ಸರ್ವಜ್ಞನ ತ್ರಿಪದಿಗಳು – ಪಾಠ – 10 (ಪದ್ಯ)

ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದು |
ತನ್ನಂತೆ ಪರರ ಬಗೆದೊಡೆ ಕೈಲಾಸ |
ಬಿನ್ನಾಣವಕ್ಕು ಸರ್ವಜ್ಞ

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ
ಕೊಟ್ಟಿದ್ದು ಕೆಟ್ಟಿತ್ತೆನಬೇಡ ಮುಂದಕ್ಕೆ |
ಕಟ್ಟಿಹುದು ಬುತ್ತಿ | ಸರ್ವಜ್ಞ

ಜಾತಿಹೀನನ ಮನೆಯ | ಜ್ಯೋತಿ ತಾ ಹೀನವೇ |
ಜಾತಿ ವಿಜಾತಿಯೆನಬೇಡ – ದೇವನೊಲಿ |
ದಾತನೇ ಜಾತ ಸರ್ವಜ್ಞ

ಆಗ ಬಾ | ಈಗ ಬಾ | ಹೋಗಿ ಬಾ | ಎನ್ನದಲೆ |
ಆಗಲೇ ಕರೆದು ಕೊಡುವನ ಧರ್ಮ |
ಹೊನ್ನಾಗದೆ ಬಿಡದು | ಸರ್ವಜ್ಞ

ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ |
ನಡುವೆ ಎತ್ತಣದು? ಸರ್ವಜ್ಞ

ಕೋಪವೆಂಬುದು ತಾನು | ಪಾಪದಾ ನೆಲೆಗಟ್ಟು |
ಆಪತ್ತು ಸುಖವು ಸರಿಯೆಂದು ಕಾಂಬವಗೆ |
ಪಾಪವೆಲ್ಲಿಹುದು ಸರ್ವಜ್ಞ – ಸರ್ವಜ್ಞ

ನುಡಿದಂತೆ ನಡೆ, ನಡೆದಂತೆ ನುಡಿ.

ಪದ್ಯದ ಮಾದರಿ ಗಾಯನ

https://youtu.be/eVGGRcnFjes

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಪದಗಳ ಅರ್ಥ

ಇಕ್ಕು – ಇರಿಸು, ಬಡಿಸು, ನೀಡು;
ನನ್ನಿ – ನಿಜ, ದಿಟ;
ಬಿನ್ನಾಣ – ಬೆಡಗು, ವೈಯ್ಯಾರ:
ಅಗ್ನಿ – ಬೆಂಕಿ;
ಕುಲಗೋತ್ರ – ವಂಶ, ಜಾತಿ;
ಆಪತ್ತು – ಅಪಾಯ, ತೊಂದರೆ;
ಬಗೆ – ರೀತಿ, ವಿಧ.

ಟಿಪ್ಪಣಿ

ಬುತ್ತಿ – ಪ್ರಯಾಣ ಕಾಲಕ್ಕಾಗಿ ಕಟ್ಟಿ ಸಿದ್ಧಪಡಿಸಿದ ಮೊಸರನ್ನ, ಕಲಸನ್ನ, ರೊಟ್ಟಿ ಮೊದಲಾದವುಗಳನ್ನು ಒಳಗೊಂಡದ್ದು.
ತ್ರಿಪದಿ – ಮೂರು ಸಾಲುಗಳನ್ನು ಹೊಂದಿರುವ ಪದ್ಯ.

ಸಂವೇದ ವಿಡಿಯೋ ಪಾಠಗಳು

Samveda Kannada 4th SaravagnanaTripadigalu 1 of 1

ಪೂರಕ ವಿಡಿಯೋಗಳು

4th Class Kannada|| Sarvagna Tripadigalu||ಸರ್ವಜ್ಞನ ತ್ರಿಪದಿಗಳು||savi kannada||ಸವಿ ಕನ್ನಡ||

ಪ್ರಶ್ನೋತ್ತರಗಳು ಹಾಗೂ ಭಾಷಾಭ್ಯಾಸ

ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.