ಇತ್ತಿಚಿಗೆ ದಿನಾಂಕ 29-12-2021 ಹಾಗೂ 30-12-2021ರಂದು 2021-22ನೇ ಸಾಲಿನ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟವು ಕಾರವಾರದಲ್ಲಿ ನಡೆದಿತ್ತು. ಈ ಕ್ರೀಡಾಕೂಟಕ್ಕೆ ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಕು. ರಂಜನಾ ಭಂಡಾರಿ ಇವರು ಉದ್ದ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರ ಈ ಸಾಧನೆಗೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಎಸ್.ಡಿ.ಎಮ್.ಸಿ. ಸಮಿತಿ ಹಾಗೂ ಊರ ನಾಗರಿಕರು ಅಭಿನಂದಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಫಲಿತಾಂಶ ಬರಲಿ ಎಂದು ಹಾರೈಸಿದ್ದಾರೆ.

ಉತ್ತಮ ಓಟಗಾರ್ತಿಯಾದ ಇವರು ಕಳೆದ ವರ್ಷವೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ 200ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈ ವರ್ಷವೂ ಕೀರ್ತಿಗಳಿಸಲಿ ಎಂಬುದು ನಮ್ಮೆಲ್ಲರ ಅಭಿಲಾಷೆ.