ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಕು. ಜಗನ್ನಾಥ ಉಮೇಶ ಗೌಡ, ಹುಲ್ಕುತ್ರಿ ಈತ ಯಕ್ಷಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಉದಯೋನ್ಮುಖ ಪ್ರತಿಭೆ. ಇಲ್ಲಿಯ ‘ಯಕ್ಷ ದಕ್ಷ ಯಕ್ಷಗಾನ ಸಂಸ್ಥೆ, ಹೆಮ್ಮನಬೈಲ್’ ನಲ್ಲಿ ತರಬೇತಿ ಪಡೆದು 09-01-2023ರಂದು ನಡೆದ ರಂಗಪ್ರವೇಶದಲ್ಲಿ “ದೇವಿ ಮಹಾತ್ಮೇ” ಕಥಾಭಾಗದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದಾನೆ. ಅದ್ಭುತ ಹಾವಭಾವ, ತಾಳಕ್ಕೆ ತಕ್ಕ ನೃತ್ಯ ಇವೆಲ್ಲವೂ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದ್ದಾನೆ. ಈತನ ಅಭಿನಯಕ್ಕೆ ಮನಸೋಲದವರಿಲ್ಲ. ಯಕ್ಷಲೋಕಕ್ಕೆ ಅತ್ಯುತ್ತಮ ಕಲೆಗಾರನಾಗಲಿ ಎಂಬುದು ನಮ್ಮೆಲ್ಲರ ಬಯಕೆ.