ದಿನಾಂಕ 23-03-2021 ರಂದು ನಮ್ಮ ಶಾಲೆಯಲ್ಲಿ ಪ್ರೇರಣಾ ಕ್ಲಬ್ ವತಿಯಿಂದ 6 ಮತ್ತು 7ನೇ ತರಗತಿ ಮಕ್ಕಳಿಗೆ ರಂಗೋಲಿಯಲ್ಲಿ ರೇಖಾಕೃತಿಗಳನ್ನು ಬಿಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕೈಚಳಕವನ್ನು ಪ್ರದರ್ಶಿಸಿದರು.

ವೃತ್ತದ ಭಾಗಗಳು, ಕೋನಗಳನ್ನಾಧರಿಸಿ ತ್ರಿಭುಜದ ವಿಧಗಳು, ಘನಾಕೃತಿಗಳು ಮತ್ತು ಜಾಲಾಕೃತಿಗಳು, ಬಹುಭುಜಾಕೃತಿಗಳು, ವೃತ್ತದ ವಿಸ್ತೀರ್ಣ ಹೀಗೆ ವಿವಿಧ ರೇಖಾಕೃತಿಗಳನ್ನು ಬಿಡಿಸಿ ಮೆಚ್ಚುಗೆಗೆ ಪಾತ್ರರಾದರು.