ನೀನು ರಸ್ತೆಯಲ್ಲಿ ನಡೆಯುವಾಗ ಅಥವಾ ವಾಹನಗಳಲ್ಲಿ ಹೋಗುವಾಗ ರಸ್ತೆಯ ಬದಿಯಲ್ಲಿ ಹಲವು ಫಲಕಗಳನ್ನು ನೋಡಿರುವೆ. ಅವುಗಳನ್ನು ಏಕೆ ಹಾಕಿರುತ್ತಾರೆ ಎಂಬುದು ನಿನಗೆ ತಿಳಿದಿದೆಯೆ? ಕೆಳಗಿನ ಚಿತ್ರ-ಕಥೆಯನ್ನು ಓದು.

ಸವಿತಾ, ಫಾತಿಮಾ, ನೀರಜ್, ಮೇರಿ ಮತ್ತು ಅವರ ಶಿಕ್ಷಕರು ನಗರದ ಪಾದಚಾರಿ ರಸ್ತೆಯಲ್ಲಿ ನಿಂತಿದ್ದಾರೆ. ಸಂಚಾರ ಪೆÇಲೀಸ್, ವಾಹನಗಳ ಸಂಚಾರದ ನಿಯಂತ್ರಣ ಮಾಡುತ್ತಿದ್ದಾರೆ.

ಅಷ್ಟರಲ್ಲಿ ಇನ್ನೊಬ್ಬ ಸಂಚಾರ ಪೆÇಲೀಸ್ ಅವರ ಹತ್ತಿರ ಬಂದರು. ಶಿಕ್ಷಕರು ಅವರ ಪರಿಚಯ ಮಾಡಿಕೊಂಡರು.

ಅಷ್ಟರಲ್ಲಿ ನೀರಜ್ ಸಂಕೇತ ದೀಪವನ್ನು ನೋಡಿದ.

ಅಷ್ಟರಲ್ಲಿ ಸಂಕೇತ ದೀಪದಲ್ಲಿ ಕೆಂಪು ದೀಪ ಹತ್ತಿತು. ಶಿಕ್ಷಕರು ಮತ್ತು ಮಕ್ಕಳು ದಾಟಬೇಕಾದ ರಸ್ತೆಯ ವಾಹನಗಳು ನಿಂತವು.

ಎಲ್ಲರೂ ಝೀಬ್ರಾ ಪಟ್ಟಿಯ ಮೂಲಕ ರಸ್ತೆಯನ್ನು ದಾಟಿದರು.

ಚಿತ್ರಕಥೆ ಓದಿದೆಯಲ್ಲವೆ? ಸವಿತಾ, ಫಾತಿಮಾ, ನೀರಜ್ ಹಾಗೂ ಮೇರಿ ರಸ್ತೆಯ ಬದಿಯಲ್ಲಿ ಹಾಕಿದ ಕೆಲವು ಸಂಕೇತಗಳು ಹಾಗೂ ಅವುಗಳ ಸೂಚನೆಗಳನ್ನು ಸಂಚಾರ ಪೋಲೀಸರಿಂದ ಕೇಳಿ ತಿಳಿದುಕೊಂಡಿದ್ದಾರೆ. ನೀನೂ ತಿಳಿದುಕೊಂಡೆಯಲ್ಲವೆ? ಹಾಗಾದರೆ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸು.

ಪಾದಚಾರಿಗಳು ರಸ್ತೆಯನ್ನು ಎಲ್ಲಿ ದಾಟಬೇಕು? ————————-

ಸಂಕೇತ ದೀಪದಲ್ಲಿ ಯಾವ ಬಣ್ಣದ ದೀಪಗಳಿವೆ? ———————–

ಸಂಕೇತ ದೀಪಗಳಿಂದಾಗುವ ಒಂದು ಅನುಕೂಲವನ್ನು ಇಲ್ಲಿ ಬರೆ. ————————

ನೀನು ಶಾಲೆಗೆ ಬರುವ ದಾರಿಯಲ್ಲಿ ಸಂಕೇತ ದೀಪಗಳಿವೆಯೇ? ————————

ನೀನು ರಸ್ತೆ ದಾಟುವಾಗ ತೆಗೆದುಕೊಳ್ಳುವ ಎಚ್ಚರಿಕೆಗಳು ಯಾವುವು? ಏಕೆ? ——————–

ರಸ್ತೆಯ ಬದಿಯಲ್ಲಿ ಹಾಕುವ ಕೆಲವು ಸಂಕೇತಗಳು ಮತ್ತು ಅವುಗಳ ಸೂಚನೆಯನ್ನು ಮುಂದೆ ಕೊಟ್ಟಿದೆ. ಅವುಗಳನ್ನು ಗೆರೆ ಎಳೆದು ಹೊಂದಿಸು.

ನಾವು ಸುರಕ್ಷಿತವಾಗಿ ರಸ್ತೆಯಲ್ಲಿ ಸಂಚರಿಸಲು ಇರುವ ನಿಯಮಗಳೇ ಸಂಚಾರ ನಿಯಮಗಳು. ನಮ್ಮ ಮತ್ತು ವಾಹನಗಳ ಸುರಕ್ಷತೆಗಾಗಿ ರಸ್ತೆಯ ಅಲ್ಲಲ್ಲಿ ಸಂಕೇತಗಳು ಮತ್ತು ಸೂಚನಾ ಫಲಕಗಳನ್ನು ಹಾಕಿರುತ್ತಾರೆ.

ಸಂಚಾರ ನಿಯಮಗಳ ಪಾಲನೆಯಿಂದ ಆಗುವ ಎರಡು ಅನುಕೂಲಗಳನ್ನು ಇಲ್ಲಿ ಬರೆ.

  1. ——————–
  2. ——————–

ಕೆಳಗಿನ ಪಟ್ಟಿಯಲ್ಲಿ ಪಾದಚಾರಿಗಳು ಅನುಸರಿಸಬೇಕಾದ ಕೆಲವು ಸಂಚಾರ ನಿಯಮಗಳನ್ನು ಕೊಟ್ಟಿದೆ. ಸೂಕ್ತವಾದುದರ ಮುಂದೆ ಗುರುತು ಹಾಕು. ತಪ್ಪಾಗಿದ್ದರೆ ಅದರ ಮುಂದಿನ ಸ್ಥಳದಲ್ಲಿ ಸರಿಪಡಿಸಿ ಬರೆ.

ಕೆಳಗೆ ನೀಡಲಾದ ಸಂಕೇತ ಫಲಕಗಳನ್ನು ನಿನ್ನ ಊರಿನಲ್ಲಿ ಎಲ್ಲೆಲ್ಲಿ ಹಾಕಬಹುದು ಎಂಬುದನ್ನು ಖಾಲಿ ಸ್ಥಳದಲ್ಲಿ ಬರೆ. ಒಂದು ಉದಾಹರಣೆ ಕೊಡಲಾಗಿದೆ. ಗಮನಿಸು.

ಓದಿ-ತಿಳಿ
ರಸ್ತೆಯ ನಿಯಮಗಳನ್ನು ಪಾಲಿಸಿದರೆ ನಮಗೆ ತೊಂದರೆಯಾಗುವುದಿಲ್ಲ. ಸಂಚಾರ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು.

ಮನೆಯಲ್ಲಿ ಮತ್ತು ಶಾಲೆಯಲ್ಲಿ ಸಂಭವಿಸಬಹುದಾದ ಕೆಲವು ಅಪಘಾತಗಳ ಬಗ್ಗೆ ನೀನು ಈಗಾಗಲೇ ತಿಳಿದಿರುವೆ. ಉದಾಹರಣೆಗೆ, ವಿದ್ಯುತ್ ಉಪಕರಣಗಳು, ಗ್ಯಾಸ್ ಒಲೆ, ಚಾಕು, ಬ್ಲೇಡು, ಈಳಿಗೆ ಮಣೆ ಮುಂತಾದವುಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಅಪಾಯಗಳಿಗೆ ತುತ್ತಾಗುವ ಸಂಭವಗಳಿವೆ. ನಿನಗೆ ತಿಳಿದಿರುವ 5 ಅಪಘಾತ ಸನ್ನಿವೇಶಗಳನ್ನು ಈ ಪಟ್ಟಿಯಲ್ಲಿ ಬರೆ. ಅದಕ್ಕೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನೂ ಬರೆ.

* ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡಲು, ಇಂಧನ ಉಳಿಸಲು ಹಾಗೂ ಗಾಳಿ ಮಲಿನವಾಗುವುದನ್ನು ತಪ್ಪಿಸಲು ಬೆಂಗಳೂರಿನಲ್ಲಿ ಬಸ್ ದಿನ ಆಚರಿಸಲಾಗುತ್ತದೆ. ಬಸ್ ದಿನದಂದು ಸ್ವಂತ ವಾಹನವಿರುವ ಅನೇಕ ಜನರು ಬಸ್‍ನಲ್ಲಿಯೇ ಸಂಚಾರ ಮಾಡುತ್ತಾರೆ.
* ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಒಂದು ವಾರ ಸಾರಿಗೆ ಸಂಸ್ಥೆಯವರು `ರಸ್ತೆ ಸುರಕ್ಷತಾಸಪ್ತಾಹ’ವನ್ನು ಆಚರಿಸುತ್ತಾರೆ.
* ನಗರ ಪ್ರದೇಶಗಳಲ್ಲಿ ಸಾರಿಗೆ ಇಲಾಖೆಯವರು ಶಾಲಾ ಮಕ್ಕಳಿಗೆ ರಸ್ತೆ ಸಂಚಾರ ನಿಯಮಗಳ ಕುರಿತು ತರಬೇತಿಯನ್ನು ನೀಡುತ್ತಾರೆ.
* ರಸ್ತೆ ಅಪಘಾತಗಳಾದಾಗ ತುರ್ತು ಚಿಕಿತ್ಸೆಗಾಗಿ ನಮ್ಮ ರಾಜ್ಯದಲ್ಲಿ 108 ಸಂಖ್ಯೆ ಇರುವ ಆ್ಯಂಬುಲೆನ್ಸ್ ವಾಹನದ ಉಚಿತ ವ್ಯವಸ್ಥೆ ಇದೆ.

Samveda 4th EVS SANCHARI NIYAMAGALU PART 1OF1 – 4 KM EVS 
4ನೇ ತರಗತಿ ಪರಿಸರ ಅಧ್ಯಯನ ಸಂಚಾರ ನಿಯಮಗಳು ಪಾಠದ ಪ್ರಶ್ನೋತ್ತರಗಳು 4th sanchara niyamagalu question answers
ಪ್ರಶ್ನೋತ್ತರಗಳಿಗಾಗಿ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಸಂಚಾರಿ ನಿಯಮಗಳು.Traffic rules in Kannada.’
ವಾಹನ ಚಾಲನೆ ಮಾಡುವ ಪ್ರತಿಯೊಬ್ಬರೂ ತಿಳಿದಿರಬೇಕಾದ ಸಂಚಾರ ಸಂಕೇತಗಳು | Traffic Signs