ಬೇವು ಬೆಲ್ಲದೊಳಿಡಲೇನು ಫಲ – ಪದ್ಯ-6

ಪುರಂದರದಾಸರು

ಪ್ರವೇಶ : ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ. ಯಾವುದೇ ಕೆಲಸ ನಿರ್ವಹಿಸಿದರೂ ಅದರಿಂದ ಫಲಾಫಲವನ್ನು ಅಪೇಕ್ಷಿಸಬಾರದು. ನಿರ್ಮಲ ಭಕ್ತಿ ಇಲ್ಲದಿದ್ದರೆ ಮಾಡಿದ ಕೆಲಸ ಕೂಡ ನಿಷ್ಫಲವಾಗುತ್ತದೆ ಎಂಬುದನ್ನು ಪುರಂದರದಾಸರು ಸರಳ ಉದಾಹರಣೆಗಳ ಮೂಲಕ ಇಲ್ಲಿ ನಿರೂಪಿಸಿದ್ದಾರೆ.

ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ ||

ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ ||

ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ
ಕುಪಿತ ತನುವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ ||

ಹೀನ ಗುಣಗಳ ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ ||

ಪದ್ಯದ ಮಾದರಿ ಗಾಯನ

https://youtu.be/_6HbrWIPD2k

ಪದ್ಯದ ಮಾದರಿ ಗಾಯನಕ್ಕೆ ಮೇಲಿನ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

ಕೃತಿಕಾರರ ಪರಿಚಯ

ಪುರಂದರದಾಸರು : ಹರಿದಾಸ ಸಾಹಿತ್ಯದ ಅಶ್ವಿನಿದೇವತೆಗಳಲ್ಲಿ ಒಬ್ಬರು. ಈಗಿನ ಮಹಾರಾಷ್ಟ್ರದ ಪುರಂದರಗಡದಲ್ಲಿ ಕ್ರಿ. ಶ. ಸುಮಾರು 1480 ರಲ್ಲಿ ಜನಿಸಿದರು. ತಂದೆ ವರದಪ್ಪನಾಯಕ, ತಾಯಿ ಸರಸ್ವತಿ. ಪೂರ್ವದ ಹೆಸರು ಶ್ರೀನಿವಾಸನಾಯಕ. ಆಭರಣ ವ್ಯಾಪಾರಿಯಾಗಿದ್ದ ಇವರು ಜೀವನದಲ್ಲಿ ನಡೆದ ಘಟನೆಯಿಂದಾಗಿ ವೈರಾಗ್ಯ ತಾಳಿದರು. ಹರಿಭಕ್ತರಾಗಿ ನೂರಾರು ಕೀರ್ತನೆಗಳನ್ನು ರಚಿಸಿದರು. ‘ದಾಸರೆಂದರೆ ಪುರಂದರದಾಸರಯ್ಯ’ ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದಲೇ ಹೊಗಳಿಕೆಗೆ ಪಾತ್ರರಾದರು. ಪುರಂದರದಾಸರು ಕರ್ನಾಟಕ ಸಂಗೀತದ ಪಿಳ್ಳಾರಿ ಗೀತೆಗಳನ್ನು ರಚಿಸಿ ‘ಕರ್ನಾಟಕ ಸಂಗೀತದ ಪಿತಾಮಹ’ ಎನಿಸಿಕೊಂಡರು. ಇವರ ಅಂಕಿತ ‘ಪುರಂದರವಿಠಲ.’

ಪದಗಳ ಅರ್ಥ

ಕುಟಿಲ – ಮೋಸ, ವಂಚನೆ
ಕುಪಿತ – ಸಿಟ್ಟಿನಿಂದ ಕೂಡಿದ
ಸಟೆ – ಸುಳ್ಳು

ಸಂವೇದ ವಿಡಿಯೋ ಪಾಠಗಳು

Samveda 5 FLK 27 Kannada 5th 1of 1 Bevubelladolidalenu phala

ಪೂರಕ ವಿಡಿಯೋಗಳು

ಬೇವು ಬೆಲ್ಲದೊಳಿಡಲೇನು ಫಲ | Bevu bella dolidalenu phala | 5th kannada

ವ್ಯಾಕರಣ ಮಾಹಿತಿ

ಅ. ಪ್ರಕೃತಿಭಾವ.
ಕೆಲವು ಸಲ ಸ್ವರಕ್ಕೆ ಸ್ವರವು ಪರವಾದಾಗ ಯಾವುದೇ ರೀತಿಯ ಸಂಧಿ ಕಾರ್ಯವು ನಡೆಯುವುದಿಲ್ಲ. ಇದನ್ನು ಪ್ರಕೃತಿಭಾವ ಎನ್ನುತ್ತೇವೆ.
ಉದಾ: ಅಣ್ಣಾ + ಓಡಿ ಬಾ = ಅಣ್ಣಾ ಓಡಿ ಬಾ.
ಇಲ್ಲಿ ‘ಅಣ್ಣಾ’ ಮತ್ತು ‘ಓಡಿ ಬಾ’ ಎಂಬ ಎರಡು ಪದಗಳ ನಡುವೆ ಸಂಧಿಕಾರ್ಯ ನಡೆಯದೆ ಆ ಪದಗಳು ಹಾಗೆಯೇ ಉಳಿದುಕೊಂಡಿವೆ.
ಇದೇ ರೀತಿ ಕೆಲವು ಉದಾಹರಣೆಗಳನ್ನು ಗಮನಿಸಿರಿ.
ಕೃಷ್ಣ + ಎಲ್ಲಿದ್ದೀಯಾ = ಕೃಷ್ಣ ಎಲ್ಲಿದ್ದೀಯಾ?
ಅಕ್ಕಾ + ಎಲ್ಲಿರುವೆ = ಅಕ್ಕಾ ಎಲ್ಲಿರುವೆ?
ಆ + ಅಂಗಡಿ = ಆ ಅಂಗಡಿ
ಈ + ಮನೆ = ಈ ಮನ

ಆ. ವಿರುದ್ಧಾರ್ಥಕ ಪದಗಳು.
ದಿನನಿತ್ಯ ಮಾತನಾಡುವಾಗ, ಬರೆಯುವಾಗ ಬಳಸುವ ಪದಗಳಲ್ಲಿ ವಿರುದ್ಧವಾದ ಅರ್ಥವಿರುವ ಕೆಲವು ಪದಗಳನ್ನು ಇಲ್ಲಿ ಕೊಡಲಾಗಿದೆ.
ಪದ ವಿರುದ್ಧಾರ್ಥಕ ಪದ
ಅನುಭವ x ಅನನುಭವ
ಆದಿ x ಅನಾದಿ
ಉತ್ತಮ x ಅಧಮ
ಉನ್ನತಿ x ಅವನತಿ
ಗರ್ವಿ x ನಿಗರ್ವಿ

ಅಭ್ಯಾಸ

ಈ ಪದ್ಯದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಓದಿಗೆ ಮನ್ನಣೆ

  1. ಪುರಂದರದಾಸರ ಜೀವನ ಚರಿತ್ರೆಯನ್ನು ಓದಿರಿ.

https://kn.wikipedia.org/wiki/%E0%B2%AA%E0%B3%81%E0%B2%B0%E0%B2%82%E0%B2%A6%E0%B2%B0%E0%B2%A6%E0%B2%BE%E0%B2%B8

ಪುರಂದರದಾಸರ ಜೀವನ ಚರಿತ್ರೆ ಓದಲು ಮೇಲಿನ ಲಿಂಕ್ ಬಳಸಿ

ಶ್ರೀ ಪುರಂದರ ದಾಸರ ಬಗ್ಗೆ 15 ಸಾಲಿನ ಪ್ರಬಂಧ
  1. ಪುರಂದರದಾಸರ ಇತರ ಕೀರ್ತನೆಗಳನ್ನು ಓದಿ, ಅರ್ಥೈಸಿಕೊಳ್ಳಿ.

https://kn.wikisource.org/wiki/%E0%B2%AA%E0%B3%81%E0%B2%B0%E0%B2%82%E0%B2%A6%E0%B2%B0%E0%B2%A6%E0%B2%BE%E0%B2%B8%E0%B2%B0_%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF

ಪುರಂದರದಾಸರು ರಚಿಸಿದ ಕೀರ್ತನೆಗಳು

https://youtu.be/zO00olSAXfk

ಕೀರ್ತನೆಗಳಿಗಾಗಿ ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/g51i4sNCQpQ

Purandara Dasara Songs | Aacharavilladha Naalige | Purandara Dasara Geethegalu | Narasimha Nayak

  1. ದಾಸರ ಕೀರ್ತನೆಗಳನ್ನು ಹಾಗೂ ಅವರ ಜೀವನ ಚರಿತ್ರೆಗಳನ್ನು ಓದಿರಿ.

https://youtu.be/Bx6GqQEGoME

Kannada Devotional Songs | Dasa Dasara Maneya | Vidyabhushana Birthday Special | Dasara Padagalu

ಶುಭನುಡಿ

  1. ಸದ್ಗುಣಗಳು ಸ್ವರ್ಗಕ್ಕೆ ಹಾದಿ.
  2. ಕೋಪದಿಂದ ಕೊಯ್ದ ಮೂಗು ಮತ್ತೆ ಬಂದೀತೇ?
  3. ಆಚಾರವೇ ಸ್ವರ್ಗ ಅನಾಚಾರವೇ ನರಕ.

*************