ದಿನಾಂಕ 27-೦2-2023 ಮಂಗಳವಾರದಂದು ನಮ್ಮ ಶಾಲೆಯಲ್ಲಿ 6ನೇ ವರ್ಷದ ಮಕ್ಕಳ ಸಂತೆ ನಡೆಯಿತು.

ಸಂತೆಯಲ್ಲಿ ಸಾವಯವ ಪದಾರ್ಥಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಮುಖ್ಯವಾಗಿ ಸ್ಥಳೀಯವಾಗಿ ದೊರೆಯುವ ವಸ್ತುಗಳಾದ ಬಾಳೆಕಾಯಿ, ಎಳನೀರು, ಕಾಮಕಸ್ತೂರಿ, ಎಳ್ಳು ನೀರು ತಂಪು, ರಾಗಿ ತಂಪು, ಲಿಂಬು ಶರಬತ್, ಸೋಡಾ ಶರಬತ್ತು, ಮಜ್ಜಿಗೆ ಹೀಗೆ ವಿವಿಧ ಬಗೆಯ ತಂಪು ಪಾನೀಯಗಳು, ಪಪ್ಪಾಯಿ, ಬಾಳೆಹಣ್ಣು, ಜಂಬೆ ಹಣ್ಣು, ಕಲ್ಲಂಗಡಿ ಹಣ್ಣು, ಕರಡಿ ಸೊಪ್ಪು, ಹರಿವೆ, ಬಸಳೆ ಸೊಪ್ಪು, ನುಗ್ಗೆಕಾಯಿ, ಬದನೆಕಾಯಿ, ಒಂದಾನೆ ಜಡೆ ಸೊಪ್ಪು, ಒಗ್ಗರಣೆ ಎಲೆ, ಕರಿಮಣಸಿನ ಕಾಳು, ಬೋಳಕಾಳು, ಧೂಪ, ಕಾಡು ಅರಿಶಿಣ ಪುಡಿ, ಮನೆಯಲ್ಲಿ ತಯಾರಿಸಿದ ಅರಿಶಿಣ ಪುಡಿ, ಜೇನುತುಪ್ಪ, ಸಕ್ಕರೆ ಕಂಚಿಕಾಯಿ, ಕಬ್ಬು, ಮಾವಿನಕಾಯಿ, ಏಲಕ್ಕಿ, ಮರಗಲು ಸಿಪ್ಪೆ, ಕಸಬರಿಗೆ, ನುಗ್ಗೆ ಗಿಡ, ಕರಿಮೆಣಸಿನ ಗಿಡ, ಮನೆಯಲ್ಲಿ ತಯಾರಿಸಿದ ಖಾರಾ, ಬಾಳೆಕಾಯಿ ಚಿಪ್ಸ್, ಮಸಾಲಾ ಮಂಡಕ್ಕಿ ಹೀಗೆ ಹಲವಾರು ವಸ್ತುಗಳು ಮಾರಾಟಕ್ಕಿದ್ದವು.

ಗ್ರಾಮಸ್ಥರು ವ್ಯಾಪಾರದಲ್ಲಿ ಮಾಡಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದರು. ವಿದ್ಯಾರ್ಥಿಗಳು ವ್ಯಾಪಾರದಿಂದ ವ್ಯವಹಾರಿಕ ಜ್ಞಾನ ಪಡೆಯುತ್ತಿದ್ದದ್ದು ಕಂಡುಬಂತು.

ಒಟ್ಟು 5600 ರೂ. ಬಂಡವಾಳದಿಂದ ನಡೆದ ಮಕ್ಕಳ ಸಂತೆಯು ದಿನದ ಅಂತ್ಯಕ್ಕೆ 10125 ರೂ. ವ್ಯಾಪಾರ ನಡೆದು, 4525 ರೂ. ಲಾಭ ಗಳಿಸಿದರು.

ಕಿರು ಕಾಣಿಕೆ ಸಮರ್ಪಣೆ

ಈ ಸಂದರ್ಭದಲ್ಲಿ ಶಾಲೆಯ ಕ್ಷೀರ ಭಾಗ್ಯ ಯೋಜನೆಗೆ ನಿರಂತರ ಬಾದಾಮಿ ಪುಡಿ ಪೂರೈಸುತ್ತಿರುವ ಪಾಲಕರಾದ ಶ್ರೀ ಮಂಜುನಾಥ ಹಾಲ ನಾಯ್ಕ, ತಿಪ್ಪನಕೊಡ್ಲು ಹಾಗೂ ಅತಿಥಿ ಶಿಕ್ಷಕರಾದ ಕು. ಶ್ಯಾಮಲಾ ಗೌಡ ಇವರಿಗೆ ಕಿರುಕಾಣಿಕೆ ನೀಡಲಾಯಿತು.

ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಸುರೇಶ ಬಂಗಾರ್ಯ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು. ಉಪಾಧ್ಯಕ್ಷರಾದ ಶ್ರೀಮತಿ ಮಹಾಲಕ್ಷ್ಮಿ ಮಂಜುನಾಥ ಗೌಡ ವ್ಯಾಪಾರ ಮಳಿಗೆಯನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಶ್ರೀ ನಿತ್ಯಾನಂದ ಕನ್ನ ಗೌಡ, ಶ್ರೀ ರಾಮಚಂದ್ರ ಶಿವರಾಮ ಹೆಗಡೆ, ಶ್ರೀ ಮಹಾಬಲೇಶ್ವರ ಸುಬ್ಬ ಗೌಡ ಹಾಗೂ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಉಪಸ್ಥಿತರಿದ್ದರು.

ಮಕ್ಕಳ ಸಂತೆ