ಮಳೆ (ಪದ್ಯ) – ಪಾಠ-4
ಬಿಸಿಲ ಝಳಕೆ ಕಡಲ ನೀರು
ಆವಿಯಾಯಿತು |
ಆವಿಯಾಗಿ ನೆಲದ ಕಡೆಗೆ
ಬೀಸಿ ಬಂದಿತು ||1||
ನೆಲದ ಮೇಲೆ ಗುಡ್ಡಬೆಟ್ಟ
ಅಡ್ಡವಾಯಿತು |
ತಡೆದು ನಿಂತ ಮೋಡವೆಲ್ಲ
ಮೇಲಕೇರಿತು ||2||
ಘಳಿಗೆಯೊಳಗೆ ಬಾನು ತುಂಬ
ಮೋಡ ಕವಿಯಿತು |
ಮಿಂಚು ಮಿಂಚಿ ಜಗವು ಬೆಳಗಿ
ಗುಡುಗು ಗುಡುಗಿತು ||3||
ಮೋಡ ಮೇಲಕೇರಿದಾಗ
ತಂಪು ತಗುಲಿತು |
ಆವಿ ತಣಿದು ಭಾರವಾಗಿ
ಕುಸಿಯತೊಡಗಿತು ||4||
ಮುತ್ತಿನಂಥ ಮಳೆಯ ನೀರು
ಕೆಳಗೆ ಸುರಿಯಿತು |
ಕೆರೆಯು ತೊರೆಯು ಹಳ್ಳ ಹೊಳೆಯು
ತುಂಬಿ ಹರಿಯಿತು ||5||
-ಪಳಕಳ ಸೀತಾರಾಮ ಭಟ್ಟ
ಪದಗಳ ಅರ್ಥ
ಕಡಲು-ಸಮುದ್ರ
ಅಡ್ಡ-ತಡೆ
ಬೆಳಗು – ಪ್ರಕಾಶಿಸು
ಕವಿಯಿತು – ಆವರಿಸಿತು
ನೆಲ – ಭೂಮಿ
ಜಗ – ಲೋಕ
ಸುರಿ – ಕೆಳಕ್ಕೆ ಬೀಳು, ಧಾರೆಯಾಗಿ ಬೀಳು
ತಣಿದು – ತಂಪಾಗಿ
ಸಂವೇದ ವಿಡಿಯೋ ಪಾಠಗಳು
ಪದ್ಯದ ಮಾದರಿ ಗಾಯನ
4th std | 1st language Kannada | 2nd poem | lyrical video | Male – ಮಳೆ | ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ
Thanks for sharing. I read many of your blog posts, cool, your blog is very good. https://www.binance.com/el/register?ref=53551167