ವಿದ್ಯುಚ್ಛಕ್ತಿ ಮತ್ತು ಮಂಡಲಗಳು – ಅಧ್ಯಾಯ – 9
ನಮ್ಮ ಕಾರ್ಯಗಳನ್ನು ಸುಲಭಗೊಳಿಸಲು ನಾವು ವಿದ್ಯುಚ್ಛಕ್ತಿಯನ್ನು ಹಲವು ಉದ್ದೇಶಗಳಿಗೆ ಬಳಸುತ್ತೇವೆ. ಉದಾಹರಣೆಗೆ, ಬಾವಿಯಿಂದ ಅಥವಾ ನೆಲ ಮಟ್ಟದಿಂದ ಮೇಲ್ಛಾವಣಿಯಲ್ಲಿರುವ ಟ್ಯಾಂಕಿಗೆ ನೀರನ್ನು ಎತ್ತುವ ಪಂಪಗಳು ಕಾರ್ಯನಿರ್ವಹಿಸಲು ವಿದ್ಯುಚ್ಛಕ್ತಿಯನ್ನು ಬಳಸುತ್ತೇವೆ. ಇತರ ಯಾವ ಉದ್ದೇಶಗಳಿಗೆ ನೀವು ವಿದ್ಯುಚ್ಛಕ್ತಿಯನ್ನು ಬಳಸುತ್ತೀರಿ? ಅವುಗಳಲ್ಲಿ ಕೆಲವನ್ನು ನಿಮ್ಮ ನೋಟ್ ಪುಸ್ತಕದಲ್ಲಿದಲ್ಲಿ ಪಟ್ಟಿ ಮಾಡಿ.
ವಿದ್ಯುಚ್ಛಕ್ತಿಯಿಂದ ಬೆಳಕನ್ನು ಪಡೆಯುವ ಉಪಯೋಗವನ್ನು ನಿಮ್ಮ ಪಟ್ಟಿಯು ಒಳಗೊಂಡಿದೆಯೇ? ಸೂರ್ಯಾಸ್ತದ ನಂತರವೂ ಮನೆಗಳು, ಕಛೇರಿಗಳು, ರಸ್ತೆಗಳು, ಮಾರುಕಟ್ಟೆಗಳು ಮತ್ತು ಕಾರ್ಖಾನೆಗಳಲ್ಲಿ ವಿದ್ಯುಚ್ಛಕ್ತಿಯಿಂದ ಬೆಳಕನ್ನು ಪಡೆಯಲು ಸಾಧ್ಯವಾಗಿದೆ. ರಾತ್ರಿಯಲ್ಲಿಯೂ ಕೆಲಸ ಮುಂದುವರೆಸಲು ಇದು ನಮಗೆ ಸಹಾಯ ಮಾಡುತ್ತದೆ. ವಿದ್ಯುತ್ ಸ್ಥಾವರವು ನಮಗೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತದೆ. ಆದಾಗ್ಯೂ ವಿದ್ಯುಚ್ಛಕ್ತಿಯ ಸರಬರಾಜು ಕಡಿತವಾಗಬಹುದು ಅಥವಾ ಕೆಲವು ಸ್ಥಳಗಳಲ್ಲಿ ಅದು ಲಭ್ಯವಿಲ್ಲದಿರಬಹುದು. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಬೆಳಕನ್ನು ಪಡೆಯಲು ಟಾರ್ಚನ್ನು ಉಪಯೋಗಿಸಲಾಗುತ್ತದೆ. ಸ್ವಿಚ್ಚನ್ನು ಒತ್ತಿದಾಗ ಟಾರ್ಚ್‍ನಲ್ಲಿರುವ ಬಲ್ಬ್ ಬೆಳಗುತ್ತದೆ. ಟಾರ್ಚಿಗೆ ವಿದ್ಯುಚ್ಛಕ್ತಿ ಎಲ್ಲಿಂದ ದೊರೆಯಿತು?
9.1 ವಿದ್ಯುತ್‍ಕೋಶ
ಟಾರ್ಚ್‍ನಲ್ಲಿರುವ ಬಲ್ಬಗೆ ವಿದ್ಯುತ್‍ಕೋಶವು ವಿದ್ಯುತ್ತನ್ನು ಸರಬರಾಜು ಮಾಡುತ್ತದೆ. ಎಚ್ಚರಿಕೆ ಗಂಟೆಗಳು, ಕೈ ಗಡಿಯಾರಗಳು, ರೇಡಿಯೋಗಳು, ಕ್ಯಾಮರಾಗಳು ಮತ್ತು ಇನ್ನಿತರ ಉಪಕರಣಗಳಲ್ಲಿಯೂ ಸಹ ವಿದ್ಯುತ್‍ಕೋಶಗಳನ್ನು ಬಳಸಲಾಗುತ್ತದೆ. ವಿದ್ಯುತ್‍ಕೋಶವನ್ನು ನೀವು ಯಾವಾಗಲಾದರೂ ಎಚ್ಚರಿಕೆಯಿಂದ ಗಮನಿಸಿದ್ದೀರಾ? ಅದರ ಒಂದು ತುದಿಯಲ್ಲಿ ಲೋಹದ ಸಣ್ಣ ಟೋಪಿಯನ್ನು ಮತ್ತು ಇನ್ನೊಂದು ತುದಿಯಲ್ಲಿ ಲೋಹದ ಬಿಲ್ಲೆಯನ್ನು ನೀವು ಗಮನಿಸಿರಬಹುದು (ಚಿತ್ರ 9.1). ವಿದ್ಯುತ್‍ಕೋಶದ ಮೇಲೆ ಧನಾತ್ಮಕ (+) ಚಿಹ್ನೆ ಹಾಗೂ ಋಣಾತ್ಮಕ (-) ಚಿಹ್ನೆಯ ಗುರುತನ್ನು ನೀವು ಗಮನಿಸಿದ್ದೀರಾ? ಲೋಹದ ಟೋಪಿಯು ವಿದ್ಯುತ್‍ಕೋಶದ ಧನಾಗ್ರವಾಗಿದೆ. ಲೋಹದ ಬಿಲ್ಲೆಯು ಋಣಾಗ್ರವಾಗಿದೆ. ಎಲ್ಲಾ ವಿದ್ಯುತ್‍ಕೋಶಗಳು ಎರಡು ಅಗ್ರಗಳನ್ನು ಹೊಂದಿವೆ. ಒಂದು ಧನಾಗ್ರ (anode) ಮತ್ತೊಂದು ಋಣಾಗ್ರ (cathode)
ವಿದ್ಯುತ್‍ಕೋಶವು ಅದರ ಒಳಗೆ ಸಂಗ್ರಹಿಸಲ್ಪಟ್ಟ ರಾಸಾಯನಿಕಗಳನ್ನು ಬಳಸಿ ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಿದ್ಯುತ್‍ಕೋಶದಲ್ಲಿರುವ ರಾಸಾಯನಿಕಗಳು ಖಾಲಿಯಾದಾಗ ಅದು ವಿದ್ಯುತ್ ಉತ್ಪಾದಿಸುವುದನ್ನು ನಿಲ್ಲಿಸುತ್ತದೆ. ಆಗ ಅದರ ಬದಲು ಹೊಸ ವಿದ್ಯುತ್ ಕೋಶವನ್ನು ಬಳಸಬೇಕು.
ಎಚ್ಚರಿಕೆ: ಕಂಬಗಳ ಮೇಲೆ, ವಿದ್ಯುತ್ ಉಪಕೇಂದ್ರ ಮತ್ತು ಇನ್ನಿತರ ಸ್ಥಳಗಳಲ್ಲಿ ಇಲ್ಲಿ ಪ್ರದರ್ಶಿಸಿರುವ ಅಪಾಯದ ಸಂಕೇತವನ್ನು ನೀವು ನೋಡಿರಬಹುದು. ಸಮರ್ಪಕವಾಗಿ ನಿರ್ವಹಿಸದಿದ್ದರೆ ವಿದ್ಯುಚ್ಛಕ್ತಿಯು ಅಪಾಯಕಾರಿಯಾಗಬಲ್ಲದು ಎಂದು ಜನರನ್ನು ಎಚ್ಚರಿಸಲು ಇದನ್ನು ಬಳಸುತ್ತಾರೆ. ವಿದ್ಯುಚ್ಛಕ್ತಿ ಮತ್ತು ವಿದ್ಯುತ್
ಉಪಕರಣಗಳ ಅಜಾಗರೂಕತೆಯ ಬಳಕೆಯಿಂದ ತೀವ್ರ ಗಾಯಗಳು ಅಥವಾ ಕೆಲವೊಮ್ಮೆ ಸಾವು ಸಂಭವಿಸಬಹುದು. ಈ ಕಾರಣದಿಂದ, ವಿದ್ಯುತ್ ತಂತಿಗಳು ಮತ್ತು ಸಾಕೆಟ್‍ಗಳೊಂದಿಗೆ ಪ್ರಯೋಗವನ್ನು ಮಾಡಲು ನೀವು ಎಂದಿಗೂ ಪ್ರಯತ್ನಿಸಬೇಡಿ. ಸ್ಥಳಾಂತರಿಸಬಹುದಾದ ಜನರೇಟರ್‍ಗಳಿಂದ ಉತ್ಪಾದಿಸಲ್ಪಟ್ಟ ವಿದ್ಯುಚ್ಛಕ್ತಿ ಕೂಡಾ ಅಷ್ಟೇ ಅಪಾಯಕಾರಿ ಎಂಬುದನ್ನು ನೆನಪಿಡಿ. ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೂ ವಿದ್ಯುತ್ ಕೋಶವನ್ನು ಮಾತ್ರ ಬಳಸಿ.
ಲೋಹದ ತಳಭಾಗಕ್ಕೆ ಜೋಡಿಸಲ್ಪಟ್ಟ ಗಾಜಿನ ಹೊರಕವಚವನ್ನು ಟಾರ್ಚ್ ಬಲ್ಬ್ ಹೊಂದಿರುತ್ತದೆ [ಚಿತ್ರ 9.2 (ಎ)]. ಬಲ್ಬ್ ಗಾಜಿನ ಕವಚದ ಒಳಗೆ ಏನಿದೆ?
ಚಟುವಟಿಕೆ 1
ಟಾರ್ಚನ್ನು ತೆಗೆದುಕೊಂಡು ಅದರ ಒಳಗೆ ಇರುವ ಬಲ್ಬನ್ನು ವೀಕ್ಷಿಸಿ. ನಿಮ್ಮ ಶಿಕ್ಷಕರ ಸಹಾಯದಿಂದ ಟಾರ್ಚ್‍ನಲ್ಲಿರುವ ಬಲ್ಬನ್ನು ಹೊರ ತೆಗೆಯಲೂಬಹುದು. ನೀವು ಏನನ್ನು ಗಮನಿಸುತ್ತೀರಿ? ಗಾಜಿನ ಬಲ್ಬ್ ನ ಮಧ್ಯಭಾಗದಲ್ಲಿ ಜೋಡಿಸಿರುವ ತೆಳುವಾದ ತಂತಿ ನಿಮಗೆ ಗೋಚರಿಸಿದೆಯೇ? [ಚಿತ್ರ 9.2 (ಬಿ)]. ಈಗ ಟಾರ್ಚಿನ ಸ್ವಿಚ್ಚನ್ನು ಒತ್ತಿ, ವಿದ್ಯುತ್ ಬಲ್ಬ್ ನ ಯಾವ ಭಾಗ ಬೆಳಗುತ್ತದೆ ಎಂಬುದನ್ನು ವೀಕ್ಷಿಸಿ.
ಬೆಳಕನ್ನು ನೀಡುವ ತೆಳುವಾದ ತಂತಿಯನ್ನು ವಿದ್ಯುತ್ ಬಲ್ಬ್ ನ ತಂತು (filament) ಎನ್ನುವರು. ಚಿತ್ರ 9.2 (ಬಿ)ನಲ್ಲಿ ತೋರಿಸಿರುವಂತೆ ತಂತುವನ್ನು ಎರಡು ದಪ್ಪ ತಂತಿಗಳಿಗೆ ಜೋಡಿಸಲಾಗಿದೆ. ಇದು ತಂತುವಿಗೆ ಆಧಾರವನ್ನು ಸಹ ಒದಗಿಸುತ್ತದೆ. ಇವುಗಳಲ್ಲಿ ಒಂದು ದಪ್ಪ ತಂತಿಯನ್ನು ಬಲ್ಬ್ ನ ಪಾದದಲ್ಲಿರುವ ಲೋಹದ ಕವಚಕ್ಕೆ ಜೋಡಿಸಲಾಗಿದೆ [ಚಿತ್ರ 9.2 (ಬಿ)]. ಇನ್ನೊಂದು ದಪ್ಪ ತಂತಿಯನ್ನು ಬಲ್ಬ್ ನ ಪಾದದ ಕೇಂದ್ರದಲ್ಲಿರುವ ಲೋಹದ ತುದಿಗೆ ಜೋಡಿಸಲಾಗಿದೆ. ಬಲ್ಬ್ ನ ಪಾದ ಹಾಗೂ ಪಾದದ ಲೋಹದ ತುದಿ ಇವುಗಳು ಬಲ್ಬ್ ನ ಎರಡು ಅಗ್ರಗಳು. ಅವುಗಳು ಒಂದಕ್ಕೊಂದು ತಾಕದ ರೀತಿಯಲ್ಲಿ ಈ ಎರಡು ಅಗ್ರಗಳನ್ನು ಜೋಡಿಸಲಾಗಿದೆ. ಮನೆಯಲ್ಲಿ ಉಪಯೋಗಿಸುವ ವಿದ್ಯುತ್ ಬಲ್ಬ್ ಗಳು ಸಹಾ ಇದೇ ರೀತಿಯ ರಚನೆ ಹೊಂದಿವೆ.
ಹೀಗೆ ವಿದ್ಯುತ್‍ಕೋಶ ಮತ್ತು ವಿದ್ಯುತ್ ಬಲ್ಬ್ ಗಳೆರಡು ಎರಡು ಅಗ್ರಗಳನ್ನು ಹೊಂದಿವೆ. ಎರಡು ಅಗ್ರಗಳನ್ನು ಅವು ಏಕೆ ಹೊಂದಿವೆ?
ಎಚ್ಚರಿಕೆ: ಸ್ವಿಚ್ ಮತ್ತು ಬಲ್ಬ್‍ನಂತಹ ಸಾಧನದ ಮೂಲಕ ಜೋಡಿಸದೇ, ವಿದ್ಯುತ್‍ಕೋಶದ ಎರಡು ಅಗ್ರಗಳನ್ನು ಎಂದಿಗೂ ಸಂಪರ್ಕಿಸಬೇಡಿ. ನೀವು ಹೀಗೆ ಮಾಡಿದರೆ ವಿದ್ಯುತ್‍ಕೋಶದಲ್ಲಿರುವ ರಾಸಾಯನಿಕಗಳು ಬೇಗ ಉಪಯೋಗಿಸಲ್ಪಡುತ್ತವೆ ಮತ್ತು ಕೋಶವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
9.2 ವಿದ್ಯುತ್‍ಕೋಶಕ್ಕೆ ಜೋಡಿಸಲ್ಪಟ್ಟ ವಿದ್ಯುತ್ ಬಲ್ಬ್
ವಿದ್ಯುತ್‍ಕೋಶದ ಸಹಾಯದಿಂದ ವಿದ್ಯುತ್ ಬಲ್ಬನ್ನು ಬೆಳಗಿಸಲು ನಾವೀಗ ಪ್ರಯತ್ನಿಸೋಣ. ಇದನ್ನು ನಾವು ಹೇಗೆ ಮಾಡಬಹುದು?
ಚಟುವಟಿಕೆ 2
ಬೇರೆ ಬೇರೆ ಬಣ್ಣದ ಪ್ಲಾಸ್ಟಿಕ್ ಹೊದಿಕೆಯುಳ್ಳ ನಾಲ್ಕು ವಿದ್ಯುತ್ ತಂತಿಯ ತುಂಡುಗಳನ್ನು ತೆಗೆದುಕೊಳ್ಳಿ. ಪ್ರತಿ ತಂತಿಯ ಕೊನೆಯಲ್ಲಿರುವ ಪ್ಲಾಸ್ಟಿಕ್ ಹೊದಿಕೆಯನ್ನು ಸ್ವಲ್ಪ ತೆಗೆಯಿರಿ. ಇದು ಪ್ರತಿ ತುಂಡಿನಲ್ಲಿರುವ ಲೋಹದ ತಂತಿಗಳನ್ನು ತೆರೆದಿಡುತ್ತದೆ. ಚಿತ್ರ 9.3 ಮತ್ತು 9.4ರಲ್ಲಿ ತೋರಿಸಿರುವಂತೆ ಎರಡು ತಂತಿಗಳ ತೆರೆದ ಭಾಗಗಳನ್ನು ವಿದ್ಯುತ್‍ಕೋಶಕ್ಕೆ ಮತ್ತು ಉಳಿದೆರಡನ್ನು ಬಲ್ಬ್‍ಗೆ ಜೋಡಿಸಿ.
ಇಲೆಕ್ಟ್ರಿಷಿಯನ್ ಬಳಸುವ ಟೇಪನ್ನು ಬಳಸಿ, ತಂತಿಗಳನ್ನು ಬಲ್ಬ್‍ಗೆ ನೀವು ಅಂಟಿಸಬಹುದು. ವಿದ್ಯುತ್‍ಕೋಶಕ್ಕೆ ತಂತಿಗಳನ್ನು ಬಂಧಿಸಲು ರಬ್ಬರ್ ಬ್ಯಾಂಡ್ ಅಥವಾ ಟೇಪನ್ನು ಬಳಸಿ.
ಚಿತ್ರ 9.5 (ಎ)ನಿಂದ (ಎಫ್)ವರೆಗೆ ತೋರಿಸಿರುವಂತೆ, ಕೋಶಕ್ಕೆ ಜೋಡಿಸಿದ ತಂತಿಗಳನ್ನು ಬಲ್ಬ್‍ಗೆ ಜೋಡಿಸಿರುವ ತಂತಿಗಳೊಂದಿಗೆ ಆರು ವಿವಿಧ ರೀತಿಗಳಲ್ಲಿ ಈಗ ಸಂಪರ್ಕಿಸಿ. ಪ್ರತಿಯೊಂದು ಜೋಡಣೆಯಲ್ಲಿ ಬಲ್ಬ್ ಬೆಳಗುತ್ತದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಿರಿ. ಪ್ರತಿ ಜೋಡಣೆಗೂ ಹೌದು ಅಥವಾ ಇಲ್ಲ ಎಂದು ನಿಮ್ಮ ನೋಟ್‍ಪುಸ್ತಕದಲ್ಲಿ ಬರೆಯಿರಿ.
ಯಾವ ಜೋಡಣೆಗಳಲ್ಲಿ ವಿದ್ಯುತ್ ಬಲ್ಬ್ ಬೆಳಗುತ್ತದೆ ಎಂದು ಈಗ ಜಾಗರೂಕತೆಯಿಂದ ನೋಡಿ. ಬಲ್ಬ್ ಬೆಳಗದ ಜೋಡಣೆಗಳೊಂದಿಗೆ ಇವುಗಳನ್ನು ಹೋಲಿಸಿ. ಈ ವ್ಯತ್ಯಾಸಕ್ಕೆ ನೀವು ಕಾರಣವನ್ನು ಕಂಡುಹಿಡಿಯಬಲ್ಲಿರಾ?
ಚಿತ್ರ 9.5 (ಎ)ನಲ್ಲಿನ ಜೋಡಣೆಯಂತೆ ವಿದ್ಯುತ್‍ಕೋಶದ ಒಂದು ಅಗ್ರದ ಬಳಿಯ ತಂತಿಯ ಮೇಲೆ ನಿಮ್ಮ ಪೆನ್ಸಿಲ್‍ನ ತುದಿಯನ್ನು ಇಡಿ. ತಂತಿಯೊಂದಿಗೆ ಪೆನ್ಸಿಲ್‍ನ ತುದಿಯನ್ನು ಬಲ್ಬ್‍ನ ತನಕ ಚಲಿಸುವಂತೆ ಮಾಡಿ. ಈಗ ಬಲ್ಬ್‍ನ ಇನ್ನೊಂದು ಅಗ್ರದಿಂದ ಕೋಶಕ್ಕೆ ಸಂಪರ್ಕಿಸುವ ಮತ್ತೊಂದು ತಂತಿಯೊಂದಿಗೆ ಚಲಿಸುವಂತೆ ಮಾಡಿ. ಈ ಚಟುವಟಿಕೆಯನ್ನು ಚಿತ್ರ 9.5ರ ಉಳಿದ ಜೋಡಣೆಗಳಿಗೆ ಪುನರಾವರ್ತಿಸಿ. ಒಂದು ತುದಿಯಿಂದ ಇನ್ನೊಂದಕ್ಕೆ ಪೆನ್ಸಿಲ್ ಚಲಿಸಲಾಗದ ಜೋಡಣೆಯಲ್ಲಿ ಬಲ್ಬ್ ಬೆಳಗಿದೆಯೇ?
9.3 ಒಂದು ವಿದ್ಯುತ್ ಮಂಡಲ
ಚಟುವಟಿಕೆ 2ರಲ್ಲಿ ವಿದ್ಯುತ್‍ಕೋಶದ ಒಂದು ಅಗ್ರವನ್ನು ಇನ್ನೊಂದು ಅಗ್ರಕ್ಕೆ ವಿದ್ಯುತ್ ಬಲ್ಬ್ ಮೂಲಕ ತಂತಿಗಳನ್ನು ಬಳಸಿ ನೀವು ಸಂಪರ್ಕಿಸಿದ್ದೀರಿ. ಚಿತ್ರ 9.5 (ಎ) ಮತ್ತು (ಎಫ್) ಜೋಡಣೆಗಳಲ್ಲಿ ವಿದ್ಯುತ್‍ಕೋಶದ ಎರಡು ಅಗ್ರಗಳನ್ನು ವಿದ್ಯುತ್ ಬಲ್ಬ್‍ನ ಎರಡು ಅಗ್ರಗಳಿಗೆ ಜೋಡಿಸಲಾಗಿದೆ ಎನ್ನುವುದನ್ನು ಗಮನಿಸಿ. ಇಂತಹ ಜೋಡಣೆಯು ವಿದ್ಯುತ್ ಮಂಡಲಕ್ಕೆ ಉದಾಹರಣೆಯಾಗಿದೆ. ವಿದ್ಯುತ್ ಮಂಡಲವು ವಿದ್ಯುತ್ ಕೋಶದ ಎರಡು ಅಗ್ರಗಳ ನಡುವೆ ವಿದ್ಯುತ್ ಹರಿಯಲು ಪೂರ್ಣ ಪಥವನ್ನು ಒದಗಿಸುತ್ತದೆ. ಮಂಡಲದಲ್ಲಿ ವಿದ್ಯುತ್ ಪ್ರವಾಹ ಇದ್ದಾಗ ಮಾತ್ರ ಬಲ್ಬ್ ಬೆಳಗುತ್ತದೆ.
ಚಿತ್ರ 9.6ರಲ್ಲಿ ತೋರಿಸಿರುವಂತೆ, ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ವಿದ್ಯುತ್‍ಕೋಶದ ಧನ ತುದಿಯಿಂದ ಋಣ ತುದಿಗೆ ಎಂದು ಪರಿಗಣಿಸಲಾಗುವುದು. ಬಲ್ಬ್‍ನ ಅಗ್ರಗಳನ್ನು ತಂತಿಯ ಸಹಾಯದಿಂದ ವಿದ್ಯುತ್ ಕೋಶಕ್ಕೆ ಜೋಡಿಸಿದಾಗ, ಬಲ್ಬ್‍ನ ತಂತುವಿನ ಮೂಲಕ ವಿದ್ಯುತ್ ಹರಿಯುತ್ತದೆ. ಇದು ಬಲ್ಬನ್ನು ಬೆಳಗುವಂತೆ ಮಾಡುತ್ತದೆ.
ಕೆಲವೊಮ್ಮೆ ವಿದ್ಯುತ್‍ಕೋಶಕ್ಕೆ ಜೋಡಿಸಿದಾಗಲೂ ವಿದ್ಯುತ್ ಬಲ್ಬ್ ಬೆಳಗುವುದಿಲ್ಲ. ಬಲ್ಬ್‍ನ ತಂತು ಫ್ಯೂಸ್ (fuse) ಆಗಿರುವುದರಿಂದ ಇದು ಸಂಭವಿಸಿರಬಹುದು. ತಂತು ಫ್ಯೂಸ್ ಆಗಿರುವ ಬಲ್ಬನ್ನು ಜಾಗರೂಕತೆಯಿಂದ ಗಮನಿಸಿ. ಅದರ ಒಳಗಿರುವ ತಂತು ಭದ್ರವಾಗಿದೆಯೆ?
ವಿದ್ಯುತ್ ಬಲ್ಬ್‍ನ ತಂತು ಹಲವು ಕಾರಣಗಳಿಂದ ಫ್ಯೂಸ್ ಆಗಬಹುದು. ಬಲ್ಬ್ ಫ್ಯೂಸ್ ಆಗಿರುವುದಕ್ಕೆ
ಬಲ್ಬ್‍ನ ತಂತು ತುಂಡಾಗಿರುವುದು ಒಂದು ಕಾರಣ. ವಿದ್ಯುತ್ ಬಲ್ಬ್‍ನ ತಂತುವಿನ ತುಂಡಾಗುವಿಕೆ ಎಂದರೆ ವಿದ್ಯುತ್‍ಕೋಶಗಳ ಅಗ್ರಗಳ ನಡುವಿನ ವಿದ್ಯುತ್ ಪ್ರವಾಹದ ಪಥದಲ್ಲಿ ಉಂಟಾಗುವ ತಡೆ. ಫ್ಯೂಸ್ ಆಗಿರುವ ಬಲ್ಬ್‍ನ ತಂತುವಿನ ಮೂಲಕ ವಿದ್ಯುತ್ ಪ್ರವಹಿಸುವುದಿಲ್ಲವಾದ್ದರಿಂದ ಅದು ಬೆಳಗುವುದಿಲ್ಲ.
ಚಿತ್ರ 9.5 (ಬಿ), (ಸಿ), (ಡಿ), ಮತ್ತು (ಇ) ಜೋಡಣೆಗಳಲ್ಲಿ ತೋರಿಸಿರುವಂತೆ ನೀವು ಪ್ರಯತ್ನಿಸಿದಾಗ ಬಲ್ಬ್ ಬೆಳಗದಿರಲು ಕಾರಣವನ್ನು ನೀವು ವಿವರಿಸಬಲ್ಲಿರ?
ವಿದ್ಯುತ್‍ಕೋಶವನ್ನು ಉಪಯೋಗಿಸಿ ಬಲ್ಬನ್ನು ಹೇಗೆ ಬೆಳಗಿಸಬೇಕೆಂದು ಈಗ ನಮಗೆ ತಿಳಿದಿದೆ. ನಿಮಗಾಗಿ ಒಂದು ಟಾರ್ಚನ್ನು ನೀವೇ ತಯಾರಿಸಲು ಬಯಸುವಿರ?
ಚಟುವಟಿಕೆ 3
ಒಂದು ತುಂಡು ತಂತಿ ಹಾಗೂ ಟಾರ್ಚ್ ಬಲ್ಬನ್ನು ತೆಗೆದುಕೊಳ್ಳಿ. ಈ ಹಿಂದೆ ಮಾಡಿದಂತೆ ಎರಡು ತುದಿಗಳಲ್ಲಿರುವ ಪ್ಲಾಸ್ಟಿಕ್ ಹೊದಿಕೆಯನ್ನು ತೆಗೆಯಿರಿ. ಚಿತ್ರ 9.7ರಲ್ಲಿ ತೋರಿಸಿರುವಂತೆ ತಂತಿಯ ಒಂದು ತುದಿಯನ್ನು ವಿದ್ಯುತ್ ಬಲ್ಬ್‍ನ ಪಾದಕ್ಕೆ ಸುತ್ತಿ ತಂತಿಯ ಮತ್ತೊಂದು ತುದಿಯನ್ನು ರಬ್ಬರ್ ಬ್ಯಾಂಡ್‍ನ ಸಹಾಯದಿಂದ ವಿದ್ಯುತ್‍ಕೋಶದ ಋಣಾಗ್ರಕ್ಕೆ ಬಂಧಿಸಿ. ಈಗ ವಿದ್ಯುತ್ ಬಲ್ಬ್‍ನ ತಳದ ತುದಿಯನ್ನು ಅಂದರೆ, ಅದರ ಇನ್ನೊಂದು ಅಗ್ರವನ್ನು ಕೋಶದ ಧನಾಗ್ರಕ್ಕೆ ಸಂಪರ್ಕಿಸಿ.
ಬಲ್ಬ್ ಬೆಳಗಿದೆಯೇ? ಈಗ ಬಲ್ಬನ್ನು ವಿದ್ಯುತ್ ಕೋಶದ ಅಗ್ರದಿಂದ ದೂರಸರಿಸಿ. ಈಗಲೂ ಬಲ್ಬ್ ಬೆಳಗುತ್ತಿದೆಯೇ? ಟಾರ್ಚ್‍ನ ಸ್ವಿಚ್ಚನ್ನು ನೀವು ಹೊತ್ತಿಸಿದ (on) ಮತ್ತು ಆರಿಸಿದ (off) ಕೆಲಸಕ್ಕೆ ಇದು ಸಮನಾಗಿಲ್ಲವೇ?
9.4 ವಿದ್ಯುತ್ ಸ್ವಿಚ್
ನಾವು ಮನೆಯಲ್ಲಿ ತಯಾರಿಸಿದ ಟಾರ್ಚನ್ನು ಹೊತ್ತಿಸುವಾಗ ಮತ್ತು ಆರಿಸುವಾಗ ಬಲ್ಬ್‍ನ ಪಾದವನ್ನು ಕೋಶದ ತುದಿಯಿಂದ ದೂರ ಸರಿಯುವ ವ್ಯವಸ್ಥೆ ಮಾಡಿದ್ದೇವೆ. ಇದು ಸರಳ ಸ್ವಿಚ್ ಆಗಿತ್ತು, ಆದರೆ ಇದನ್ನು ಸುಲಭವಾಗಿ ಉಪಯೋಗಿಸಲಾಗುವುದಿಲ್ಲ. ಮಂಡಲದಲ್ಲಿ ಸುಲಭವಾಗಿ ಮತ್ತು ಸರಳವಾಗಿ ಉಪಯೋಗಿಸುವ ಇನ್ನೊಂದು ಸ್ವಿಚ್ಚನ್ನು ನಾವು ತಯಾರಿಸಬಹುದು.
ಚಟುವಟಿಕೆ 4
ಎರಡು ಡ್ರಾಯಿಂಗ್ ಪಿನ್‍ಗಳು, ಒಂದು ಸೇಫ್ಟಿಪಿನ್ (ಪೇಪರ್ ಕ್ಲಿಪ್), ಎರಡು ತಂತಿಗಳು ಮತ್ತು ಥರ್ಮೊಕೋಲ್‍ನ ಸಣ್ಣ ಹಾಳೆ ಅಥವಾ ಮರದಹಲಗೆಯನ್ನು ಬಳಸಿ ನೀವು ಸ್ವಿಚ್ಚನ್ನು ತಯಾರಿಸಬಹುದು. ಸೇಫ್ಟಿಪಿನ್‍ನ ಉಂಗುರದ ಒಂದು ತುದಿಗೆ ಡ್ರಾಯಿಂಗ್ ಪಿನ್ನನ್ನು ಸೇರಿಸಿ ಮತ್ತು ಥರ್ಮೊಕೋಲ್‍ನ ಹಾಳೆಗೆ ಚಿತ್ರ 9.8ರಲ್ಲಿ ತೋರಿಸಿರುವಂತೆ ಅದನ್ನು ಜೋಡಿಸಿ ಸೇಫ್ಟಿಪಿನ್ಸು ಲಭವಾಗಿ ತಿರುಗುವಂತೆ ದೃಢಪಡಿಸಿಕೊಳ್ಳಿ. ಈಗ ಇನ್ನೊಂದು ಡ್ರಾಯಿಂಗ್ ಪಿನ್ನನ್ನು ಸೇಫ್ಟಿಪಿನ್‍ನ ಸ್ವತಂತ್ರ ತುದಿಯು ಅದನ್ನು ಮುಟ್ಟುವಂತೆ ಥರ್ಮೊಕೋಲ್ ಹಾಳೆಗೆ ಬಂಧಿಸಿ. ಈ ರೀತಿ ಬಂಧಿಸಿದ ಸೇಫ್ಟಿಪಿನ್ ಈ ಚಟುವಟಿಕೆಯಲ್ಲಿ ನಿಮ್ಮ ಸ್ವಿಚ್ ಆಗಿರುತ್ತದೆ.
ಈಗ ಚಿತ್ರ 9.9ರಲ್ಲಿ ತೋರಿಸಿರುವಂತೆ, ಒಂದು ವಿದ್ಯುತ್‍ಕೋಶ ಮತ್ತು ಬಲ್ಬ್‍ನ್ನು ಈ ಸ್ವಿಚ್‍ಗೆ ಜೋಡಿಸಿ ಮಂಡಲ ತಯಾರಿಸಿ ಸೇಫ್ಟಿಪಿನ್‍ನ ಸ್ವತಂತ್ರ ತುದಿಯು ಮತ್ತೊಂದು ಡ್ರಾಯಿಂಗ್ ಪಿನ್ನನ್ನು ಮುಟ್ಟುವಂತೆ ತಿರುಗಿಸಿ. ನೀವು ಏನನ್ನು ಗಮನಿಸಿದ್ದಿರಿ? ಸೇಫ್ಟಿಪಿನ್ನನ್ನು ಈಗ ದೂರಕ್ಕೆ ಸರಿಸಿ. ಬಲ್ಬ್ ಬೆಳಗುವುದು ಮುಂದುವರಿಯುತ್ತಿದೆಯೇ?
ಎರಡು ಡ್ರಾಯಿಂಗ್ ಪಿನ್‍ಗಳನ್ನು ಸಂಪರ್ಕಿಸುವಂತೆ ಮಾಡಿದಾಗ ಅವುಗಳ ನಡುವಿನ ಅಂತರವನ್ನು ಸೇಫ್ಟಿಪಿನ್ ಮುಚ್ಚುತ್ತದೆ. ಈಗ ಸ್ವಿಚ್ ಹೊತ್ತಿಸುವ ಸ್ಥಿತಿಯಲ್ಲಿದೆ ಎಂದು ಹೇಳುತ್ತೇವೆ (ಚಿತ್ರ 9.10). ಸೇಫ್ಟಿಪಿನ್‍ನಲ್ಲಿರುವ ಪದಾರ್ಥವು ತನ್ನ ಮೂಲಕ ವಿದ್ಯುತ್ತನ್ನು ಹರಿಯಬಿಡುವುದರಿಂದ ಮಂಡಲವು ಪೂರ್ತಿಯಾಗುತ್ತದೆ. ಆದ್ದರಿಂದ ಬಲ್ಬ್ ಬೆಳಗುತ್ತದೆ.
ಅದಕ್ಕೆ ಬದಲಾಗಿ, ಮತ್ತೊಂದು ಡ್ರಾಯಿಂಗ್ಪಿ ನ್ನಿನ ಜೊತೆಯಲ್ಲಿ ಸೇಫ್ಟಿಪಿನ್‍ನ ಸಂಪರ್ಕದಲ್ಲಿಲ್ಲದಿದ್ದಾಗ ಬಲ್ಬ್ ಬೆಳಗಲಿಲ್ಲ. ಎರಡು ಡ್ರಾಯಿಂಗ್ ಪಿನ್‍ಗಳ ನಡುವೆ ಅಂತರವಿದ್ದರಿಂದ ಮಂಡಲವು ಪೂರ್ಣವಾಗಿರಲಿಲ್ಲ. ಚಿತ್ರ 9.9ರಲ್ಲಿರುವಂತೆ, ಈಗ ಸ್ವಿಚ್ ಆರಿಸಿದ ಸ್ಥಿತಿಯಲ್ಲಿದೆ.
ಮಂಡಲವನ್ನು ಪೂರ್ಣಗೊಳಿಸುವ ಅಥವಾ ಕಡಿತಗೊಳಿಸುವ ಸರಳ ಸಾಧನವೇ ಸ್ವಿಚ್. ವಿದ್ಯುತ್ ದೀಪಗಳನ್ನು ಬೆಳಗಿಸಲು ಮತ್ತು ಮನೆಯಲ್ಲಿ ಬಳಸುವ ಇತರ ಸಾಧನಗಳಲ್ಲಿರುವ ಸ್ವಿಚ್‍ಗಳು ಸಂಕೀರ್ಣ ವಿನ್ಯಾಸ ಹೊಂದಿದ್ದರೂ ಇದೇ ತತ್ವದ ಮೇಲೆ ಕೆಲಸ ನಿರ್ವಹಿಸುತ್ತವೆ.
9.5 ವಿದ್ಯುತ್ ವಾಹಕಗಳು ಮತ್ತು ಅವಾಹಕಗಳು
ನಮ್ಮೆಲ್ಲ ಚಟುವಟಿಕೆಗಳಲ್ಲಿ ಮಂಡಲ ರಚಿಸಲು ಲೋಹದ ತಂತಿಗಳನ್ನು ನಾವು ಬಳಸಿದ್ದೇವೆ. ಒಂದು ವೇಳೆ, ಲೋಹದ ತಂತಿಯ ಬದಲು ಹತ್ತಿಯ ದಾರವನ್ನು ಮಂಡಲ ರಚಿಸಲು ಬಳಸುತ್ತೇವೆ ಎಂದು ನಾವು ಭಾವಿಸೋಣ. ಅಂತಹ ಮಂಡಲದಲ್ಲಿ ಬಲ್ಬ್ ಬೆಳಗುತ್ತದೆ ಎಂದು ನೀವು ಯೋಚಿಸುವಿರಾ? ವಿದ್ಯುತ್ ಮಂಡಲಗಳಲ್ಲಿ ಯಾವ ಪದಾರ್ಥಗಳನ್ನು ಬಳಸಿದರೆ ಅವುಗಳ ಮೂಲಕ ವಿದ್ಯುತ್ ಹರಿಯುತ್ತದೆ? ಈಗ ಕಂಡುಹಿಡಿಯೋಣ.
ಚಟುವಟಿಕೆ 5
ಚಟುವಟಿಕೆ 4ರಲ್ಲಿ ನೀವು ಬಳಸಿದ ವಿದ್ಯುತ್ ಮಂಡಲದಿಂದ ಸ್ವಿಚ್‍ನ ಸಂಪರ್ಕವನ್ನು ತಪ್ಪಿಸಿ. ಚಿತ್ರ 9.12(ಎ)ನಲ್ಲಿ ತೋರಿಸುವಂತೆ ತಂತಿಯ ಎರಡು ಸ್ವತಂತ್ರ ತುದಿಗಳು ನಿಮಗೆ ದೊರೆಯುವಂತೆ ಇದು ಮಾಡುತ್ತದೆ. ಎರಡು ತಂತಿಗಳ ಸ್ವತಂತ್ರ ತುದಿಗಳು ಪರಸ್ಪರ ಸ್ಪರ್ಶಿಸುವಂತೆ ಹತ್ತಿರಕ್ಕೆ ತನ್ನಿ. ವಿದ್ಯುತ್‍ದೀಪ ಬೆಳಗಿಸಲ್ಪಟ್ಟಿತೇ? ನೀವು ಈ ಜೋಡಣೆಯನ್ನು ನಿಮಗೆ ಕೊಟ್ಟ ಯಾವುದೇ ವಸ್ತುವಿನ ಮೂಲಕ ವಿದ್ಯುತ್ ಹರಿಯುತ್ತದೆಯೇ ಇಲ್ಲವೇ ಎಂದು
ಪರೀಕ್ಷಿಸಲು ಈಗ ಉಪಯೋಗಿಸಬಹುದು.
ನಾಣ್ಯ, ಕಾರ್ಕ್, ರಬ್ಬರ್, ಗಾಜು, ಬೀಗದ ಕೀಗಳು, ಪಿನ್ನುಗಳು, ಪ್ಲಾಸ್ಟಿಕ್ ಪಟ್ಟಿ, ಮರದ ತುಂಡು, ಪೆನ್ಸಿಲ್ ಲೆಡ್, ಅಲ್ಯೂಮಿನಿಯಮ್ಹಾ ಳೆ, ಮೇಣದ ಬತ್ತಿ, ಹೊಲಿಯುವ ಸೂಜಿ, ಥರ್ಮೊಕೋಲ್ ಮತ್ತು ಕಾಗದಗಳಂತಹ ವಿವಿಧ ಪದಾರ್ಥಗಳನ್ನು ಸಂಗ್ರಹಿಸಿ. ನಿಮ್ಮ ಟೆಸ್ಟರ್‍ನ ಎರಡು ನೀವು ಸಂಗ್ರಹಿಸಿದ ತುದಿಗಳಿಗೆ ಸ್ವತಂತ್ರ ತುದಿಗಳನ್ನು
ಪದಾರ್ಥಗಳ ಎರಡು ಒಂದೊಂದಾಗಿ ಸಂಪರ್ಕಿಸಿ [ಚಿತ್ರ 9.12 (ಬಿ)]. ಇದನ್ನು ಮಾಡುವಾಗ ಎರಡು ತಂತಿಗಳು ಪರಸ್ಪರ ಸಂಪರ್ಕಿಸದಂತೆ ಜಾಗ್ರತೆ ವಹಿಸಿ. ಪ್ರತಿಯೊಂದು ಸಂದರ್ಭದಲ್ಲಿಯೂ ದೀಪ ಬೆಳಗುತ್ತದೆಯೇ?
ನಿಮ್ಮ ನೋಟ್ ಪುಸ್ತಕದಲ್ಲಿ ಕೋಷ್ಟಕ 9.1ರಲ್ಲಿರುವಂತೆ ಕೋಷ್ಟಕವನ್ನು ತಯಾರಿಸಿ, ನಿಮ್ಮ ವೀಕ್ಷಣೆಗಳನ್ನು ದಾಖಲಿಸಿ.
ನೀವು ಏನನ್ನು ಕಂಡುಹಿಡಿದಿರಿ? ನೀವು ಪರೀಕ್ಷಿಸಿದಂತೆ ಕೆಲವು ಪದಾರ್ಥಗಳು ತಂತಿಯ ಸ್ವತಂತ್ರ ತುದಿಗಳನ್ನು
ಸಂಪರ್ಕಿಸಿದಾಗ ಬಲ್ಬ್ ಬೆಳಗುವುದಿಲ್ಲ. ಇದರ ಅರ್ಥವೇನೆಂದರೆ ಈ ಪದಾರ್ಥಗಳು ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವುದಿಲ್ಲ. ಅದಕ್ಕೆ ಬದಲಾಗಿ, ಬಲ್ಬ್‍ನ ಬೆಳಗುವಿಕೆಯು ಸೂಚಿಸುವಂತೆ ಕೆಲವು ಪದಾರ್ಥಗಳು ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುತ್ತವೆ. ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವ ವಸ್ತುಗಳು ವಿದ್ಯುತ್‍ವಾಹಕಗಳು (conductors). ಅವಾಹಕಗಳು (insulators) ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವುದಿಲ್ಲ. ಕೋಷ್ಟಕ 9.1ರ ಸಹಾಯದಿಂದ ವಿದ್ಯುತ್ ವಾಹಕಗಳು ಹಾಗೂ ಅವಾಹಕಗಳಾಗಿರುವ
ಪದಾರ್ಥಗಳನ್ನು ಹೆಸರಿಸಿ.
ವಾಹಕಗಳು __, __, __
ಅವಾಹಕಗಳು __, __, _
ನೀವು ಏನನ್ನು ತೀರ್ಮಾನಿಸಿದಿರಿ? ಯಾವ ಪದಾರ್ಥಗಳು ವಾಹಕಗಳು ಮತ್ತು ಯಾವ ಪದಾರ್ಥಗಳು ಅವಾಹಕಗಳು? 2ನೇ ಅಧ್ಯಾಯದಲ್ಲಿ ಗುಂಪು ಮಾಡಿರುವ ಹೊಳಪುಳ್ಳ ವಸ್ತುಗಳನ್ನು ಸ್ಮರಿಸಿ. ಅವು ವಾಹಕಗಳೇ? ತಾಮ್ರ, ಅಲ್ಯೂಮಿನಿಯಮ್ ಮತ್ತು ಇತರೆ ಲೋಹಗಳನ್ನು ತಂತಿಗಳನ್ನಾಗಿ ತಯಾರಿಸಲು ಏಕೆ ಬಳಸಲಾಗುತ್ತದೆ ಎಂಬುದು ಈಗ ಸುಲಭವಾಗಿ ಅರ್ಥವಾದಂತೆ ತೋರುತ್ತದೆ.
ಸ್ವಿಚ್‍ನೊಂದಿಗೆ ವಿದ್ಯುತ್ ಮಂಡಲವನ್ನು ತಯಾರಿಸಿದ ಚಟುವಟಿಕೆ 4ನ್ನು ಸ್ಮರಿಸೋಣ (ಚಿತ್ರ 9.9). ಸ್ವಿಚ್ ತೆರೆದ ಸ್ಥಿತಿಯಲ್ಲಿ ಇದ್ದಾಗ ಎರಡು ಡ್ರಾಯಿಂಗ್ ಪಿನ್‍ಗಳು ಥರ್ಮೊಕೋಲ್ ಹಾಳೆಯ ಮೂಲಕ ಸಂಪರ್ಕದಲ್ಲಿ ಇರಲಿಲ್ಲವೇ? ಆದರೆ ಥರ್ಮೊಕೋಲ್ ಅವಾಹಕವೆಂದು ನೀವು ಕಂಡುಕೊಂಡಿರಬಹುದು. ಅಂತರದ ಮಧ್ಯದಲ್ಲಿರುವ ಗಾಳಿಯ ಬಗ್ಗೆ ನೀವು ಏನು ಹೇಳುವಿರಿ? ನಿಮ್ಮ ಸ್ವಿಚ್‍ನ ಡ್ರಾಯಿಂಗ್ ಪಿನ್‍ಗಳ ನಡುವಿನ ಅಂತರದಲ್ಲಿ ಗಾಳಿಯು ಮಾತ್ರ ಇದ್ದಾಗ ಬಲ್ಬ್ ಬೆಳಗುವುದಿಲ್ಲ, ಇದರ ಅರ್ಥ ಗಾಳಿಯು ಕೂಡ ಅವಾಹಕ.
ವಾಹಕ ಮತ್ತು ಅವಾಹಕಗಳೆರಡೂ ನಮಗೆ ಸಮಾನ ಪ್ರಾಮುಖ್ಯ ಉಳ್ಳವುಗಳಾಗಿವೆ. ಸ್ವಿಚ್‍ಗಳು, ವಿದ್ಯುತ್ ಪ್ಲಗ್‍ಗಳು ಮತ್ತು ಸಾಕೆಟ್‍ಗಳನ್ನು ವಾಹಕಗಳಿಂದ ತಯಾರಿಸುತ್ತಾರೆ. ಮತ್ತೊಂದೆಡೆ, ವಿದ್ಯುತ್ ಪ್ಲಗ್‍ನ ಹೊದಿಕೆಗಳು, ಸ್ವಿಚ್‍ಗಳು ಮತ್ತು ಜನರು ಸ್ಪರ್ಶಿಸಬಹುದಾದ ವಿದ್ಯುತ್ ಸಾಧನಗಳ ಇತರ ಭಾಗಗಳನ್ನು ಮುಚ್ಚಲು ರಬ್ಬರ್ ಮತ್ತು ಪ್ಲಾಸ್ಟಿಕ್‍ಗಳನ್ನು ಬಳಸುತ್ತಾರೆ.
ಎಚ್ಚರಿಕೆ: ನಿಮ್ಮ ದೇಹವು ವಿದ್ಯುತ್ ವಾಹಕ. ಆದ್ದರಿಂದ ವಿದ್ಯುತ್ ಉಪಕರಣಗಳನ್ನು ಬಳಸುವಾಗ ನೀವು ಜಾಗ್ರತೆ ವಹಿಸಿ.
ಪ್ರಮುಖ ಪದಗಳು
ಬಲ್ಬ್
ವಾಹಕಗಳು
ವಿದ್ಯುತ್‍ಕೋಶ
ವಿದ್ಯುತ್ ಮಂಡಲ
ತಂತು
ಅವಾಹಕಗಳು
ಸ್ವಿಚ್
ಅಗ್ರಗಳು
ಸಾರಾಂಶ
• ವಿದ್ಯುತ್‍ಕೋಶವು ವಿದ್ಯುಚ್ಛಕ್ತಿಯ ಒಂದು ಆಕರ.
• ವಿದ್ಯುತ್‍ಕೋಶವು ಎರಡು ಅಗ್ರಗಳನ್ನು ಹೊಂದಿದೆ; ಒಂದನ್ನು ಧನಾಗ್ರವೆಂದೂ (+) ಇನ್ನೊಂದನ್ನು ಋಣಾಗ್ರವೆಂದೂ (-) ಕರೆಯುವರು.
• ವಿದ್ಯುತ್ ಬಲ್ಬ್ ತಂತುವನ್ನು ಹೊಂದಿದ್ದು ಅದು ಬಲ್ಬ್‍ನ ಅಗ್ರಗಳಿಗೆ ಜೋಡಿಸಲ್ಪಟ್ಟಿದೆ.
• ವಿದ್ಯುತ್ ಪ್ರವಾಹವು ವಿದ್ಯುತ್ ಬಲ್ಬ್‍ನ ಮೂಲಕ ಹರಿದಾಗ ಅದು ಬೆಳಗುತ್ತದೆ.
• ಮುಚ್ಚಿದ ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಪ್ರವಾಹವು ವಿದ್ಯುತ್‍ಕೋಶದ ಒಂದು ಅಗ್ರದಿಂದ ಇನ್ನೊಂದು ಅಗ್ರಕ್ಕೆ ಹರಿಯುತ್ತದೆ.
• ವಿದ್ಯುತ್ ಮಂಡಲ ಪೂರ್ಣಗೊಳಿಸಲು ಅಥವಾ ಕಡಿತಗೊಳಿಸಲು ಬಳಸುವ ಸರಳ ಸಾಧನವೇ ಸ್ವಿಚ್.
• ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವ ಪದಾರ್ಥಗಳಿಗೆ ವಾಹಕಗಳೆನ್ನುವರು.
• ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡದ ಪದಾರ್ಥಗಳಿಗೆ ಅವಾಹಕಗಳೆನ್ನುವರು.
ಕೆಲವು ಸೂಚಿತ ಚಟುವಟಿಕೆಗಳು
1. ಒಂದು ತಿಂಗಳಕಾಲ ವಿದ್ಯುತ್ ಪೂರೈಕೆ ಇಲ್ಲವೆಂದು ಭಾವಿಸಿ. ನೀವು ಮತ್ತು ನಿಮ್ಮ ಕುಟುಂಬದ ಇತರರ ದಿನನಿತ್ಯದ ಚಟುವಟಿಕೆಯ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? ನಿಮ್ಮ ಕಲ್ಪನೆಯನ್ನು ಕಥೆ ಅಥವಾ ನಾಟಕದ ರೂಪದಲ್ಲಿ ಪ್ರಸ್ತುತಪಡಿಸಿ. ಸಾಧ್ಯವಾದರೆ ನೀವು ಅಥವಾ ನಿಮ್ಮ ಸ್ನೇಹಿತರು ಬರೆದ ನಾಟಕವನ್ನು ಶಾಲೆಯಲ್ಲಿ ಪ್ರದರ್ಶಿಸಿ.
2. ನಿಮ್ಮ ಕೈಗಳು ಎಷ್ಟು ಸ್ಥಿರವಾಗಿವೆ? ಎಂಬ ಆಟವನ್ನು ನೀವು ನಿಮ್ಮ ಸ್ನೇಹಿತರಿಗೆ ಆಡಿಸಬಹುದು. ವಿದ್ಯುತ್ ಕೋಶ, ವಿದ್ಯುತ್ ಬಲ್ಬ್, ಒಂದು ಲೋಹದ ಬೀಗದ ಕೀ, ಎರಡು ಕಬ್ಬಿಣದ ಮೊಳೆಗಳು (ಸುಮಾರು 5cm ಉದ್ದ), ಒಂದೂವರೆ ಮೀಟರ್‍ನಷ್ಟು ಉದ್ದವಿರುವ ದಪ್ಪವಾದ ಲೋಹದ ತಂತಿ (ಪ್ಲಾಸ್ಟಿಕ್ ಹೊದಿಕೆಯನ್ನು ತೆಗೆದ) ಮತ್ತು ಕೆಲವು ಜೋಡಿಸುವ ತಂತಿಗಳು ನಿಮಗೆ ಅಗತ್ಯವಿದೆ. ಕೊಕ್ಕೆಗಳ ರೀತಿಯಲ್ಲಿ ಬಳಸುವಂತೆ ಮರದ ಬೋರ್ಡಿನ ಮೇಲೆ ಸುಮಾರು ಒಂದು ಮೀಟರ್ ದೂರವಿರುವಂತೆ ಎರಡು ಕಬ್ಬಿಣದ ಮೊಳೆಗಳನ್ನು ಸಿಕ್ಕಿಸಿ. ಮೊಳೆಗಳ ನಡುವಿನ ತಂತಿಯನ್ನು ಬೀಗದ ಕೀನ ಕುಣಿಕೆಯ ಮೂಲಕ ತೂರಿಸಿ. ತಂತಿಯ ಒಂದು ತುದಿಯನ್ನು ಬಲ್ಬ್ ಮತ್ತು ಕೋಶಕ್ಕೆ ಜೋಡಿಸಿ. ಕೋಶದ ಇನ್ನೊಂದು ಅಗ್ರವನ್ನು ತಂತಿಯ ಮೂಲಕ ಬೀಗದ ಕೀಗೆ ಸಂಪರ್ಕಿಸಿ. ನಿಮ್ಮ ಸ್ನೇಹಿತನಿಗೆ ಕುಣಿಕೆಯನ್ನು ತಂತಿಗೆ ತಗಲದಂತೆ ನೇರವಾಗಿ ಚಲಿಸಲು ತಿಳಿಸಿ. ಬಲ್ಬ್ ಬೆಳಗಿತು ಎಂದರೆ ಬೀಗದ ಕೀ ಕುಣಿಕೆಯು ತಂತಿಯನ್ನು ಸ್ಪರ್ಶಿಸಿದೆ ಎಂದು ಸೂಚಿಸುತ್ತದೆ.
3. ವಿದ್ಯುತ್‍ಕೋಶವನ್ನು ಆವಿಷ್ಕರಿಸಿದ ಅಲೆಕ್ಸಾಂಡ್ರೋ ವೋಲ್ಟಾ ಬಗ್ಗೆ ಓದಿ, ತಿಳಿದುಕೊಳ್ಳಿ. ವಿದ್ಯುತ್ ಬಲ್ಬನ್ನು ಆವಿಷ್ಕರಿಸಿದ ಥಾಮಸ್ ಅಲ್ವಾ ಎಡಿಸನ್ ಬಗ್ಗೆ ಕೂಡಾ ನೀವು ತಿಳಿಯಬಹುದು.
ಅಲೆಸ್ಸಾಂಡ್ರೊ ವೋಲ್ಟಾ ForMemRS | |
---|---|
ಜನನ | ಅಲೆಸ್ಸಾಂಡ್ರೊ ಗೈಸೆಪ್ಪೆ ಆಂಟೋನಿಯೊ ಅನಸ್ತಾಸಿಯೊ ವೋಲ್ಟಾ 18 ಫೆಬ್ರವರಿ 1745 ಕೊಮೊ , ಡಚಿ ಆಫ್ ಮಿಲನ್ (ಈಗ ಇಟಲಿ) |
ನಿಧನರಾದರು | 5 ಮಾರ್ಚ್ 1827 (ವಯಸ್ಸು 82) ಕೊಮೊ, ಲೊಂಬಾರ್ಡಿ-ವೆನೆಷಿಯಾ , ಆಸ್ಟ್ರಿಯನ್ ಸಾಮ್ರಾಜ್ಯ (ಈಗ ಇಟಲಿ) |
ಹೆಸರುವಾಸಿಯಾಗಿದೆ | ಮೀಥೇನ್ ಆವಿಷ್ಕಾರ ವೋಲ್ಟೇಜ್ವೋಲ್ಟ್ಮೀಟರ್ವೋಲ್ಟಾಯಿಕ್ ಪೈಲ್ವೋಲ್ಟಾ ಸಾಮರ್ಥ್ಯಎಲೆಕ್ಟ್ರಿಕ್ ಯುಡಿಯೋಮೀಟರ್ವೋಲ್ಟ್ |
ಸಂಗಾತಿ | ತೆರೇಸಾ ಪೆರೆಗ್ರಿನಿ ( ಮೀ. 1794 ) |
ಮಕ್ಕಳು | 3 |
ಪ್ರಶಸ್ತಿಗಳು | ForMemRS (1791)ಕಾಪ್ಲಿ ಪದಕ (1794) ಲೀಜನ್ ಆಫ್ ಆನರ್ (1805)ಆರ್ಡರ್ ಆಫ್ ದಿ ಐರನ್ ಕ್ರೌನ್ (1806) |
ವೈಜ್ಞಾನಿಕ ವೃತ್ತಿ | |
ಕ್ಷೇತ್ರಗಳು | ಭೌತಶಾಸ್ತ್ರ ರಸಾಯನಶಾಸ್ತ್ರ |
ಸಂಸ್ಥೆಗಳು | ಪಾವಿಯಾ ವಿಶ್ವವಿದ್ಯಾಲಯ |
ಅಲೆಸ್ಸಾಂಡ್ರೊ ಗೈಸೆಪ್ಪೆ ಆಂಟೋನಿಯೊ ಅನಸ್ತಾಸಿಯೊ ವೋಲ್ಟಾ ಫಾರ್‌ಮೆಮ್‌ಆರ್‌ಎಸ್ ಇಟಾಲಿಯನ್ ಅಲೆಸ್ಸಾಂಡ್ರೊ 18 ಫೆಬ್ರವರಿ 1745 – 5 ಮಾರ್ಚ್ 1827 ರಂದು ಇಟಾಲಿಯನ್ ಭೌತಶಾಸ್ತ್ರಜ್ಞರಾಗಿದ್ದರು ಮತ್ತು ಇಟಾಲಿಯನ್ ಭೌತಶಾಸ್ತ್ರಜ್ಞರಾಗಿದ್ದರು . ಮತ್ತು ಶಕ್ತಿ , ಮತ್ತು ಎಲೆಕ್ಟ್ರಿಕ್ ಬ್ಯಾಟರಿಯ ಆವಿಷ್ಕಾರಕ ಮತ್ತು ಮೀಥೇನ್ ಅನ್ವೇಷಕ ಎಂದು ಸಲ್ಲುತ್ತದೆ. ಅವರು 1799 ರಲ್ಲಿ ವೋಲ್ಟಾಯಿಕ್ ಪೈಲ್ ಅನ್ನು ಕಂಡುಹಿಡಿದರು ಮತ್ತು 1800 ರಲ್ಲಿ ಪ್ರಕಟವಾದ ರಾಯಲ್ ಸೊಸೈಟಿಯ ಅಧ್ಯಕ್ಷರಿಗೆ ಎರಡು ಭಾಗಗಳ ಪತ್ರದಲ್ಲಿ ಅವರ ಪ್ರಯೋಗಗಳ ಫಲಿತಾಂಶಗಳನ್ನು ವರದಿ ಮಾಡಿದರು. ಈ ಆವಿಷ್ಕಾರದೊಂದಿಗೆ ವೋಲ್ಟಾ ಸಾಬೀತಾಯಿತು ವಿದ್ಯುತ್ ಅನ್ನು ರಾಸಾಯನಿಕವಾಗಿ ಉತ್ಪಾದಿಸಬಹುದು ಮತ್ತು ವಿದ್ಯುತ್ ಅನ್ನು ಜೀವಂತ ಜೀವಿಗಳಿಂದ ಮಾತ್ರ ಉತ್ಪಾದಿಸಲಾಗುತ್ತದೆ ಎಂಬ ಪ್ರಚಲಿತ ಸಿದ್ಧಾಂತವನ್ನು ತಳ್ಳಿಹಾಕಿದರು. ವೋಲ್ಟಾ ಅವರ ಆವಿಷ್ಕಾರವು ಹೆಚ್ಚಿನ ಪ್ರಮಾಣದ ವೈಜ್ಞಾನಿಕ ಉತ್ಸಾಹವನ್ನು ಹುಟ್ಟುಹಾಕಿತು ಮತ್ತು ಇತರರನ್ನು ಇದೇ ರೀತಿಯ ಪ್ರಯೋಗಗಳನ್ನು ನಡೆಸಲು ಕಾರಣವಾಯಿತು, ಇದು ಅಂತಿಮವಾಗಿ ಎಲೆಕ್ಟ್ರೋಕೆಮಿಸ್ಟ್ರಿ ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಯಿತು.
ವೋಲ್ಟಾ ತನ್ನ ಆವಿಷ್ಕಾರಕ್ಕಾಗಿ ನೆಪೋಲಿಯನ್ ಬೋನಪಾರ್ಟೆಯಿಂದ ಮೆಚ್ಚುಗೆಯನ್ನು ಪಡೆದರು ಮತ್ತು
ಇನ್ಸ್ಟಿಟ್ಯೂಟ್ ಸದಸ್ಯರಿಗೆ ತಮ್ಮ ಆವಿಷ್ಕಾರವನ್ನು ಪ್ರದರ್ಶಿಸಲು ಇನ್ಸ್ಟಿಟ್ಯೂಟ್ ಆಫ್ ಫ್ರಾನ್ಸ್ಗೆ ಆಹ್ವಾನಿಸಲಾಯಿತು .
ತನ್ನ ಜೀವನದುದ್ದಕ್ಕೂ, ವೋಲ್ಟಾ ಚಕ್ರವರ್ತಿಯೊಂದಿಗೆ ಒಂದು ನಿರ್ದಿಷ್ಟ ಪ್ರಮಾಣದ ನಿಕಟತೆಯನ್ನು ಅನುಭವಿಸಿದನು, ಅವನು ಅವನಿಗೆ ಹಲವಾರು ಗೌರವಗಳನ್ನು ನೀಡಿದನು. ವೋಲ್ಟಾ ಸುಮಾರು 40 ವರ್ಷಗಳ ಕಾಲ ಪಾವಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಭೌತಶಾಸ್ತ್ರದ ಅಧ್ಯಕ್ಷರಾಗಿದ್ದರು ಮತ್ತು ಅವರ ವಿದ್ಯಾರ್ಥಿಗಳಿಂದ ವ್ಯಾಪಕವಾಗಿ ಆರಾಧಿಸಲ್ಪಟ್ಟರು. ಅವರ ವೃತ್ತಿಪರ ಯಶಸ್ಸಿನ ಹೊರತಾಗಿಯೂ, ವೋಲ್ಟಾ ಅವರು ದೇಶೀಯ ಜೀವನದ ಕಡೆಗೆ ಒಲವು ತೋರಿದರು ಮತ್ತು ಇದು ಅವರ ನಂತರದ ವರ್ಷಗಳಲ್ಲಿ ಅವರು ಸಾರ್ವಜನಿಕ ಜೀವನದಿಂದ ಏಕಾಂತವಾಗಿ ಬದುಕಲು ಒಲವು ತೋರಿದಾಗ ಮತ್ತು ಅವರ ಕುಟುಂಬದ ಸಲುವಾಗಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿತು. 1823 ರಲ್ಲಿ ಪ್ರಾರಂಭವಾದ ಅನಾರೋಗ್ಯದ ಸರಣಿಯಿಂದ ಅವರು 1827 ರಲ್ಲಿ ನಿಧನರಾದರು. ವಿದ್ಯುತ್ ವಿಭವದ SI ಘಟಕವನ್ನು ಅವರ ಗೌರವಾರ್ಥವಾಗಿ ವೋಲ್ಟ್ ಎಂದು ಹೆಸರಿಸಲಾಗಿದೆ .
ಸಂವೇದ ವಿಡಿಯೋ ಪಾಠಗಳು
ಪ್ರಶ್ನೋತ್ತರಗಳು
* * * * * * * *