2022-23ನೇ ಸಾಲಿನ ಬಿಳಗಿ ವಲಯ ಮಟ್ಟದ ಕ್ರೀಡಾಕೂಟವು ಹಳ್ಳಿಬೈಲ್ ಪ್ರೌಢಶಾಲೆಯಲ್ಲಿ ದಿನಾಂಕ ಆಗಸ್ಟ್ ತಿಂಗಳ 17 ಹಾಗೂ 18 ರಂದು ನಡೆಯಿತು. ನಮ್ಮ ಶಾಲೆಯ 6 ಮತ್ತು 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ 14 ಮಕ್ಕಳೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಹೆಮ್ಮೆಯ ಸಂಗತಿ.
6ನೇ ತರಗತಿಯ ಜೆ. ಅಕ್ಷರ 80 ಮೀ. ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನ ಪಡೆದರೆ ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಜಿದ್ದಾಜಿದ್ದಿ ಪೈಪೋಟಿ ನಡೆದು ರನ್ನರ ಅಪ್ ಆಗುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎಸ್.ಡಿ.ಎಮ್.ಸಿ. ಸಮಿತಿ, ಪಾಲಕ-ಪೋಷಕರು, ಶಿಕ್ಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.