2021-22ನೇ ಸಾಲಿನ ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳು

2021-22 ನೇ ಸಾಲಿನ ರಂಗೋಲಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮವು ದಿನಾಂಕ 05-02-2022, ಶನಿವಾರದಂದು ನಡೆಯಿತು. ವಿಜ್ಞಾನ ಶಿಕ್ಷಕಿಯಾದ ಕು. ಮೈತ್ರಿ ಹೆಗಡೆ ಅವರ ಮಾರ್ಗದರ್ಶನದಲ್ಲಿ 5, 6 ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಮ್ಮ ಪಠ್ಯದಲ್ಲಿ ಬಂದಿರುವ ವಿಜ್ಞಾನದ ಚಿತ್ರಗಳಾದ ಮಾನವನ ಹೃದಯ, ಶ್ವಾಸಕೋಶ, ಮೂತ್ರ ಜನಕಾಂಗ, ಮೊಗ್ಗುವಿಕೆ ಹಾಗೂ ಯೀಸ್ಟ್ ನಲ್ಲಿ ಸಂತಾನೋತ್ಪತ್ತಿ, ರಕ್ತ ಪರಿಚಲನೆಯ ರೇಖಾಚಿತ್ರ, ನಿಷೇಚನ, ಬೀಜಗಳ ಉತ್ಪತ್ತಿ, ಸಸ್ಯಗಳಲ್ಲಿ ಸಂತಾನೋತ್ಪತ್ತಿ ಭಾಗಗಳು ಹೀಗೆ ವಿವಿಧ ಚಿತ್ರಗಳನ್ನು ವಿದ್ಯಾರ್ಥಿಗಳು ಚಿತ್ರಿಸಿ ಪ್ರದರ್ಶಿಸಿದರು.

ಶಾಲಾ ಶಿಕ್ಷಕಿಯರಾದ ಕು. ಮೈತ್ರಿ ಹೆಗಡೆ ಹಾಗೂ ಕು. ರಂಜನಾ ಭಂಡಾರಿ ಇವರು ಮಕ್ಕಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು.