ಸಂಕಲನ
ದಶಕವಿಲ್ಲದಂತೆ 5–ಅಂಕಿಯ ಸಂಖ್ಯೆಗಳನ್ನು ಕೂಡುವುದು.
4–ಅಂಕಿಯ ಸಂಖ್ಯೆಗಳನ್ನು ಕೂಡುವಂತೆಯೇ 5–ಅಂಕಿಯ ಸಂಖ್ಯೆಗಳನ್ನು ಕೂಡುವುದು. ಬಿಡಿ, ಹತ್ತು, ನೂರು, ಸಾವಿರ ಸ್ಥಾನದ ಅಂಕಿಗಳನ್ನು ಸಂಕಲನ ಮಾಡಿದ ನಂತರ ಹತ್ತುಸಾವಿರ ಸ್ಥಾನದ ಅಂಕಿಗಳನ್ನು ಸಂಕಲನ ಮಾಡಬೇಕು.
ಉದಾಹರಣೆ 1
45,237 ಮತ್ತು 31,210 ಸಂಖ್ಯೆಗಳನ್ನು ಕೂಡಿರಿ.
ಈ ಎರಡು ಸಂಖ್ಯೆಗಳ ಸಂಕಲನವನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದೆ.
ಸಂಕಲನದ ಹಂತಗಳು
1 | ಸಂಖ್ಯೆಗಳನ್ನು ಅವುಗಳ ಸ್ಥಾನಬೆಲೆಯ ಪ್ರಕಾರ ಕಂಬಸಾಲಿನಲ್ಲಿ ಬರೆಯಿರಿ. | |
2 | ಬಿಡಿ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 7 + 0 = 7. ಬಿಡಿ ಸ್ಥಾನದಲ್ಲಿ 7 ನ್ನು ಬರೆಯಿರಿ. |
3 | ಹತ್ತರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 3 + 1 = 4. ಹತ್ತರ ಸ್ಥಾನದಲ್ಲಿ 4ನ್ನು ಬರೆಯಿರಿ. |
4 | ನೂರರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 2 + 2 = 4. ನೂರರ ಸ್ಥಾನದಲ್ಲಿ 4ನ್ನು ಬರೆಯಿರಿ. |
5 | ಸಾವಿರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 5 + 1 = 6. ಸಾವಿರದ ಸ್ಥಾನದಲ್ಲಿ 6ನ್ನು ಬರೆಯಿರಿ. |
6 | ಹತ್ತುಸಾವಿರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 4 + 3 = 7. ಹತ್ತುಸಾವಿರ ಸ್ಥಾನದಲ್ಲಿ 7ನ್ನು ಬರೆಯಿರಿ. |
ದಶಕದೊಂದಿಗೆ 5-ಅಂಕಿ ಸಂಖ್ಯೆಗಳ ಸಂಕಲನ
4–ಅಂಕಿಯ ಸಂಖ್ಯೆಗಳನ್ನು ದಶಕದೊಂದಿಗೆ ಕೂಡುವಂತೆಯೇ 5–ಅಂಕಿಯ ಸಂಖ್ಯೆಗಳನ್ನು ದಶಕದೊಂದಿಗೆ ಕೂಡುವುದು.
ಉದಾಹರಣೆ 1
38,765 ಮತ್ತು 25,978 ಸಂಖ್ಯೆಗಳ ಮೊತ್ತ ಕಂಡುಹಿಡಿಯಿರಿ.
ಈ ಎರಡು ಸಂಖ್ಯೆಗಳ ಸಂಕಲನವನ್ನು ದಶಕದೊಂದಿಗೆ ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಪ್ರತಿನಿಧಿಸೋಣ.
ದಶಕದೊಂದಿಗೆ ಐದು ಅಂಕಿಯ ಸಂಖ್ಯೆಗಳ ಸಂಕಲನ ಮಾಡುವ ಹಂತಗಳು.
1 | ಸಂಖ್ಯೆಗಳನ್ನು ಅವುಗಳ ಸ್ಥಾನಬೆಲೆಯ ಪ್ರಕಾರ ಕಂಬಸಾಲಿನಲ್ಲಿ ಬರೆಯಿರಿ. | |
2 | ಬಿಡಿ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 5 + 8 = 13. ಬಿಡಿ ಸ್ಥಾನದಲ್ಲಿ 3ನ್ನು ಬರೆಯಿರಿ ಮತ್ತು ದಶಕ 1 ನ್ನು ಹತ್ತರ ಸ್ಥಾನಕ್ಕೆ ತೆಗೆದುಕೊಳ್ಳಿರಿ. |
3 | ಹತ್ತರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 1 + 6 + 7 = 14. ಹತ್ತರ ಸ್ಥಾನದಲ್ಲಿ 4ನ್ನು ಬರೆಯಿರಿ ಮತ್ತು ದಶಕ 1 ನ್ನು ನೂರರ ಸ್ಥಾನಕ್ಕೆ ತೆಗೆದುಕೊಳ್ಳಿರಿ. |
4 | ನೂರರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 1 + 7 + 9 = 17. ನೂರರ ಸ್ಥಾನದಲ್ಲಿ 7 ನ್ನು ಬರೆಯಿರಿ ಮತ್ತು ದಶಕ 1 ನ್ನು ಸಾವಿರದ ಸ್ಥಾನಕ್ಕೆ ತೆಗೆದುಕೊಳ್ಳಿರಿ. |
5 | ಸಾವಿರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 1 + 8 + 5 = 14. ಸಾವಿರದ ಸ್ಥಾನದಲ್ಲಿ 4 ನ್ನು ಬರೆಯಿರಿ ಮತ್ತು ದಶಕ 1 ನ್ನು ಹತ್ತು ಸಾವಿರದ ಸ್ಥಾನಕ್ಕೆ ತೆಗೆದುಕೊಳ್ಳಿರಿ. |
6 | ಹತ್ತುಸಾವಿರ ಸ್ಥಾನದಲ್ಲಿನ ಅಂಕಿಗಳನ್ನು ಕೂಡಿರಿ. | 1 + 3 + 2 = 6. ಹತ್ತುಸಾವಿರದ ಸ್ಥಾನದಲ್ಲಿ 6ನ್ನು ಬರೆಯಿರಿ. |
38,765 ಮತ್ತು 25,978 ಸಂಖ್ಯೆಗಳ ಮೊತ್ತ 64,743. |
At the beginning, I was still puzzled. Since I read your article, I have been very impressed. It has provided a lot of innovative ideas for my thesis related to gate.io. Thank u. But I still have some doubts, can you help me? Thanks.