ಕ್’ ಮತ್ತು ‘ಲಂಡನ್’ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು.
 • ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ “ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ” (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ.
 • ‘ಸ್ವಾಮಿ ವಿವೇಕಾನಂದ’ರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-“ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು”.

ದೇಶ ಮಂತ್ರ

 • ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ!
 • ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು – ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
 • ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ “ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ”. ಸಹೋದರರೆ, ಹೀಗೆ ಸಾರಿ “ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ.” ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, “ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.
 • ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು‌ ತಮ್ಮ‌ಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು. ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ‌ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು.

ಸ್ವಾಮಿ ದಯಾನಂದ ಸರಸ್ವತಿ

ಮಹರ್ಷಿ ದಯಾನಂದ ಸರಸ್ವತಿ
ವೈಯಕ್ತಿಕ
ಹುಟ್ಟುಮೂಲ್ ಶಂಕರ್ ತಿವಾರಿ
12 ಫೆಬ್ರವರಿ 1824
ಟಂಕರಾ , ಮೊರ್ವಿ ರಾಜ್ಯ , ಕಂಪನಿ ರಾಜ್ (ಇಂದಿನ ಗುಜರಾತ್ , ಭಾರತ )
ನಿಧನರಾದರು30 ಅಕ್ಟೋಬರ್ 1883 (ವಯಸ್ಸು 59)
ಅಜ್ಮೀರ್ , ಅಜ್ಮೀರ್-ಮೇರ್ವಾರಾ , ಬ್ರಿಟಿಷ್ ಇಂಡಿಯಾ (ಇಂದಿನ ರಾಜಸ್ಥಾನ , ಭಾರತ )
ಧರ್ಮಹಿಂದೂ ಧರ್ಮ
ರಾಷ್ಟ್ರೀಯತೆಭಾರತೀಯ
ನ ಸ್ಥಾಪಕಆರ್ಯ ಸಮಾಜ
ತತ್ವಶಾಸ್ತ್ರವೈದಿಕ
ಧಾರ್ಮಿಕ ವೃತ್ತಿ
ಗುರುವಿರಾಜಾನಂದ ದಂಡೀಶ
ತೋರಿಸುನಿಂದ ಪ್ರಭಾವಿತವಾಗಿದೆ
ತೋರಿಸುಪ್ರಭಾವಿತವಾಗಿದೆ
ಸಾಹಿತ್ಯ ಕೃತಿಗಳುಸತ್ಯಾರ್ಥ್ ಪ್ರಕಾಶ್ (1875)

ಆರಂಭಿಕ ಜೀವನ

ದಯಾನಂದ ಸರಸ್ವತಿ ಅವರು ಪೂರ್ಣಿಮಾಂತ ಫಾಲ್ಗುಣ (12 ಫೆಬ್ರವರಿ 1824) ತಿಂಗಳ ಕ್ಷೀಣಿಸುತ್ತಿರುವ ಚಂದ್ರನ 10 ನೇ ದಿನದಂದು ತಿಥಿಯಂದು ಭಾರತೀಯ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಕಥಿಯವಾಡ ಪ್ರದೇಶದ (ಈಗ ಗುಜರಾತ್‌ನ ಮೊರ್ಬಿ ಜಿಲ್ಲೆ) ಟಂಕರಾದಲ್ಲಿ ಜನಿಸಿದರು ಅವರ ಮೂಲ ಹೆಸರು ಮೂಲ್ ಶಂಕರ್ ತಿವಾರಿ (ತ್ರಿವೇದಿ, ಅದರ ಮೂಲ ರೂಪದಲ್ಲಿ) ಏಕೆಂದರೆ ಅವರು ಧನು ರಾಶಿ ಮತ್ತು ಮೂಲ ನಕ್ಷತ್ರದಲ್ಲಿ ಜನಿಸಿದರು. ಅವರ ತಂದೆ ಕರ್ಷಂಜಿ ಲಾಲ್ಜಿ ತ್ರಿವೇದಿ, ಮತ್ತು ಅವರ ತಾಯಿ ಯಶೋದಾಬಾಯಿ.

ಅವರು ಎಂಟು ವರ್ಷದವರಾಗಿದ್ದಾಗ, ಅವರ ಯಜ್ಞೋಪವೀತ ಸಂಸ್ಕಾರ ಸಮಾರಂಭವನ್ನು ನಡೆಸಲಾಯಿತು, ಇದು ಔಪಚಾರಿಕ ಶಿಕ್ಷಣಕ್ಕೆ ಅವರ ಪ್ರವೇಶವನ್ನು ಗುರುತಿಸುತ್ತದೆ. ಅವರ ತಂದೆ ಶಿವನ ಅನುಯಾಯಿಯಾಗಿದ್ದರು ಮತ್ತು ಶಿವನನ್ನು ಆರಾಧಿಸುವ ವಿಧಾನಗಳನ್ನು ಅವರಿಗೆ ಕಲಿಸಿದರು. ಉಪವಾಸ ವ್ರತಾಚರಣೆಯ ಮಹತ್ವವನ್ನು ಸಹ ಅವರಿಗೆ ಕಲಿಸಲಾಯಿತು. ಶಿವರಾತ್ರಿಯ ಸಂದರ್ಭದಲ್ಲಿ , ದಯಾನಂದರು ಶಿವನಿಗೆ ವಿಧೇಯರಾಗಿ ಇಡೀ ರಾತ್ರಿ ಜಾಗರಣೆ ಮಾಡಿದರು. ಈ ಒಂದು ಉಪವಾಸದ ಸಮಯದಲ್ಲಿ, ಇಲಿಯು ನೈವೇದ್ಯವನ್ನು ತಿನ್ನುವುದನ್ನು ಮತ್ತು ವಿಗ್ರಹದ ದೇಹದ ಮೇಲೆ ಓಡುವುದನ್ನು ಅವನು ನೋಡಿದನು. ಇದನ್ನು ನೋಡಿದ ಅವರು, ಶಿವನು ಇಲಿಯ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಅವನು ಜಗತ್ತನ್ನು ಹೇಗೆ ರಕ್ಷಿಸುತ್ತಾನೆ ಎಂದು ಪ್ರಶ್ನಿಸಿದರು. 

ಕಾಲರಾದಿಂದ ಅವನ ತಂಗಿ ಮತ್ತು ಅವನ ಚಿಕ್ಕಪ್ಪನ ಮರಣವು ದಯಾನಂದ ಜೀವನ ಮತ್ತು ಸಾವಿನ ಅರ್ಥವನ್ನು ಆಲೋಚಿಸಲು ಕಾರಣವಾಯಿತು. ಅವನು ತನ್ನ ಹೆತ್ತವರನ್ನು ಚಿಂತೆ ಮಾಡುವ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದನು. ಅವರು ತಮ್ಮ ಹದಿಹರೆಯದ ಆರಂಭದಲ್ಲಿ ತೊಡಗಿಸಿಕೊಂಡಿದ್ದರು, ಆದರೆ ಮದುವೆಯು ತನಗೆ ಅಲ್ಲ ಎಂದು ಅವರು ನಿರ್ಧರಿಸಿದರು ಮತ್ತು 1846 ರಲ್ಲಿ ಮನೆಯಿಂದ ಓಡಿಹೋದರು.

ದಯಾನಂದ ಸರಸ್ವತಿಯವರು 1845 ರಿಂದ 1869 ರವರೆಗೆ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಅಲೆದಾಡುವ ತಪಸ್ವಿಯಾಗಿ ಧಾರ್ಮಿಕ ಸತ್ಯವನ್ನು ಹುಡುಕಿದರು. ಅವರು ಭೌತಿಕ ವಸ್ತುಗಳನ್ನು ತ್ಯಜಿಸಿದರು ಮತ್ತು ಸ್ವಯಂ ನಿರಾಕರಣೆಯ ಜೀವನವನ್ನು ನಡೆಸಿದರು, ಕಾಡುಗಳಲ್ಲಿ ಆಧ್ಯಾತ್ಮಿಕ ಅನ್ವೇಷಣೆಗೆ ತಮ್ಮನ್ನು ತೊಡಗಿಸಿಕೊಂಡರು, ಹಿಮಾಲಯ ಪರ್ವತಗಳಲ್ಲಿನ ಹಿಮ್ಮೆಟ್ಟುವಿಕೆಗಳು ಮತ್ತು ಉತ್ತರ ಭಾರತದ ತೀರ್ಥಕ್ಷೇತ್ರಗಳು. ಈ ವರ್ಷಗಳಲ್ಲಿ ಅವರು ಯೋಗದ ವಿವಿಧ ಪ್ರಕಾರಗಳನ್ನು ಅಭ್ಯಾಸ ಮಾಡಿದರು ಮತ್ತು ವಿರಾಜಾನಂದ ದಂಡೀಶ ಎಂಬ ಧಾರ್ಮಿಕ ಗುರುಗಳ ಶಿಷ್ಯರಾದರು . ಹಿಂದೂ ಧರ್ಮವು ತನ್ನ ಐತಿಹಾಸಿಕ ಬೇರುಗಳಿಂದ ದೂರ ಸರಿದಿದೆ ಮತ್ತು ಅದರ ಅನೇಕ ಆಚರಣೆಗಳು ಅಶುದ್ಧವಾಗಿವೆ ಎಂದು ವಿರಾಜಾನಂದರು ನಂಬಿದ್ದರು. ದಯಾನಂದ ಸರಸ್ವತಿ ಅವರು ವಿರಜಾನಂದರಿಗೆ ಹಿಂದೂ ನಂಬಿಕೆಯಲ್ಲಿ ವೇದಗಳ ಸರಿಯಾದ ಸ್ಥಾನವನ್ನು ಪುನಃಸ್ಥಾಪಿಸಲು ತಮ್ಮ ಜೀವನವನ್ನು ಮುಡಿಪಾಗಿಡುವುದಾಗಿ ಭರವಸೆ ನೀಡಿದರು .

ಸರ್ ಸಯ್ಯದ್ ಅಹ್ಮದ್ ಖಾನ್

ಶ್ರೀಮಾನ್
ಸೈಯದ್ ಅಹಮದ್ ಖಾನ್
KCSI FRAS
ಹುಟ್ಟು17 ಅಕ್ಟೋಬರ್ 1817
ದೆಹಲಿ , ಮೊಘಲ್ ಸಾಮ್ರಾಜ್ಯ
ನಿಧನರಾದರು27 ಮಾರ್ಚ್ 1898 (ವಯಸ್ಸು 80)
ಅಲಿಘರ್ , ವಾಯುವ್ಯ ಪ್ರಾಂತ್ಯಗಳು , ಬ್ರಿಟಿಷ್ ಇಂಡಿಯಾ
ಇತರ ಹೆಸರುಗಳುಸರ್ ಸೈಯದ್
ಗಮನಾರ್ಹ ಕೆಲಸಪವಿತ್ರ ಕುರಾನ್‌ನ ಮೊಹಮ್ಮದನ್ ಕಾಮೆಂಟರಿ ( ಕುರಾನ್‌ನಲ್ಲಿ ತಫ್ಸಿರ್ ).
ಮಕ್ಕಳುಸೈಯದ್ ಮಹಮೂದ್
ಸಂಬಂಧಿಕರುರಾಸ್ ಮಸೂದ್ (ಮೊಮ್ಮಗ)
ಪ್ರಶಸ್ತಿಗಳು ಸ್ಟಾರ್ ಆಫ್ ಇಂಡಿಯಾ
ಯುಗ19 ನೇ ಶತಮಾನ
ಶಾಲೆಇಸ್ಲಾಮಿಕ್ ಮತ್ತು ನವೋದಯ ತತ್ವಶಾಸ್ತ್ರ
ಸಂಸ್ಥೆಗಳುಈಸ್ಟ್ ಇಂಡಿಯಾ ಕಂಪನಿ
ಭಾರತೀಯ ನ್ಯಾಯಾಂಗ ಶಾಖೆ
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ
ಪಂಜಾಬ್ ವಿಶ್ವವಿದ್ಯಾಲಯ
ಸರ್ಕಾರಿ ಕಾಲೇಜು ವಿಶ್ವವಿದ್ಯಾಲಯ
ಮುಖ್ಯ ಆಸಕ್ತಿಗಳುವ್ಯಾವಹಾರಿಕತೆ , ಆಧ್ಯಾತ್ಮಿಕತೆ , ಭಾಷೆ , ಸೌಂದರ್ಯಶಾಸ್ತ್ರ , ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ
ಗಮನಾರ್ಹ ವಿಚಾರಗಳುಎರಡು ರಾಷ್ಟ್ರಗಳ ಸಿದ್ಧಾಂತ , ಆಧುನಿಕತಾವಾದಿ ವಿಚಾರಗಳ ಮುಸ್ಲಿಂ ಅಳವಡಿಕೆ

ರ್ ಸೈಯದ್ ಅಹ್ಮದ್ ಖಾನ್ KCSI , FRAS (17 ಅಕ್ಟೋಬರ್ 1817 – 27 ಮಾರ್ಚ್ 1898), ಹತ್ತೊಂಬತ್ತನೇ ಶತಮಾನದ ಬ್ರಿಟಿಷ್ ಭಾರತದಲ್ಲಿ ಭಾರತೀಯ ಮುಸ್ಲಿಂ ಸುಧಾರಕ ,  ತತ್ವಜ್ಞಾನಿ ಮತ್ತು ಶಿಕ್ಷಣತಜ್ಞ  ಎಂದು ಸಯ್ಯದ್ ಅಹ್ಮದ್ ಖಾನ್ ಎಂದು ಉಚ್ಚರಿಸಲಾಗುತ್ತದೆ . ಆರಂಭದಲ್ಲಿ ಹಿಂದೂ-ಮುಸ್ಲಿಂ ಏಕತೆಯನ್ನು ಪ್ರತಿಪಾದಿಸಿದರೂ , ನಂತರ ಅವರು ಭಾರತದಲ್ಲಿ ಮುಸ್ಲಿಂ ರಾಷ್ಟ್ರೀಯತೆಯ ಪ್ರವರ್ತಕರಾದರು ಮತ್ತು ಪಾಕಿಸ್ತಾನದ ಚಳವಳಿಯ ಆಧಾರವನ್ನು ರೂಪಿಸಿದ ದ್ವಿ-ರಾಷ್ಟ್ರ ಸಿದ್ಧಾಂತದ ಪಿತಾಮಹ ಎಂದು ವ್ಯಾಪಕವಾಗಿ ಮನ್ನಣೆ ಪಡೆದರು .  ಮೊಘಲ್ ನ್ಯಾಯಾಲಯದೊಂದಿಗೆ ಬಲವಾದ ಸಂಬಂಧವನ್ನು ಹೊಂದಿರುವ ಕುಟುಂಬದಲ್ಲಿ ಜನಿಸಿದ ಅಹ್ಮದ್ ಅವರು ನ್ಯಾಯಾಲಯದಲ್ಲಿ ವಿಜ್ಞಾನ ಮತ್ತು ಕುರಾನ್ ಅನ್ನು ಅಧ್ಯಯನ ಮಾಡಿದರು. 1889 ರಲ್ಲಿ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಿಂದ ಅವರಿಗೆ ಗೌರವ LLD ನೀಡಲಾಯಿತು.

1838 ರಲ್ಲಿ, ಸೈಯದ್ ಅಹ್ಮದ್ ಈಸ್ಟ್ ಇಂಡಿಯಾ ಕಂಪನಿಯ ಸೇವೆಯನ್ನು ಪ್ರವೇಶಿಸಿದರು ಮತ್ತು 1867 ರಲ್ಲಿ ಸಣ್ಣ ಕಾರಣಗಳ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದರು , 1876 ರಿಂದ ನಿವೃತ್ತರಾದರು . 1857 ರ ಭಾರತೀಯ ದಂಗೆಯ ಸಮಯದಲ್ಲಿ, ಅವರು ಬ್ರಿಟಿಷ್ ರಾಜ್‌ಗೆ ನಿಷ್ಠರಾಗಿ ಉಳಿದರು ಮತ್ತು ಅವರ ಹೆಸರುವಾಸಿಯಾಗಿದ್ದರು. ಯುರೋಪಿಯನ್ ಜೀವಗಳನ್ನು ಉಳಿಸುವ ಕ್ರಮಗಳು. ದಂಗೆಯ ನಂತರ, ಅವರು ಭಾರತೀಯ ದಂಗೆಯ ಕಾರಣಗಳು ಎಂಬ ಕಿರುಪುಸ್ತಕವನ್ನು ಬರೆದರು – ಆ ಸಮಯದಲ್ಲಿ ಅವರು ದಂಗೆಗೆ ಕಾರಣವಾದ ವಿವಿಧ ಬ್ರಿಟಿಷ್ ನೀತಿಗಳ ಧೈರ್ಯಶಾಲಿ ವಿಮರ್ಶೆ. ತಮ್ಮ ಸಾಂಪ್ರದಾಯಿಕ ದೃಷ್ಟಿಕೋನದ ಕಟ್ಟುನಿಟ್ಟಿನಿಂದ ಮುಸ್ಲಿಮರ ಭವಿಷ್ಯಕ್ಕೆ ಅಪಾಯವಿದೆ ಎಂದು ನಂಬಿದ ಸರ್ ಅಹ್ಮದ್ 1863 ರಲ್ಲಿ ಗಾಜಿಪುರದಲ್ಲಿ ಪಾಶ್ಚಿಮಾತ್ಯ ಶೈಲಿಯ ವಿಕ್ಟೋರಿಯಾ ಶಾಲೆ ಮತ್ತು 1863 ರಲ್ಲಿ ಮುಸ್ಲಿಮರಿಗೆ ವೈಜ್ಞಾನಿಕ ಸಮಾಜವನ್ನು ಉತ್ತೇಜಿಸಲು ಪ್ರಾರಂಭಿಸಿದರು. 1875 ರಲ್ಲಿ, ಮೊಹಮ್ಮದನ್ ಆಂಗ್ಲೋ-ಓರಿಯಂಟಲ್ ಕಾಲೇಜನ್ನು ಸ್ಥಾಪಿಸಿದರು , ಇದು ದಕ್ಷಿಣ ಏಷ್ಯಾದ ಮೊದಲ ಮುಸ್ಲಿಂ ವಿಶ್ವವಿದ್ಯಾಲಯವಾಗಿದೆ.  ಅವರ ವೃತ್ತಿಜೀವನದ ಅವಧಿಯಲ್ಲಿ, ಸೈಯದ್ ಅವರು ಬ್ರಿಟೀಷ್ ರಾಜ್‌ಗೆ ನಿಷ್ಠೆಯಿಂದ ಸೇವೆ ಸಲ್ಲಿಸಲು ಮುಸ್ಲಿಮರಿಗೆ ಪದೇ ಪದೇ ಕರೆ ನೀಡಿದರು ಮತ್ತು ಉರ್ದುವನ್ನು ಎಲ್ಲಾ ಭಾರತೀಯ ಮುಸ್ಲಿಮರ ಭಾಷಾ ಭಾಷೆಯಾಗಿ ಅಳವಡಿಸಿಕೊಳ್ಳಲು ಪ್ರಚಾರ ಮಾಡಿದರು . ಸೈಯದ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಟೀಕಿಸಿದರು .

ಸರ್ ಸೈಯದ್ ಅವರು ಪಾಕಿಸ್ತಾನದಲ್ಲಿ ಮತ್ತು ಭಾರತೀಯ ಮುಸ್ಲಿಮರಲ್ಲಿ ಬಲವಾದ ಪರಂಪರೆಯನ್ನು ಹೊಂದಿದ್ದಾರೆ . ಅವರು ಅಲ್ಲಾಮಾ ಇಕ್ಬಾಲ್ ಮತ್ತು ಮುಹಮ್ಮದ್ ಅಲಿ ಜಿನ್ನಾ ಸೇರಿದಂತೆ ಪಾಕಿಸ್ತಾನ ಚಳುವಳಿ ಮತ್ತು ಅದರ ಕಾರ್ಯಕರ್ತರಿಗೆ ಸ್ಫೂರ್ತಿಯ ಮೂಲವಾದರು . ಇಸ್ಲಾಂನ ವಿಚಾರವಾದಿ ಸಂಪ್ರದಾಯದ ಅವರ ಪ್ರತಿಪಾದನೆ ಮತ್ತು ಕುರಾನ್‌ನ ವಿಶಾಲವಾದ, ಆಮೂಲಾಗ್ರ ಮರುವ್ಯಾಖ್ಯಾನವು ಅದನ್ನು ವಿಜ್ಞಾನ ಮತ್ತು ಆಧುನಿಕತೆಗೆ ಹೊಂದಿಕೊಳ್ಳುವಂತೆ ಮಾಡುತ್ತದೆ, ಇದು ಜಾಗತಿಕ ಇಸ್ಲಾಮಿಕ್ ಸುಧಾರಣೆಯ ಮೇಲೆ ಪ್ರಭಾವ ಬೀರುತ್ತಿದೆ . ಪಾಕಿಸ್ತಾನದ ಅನೇಕ ವಿಶ್ವವಿದ್ಯಾನಿಲಯಗಳು ಮತ್ತು ಸಾರ್ವಜನಿಕ ಕಟ್ಟಡಗಳು ಸರ್ ಸೈಯದ್ ಅವರ ಹೆಸರನ್ನು ಹೊಂದಿವೆ.  ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯವು 17 ಅಕ್ಟೋಬರ್ 2017 ರಂದು ಸರ್ ಸೈಯದ್ ಅವರ 200 ನೇ ಜನ್ಮ ಶತಮಾನೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸಿತು. ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಖ್ಯ ಅತಿಥಿಯಾಗಿದ್ದರು.

ಶ್ರೀ ನಾರಾಯಣಗುರು

ನಾರಾಯಣ ಗುರು 1967 stamp of India

ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.ನಾರಾಯಣ ಗುರು 1967 stamp of India೧೨ನೆ ಶತಮಾನದ ಬಸವಣ್ಣನ ಕಾಲದ ಕ್ರೌರ್ಯಕ್ಕಿಂತ ಇಮ್ಮಡಿ, ಮುಮ್ಮಡಿಯಾದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ ೧೯ನೆ ಶತಮಾನದ ಅಂತ್ಯ ಮತ್ತು ೨೦ನೆ ಶತಮಾನದ ಆರಂಭದಲ್ಲಿ ನಡೆದಿತ್ತು. ಆಗಿನ ಕೇರಳದಲ್ಲಿ ಇಡೀ ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ ನಂಬೂದರಿ ಎಂಬ ಬ್ರಾಹ್ಮಣ ವರ್ಗದಿಂದ ಶೂದ್ರರ ಮೇಲೆ, ಅಸ್ಪ್ರಷ್ಯರ ಮೇಲೆ ಮತ್ತು ಸ್ತ್ರೀಯರ ಮೇಲೆ ನಡೆದಿತ್ತು. ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇಡೀ ಶೂದ್ರ ಜನಸಮೂಹವನ್ನು ಉಸಿರುಗಟ್ಟಿ ಸಾಯುಸಿತ್ತಿರುವ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ’ ಎಂಬ ಅಸ್ಪ್ರಶ್ಯ ಜಾತಿಯಲ್ಲಿ ನಾರಾಯಣ ಗುರು ಎಂಬ ಪವಿತ್ರಾತ್ಮನ ಜನ್ಮವಾಯಿತು. ಇಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ, ಪ್ರವಾದಿಯಂತೆ ಜನ್ಮ ತಾಳುತ್ತಾರೆ. ಅನ್ಯ ಧರ್ಮಗಳನ್ನು ಖಂಡಿಸಿ ಅದ್ವೈತ ಮತ ಸ್ಥಾಪನಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ಶಂಕರಾಚಾರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತಕ್ಕೆ ಓರ್ವ ಹರಿಜನ ಗುರು ಎಂದು ಸ್ವೀಕರಿಸಿಕೊಂಡರೆ, ಕಾಲಕ್ರಮದಲ್ಲಿ ಅವರ ಹುಟ್ಟು ನಾಡಾದ ಕೇರಳವು ಜಾತಿಭೇದ ಮತ್ತು ಅಸ್ಪ್ರಶ್ಯತೆಯ ಹುಚ್ಚರ ಸಂತೆಯಾಯಿತು. ಅಂತಹ ಗೊಂದಲಮಯ ವಾತಾವರಣದಲ್ಲಿ ನಾರಾಯಣ ಗುರುಗಳ ಜನನವಾಯಿತು. ಈಳವ ಜಾತಿ ಕೇರಳದ ಅಸ್ಪ್ರಶ್ಯ ಜಾತಿಗಳಲ್ಲಿ ಒಂದಾಗಿದ್ದಿತು. ಕೇರಳದಲ್ಲಿ ಆ ಜಾತಿಯ ಜನ ೩೦% ಇದ್ದರು. ನಾರಾಯಣ ಗುರುಗಳು ಕೇವಲ ಈಳವ ಜಾತಿಯವರನ್ನಲ್ಲದೆ, ಸಮಸ್ತ ಅಸ್ಪ್ರಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಅವರ ಪ್ರಯತ್ನವನ್ನು ಅವರ ಬದುಕಿನ ಮಹತ್ಸಾಧನೆ ಎನ್ನಬಹುದು. ನಾರಾಯಣ ಗುರುಗಳನ್ನು ಒಂದು ನಿರ್ದಿಷ್ಟ ಜಾತಿಯ ಗುರುವೆಂದು ಭಾವಿಸುವುದು ಸಂಕುಚಿತ ಮನೋಭಾವದ ಪ್ರತೀಕವೆನಿಸುವುದು.ಪ್ರಾಚೀನ ಮೌಲ್ಯಾದರ್ಶಗಳನ್ನು, ಸತ್ಯವನ್ನು, ಅರಸಿಕೊಂಡು ಹೋಗಿ ಮನೆಯನ್ನು ತ್ಯಜಿಸಿ, ತಪಸ್ಸು ಮಾಡುತ್ತ ಗುಡ್ಡ, ಗಿರಿ, ಬೆಟ್ಟ, ಕಂದರ, ದಟ್ಟಾರಣ್ಯ, ಗುಹೆ, ಪರ್ಣಶಾಲೆಗಳಲ್ಲಿದ್ದು ಅನೇಕ ವರ್ಷ ಸಾಧನೆ ಮಾಡಿದರು.ಗುರುಗಳ ಸಮಾಧಿಯ ಬಳಿಕ ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿದ್ದ ಎನಿಬೆಸಂಟರು ಪತ್ರಿಕೆಯಲ್ಲಿ ಹೀಗೆ ಬರೆದಿದ್ದರು:` ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಇತ್ತೀಚಿಗಿನ ಶತಮಾನದಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದ ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ನಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಏಸು ಗಳೆಲ್ಲರಂತೆ ಇದ್ದರು. ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಅವರನ್ನು ದೇವರೆಂದು ಆರಾಧಿಸುವರು.

ನಾರಾಯಣ ಗುರುಗಳು ಮತ್ತು ಸಾಮಾಜಿಕ ಸುಧಾರಣೆಗಳು

ಅಧ್ಯಾತ್ಮಿಕ ಸಾಧನೆಯಾದ ಬ್ರಹ್ಮನ್- ಆತ್ಮನ್ ಸಾಕ್ಷಾತ್ಕಾರದ ನಂತರವೂ ಗುರುಗಳು ಮಾನವ ಜನಾಂಗದ ಉನ್ನತಿಗಾಗಿ ಸಮಾಜ ಸೇವೆಯನ್ನು ಕೈಗೆತ್ತಿಕೊಂಡರು. ಎಸ್. ಎನ್. ಡಿ. ಪಿ. ಯ ಯೋಗಂ ಸಂಸ್ಥೆಯು ಶಿಕ್ಷಣ ಮತ್ತು ಗುರುಗಳ ಸಿದ್ಧಾಂತವಾದ ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವುದು, ಉತ್ತಮಿಸುವುದು, ವಿಶೇಷವಾಗಿ ಮೂಲ್ಭೂತಮಾನವ ಹಕ್ಕುಗಳ ಸಂರಕ್ಷಣೆಗಾಗಿ ಅಸ್ಪ್ರಶ್ಯತಾ ನಿರ್ಮೂಲ ಮಾಡುವುದು ಈ ಮುಂತಾದ ಗುರಿಗಳನ್ನು ಇಟ್ಟುಕೊಂಡಿತ್ತ್ರು. ಮೊದಲನೆಯದಾಗಿ ತನ್ನು ಆಧ್ಯಾತ್ಮಿಕ ಜ್ನಾನವನ್ನು ಶ್ರೀಮಂತಗೊಳಿಸಿಕೊಳ್ಖುವುದು ಮತ್ತು ಅದನ್ನು ಜನರ ಕಲ್ಯಾಣಭಿವೃದ್ಧಿಗಾಗಿ ಬಳಸಿಕೊಳ್ಳುವುದು. ಎರಡನೆಯ ಹೆಜ್ಜೆಯೆಂದರೆ ಜನರೊಂದಿಗೆ ವ್ಯಕ್ತಿಗತ ಸಂಪರ್ಕವನ್ನು ಹೊಂದಿರುವುದು. ನೊಂದ ಜನರ ಹೃದಯಗಳನ್ನು ಸಾಂತ್ವನದ ಮಾತುಗ್ಳಿಂದ ತಣಿಸುವುದು, ಅವರ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು. ಕೊನೆಯದಾಗಿ ಅವರ ಚಟುವಟಿಕೆಗಳು: ಎಸ್. ಎನ್. ಡಿ. ಪಿ. ಯೋಗಮ್ ಮತ್ತು ಅಧ್ಯಾತ್ಮಿಕ ಅರಸುವಿಕೆಯಲ್ಲಿ ತೊಡಗಿರುವ ಶಿಷ್ಯರ ಆಮಂತ್ರಣಕ್ಕೆ ಸೀಮಿತಗೊಂಡವು. ೧೮೮೪ ರಿಂದ ೧೯೦೪ರವರೆಗೆ ಗುರುಗಳು ಅರುವಿಪ್ಪುರಮ್‌ನಲ್ಲಿ ವಾಸ್ತವ್ಯ ಹೂಡಿದರು. ಈ ಅವಧಿಯಲ್ಲಿಯೇ ಎಸ್. ಎನ್. ಡಿ. ಪಿ. ಯೋಗಮ್ ಸ್ಥಾಪನೆಯಾಯಿತು. ಯೋಗಮ್ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಳಿತಕ್ಲೂಳಗಾದ ಜನರ ಶಕ್ತಿಶಾಲಿ ದನಿಯಾಯಿತು. ಗುರುಗಳು ದುರ್ಬಲ ವರ್ಗದವರ ಏಳ್ಗೆಗೆ ಅದರಲ್ಲೂ ಹರಿಜನರ ಏಳ್ಘೆಗಾಗಿ ಸಮಾಜ ಸುಧಾರಕರಿಗೆ ಸರಿಯಾದ ನಿರ್ದೇಶನಗಳನ್ನು ನೀಡಿ ಉನ್ನತ ಆದರ್ಶಗಳನ್ನು ಪ್ರಚಾರ ಮಾಡಲು ಪ್ರೇರಣೆ ನೀಡಿದರು. ಬೋಡಕರಿಗೆ ಶಿಕ್ಷಣ, ಧರ್ಮ, ನೀತಿ ತತ್ವಗಳು ನೀತಿ, ನಿಯಮಗಳು, ಪದ್ಧತಿಗಳು ಉದ್ದಿಮೆ ಇವುಗಳ ಬಗ್ಗೆ ಒತ್ತು ನೀಡುವಂತೆ ಸೂಚಿಸಲಾಯಿತು. ಗುರುಗಳ ಸ್ಂದೇಶ ಹೀಗಿದೆ:` ಶಿಕ್ಷಣ ಪ್ಡೆಯಿರಿ; ನೀವು ಸ್ವತಂತ್ರರಾಗುತ್ತೀರಿ. ಸಂಘಟಿತರಾಗಿರಿ; ನೀವು ಬಲಿಷ್ಟರಾಗುತ್ತೀರಿ. ಔದ್ಯೋಗಿಕವಾಗಿಉದ್ದಿಮೆಗಳನ್ನು ಸ್ಥಾಪಿಸಿ; ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಗುರುಗಳು ತಾವು ಉದ್ದೇಶಿಸಿರುವ ಸಮಾಜ ಸುಧಾರಣೆ ಜನರಿಗೆ ತಲುಪುವಂತೆ `ವಿವೇಕೋದಯಮ್’ ಎಂಬ ಮಾಸಿಕ ಪತ್ರಿಕೆಯನ್ನು ಹೊರತರುವಂತೆ ಸೂಚಿಸಿದರು. ೧೬ನೆ ಒಕ್ಟೋಬರ್ ೧೯೦೫ ರಂದು ಪರವುರ್ ನ್ ಸಭಯಲ್ಲಿ ಅಧ್ಯಕ್ಷತೆ ವಹಿಸಿ ಮದುವೆಯ ಸಮಾರಂಭಕ್ಕೆ ಕೆಲ್ವು ಹೊಸ ನಡೆಗಳನ್ನು ಪರಿಚಯಿಸಿದರು. ಮತ್ತು `ತಾಳಿಕೆಟ್ಟು’, `ತಿರ್ಂಡು ಕಲ್ಯಾಣಮ್’, ಅಂತಹ ಕೆಟ್ಟ ಸಾಂಪ್ರ್ದಾಯಗಳನ್ನು ನಿರ್ಮೂಲನೆ ಮಾಡುವಂತೆ ಕರೆ ಕೊಟ್ಟರು.

ತಾಳಿಕೆಟ್ಟು ಅಥವಾ ಮಿನ್ನು ಕೆಟ್ಟು ಅಥವಾ ಕೆಟ್ಟು ಕಲ್ಯಾಣಮ್ ಇದು ಹಿಂದುಳಿದ ವರ್ಗದವರಲ್ಲಿ ದುಂದು ವೆಚ್ಚಕ್ಕೆ ದಾರಿ ಮಾಡಿಕೊಡುವ ಅರ್ಥವಿಲ್ಲದ ಕೆಟ್ಟ ಸಂಪ್ರದಾಯ. ಇಂಥ ಹಲವಾರು ಸಂಪ್ರದಾಯಗಳ್ಲ್ಲಿ ತಾಳಿ ಕಟ್ಟುವ ಆಚರಣೆಯೂ ಒಂದು. ಒಂದು ಹೆಣ್ಣು ಮಗುವಿಗೆ ಸುಮಾರು ೫ ವರ್ಷ ತುಂಬಿದಾಗ ಪ್ರಾಯಕ್ಕೆ ಬರುವ ಮೊದಲೆ ಮಾಡುವ ಅಣಕು ಮದುವೆ ಇದಾಗಿದ್ದು, ಹುಡುಗಿಯ ಕೊರಳಿಗೆ ಒಬ್ಬ ಹುಡುಗ, ಕೆಲವೊಮ್ಮೆ ಯಾರಾದರೂ ಯುವಕನೊಬ್ಬ ತಾಳಿ ಕಟ್ಟುತ್ತಾನೆ. ಭವಿಷ್ಯದಲ್ಲಿ ಮದುವೆ ಮಾಡುತ್ತೇವೆ ಎಂಬುದರ ಸಂಕೇತವಾದ ಈ ಅಣಕು ಮದುವೆಗೆ ಯ್ವುದೇ ಕಾನೂನಿನ ಆಧಾರವಿಲ್ಲ. ಹೀಗೆ ತಾಳಿ ಕಟ್ಟಿದವನೇ ಮದುವೆಯಾಗುತ್ತಾನೆ ಎಂಬ ನಿಯಮವೇನೂ ಇಲ್ಲ. ನಿಜವಾದ ಮದುವೆಗೆ ಮಾಡುವಂತೆ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ.

ತಾಳಿ ಕಟ್ಟಿದ ನಂತರ ಹುಡುಗ ಅವನ ಪಾಡಿಗೆ ತನ್ನ ಜೊತೆಗಾರರೊಂದಿಗೆ ಹೋಗುತ್ತಾನೆ. ಆ ಹುಡುಗನಿಗೆ ಹುಡುಗಿಯ ಕಡೆಯವರು ಬೇಕಾದಷ್ಟು ಹಣ್, ಹೊಸ ಬಟ್ಟೆ, ತೆಂಗಿನ ಕಾಯಿಗಳನ್ನು ಕೊಡುತ್ತಾರೆ. ಹಬ್ಬದ ವಾತಾವರಣ, ಭೂಇ ಭೋಜನ, ಉಡುಗೊರೆ ಮುಂತಾದ ಕಾರ್ಯಕ್ರಮಗಳೆಲ್ಲ ವೈಭವದಿಂದಲೆ ನಡೆಯುತ್ತವೆ. ಹುಡುಗಿ ತನ್ನ ತವರು ಮನೆಗೆ ಹೋದಾಗ ತಾಳಿಯನ್ನು ತೆಗೆಯುತ್ತಾರೆ. ಮುಂದೆ ಋತುಮತಿಯಾದ ಬಳಿಕ ವರನನ್ನು ಹುಡುಕಿ ಮೊದ್ಲು ತಾಳಿ ಕಟ್ಟಿದವನೂ ಆಗಬಹುದು, ವ್ಯವಸ್ಥಿತವಾದ ನಿಜ ಮದುವೆಯನ್ನು ಏರ್ಪಡಿಸುತ್ತಾರೆ. ಈ ಅರ್ಥಹೀನ, ಲಜ್ಜಾಸ್ಪದ ಆಚರಣೆಗಳನ್ನು ಗುರುಗಳು ವಿರೋಧಿಸಿದರು. ಶ್ರೀಮ್ಂತ ಮತ್ತು ಸಂಪ್ರದಾಯಸ್ಥರು ಇದು ಪ್ರತಿಷ್ಟೆಯ ಪ್ರಶ್ನೆ, ನಿಲ್ಲಿಸಿದರೆ ಸಮಾಜಕ್ಕೆ ಕೇಡುಂಟಾಗುತ್ತದೆ ಎಂಬ ವಾದವನ್ನು ಮುಂದಿಟ್ಟರೂ, ಕೇಳ್ದೇ ಗುರುಗಳು ಹೋರಾಟವನ್ನು ಮುಂದುವರಿಸಿದರು. ಎಸ್. ಎನ್. ಡಿ. ಪಿ. ಯೋಗಂ ನ ಮುಖವಾಣಿಯಾದ `ವಿವೇಕೋದಯಂ’ ಪತ್ರಿಕೆಯ ಎಲ್ಲ ಸಂಚಿಕೆಗಳಲ್ಲೂ ಈ ಆಚರಣೆಯಿಂದಾಗುವ ಕೆಡುಕುಗಳನ್ನು ಪ್ರಕಟಿಸುತ್ತಲೇ ಬಂದರು. ೧೯೦೬ರಲ್ಲಿ ಚೇರ್ತಲ ತಾಲೂಕಿನ ದೊಡ್ಡ ಶ್ರೀಮಂತನೂ, ಗುರುಗಳ ಭಕ್ತನೂ ಆಗಿದ್ದ ಕೊಚ್ಚು ರಾಮನ್ ವೈದ್ಯರ್ ಎಂಬವರ ಕುಟುಂಬದವರಲ್ಲಿ ಓರ್ವ ಹುಡುಗಿಗೆ ತಾಳಿ ಕಟ್ಟುವ ಸಮಾರಂಭದ ಬಗ್ಗೆ ತಿಳಿದ ಗುರುಗಳು ಬಧಕಗಳ ಬಗ್ಗೆ ವವರಿಸಿ, ಈಗ ಇದನ್ನು ತ್ಯಜಿಸುವುದರಿಂದ ನಮ್ಮವರೆ ಮನಸ್ಸಿಗೆ ನೋವಾದರೂ ಮುಂದಿನ ಪೀಳಿಗೆ ಇದರ ಫಲವನ್ನು ಸಂತೋಷದಿಂದ ಅನುಭವಿಸಲಿ ಎಂದು ಪತ್ರ ಬರೆದರು. ಪತ್ರವನ್ನೋದಿದ ಕೊಚ್ಚು ರಾಮನ್ ವೈದ್ಯರು ತಾನು ಏರ್ಪಡಿಸಲು ನಿರ್ಧರಿಸಿದ ಸಮಾರಂಭವನ್ನು ರದ್ದುಪ್ಡಿಸಿದರು. ಹೀಗೆ ಒಬ್ಬ ವ್ಯಕ್ತಿಯ ಶಾಂತವಾದ ಕೆಲವು ಹಿತೋಪದೇಶದಿಂದ ಸಮಾಜದಲ್ಲಿ ಇಂತಹ ಪರಿವರ್ತನೆ ಯಾಗುವುದಾದರೆ, ಈ ಮಹಾಮಹಿಮನ ಅಸಾಮಾನ್ಯ ಶಕ್ತಿಯ ಅರಿವು ಯಾರಿಗಾದರೂ ಆಗದಿರಲು ಸಾಧ್ಯವೇ? ಅಂತೆಯೇ ಅಳಿಯ ಸಂತಾನ ಪದ್ಧತಿಯ ಬಾಧಕಗಳನ್ನು ವಿವರಿಸಿ ಅದನ್ನು ತಡೆಹಿಡಿದ ಖ್ಯಾತಿ ಇವರದು. ಸೀಮಂತ ಕಾರ್ಯಕ್ರಮದಲ್ಲಿ ಆಗುವ ದುಂದು ವೆಚ್ಚಕ್ಕೆ ತಡೆ ಹ್ಶಾಕಿದರು. ವಿವಾಹ ವಿಚ್ಛೇದನ ಹಾಗೂ ಪುನರ್ರವಿವಾಹ ಅನಿವಾರ್ಯವಾದಲ್ಲಿ ಮಾಡಿಕೊಳ್ಳಬಹುದು ಎಂದರು. ಬಹು ಪತ್ನಿತ್ವ ಹಾಗೂ ಬಹು ಪತಿತ್ವ ಸಮಾಜಕ್ಕೆ ಹಿತವಲ್ಲ ಎಂದು ಅದಕ್ಕೂ ತಡೆಹಾಕಿದರು. ಸರಳ ವಿವಾಹಕ್ಕೆ ಒತ್ತು ನೀಡಿದರು. ಅಂತ್ಯ ಕ್ರಿಯೆಯಲ್ಲಿ ಮಾಡುವ ದುಂದು ವೆಚ್ಚಕ್ಕೆ ವಿರೋಧ ವ್ಯಕ್ತ ಪ್ಡಿಸಿದರು. ಹೊಸ ದೇವಸ್ಥಾನಗಳ ನಿರ್ಮಾಣವನ್ನು ವಿರೋಧಿಸಿದರು.

********