ಭಿನ್ನರಾಶಿಗಳು – ಅಧ್ಯಾಯ – 5

ಭಿನ್ನರಾಶಿಯ ಪೂರ್ಣದ ಒಂದು ಭಾಗ.

ಒಂದು ಪೂರ್ಣ ವಸ್ತುವಿನ ಭಾಗವನ್ನು ಭಿನ್ನರಾಶಿಯಲ್ಲಿ ವ್ಯಕ್ತಪಡಿಸಬೇಕಾದರೆ ಆ ಪೂರ್ಣ ವಸ್ತುವನ್ನು ಸಮಭಾಗಗಳಾಗಿ ವಿಭಾಗಿಸಬೇಕು.

ಅಂಶ ಮತ್ತು ಛೇಧ

ಮೇಲಿನ ಎಲ್ಲಾ ಉದಾಹರಣೆಗಳಿಂದ ಗಮಿಸಬಹುದಾದ ಅಂಶವೇನೆಂದರೆ :-
* ಭಿನ್ನರಾಶಿಯು ಪೂರ್ಣದ ಒಂದು ಭಾಗ.
* ಭಿನ್ನರಾಶಿ ಬರೆಯಲು ಎರಡು ಅಂಕಿಗಳ ಅವಶ್ಯಕತೆ ಇರುತ್ತದೆ.
* ಒಂದು ಪೂರ್ಣವನ್ನು ಎಷ್ಟು ಸಮಭಾಗಗಳಾಗಿ ವಿಭಾಗಿಸಲಾಗಿದೆಯೋ ಆ ಸಮಭಾಗಗಳು
ಛೇಧ.
* ಒಟ್ಟು ಸಮಭಾಗಗಳಲ್ಲಿ ಎಷ್ಟು ಸಮಭಾಗಗಳನ್ನು ಪರಿಗಣಿಸಲಾಗಿದೆಯೋ ಅದೇ ಅಂಶ.

ಭಿನ್ನರಾಶಿಯು ಸಂಗ್ರಹದ ಒಂದು ಭಾಗ

ಭಿನ್ನರಾಶಿಯು ಗುಂಪಿನ ಒಂದು ಭಾಗ

ಭಿನ್ನರಾಶಿಗಳ ಹೋಲಿಕೆ

ಒಂದೇ ಛೇದವುಳ್ಳ ಭಿನ್ನರಾಶಿಗಳು

ಭಿನ್ನರಾಶಿಗಳಲ್ಲಿನ ಛೇದ ಸಮ ಆಗಿದ್ದಾಗ,
* ಅಂಶವು ಚಿಕ್ಕದಾಗಿದ್ದರೆ, ಭಿನ್ನರಾಶಿಯ ಬೆಲೆಯು ಚಿಕ್ಕದಾಗಿರುತ್ತದೆ.
* ಅಂಶವು ದೊಡ್ಡದಾಗಿದ್ದರೆ, ಭಿನ್ನರಾಶಿಯ ಬೆಲೆಯು ದೊಡ್ಡದಾಗಿರುತ್ತದೆ.

ಒಂದೇ ಅಂಶ ಇರುವ ಭಿನ್ನರಾಶಿಗಳು

ಮೇಲಿನ ಉದಾಹರಣೆಗಳಿಂದ ನಮಗೆ ತಿಳಿಯುವುದೇನೆಂದರೆ,
ಭಿನ್ನರಾಶಿಗಳಲ್ಲಿನ ಅಂಶಗಳು ಒಂದೇ ಆಗಿದ್ದಾಗ,
* ಛೇದವು ಚಿಕ್ಕದಾಗಿದ್ದರೆ, ಆ ಭಿನ್ನರಾಶಿಯ ಬೆಲೆಯು ದೊಡ್ಡದಾಗಿರುತ್ತದೆ.
* ಛೇದವು ದೊಡ್ಡದಾಗಿದ್ದರೆ, ಆ ಭಿನ್ನರಾಶಿಯ ಬೆಲೆಯು ಚಿಕ್ಕದಾಗಿರುತ್ತದೆ.

ಸಮಾನ ಭಿನ್ನರಾಶಿಗಳು

ಯಾವ ಭಿನ್ನರಾಶಿಗಳು ಒಂದೇ ಬೆಲೆಯನ್ನು ಸೂಚಿಸುತ್ತವೆಯೋ ಅಂತಹವು ಸಮಾನ ಭಿನ್ನರಾಶಿಗಳು.

ಸಮಾನ ಭಿನ್ನರಾಶಿಗಳನ್ನು ಕಂಡಿಹಿಡಿಯಲು, ಭಿನ್ನರಾಶಿಗಳ ಅಂಶ ಮತ್ತು ಛೇದವನ್ನು ಒಂದೇ ಸಂಖ್ಯೆಯಿಂದ ಗುಣಿಸಬೇಕು. (ಸೊನ್ನೆಯನ್ನು ಹೊರತುಪಡಿಸಿ)

ಸಮಾನ ಭಿನ್ನರಾಶಿಗಳನ್ನು ಪರಿಶೀಲಿಸುವುದು

ಅಂದರೆ, ಕೊಟ್ಟಿರುವ ಎರಡು ಭಿನ್ನರಾಶಿಗಳಲ್ಲಿ,
* ಒಂದು ಭಿನ್ನರಾಶಿಯ ಅಂಶ ಮತ್ತು ಛೇದವನ್ನು ಇನ್ನೊಂದು ಭಿನ್ನರಾಶಿಯ ಛೇದ ಮತ್ತು ಅಂಶಕ್ಕೆ ಓರೆ ಗುಣಾಕಾರ ಮಾಡಿದಾಗ ಬರುವ ಗುಣಲಬ್ಧವು ಸಮವಾಗಿದ್ದರೆ, ಆ ಭಿನ್ನರಾಶಿಗಳು ಸಮಾನ ಭಿನ್ನರಾಶಿಗಳು.
* ಎರಡು ಭಿನ್ನರಾಶಿಗಳ ಓರೆ ಗುಣಾಕಾರ ಮಾಡಿದಾಗ ಗುಣಲಬ್ಧವು ಅಸಮ ಆಗಿದ್ದಲ್ಲಿ ಆ ಭಿನ್ನರಾಶಿಗಳು ಸಮಾನ ಆಗಿರುವುದಿಲ್ಲ.

ಕೊಟ್ಟಿರುವ ಅಂಶ ಮತ್ತು ಛೇದಗಳಿಗೆ ಒಂದು ಭಿನ್ನರಾಶಿಯ ಸಮಾನ ಭಿನ್ನರಾಶಿಗಳನ್ನು ಕಂಡುಹಿಡಿಯುವುದು.

ಭಿನ್ನರಾಶಿಗಳನ್ನು ಸಂಕ್ಷೇಪಿಸುವುದು.

ಭಿನ್ನರಾಶಿಯ ಸಂಕ್ಷಿಪ್ತ ರೂಪ ಪಡೆಯಬೇಕಾದರೆ, ಕೊಟ್ಟಿರುವ ಭಿನ್ನರಾಶಿಯ ಅಂಶ ಮತ್ತು ಛೇದವನ್ನು ಒಂದೇ ಸಂಖ್ಯೆಯಿಂದ ಭಾಗಿಸಬೇಕು. ಆಗ ಸಮಾನ ಭಿನ್ನರಾಶಿಯ ಬೆಲೆ ಮತ್ತು ಕೊಟ್ಟಿರುವ ಭಿನ್ನರಾಶಿಯ ಬೆಲೆಯು ಒಂದೇ ಆಗಿರುತ್ತದೆ.

1) ಭಿನ್ನರಾಶಿಯನ್ನು ಅದರ ಸಂಕ್ಷಿಪ್ತ ರೂಪದಲ್ಲಿ ಬರೆಯುವುದೇ ಭಿನ್ನರಾಶಿಯ ಸಂಕ್ಷೇಪಿಸುವಿಕೆ.
2) ಕೊಟ್ಟಿರುವ ಭಿನ್ನರಾಶಿಯ ಸಂಕ್ಷಿಪ್ತ ರೂಪ ಪಡೆಯಬೇಕಾದರೆ, ಈ ಭಿನ್ನರಾಶಿಯ ಅಂಶ ಮತ್ತು ಛೇದದಲ್ಲಿ ಕನಿಷ್ಠ ಅಂಕಿ ಬರುವ ತನಕ ಪ್ರತಿ ಬಾರಿ ಒಂದೇ ಸಂಖ್ಯೆಯಿಂದ ಭಾಗಿಸುತ್ತಾ ಹೋಗಬೇಕು.

ಸಂವೇದ ವಿಡಿಯೋ ಪಾಠಗಳು

Samveda – 5th – Maths – Fractions (Part 1 of 3)
Samveda – 5th – Maths – Fractions (Part 2 of 3)
Samveda – 5th – Maths – Fractions (Part 3 of 3)

ಅಭ್ಯಾಸಗಳು

ಅಭ್ಯಾಸ 5.1 ರಿಂದ 5.4ಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.