ದಿನಾಂಕ 03-03-2016 ರಂದು 3ನೇ ವರ್ಷದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಭಾ ಕಾರ್ಯಕ್ರಮವನ್ನು ಸೋವಿನಕೊಪ್ಪ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಭಾರತಿ ಗಂಗಾಧರ ಹೆಗಡೆ ಉದ್ಘಾಟಿಸಿದರು. ಸಂತೆ ಮಾರುಕಟ್ಟೆಯನ್ನು ಹಾವಿನಬೀಳು ಗ್ರಾಮದ ಪಂಚಾಯತ ಸದಸ್ಯರಾದ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ ಹಾಗೂ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಜನಾರ್ಧನ ಗಣಪ ಗೌಡ ಇವರು ಜಂಟಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಾಜಾರಾಮ ಭಟ್, ಹಾದ್ರಿಮನೆ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರ ಹಾಲ ನಾಯ್ಕ, ಪಾಲಕ-ಪೋಷಕರು, ಊರನಾಗರಿಕರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಈ ವರ್ಷದ ಮಕ್ಕಳ ಸಂತೆಯಲ್ಲಿ ಅಕ್ಕ-ಪಕ್ಕದ ಶಾಲೆಯ ಮಕ್ಕಳಿಗೂ ವ್ಯಾಪಾರ ಮಳಿಗೆಯನ್ನು ಸ್ಥಾಪಿಸಲು ವ್ಯವಸ್ಥೆ ಮಾಡಿಕೊಡಲಾಗಿತ್ತು. ಒಟ್ಟೂ 30 ಅಂಗಡಿಗಳು ಮಾರುಕಟ್ಟೆಯಲ್ಲಿದ್ದು, ವ್ಯಾಪಾರವೂ ಭರ್ಜರಿಯಾಗಿ ನಡೆದಿತ್ತು.