ಬೆಳಕು, ಛಾಯೆಗಳು ಮತ್ತು ಪ್ರತಿಫಲನಗಳು – ಅಧ್ಯಾಯ-11

ನಮ್ಮ ಸುತ್ತ ಹಲವು ವಸ್ತುಗಳನ್ನು ನಾವು ಕಾಣುತ್ತೇವೆ. ಶಾಲೆಗೆ ಹೋಗುವ ದಾರಿಯಲ್ಲಿ ಬಸ್ಸುಗಳು, ಕಾರುಗಳು, ಬೈಸಿಕಲ್ಲು, ಮರ, ಪ್ರಾಣಿ ಮತ್ತು ಕೆಲವು ವೇಳೆ ಹೂಗಳನ್ನು ನಾವು ನೋಡುತ್ತೇವೆ. ನಾವು ಈ ವಸ್ತುಗಳನ್ನೆಲ್ಲಾ ಹೇಗೆ ನೋಡುತ್ತೇವೆ ಎಂದು ನೀವು ಆಲೋಚಿಸುವಿರಿ?

ರಾತ್ರಿ ವೇಳೆಯಲ್ಲಿ ಬಹುಶಃ ಸಂಪೂರ್ಣ ಕತ್ತಲೆಯಾಗಿರುವಾಗ ಅದೇ ಜಾಗಗಳ ಬಗ್ಗೆ ಆಲೋಚಿಸಿ ನೀವೇನನ್ನು ಕಾಣುವಿರಿ? ನೀವು ಸಂಪೂರ್ಣ ಕತ್ತಲೆಯ ಕೊಠಡಿಯೊಳಗೆ ಪ್ರವೇಶಿಸಿದಿರೆಂದು ಭಾವಿಸಿಕೊಳ್ಳಿ. ಕೊಠಡಿಯ ಒಳಗೆ ಯಾವುದೇ ವಸ್ತುಗಳನ್ನು ನೀವು ನೋಡಲು ಸಾಧ್ಯವೇ?

ರಾತ್ರಿ ವೇಳೆಯಲ್ಲಿ ಬಹುಶಃ ಸಂಪೂರ್ಣ ಕತ್ತಲೆಯಾಗಿರುವಾಗ ಅದೇ ಜಾಗಗಳ ಬಗ್ಗೆ ಆಲೋಚಿಸಿ ನೀವೇನನ್ನು ಕಾಣುವಿರಿ? ನೀವು ಸಂಪೂರ್ಣ ಕತ್ತಲೆಯ ಕೊಠಡಿಯೊಳಗೆ ಪ್ರವೇಶಿಸಿದಿರೆಂದು ಭಾವಿಸಿಕೊಳ್ಳಿ. ಕೊಠಡಿಯ ಒಳಗೆ ಯಾವುದೇ ವಸ್ತುಗಳನ್ನು ನೀವು ನೋಡಲು ಸಾಧ್ಯವೇ?

ಟಾರ್ಚ್‍ನ ಬಲ್ಬು, ಸ್ವಂತ ಬೆಳಕು ಹೊಮ್ಮಿಸುವ ಒಂದು ವಸ್ತು. ಸೂರ್ಯ ಕೂಡ ತನ್ನದೇ ಬೆಳಕನ್ನು ನೀಡುವ ಇನ್ನೊಂದು ಪರಿಚಿತ ವಸ್ತು. ಹಗಲಿನಲ್ಲಿ ಇದರ ಬೆಳಕು ವಸ್ತುಗಳನ್ನು ನೋಡಲು ಸಹಾಯ ಮಾಡುತ್ತದೆ. ಸ್ವಂತ ಬೆಳಕನ್ನು ಹೊಮ್ಮಿಸುವ ಸೂರ್ಯನಂಥ ವಸ್ತುಗಳನ್ನು ಸ್ವಯಂಪ್ರಕಾಶ (luminous) ವುಳ್ಳ ವಸ್ತುಗಳು ಎನ್ನುವರು.

ಕುರ್ಚಿ, ಚಿತ್ರಪಟ ಅಥವಾ ಪಾದರಕ್ಷೆಯಂತಹ ವಸ್ತುಗಳ ಬಗ್ಗೆ ಏನು ಹೇಳಬಹುದು? ಸ್ವಯಂ ಪ್ರಕಾಶವುಳ್ಳ ವಸ್ತುಗಳ (ಸೂರ್ಯ, ಟಾರ್ಚ್, ವಿದ್ಯುತ್ ಬೆಳಕು) ಬೆಳಕು ಇವುಗಳ ಮೇಲೆ ಬಿದ್ದು ನಂತರ ನಮ್ಮ ಕಣ್ಣಿನೆಡೆಗೆ ಬಂದಾಗ ನಾವು ಇವುಗಳನ್ನು ಕಾಣುತ್ತೇವೆ.

11.1 ಪಾರದರ್ಶಕ, ಅಪಾರದರ್ಶಕ ಮತ್ತು ಅರೆಪಾರದರ್ಶಕ ವಸ್ತುಗಳು

ಅಧ್ಯಾಯ 4ರಲ್ಲಿ ಪಾರದರ್ಶಕ, ಅಪಾರದರ್ಶಕ ಅಥವಾ ಅರೆಪಾರದರ್ಶಕ ವಸ್ತುಗಳಾಗಿ ಗುಂಪು ಮಾಡಿದುದುನ್ನು ಸ್ಮರಿಸಿಕೊಳ್ಳಿ. ನಾವು ಯಾವುದಾದರು ವಸ್ತುವಿನ ಮೂಲಕ ನೋಡಲು ಸಾಧ್ಯವೇ ಆಗದಿದ್ದರೆ ಅದು ಅಪಾರದರ್ಶಕ (opaque) ವಸ್ತು. ಯಾವುದಾದರೂ ವಸ್ತುವಿನ ಮೂಲಕ ನಿಮಗೆ ಸ್ಪಷ್ಟವಾಗಿ ನೋಡಲು ಸಾಧ್ಯವಾದರೆ ಅದು ತನ್ನ ಮೂಲಕ ಬೆಳಕನ್ನು ಹರಿಯಲು ಬಿಡುತ್ತದೆ ಹಾಗೂ ಅದು ಪಾರದರ್ಶಕ (transparent). ತುಂಬಾ ಸ್ಪಷ್ಟವಾಗಿ ಅಲ್ಲದಿದ್ದರೂ, ಕೆಲವು ವಸ್ತುಗಳ ಮೂಲಕ ನಾವು ನೋಡಬಹುದು. ಅಂತಹ ವಸ್ತುಗಳನ್ನು ಅರೆಪಾರದರ್ಶಕ (translucent) ಎನ್ನುವರು.

ಚಟುವಟಿಕೆ 1

ನಿಮ್ಮ ಸುತ್ತಮುತ್ತ ನೋಡಿ ಮತ್ತು ನಿಮಗೆಷ್ಟು ಸಾಧ್ಯವೋ ಅಷ್ಟು ವಸ್ತುಗಳನ್ನು ಸಂಗ್ರಹಿಸಿ – ಅಳಿಸುವ ರಬ್ಬರ್, ಪ್ಲಾಸ್ಟಿಕ್ ಸ್ಕೇಲ್, ಪೆನ್ನು, ಪೆನ್ಸಿಲ್, ನೋಟ್‍ಪುಸ್ತಕ, ಕಾಗದದ ಒಂದು ಹಾಳೆ, ಟ್ರೇಸಿಂಗ್ ಹಾಳೆ ಅಥವಾ ಬಟ್ಟೆಯ ಚೂರು ಈ ಎಲ್ಲಾ ವಸ್ತುಗಳ ಮೂಲಕ ದೂರದ ಯಾವುದಾದರೂ ವಸ್ತುವನ್ನು ನೋಡಿ (ಚಿತ್ರ 11.1). ಈ ಯಾವುದಾದರೂ ದೂರದ ವಸ್ತುವಿನಿಂದ ಬೆಳಕು ನಿಮ್ಮ ಕಣ್ಣಿಗೆ ತಲುಪಿತೇ?

ಕೋಷ್ಟಕ 11.1ರಲ್ಲಿ ತೋರಿಸಿರುವಂತೆ ನಿಮ್ಮ ವೀಕ್ಷಣೆಗಳನ್ನು ಕೋಷ್ಟಕವೊಂದರಲ್ಲಿ ದಾಖಲಿಸಿ.

ಕೊಟ್ಟಿರುವ ವಸ್ತು ಅಥವಾ ಪದಾರ್ಥವು ತನ್ನ ಮೂಲಕ ಬೆಳಕನ್ನು ಹಾದುಹೋಗಲು ಸಂಪೂರ್ಣವಾಗಿ ಬಿಡುವುದೋ, ಭಾಗಶಃ ಬಿಡುವುದೋ ಅಥವಾ ಬಿಡುವುದೇ ಇಲ್ಲವೋ ಎಂಬುದರ ಆಧಾರದ ಮೇಲೆ ಪಾರದರ್ಶಕ ಅಪಾರದರ್ಶಕ ಅಥವಾ ಅರೆಪಾರದರ್ಶಕವಾಗಬಲ್ಲದು ಎಂದು ನಾವು ತಿಳಿಯಬಹುದು.

11.2 ವಾಸ್ತವವಾಗಿ ಛಾಯೆಗಳೆಂದರೇನು?

ಈಗ ಒಂದಾದ ಮೇಲೊಂದರಂತೆ ಪ್ರತಿಯೊಂದು ಅಪಾರದರ್ಶಕ ವಸ್ತುಗಳನ್ನು ನೆಲದಿಂದ ಸ್ವಲ್ಪ ಮೇಲೆ ಸೂರ್ಯನ ಬೆಳಕಿನಲ್ಲಿ ಹಿಡಿಯಿರಿ. ನೆಲದ ಮೇಲೆ ಏನನ್ನು ಕಾಣುವಿರಿ? ನೆಲದ ಮೇಲೆ ಕಾಣುವ ಕಡುಗಪ್ಪುಕಲೆಯು ಅದರ ಛಾಯೆಯಿಂದಾಗಿದ್ದು. ಕೆಲವೊಮ್ಮೆ ವಸ್ತುವನ್ನು ಅದರ ನೆರಳಿನಿಂದಲೇ ನೀವು ಪತ್ತೆ ಹಚ್ಚಬಹುದು (ಚಿತ್ರ 11.2).

ನೆಲದ ಮೇಲೆ ಒಂದು ಕಾಗದದ ಹಾಳೆಯನ್ನು ಹರಡಿ. ನೆಲದ ಮೇಲಿರುವ ಹಾಳೆಯ ಮೇಲೆ ಛಾಯೆ ಬೀಳುವಂತೆ ಸ್ವಲ್ಪ ಎತ್ತರದಲ್ಲಿ ಒಂದು ಪರಿಚಿತ ಅಪಾರದರ್ಶಕ ವಸ್ತುವನ್ನು ಹಿಡಿಯಿರಿ. ನೀವು ಅದನ್ನು ಹಿಡಿದಿರುವಂತೆಯೇ ಛಾಯೆಯ ಸುತ್ತ ಹೊರರೇಖೆಯನ್ನು ಎಳೆಯುವಂತೆ ನಿಮ್ಮ ಗೆಳೆಯರಿಗೆ ಹೇಳಿ. ಅದೇ ರೀತಿ ಇನ್ನಿತರ ವಸ್ತುಗಳ ಛಾಯೆಯ ಸುತ್ತ ಹೊರರೇಖೆಯನ್ನು ಎಳೆಯಿರಿ.

ಈಗ ಇನ್ನಿತರ ಗೆಳೆಯರಿಗೆ ಛಾಯೆಗಳ ಈ ಹೊರರೇಖೆಗಳಿಂದ ವಸ್ತುಗಳನ್ನು ಗುರುತಿಸುವಂತೆ ಹೇಳಿ. ಎಷ್ಟು ವಸ್ತುಗಳನ್ನು ಅವರು ಸರಿಯಾಗಿ ಗುರುತಿಸಲು ಸಾಧ್ಯವಾಯಿತು?

ಕತ್ತಲೆಯ ಕೊಠಡಿಯಲ್ಲಿ ಅಥವಾ ರಾತ್ರಿಯಲ್ಲಿ ಬೆಳಕಿಲ್ಲದಿರುವಾಗ ನಿಮ್ಮ ಛಾಯೆಯನ್ನು ನೋಡಲು ನಿಮಗೆ ಸಾಧ್ಯವೇ? ಕೊಠಡಿಯಲ್ಲಿ ಬೆಳಕಿನ ಮೂಲ ಮಾತ್ರ ಇದ್ದು ಬೇರೇನೂ ಇಲ್ಲದಿದ್ದರೆ, ಛಾಯೆಯನ್ನು ನೀವು ಕಾಣುವಿರಾ? ಒಂದು ಛಾಯೆಯನ್ನು ಕಾಣಲು, ಒಂದು ಬೆಳಕಿನ ಆಕರ ಮತ್ತು ಒಂದು ಅಪಾರದರ್ಶಕ ವಸ್ತು ಅಗತ್ಯವೆಂದು ತೋರುತ್ತದೆ. ಬೇರೆ ಏನಾದರೂ ಅಗತ್ಯವಿದೆಯೇ?

ಚಟುವಟಿಕೆ 3

ಈ ಚಟುವಟಿಕೆಯನ್ನು ನೀವು ಕತ್ತಲೆಯಲ್ಲಿ ಮಾಡಬೇಕು. ಒಂದು ಸಂಜೆ ಕೆಲವು ಗೆಳೆಯ/ ಗೆಳತಿಯರೊಂದಿಗೆ ಒಂದು ತೆರೆದ ಬಯಲಿಗೆ ಹೋಗಿ. ಟಾರ್ಚ್ ಮತ್ತು ಒಂದು ದೊಡ್ಡ ಕಾರ್ಡ್‍ಬೋರ್ಡನ್ನು ನಿಮ್ಮ ಜೊತೆಯಲ್ಲಿ ಕೊಂಡೊಯ್ಯಿರಿ. ಟಾರ್ಚನ್ನು ನೆಲದ ಬಳಿ ಹಿಡಿದು ಅದರ ಬೆಳಕು ನಿಮ್ಮ ಗೆಳೆಯನ ಮುಖದ ಮೇಲೆ ಬೀಳುವಂತೆ ಮೇಲ್ಮುಖವಾಗಿ ಹಿಡಿಯಿರಿ. ಈಗ ನಿಮ್ಮ ಬಳಿ ಅಪಾರದರ್ಶಕ ವಸ್ತುವಿನ ಮೇಲೆ ಬೀಳುತ್ತಿರುವ ಬೆಳಕಿನ ಆಕರವಿದೆ. ನಿಮ್ಮ ಆ ಗೆಳೆಯನ ಹಿಂದೆ ಮರಗಳಾಗಲಿ, ಕಟ್ಟಡವಾಗಲಿ ಅಥವಾ ಬೇರಾವುದೇ ವಸ್ತುವಾಗಲಿ ಇಲ್ಲದಿದ್ದರೆ, ನಿಮ್ಮ ಗೆಳೆಯನ ತಲೆಯ ಛಾಯೆ ನಿಮಗೆ ಕಾಣುವುದೇ?

ಅಲ್ಲಿ ಛಾಯೆಯೇ ಬೀಳುತ್ತಿಲ್ಲವೆಂಬುದು ಅದರ ಅರ್ಥವಲ್ಲ. ಹೇಗಿದ್ದರೂ ಆತನ ದೇಹದ ಮೂಲಕ ಹಾದು ಇನ್ನೊಂದೆಡೆಗೆ ಹೋಗಲು ಬೆಳಕಿಗಂತೂ ಸಾಧ್ಯವಿಲ್ಲ.

ಈಗ ನಿಮ್ಮ ಇನ್ನೊಬ್ಬ ಗೆಳೆಯ/ಗೆಳತಿಗೆ ಈ ಗೆಳೆಯ/ಗೆಳತಿಯ ಹಿಂದೆ ಕಾರ್ಡ್‍ಬೋರ್ಡನ್ನು ಹಿಡಿಯುವಂತೆ ಹೇಳಿ. ಈಗ ಕಾರ್ಡ್‍ಬೋರ್ಡ್ ಹಾಳೆಯ ಮೇಲೆ ಛಾಯೆ ಕಾಣುವುದೇ (ಚಿತ್ರ 11.3)?

ಆದ್ದರಿಂದ ಛಾಯೆಯು ತೆರೆಯ ಮೇಲೆ ಮಾತ್ರ ಕಾಣುವಂಥದ್ದು. ನೆಲ, ಕೊಠಡಿಯ ಗೋಡೆಗಳು, ಕಟ್ಟಡ ಅಥವಾ ಅದೇ ರೀತಿಯ ಮೇಲ್ಮೈಗಳು, ನಿತ್ಯ ಜೀವನದಲ್ಲಿ ನೀವು ಕಾಣುವ ಛಾಯೆಗಳಿಗೆ ತೆರೆಗಳಂತೆ ವರ್ತಿಸುತ್ತವೆ.

ಛಾಯೆಗಳು ವಸ್ತುಗಳ ಆಕಾರದ ಬಗ್ಗೆ ಕೆಲ ಮಾಹಿತಿ ನೀಡುತ್ತವೆ. ಕೆಲವೊಮ್ಮೆ ವಸ್ತುಗಳ ಆಕಾರದ ಬಗ್ಗೆ ಛಾಯೆಗಳು ನಮ್ಮ ದಾರಿ ತಪ್ಪಿಸಲೂಬಹುದು. ಚಿತ್ರ 11.4ರಲ್ಲಿರುವುದು ಬೇರೆ ಬೇರೆ ಪ್ರಾಣಿಗಳ ಛಾಯೆಯೆಂದು ನಂಬುವಂತೆ ನಾವು ನಮ್ಮ ಕೈನಿಂದ ಮಾಡಬಹುದಾದ ಕೆಲವು ಛಾಯೆಗಳು. ನೋಡಿ ಆನಂದಿಸಿ!

ಚಟುವಟಿಕೆ 4

ಬಿಸಿಲಿರುವ ದಿನದಲ್ಲಿ ನಿಮ್ಮ ಶಾಲಾ ಮೈದಾನದಲ್ಲಿ ಕುರ್ಚಿಯೊಂದನ್ನು ಇಡಿ. ಕುರ್ಚಿಯ ಛಾಯೆಯಿಂದ ನೀವು ಏನನ್ನು ಗಮನಿಸುವಿರಿ?

ಕುರ್ಚಿಯ ಆಕಾರದ ನಿಖರ ಚಿತ್ರವನ್ನು ಛಾಯೆಯು ನೀಡಿತೇ? ಕುರ್ಚಿಯನ್ನು ಸುತ್ತಲೂ ಸ್ವಲ್ಪ ತಿರುಗಿಸಿದಾಗ ಛಾಯೆಯ ಆಕಾರ ಹೇಗೆ ಬದಲಾಯಿತು?

ಒಂದು ತೆಳು ನೋಟ್‍ಪುಸ್ತಕವನ್ನು ತೆಗೆದುಕೊಂಡು ಅದರ ಛಾಯೆಯನ್ನು ನೋಡಿ. ಅನಂತರ ಒಂದು ಆಯತಾಕಾರದ ಡಬ್ಬಿಯನ್ನು ತೆಗೆದುಕೊಂಡು ಅದರ ಛಾಯೆಯನ್ನು ನೋಡಿ. ಎರಡು ಛಾಯೆಗಳೂ ಒಂದೇ ರೀತಿಯ ಆಕಾರ ಹೊಂದಿರುವಂತೆ ಕಾಣುತ್ತದೆಯೇ?

ವಿವಿಧ ಹೂಗಳು ಅಥವಾ ಇನ್ನಿತರ ಬಣ್ಣದ ವಸ್ತುಗಳನ್ನು ತೆಗೆದುಕೊಂಡು ಅವುಗಳ ಛಾಯೆಯನ್ನು ಗಮನಿಸಿ. ಉದಾಹರಣೆಗೆ ಒಂದು ಕೆಂಪು ಗುಲಾಬಿ ಮತ್ತೊಂದು ಹಳದಿ ಗುಲಾಬಿ. ವಸ್ತುಗಳ ಬಣ್ಣ ಬದಲಾದಾಗ ಛಾಯೆಗಳ ಬಣ್ಣವೂ ಬದಲಾಗುವುದೇ?

ಒಂದು ಉದ್ದನೆಯ ಡಬ್ಬಿಯನ್ನು ತೆಗೆದುಕೊಂಡು ನೆಲದ ಮೇಲಿನ ಅದರ ಛಾಯೆಯನ್ನು ಗಮನಿಸಿ. ಡಬ್ಬಿಯನ್ನು ತಿರುಗಿಸಿದಾಗ ಛಾಯೆಯ ಗಾತ್ರ ಬದಲಾಗುವುದನ್ನು ನೀವು ಕಾಣಬಹುದು. ಡಬ್ಬಿಯ ಛಾಯೆಯು ಯಾವಾಗ ಅತಿ ಕಿರಿದಾಗಿರುತ್ತದೆ? ಸೂರ್ಯನಿಗೆದುರಾಗಿ ಡಬ್ಬಿಯ ಉದ್ದದ ಬದಿ ಇದ್ದಾಗಲೋ ಅಥವಾ ಕಿರಿದಾದ ಬದಿ ಇದ್ದಾಗಲೋ?

ಈ ಉದ್ದನೆಯ ಡಬ್ಬಿಯನ್ನು ಬಳಸಿ ನಾವು ಒಂದು ಸರಳ ಕ್ಯಾಮೆರಾವನ್ನು ತಯಾರಿಸೋಣ.

11.3 ಸೂಜಿ ರಂಧ್ರ ಕ್ಯಾಮೆರಾ

ಕ್ಯಾಮೆರಾವನ್ನು ಮಾಡಲು ನಮಗೆ ಅನೇಕ ಸಾಮಗ್ರಿಗಳು ಬೇಕಾಗಬಹುದೆಂದು ನೀವು ಭಾವಿಸಬಹುದು? ಒಂದು ಸರಳ ಸೂಜಿ ರಂಧ್ರ ಕ್ಯಾಮೆರಾ (pinhole camera) ಮಾಡಲು ನಾವು ಇಚ್ಚಿಸಿದರೆ, ವಾಸ್ತವವಾಗಿ ಅನೇಕ ಸಾಮಗ್ರಿಗಳು ಬೇಕಾಗುವುದಿಲ್ಲ.

ಚಟುವಟಿಕೆ 5

ಸ್ವಲ್ಪವೂ ಅಂತರವಿಲ್ಲದೇ ಒಂದರ ಒಳಗೊಂದು ಜಾರುವ ಎರಡು ಡಬ್ಬಿಗಳನ್ನು ತೆಗೆದುಕೊಳ್ಳಿ. ಈ ಡಬ್ಬಿಗಳ ಒಂದೊಂದು ಬದಿಯನ್ನು ಕತ್ತರಿಸಿ ತೆಗೆಯಿರಿ. ದೊಡ್ಡ ಡಬ್ಬಿಯ ಎದುರಿನ ಬದಿಯ ಮಧ್ಯದಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡಿ [ಚಿತ್ರ 11.5 (ಎ)]. ಸಣ್ಣ ಡಬ್ಬಿಯಲ್ಲಿ 5 ರಿಂದ 6cm ಭುಜವುಳ್ಳ ಚೌಕವೊಂದನ್ನು ಕತ್ತರಿಸಿ ತೆಗೆಯಿರಿ. ಈ ಚೌಕವನ್ನು ಟ್ರೇಸಿಂಗ್ ಹಾಳೆಯಿಂದ ಮುಚ್ಚಿ (ಅರೆಪಾರದರ್ಶಕ ತೆರೆ) [ಚಿತ್ರ 11.5 (ಬಿ)]. ಟ್ರೇಸಿಂಗ್ ಹಾಳೆಯನ್ನು ಹೊಂದಿರುವ ಬದಿಯು ಒಳಗಿರುವಂತೆ ಸಣ್ಣ ಡಬ್ಬಿಯನ್ನು ರಂಧ್ರವಿರುವ ದೊಡ್ಡ ಡಬ್ಬಿಯೊಳಗೆ ತೂರಿಸಿ [ಚಿತ್ರ 11.5 (ಸಿ)]. ನಿಮ್ಮ ಸೂಜಿರಂಧ್ರ ಕ್ಯಾಮೆರಾ ಬಳಸಲು ಈಗ ಸಿದ್ಧ.

ಸೂಜಿರಂಧ್ರ ಕ್ಯಾಮೆರಾವನ್ನು ಹಿಡಿದು ಸಣ್ಣ ಡಬ್ಬಿಯ ತೆರೆದ ಬದಿಯ ಮೂಲಕ ನೋಡಿ. ನಿಮ್ಮ ತಲೆ ಮತ್ತು ಸೂಜಿರಂಧ್ರ ಕ್ಯಾಮೆರಾವನ್ನು ಮುಚ್ಚಲು ನೀವು ಕಪ್ಪು ಬಟ್ಟೆಯ ತುಂಡೊಂದನ್ನು ಬಳಸಬೇಕು. ಒಂದು ಮರ ಅಥವಾ ಕಟ್ಟಡದಂತಹ ದೂರದ ವಸ್ತುಗಳನ್ನು ಸೂಜಿರಂಧ್ರ ಕ್ಯಾಮೆರಾದಿಂದ ನೋಡಲು ಯತ್ನಿಸಿ. ಸೂಜಿರಂಧ್ರ ಕ್ಯಾಮೆರಾದಿಂದ ನೀವು ನೋಡುತ್ತಿರುವ ವಸ್ತುಗಳು ಪ್ರಜ್ವಲಿಸುವ ಸೂರ್ಯನ ಬೆಳಕಿನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಸಣ್ಣ ಡಬ್ಬಿಯ ಮೇಲೆ ಅಂಟಿಸಿರುವ ಟ್ರೇಸಿಂಗ್ ಹಾಳೆಯ ಮೇಲೆ ಚಿತ್ರವು ಕಾಣುವ ತನಕ ಸಣ್ಣ ಡಬ್ಬಿಯನ್ನು ಹಿಂದೆ ಮುಂದೆ ಚಲಿಸಿ.

ಈ ಸೂಜಿರಂಧ್ರ ಬಿಂಬಗಳು ಅವುಗಳ ಛಾಯೆಗಳಿಗಿಂತ ಭಿನ್ನವಾದವುಗಳೇ?

ಚಲಿಸುತ್ತಿರುವ ವಾಹನಗಳು ಮತ್ತು ಜನರನ್ನು ಸೂರ್ಯನ ಪ್ರಖರ ಬೆಳಕಿನಲ್ಲಿ ಸೂಜಿರಂಧ್ರ ಕ್ಯಾಮೆರಾದ ಮೂಲಕ ನೋಡಿ.

ಕ್ಯಾಮೆರಾದಲ್ಲಿ ನೋಡಲಾಗುತ್ತಿರುವ ಚಿತ್ರಗಳು ಇನ್ನೊಂದು ಬದಿಯಲ್ಲಿರುವ ವಸ್ತುಗಳ ಬಣ್ಣಗಳನ್ನು ತೋರಿಸುತ್ತಿವೆಯೇ? ಬಿಂಬಗಳು ನೆಟ್ಟಗಿರುವುವೇ ಅಥವಾ ತಲೆಕೆಳಗಾಗಿರುವುವೇ? ಆಶ್ಚರ್ಯ, ಆಶ್ಚರ್ಯ!

ನಮ್ಮ ಸೂಜಿರಂಧ್ರ ಕ್ಯಾಮೆರಾದಿಂದ ಈಗ ನಾವು ನಮ್ಮ ಸೂರ್ಯನನ್ನು ಪ್ರತಿಬಿಂಬಿಸೋಣ. ಇದಕ್ಕೆ ಸ್ವಲ್ಪ ಭಿನ್ನವಾದ ಸಿದ್ಧತೆಯು ನಮಗೆ ಬೇಕು. ಮಧ್ಯದಲ್ಲಿ ಸಣ್ಣ ರಂಧ್ರ ಹೊಂದಿರುವ ದೊಡ್ಡ ರಟ್ಟಿನ ಹಾಳೆಯು ನಮಗೆ ಬೇಕಷ್ಟೆ. ಸ್ಪಷ್ಟ ಜಾಗದಲ್ಲಿ ಛಾಯೆಯು ಬೀಳುವಂತೆ ಸೂರ್ಯನಿಗೆದುರಾಗಿ ರಟ್ಟಿನ ಹಾಳೆಯನ್ನು ಎತ್ತಿ ಹಿಡಿಯಿರಿ. ಕಾರ್ಡ್‍ಬೋರ್ಡ್ ಹಾಳೆಯ ನೆರಳಿನ ಮಧ್ಯೆ ಸೂರ್ಯನ ಸಣ್ಣ ದುಂಡನೆಯ ಬಿಂಬವನ್ನು ನೀವು ಕಾಣುವಿರಾ?

ನಿಮ್ಮ ಸ್ಥಳದಿಂದ ಗ್ರಹಣವೊಂದು ಕಾಣುವಾಗ ಈ ರೀತಿಯ ಸೂಜಿರಂಧ್ರ ಬಿಂಬಗಳನ್ನು ನೋಡಿ. ಗ್ರಹಣ ಸಂಭವಿಸುವ ಮೊದಲು ಸ್ಪಷ್ಟ ಬಿಂಬವು ಕಾಣುವಂತೆ ಸೂಜಿರಂಧ್ರ ಮತ್ತು ತೆರೆಯನ್ನು ಹೊಂದಿಸಿ. ಗ್ರಹಣವು ಆರಂಭವಾಗುತ್ತಿದ್ದಂತೆ ಬಿಂಬವನ್ನು ನೋಡಿದಾಗ, ಸೂರ್ಯನ ಬಿಂಬದ ಒಂದು ಭಾಗ ಕ್ರಮೇಣ ಕಡುಕಪ್ಪಾಗುತ್ತಾ ಹೋಗುವುದನ್ನು ನೀವು ಗಮನಿಸುವಿರಿ. ಸೂರ್ಯನ ಕಡೆಗೆ ಎಂದಿಗೂ ನೇರವಾಗಿ ನೋಡಲೇಬೇಡಿ. ಅದು ನಿಮ್ಮ ಕಣ್ಣುಗಳಿಗೆ ಅತ್ಯಂತ ಅಪಾಯಕಾರಿಯಾಗಬಹುದು.

ಪ್ರಕೃತಿಯಲ್ಲಿ ಒಂದು ಕುತೂಹಲಕಾರಿಯಾದ ಸೂಜಿರಂಧ್ರ ಕ್ಯಾಮೆರಾವಿದೆ. ತುಂಬಾ ಎಲೆಗಳಿರುವ ಮರದ ಕೆಳಗೆ ನಡೆದು ಹೋಗುವಾಗ ಸೂರ್ಯನ ಬೆಳಕಿನ ಕಲೆಗಳನ್ನು ನಾವು ಕೆಲವೊಮ್ಮೆ ಗಮನಿಸುತ್ತೇವೆ (ಚಿತ್ರ 11.6). ಈ ದುಂಡನೆಯ ಬಿಂಬಗಳು ವಾಸ್ತವವಾಗಿ ಸೂರ್ಯನ ಸೂಜಿರಂಧ್ರ ಬಿಂಬಗಳು. ಎಲೆಗಳ ನಡುವಿನ ಅಂತರಗಳೇ ಸೂಜಿರಂಧ್ರಗಳಂತೆ ವರ್ತಿಸುತ್ತವೆ. ಈ ಅಂತರಗಳು ಎಲ್ಲಾ ವಿಧದ ಅನಿಯಮಿತ ಆಕಾರದಲ್ಲಿ ಇದ್ದರೂ ಸಹ ಸೂರ್ಯನ ದುಂಡಗಿನ ಬಿಂಬವನ್ನೇ ನಾವು ಕಾಣಬಹುದು. ಮುಂದಿನ ಬಾರಿ ಗ್ರಹಣ ಸಂಭವಿಸುವಾಗ ಸೂರ್ಯನ ಬಿಂಬಗಳನ್ನು ಗಮನಿಸಲು ಯತ್ನಿಸಿ. ಅದು ತುಂಬಾ ಖುಷಿ ನೀಡಬಲ್ಲದು!

ಬೂಝೊವಿಗೆ ಈ ಒಂದು ಆಲೋಚನೆ ಇದೆ. ನಮ್ಮ ಸೂಜಿರಂಧ್ರ ಕ್ಯಾಮೆರಾದಲ್ಲಿ ರಸ್ತೆಯಲ್ಲಿರುವ ಜನರ ತಲೆಕೆಳಗಾದ ಬಿಂಬಗಳನ್ನು ನಾವು ವೀಕ್ಷಿಸಿದೆವು. ಹಾಗಾದರೆ ಸೂರ್ಯ ಬಿಂಬಗಳು ಹೇಗಿರುತ್ತವೆ? ಅವುಗಳು ತಲೆ ಕೆಳಗಾಗಿರುವುದು ನಮ್ಮ ಗಮನಕ್ಕೆ ಬಂದಿದೆಯೇ ಅಥವಾ ಸ್ವಲ್ಪವಾದರೂ ಆ ರೀತಿ ಕಂಡುಬಂತೇ?

ಬೆಳಕು ಸರಳರೇಖೆಯಲ್ಲಿ ಚಲಿಸಿದಾಗ ಮಾತ್ರ ನಾವು ನೋಡುತ್ತಿರುವ ಛಾಯೆಗಳ ಮೂಡುವಿಕೆ ಮತ್ತು ಸೂಜಿರಂಧ್ರ ಬಿಂಬಗಳಂತಹ ಫಲಿತಾಂಶಗಳೆಲ್ಲಾ ಸಾಧ್ಯವಾಗುವುದು, ಎಂಬ ಇನ್ನೊಂದು ಆಲೋಚನೆ ಪಹೇಲಿಯದು.

ಚಟುವಟಿಕೆ 6

ಒಂದು ಪೈಪಿನ ತುಂಡು ಅಥವಾ ಉದ್ದನೆಯ ರಬ್ಬರ್ ಕೊಳವೆಯನ್ನು ಬಳಸೋಣ. ಕೊಠಡಿಯ ಒಂದು ಕೊನೆಯಲ್ಲಿ ಮೇಜಿನ ಮೇಲೆ ಮೇಣದ ಬತ್ತಿಯೊಂದನ್ನು ನಿಲ್ಲಿಸಿ, ಅದನ್ನು ಹಚ್ಚಿ, ಕೊಠಡಿಯ ಇನ್ನೊಂದು ಕೊನೆಯಲ್ಲಿ ನಿಂತು ಪೈಪಿನ ಮೂಲಕ ಮೇಣದ ಬತ್ತಿಯನ್ನು ನೋಡಿ [ಚಿತ್ರ 11.7 (ಎ)]. ಮೇಣದ ಬತ್ತಿ ಕಾಣಿಸಿತೇ? ಮೇಣದ ಬತ್ತಿಯನ್ನು ನೋಡುತ್ತಿರುವಾಗ ಪೈಪನ್ನು ಸ್ವಲ್ಪ ಬಾಗಿಸಿ [ಚಿತ್ರ 11.7 (ಬಿ)]. ಈಗ ಮೇಣದ ಬತ್ತಿಯು ಕಾಣುವುದೇ? ಪೈಪನ್ನು ಸ್ವಲ್ಪ ಎಡಕ್ಕೆ ಅಥವಾ ಬಲಕ್ಕೆ ತಿರುಗಿಸಿ. ಈಗ ನೀವು ಮೇಣದ ಬತ್ತಿಯನ್ನು ಕಾಣಬಲ್ಲಿರಾ?

ಇದರಿಂದ ಯಾವ ತೀರ್ಮಾನಕ್ಕೆ ಬರುವಿರಿ?

ಬೆಳಕು ಸರಳರೇಖೆಯಲ್ಲಿ ಚಲಿಸುತ್ತದೆ ಎಂದು ಇದು ತಿಳಿಸುವುದಲ್ಲವೇ? ಆದ್ದರಿಂದಲೇ ಒಂದು ಅಪಾರದರ್ಶಕ ವಸ್ತುವು ಅಡ್ಡ ಬಂದಾಗ ಛಾಯೆ ಉಂಟಾಗುತ್ತದೆ.

11.4 ದರ್ಪಣಗಳು ಮತ್ತು ಪ್ರತಿಫಲನಗಳು

ನಾವೆಲ್ಲರೂ ಮನೆಯಲ್ಲಿ ದರ್ಪಣಗಳನ್ನು ಬಳಸುತ್ತೇವೆ. ನೀವು ನಿಮ್ಮ ಮುಖವನ್ನು ದರ್ಪಣದೊಳಗೆ ವೀಕ್ಷಿಸಿ. ದರ್ಪಣದಲ್ಲಿ ನೀವು ಕಾಣುತ್ತಿರುವುದು ನಿಮ್ಮ ಮುಖದ ಪ್ರತಿಫಲನ. ದರ್ಪಣದ ಎದುರಿಗಿರುವ ಇತರ ವಸ್ತುಗಳ ಪ್ರತಿಫಲನಗಳನ್ನು ಸಹ ನಾವು ನೋಡುತ್ತೇವೆ. ಮರ, ಕಟ್ಟಡ ಮತ್ತು ಇತರೆ ವಸ್ತುಗಳ ಪ್ರತಿಫಲನಗಳನ್ನು ಕೊಳ ಅಥವಾ ಕೆರೆಯ ನೀರಿನಲ್ಲಿ ಕೆಲವೊಮ್ಮೆ ನಾವು ಕಾಣುತ್ತೇವೆ.

ಚಟುವಟಿಕೆ 7

ಈ ಚಟುವಟಿಕೆಯನ್ನು ಕತ್ತಲಲ್ಲಿ ಅಥವಾ ಕತ್ತಲೆಯ ಕೊಠಡಿಯಲ್ಲಿ ಮಾಡಬೇಕು. ಕೊಠಡಿಯ ಒಂದು ಮೂಲೆಯಲ್ಲಿ ನಿಮ್ಮ ಗೆಳೆಯ / ಗೆಳತಿಗೆ ದರ್ಪಣವೊಂದನ್ನು ಅವನ/ಅವಳ ಕೈಯಲ್ಲಿ ಹಿಡಿಯಲು ಹೇಳಿ. ನಿಮ್ಮ ಕೈಲೊಂದು ಟಾರ್ಚನ್ನು ಹಿಡಿದು ಇನ್ನೊಂದು ಮೂಲೆಯಲ್ಲಿ ನೀವು ನಿಲ್ಲಿ. ನಿಮ್ಮ ಬೆರಳುಗಳಿಂದ ಟಾರ್ಚ್‍ನ ಗಾಜನ್ನು ಮುಚ್ಚಿ ಮತ್ತು ಟಾರ್ಚ್‍ನ ಸ್ವಿಚ್ಚನ್ನು ಒತ್ತಿರಿ. ಸಣ್ಣ ಅಂತರಗಳಿರುವಂತೆ ನಿಮ್ಮ ಬೆರಳನ್ನು ಹೊಂದಾಣಿಕೆ ಮಾಡಿ. ಬೆಳಕಿನ ಕಿರಣಗಳ ಸಮೂಹವನ್ನು ಪಡೆಯಿರಿ. ನಿಮ್ಮ ಗೆಳೆಯ / ಗೆಳತಿಯು ಹಿಡಿದು ನಿಂತಿರುವ ದರ್ಪಣದ ಕಡೆಗೆ ಬೆಳಕಿನ ಕಿರಣಗಳ ಸಮೂಹವನ್ನು ತಿರುಗಿಸಿ. ನಿಮಗೆ ಇನ್ನೊಂದು ಬದಿಯಲ್ಲಿ ಬೆಳಕಿನ ಪಟ್ಟಿಯು ಕಾಣಿಸಿತೇ (ಚಿತ್ರ 11.8). ಅದೇ ಕೊಠಡಿಯಲ್ಲಿ ನಿಂತಿರುವ ಇನ್ನೊಬ್ಬ ಗೆಳೆಯ / ಗೆಳತಿಯ ಕಡೆಗೆ ಬೆಳಕಿನ ಪಟ್ಟಿಯು ಬೀಳುವಂತೆ ಈಗ ಟಾರ್ಚ್‍ನ ದಿಕ್ಕನ್ನು ತಿರುಗಿಸಿ.

ದರ್ಪಣವು ತನ್ನ ಮೇಲೆ ಬಿದ್ದ ಬೆಳಕಿನ ದಿಕ್ಕನ್ನು ಬದಲಿಸುತ್ತದೆಂದು ಈ ಚಟುವಟಿಕೆಯು ತಿಳಿಸುತ್ತದೆ.

ಬೆಳಕು ಸರಳರೇಖೆಯಲ್ಲಿ ಚಲಿಸುತ್ತದೆ ಮತ್ತು ದರ್ಪಣದಿಂದ ಪ್ರತಿಫಲಿತವಾಗುತ್ತದೆ ಎಂದು ತೋರಿಸುವ ಚಟುವಟಿಕೆಯೊಂದು ಇಲ್ಲಿದೆ.

ಚಟುವಟಿಕೆ 8

ದೊಡ್ಡ ಥರ್ಮೋಕೋಲ್ ಹಾಳೆಯೊಂದರ ಮೇಲೆ ಒಂದು ತುದಿಯಲ್ಲಿ ಒಂದು ಬಾಚಣಿಗೆ, ಇನ್ನೊಂದು ತುದಿಯಲ್ಲಿ ಒಂದು ದರ್ಪಣವನ್ನು ಚಿತ್ರ 11.9ರಲ್ಲಿ ತೋರಿಸಿರುವಂತೆ ಬಂಧಿಸಿ (ನಿಲ್ಲಿಸಿ). ಒಂದು ಕಡುಬಣ್ಣದ ಹಾಳೆಯನ್ನು ದರ್ಪಣ ಮತ್ತು ಬಾಚಣಿಗೆಯ ನಡುವೆ ಹರಡಿ. ಇದನ್ನು ಸೂರ್ಯನ ಬೆಳಕಿನಲ್ಲಿಡಿ ಅಥವಾ ಟಾರ್ಚೊಂದರಿಂದ ಬಾಚಣಿಗೆಯ ಮೂಲಕ ಬೆಳಕಿನ ಕಿರಣಗಳನ್ನು ಹಾಯಿಸಿ.

ನೀವು ಏನನ್ನು ಗಮನಿಸುವಿರಿ? ಚಿತ್ರ 11.9ರಲ್ಲಿ ತೋರಿಸಿರುವಂತಹುದೇ ನಮೂನೆ ಕಂಡುಬರುತ್ತದೆಯೇ?

ಬೆಳಕು ಹೇಗೆ ಚಲಿಸುತ್ತದೆ ಮತ್ತು ದರ್ಪಣದಿಂದ ಹೇಗೆ ಪ್ರತಿಫಲಿತವಾಗುತ್ತದೆ ಎಂಬ ಕಲ್ಪನೆಯನ್ನು ಈ ಚಟುವಟಿಕೆಯು ನಮಗೆ ನೀಡುತ್ತದೆ.

ಪ್ರಮುಖ ಪದಗಳು

ಸ್ವಯಂಪ್ರಕಾಶ

ದರ್ಪಣ

ಅಪಾರದರ್ಶಕ

ಸೂಜಿರಂಧ್ರ ಕ್ಯಾಮೆರಾ

ಪ್ರತಿಫಲನ

ಛಾಯೆ

ಅರೆಪಾರದರ್ಶಕ

ಪಾರದರ್ಶಕ

ಸಾರಾಂಶ

● ಅಪಾರದರ್ಶಕ ವಸ್ತುಗಳು ತಮ್ಮ ಮೂಲಕ ಬೆಳಕನ್ನು ಹರಿಯಲು ಬಿಡುವುದಿಲ್ಲ.

● ಪಾರದರ್ಶಕ ವಸ್ತುಗಳು ಬೆಳಕನ್ನು ತಮ್ಮ ಮೂಲಕ ಹಾದು ಹೋಗಲು ಬಿಡುತ್ತವೆ ಹಾಗೂ ಈ ವಸ್ತುಗಳ ಮೂಲಕ ನಾವು ಸ್ಪಷ್ಟವಾಗಿ ನೋಡಬಹುದು.

● ಅರೆ ಪಾರದರ್ಶಕ ವಸ್ತುಗಳು ಬೆಳಕನ್ನು ತಮ್ಮ ಮೂಲಕ ಭಾಗಶಃ ಹರಿದುಹೋಗಲು ಬಿಡುತ್ತವೆ.

● ಬೆಳಕಿನ ಪಥದಲ್ಲಿ ಅಪಾರದರ್ಶಕ ವಸ್ತುಗಳು ಬಂದಾಗ ಛಾಯೆಗಳು ಉಂಟಾಗುತ್ತವೆ.

● ಸೂಜಿ ರಂಧ್ರ ಕ್ಯಾಮೆರಾವನ್ನು ಸರಳ ವಸ್ತುಗಳಿಂದ ಮಾಡಬಹುದು ಮತ್ತು ಸೂರ್ಯನ ಹಾಗೂ ಪ್ರಕಾಶಿತ ವಸ್ತುಗಳ ಬಿಂಬವನ್ನು ಪಡೆಯಲು ಬಳಸಬಹುದು.

● ಬೆಳಕು ಸರಳರೇಖೆಯಲ್ಲಿ ಚಲಿಸುತ್ತದೆ.

● ದರ್ಪಣದ ಪ್ರತಿಫಲನವು ನಮಗೆ ಸ್ಪಷ್ಟ ಬಿಂಬಗಳನ್ನು ನೀಡುತ್ತದೆ.

ಸಂವೇದ ವಿಡಿಯೋ ಪಾಠಗಳು

SAMVEDA 6th Science Belaku ChayegaluMatthuPratibimba 1 of 4

SAMVEDA-6th-Science-BELAKU CHAHEGALU MATHU PRATIBIMBA-PART 2 OF 4

6th Science Belaku ChayegaluMatthuPratibimba 3 of 4

SAMVEDA 6th Science Belaku Chayegalu 4 of 4

ಪ್ರಶ್ನೋತ್ತರಗಳು

https://www.kseebsolutions.com/kseeb-solutions-for-class-6-science-chapter-11-in-kannada/

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

What is a pinhole camera & how does it work?

Working of a Pin Hole Camera- Science Animation

Pinhole Camera | ThinkTac | Science Experiment

Mirror and Reflection of Light

ಸೂಚಿತ ಯೋಜನಾ ಕಾರ್ಯಗಳು ಮತ್ತು ಚಟುವಟಿಕೆಗಳು

1. A, B. C ಮತ್ತು D ಎಂಬ ಗೆಳೆಯ/ಗೆಳತಿ ಯರ ಒಂದು ಅಡ್ಡಸಾಲನ್ನು ಮಾಡಿ. ಮತ್ತೊಬ್ಬ ಗೆಳೆಯ/ಗೆಳತಿ ಅವರೆದುರಿಗೆ ನಿಂತು ಅವರ ಕಡೆಗೆ ದರ್ಪಣ ಹಿಡಿಯಲಿ (ಚಿತ್ರ 11.10).

ಈಗ ಪ್ರತಿಯೊಬ್ಬರೂ ತಾವು ದರ್ಪಣದಲ್ಲಿ A, B, C ಅಥವಾ D ಇವರಲ್ಲಿ ಯಾರು ಕಾಣುತ್ತಿರುವರೆಂದು ಹೇಳಲಿ.

ದರ್ಪಣದಲ್ಲಿ A ಯನ್ನು Bಯು ನೋಡಲು ಸಾಧ್ಯವಾದರೆ, B ಗೂ A ಯನ್ನು ನೋಡಲು ಸಾಧ್ಯವಾಗುವುದೇ? A, B, C ಅಥವಾ D ಇವರಲ್ಲಿ ಯಾವುದೇ ಎರಡು ಜೋಡಿಗೆ ಇದೇ ರೀತಿ ಆಗುವುದೇ?

A ಗೆ B ಯನ್ನು ದರ್ಪಣದಲ್ಲಿ ನೋಡಲು ಸಾಧ್ಯವಾಗದಿದ್ದರೆ B ಗೆ A ಯನ್ನು ದರ್ಪಣದಲ್ಲಿ ನೋಡಲು ಸಾಧ್ಯವಾಗುವುದೇ? A, B, C ಅಥವಾ D ಗಳಲ್ಲಿ ಯಾವುದೇ ಎರಡು ಜೋಡಿಗೆ ಇದೇ ರೀತಿ ಆಗುವುದೇ?

ಬೆಳಕು ಚಲಿಸುವ ಮತ್ತು ದರ್ಪಣಗಳಿಂದ ಪ್ರತಿಫಲಿತವಾಗುವ ರೀತಿಯ ಬಗ್ಗೆ ಈ ಚಟುವಟಿಕೆಯು ನಮಗೆ ಸ್ವಲ್ಪ ತಿಳಿಸುತ್ತದೆ. ಇದರ ಬಗ್ಗೆ ಉನ್ನತ ತರಗತಿಗಳಲ್ಲಿ ಇನ್ನೂ ಹೆಚ್ಚು ಕಲಿಯುವಿರಿ.

2. ಎಡ-ಬಲ: ನಿಮ್ಮ ಬಲಗೈಯಲ್ಲಿ ಬಾಚಣಿಗೆಯನ್ನು ಹಿಡಿದು ನಿಮ್ಮ ಕೂದಲಿನ ಬಳಿ ತಂದು ದರ್ಪಣದಲ್ಲಿ ನಿಮ್ಮನ್ನು ನೋಡಿಕೊಳ್ಳಿ. ನಿಮ್ಮನ್ನೇ ನೋಡಿ ನಗುತ್ತಿರುವ ನಿಮ್ಮ ಪರಿಚಿತ ಮುಖ ಅಲ್ಲಿದೆ.

ಸ್ವಲ್ಪ ತಾಳಿ, ದರ್ಪಣ ಪ್ರತಿಫಲನದಲ್ಲಿ ನಿಮ್ಮ ಯಾವ ಕೈ ಬಾಚಣಿಗೆ ಹಿಡಿದಿದೆಯೆಂದು ಕಂಡುಹಿಡಿಯಿರಿ. ಅದು ಬಲಗೈ ಅಥವಾ ಎಡಗೈಯಾಗಿದೆಯೆ? ನೀವು ಅದನ್ನು ನಿಮ್ಮ ಬಲಗೈನಲ್ಲಿ ಹಿಡಿದಿದ್ದೀರಿ ತಾನೇ?

ಸೂಜಿರಂಧ್ರ ಕ್ಯಾಮೆರಾವು ತಲೆಕೆಳಗಾದ ಬಿಂಬವನ್ನು ನಮಗೆ ನೀಡುವಂತೆ ಕಂಡರೆ, ದರ್ಪಣವು ಎಡಗೈಯನ್ನು ಬಲಗೈ, ಬಲಗೈಯನ್ನು ಎಡಗೈ ಮಾಡುತ್ತಿರುವಂತೆ ತೋರುತ್ತಿದೆ. ನಾವು ಈ ಬಗ್ಗೆ ಇನ್ನೂ ಹೆಚ್ಚಿನದ್ದನ್ನು ಉನ್ನತ ತರಗತಿಗಳಲ್ಲಿ ಕಲಿಯುವೆವು.

3. ಮೋಡಿಯ ಸಾಧನ: ಪ್ರತಿಫಲನಗಳನ್ನು ಬಳಸುವ ಕೆಲೆಡಿಯೋಸ್ಕೋಪ್ ಎಂಬ ಕುತೂಹಲಕಾರಿ ಸಾಧನವನ್ನು, ಗಣಿತ ಪಠ್ಯಪುಸ್ತಕದ ಸಮರೂಪತೆಯ ಪಾಠದ ಸಂದರ್ಭದಲ್ಲಿ ನೀವು ತಯಾರಿಸಿದ್ದಿರಬಹುದು. ಅಂಚುಗಳ ಸುತ್ತ ನೋಡಲು ಪ್ರತಿಫಲನಗಳನ್ನು ಬಳಸುವ ಪರಿದರ್ಶಕ (periscope ) ಎಂಬ ಸಾಧನವನ್ನು ಈಗ ತಯಾರಿಸೋಣ! ಕೈಯಲ್ಲಿ ದರ್ಪಣವೊಂದನ್ನು ಹಿಡಿದು ತರಗತಿಯ ಕೊಠಡಿಯ ಬಾಗಿಲಿನಿಂದ ಸ್ವಲ್ಪ ಹೊರಗೆ ಕಾರಿಡಾರ್‍ನಲ್ಲಿ ನಿಲ್ಲುವಂತೆ ನಿಮ್ಮ ಗೆಳೆಯ/ಗಳತಿಗೆ ಹೇಳಿ. ಬಾಗಿಲಿಗೆ ಎದುರಾಗಿ ತರಗತಿ ಕೊಠಡಿಯ ಮಧ್ಯೆ ಕೈಯಲ್ಲಿ ದರ್ಪಣ ಹಿಡಿದು ನಿಲ್ಲುವಂತೆ ಇನ್ನೊಬ್ಬ ಗೆಳೆಯ/ಗೆಳತಿಗೆ ಹೇಳಿ. ನೀವು ತರಗತಿ ಕೊಠಡಿಯ ಒಳಗಿರುವಂತೆಯೇ ಕಾರಿಡಾರ್‍ನ ಇನ್ನೊಂದು ಬದಿಯ ವಸ್ತುವಿನ ಪ್ರತಿಬಿಂಬವು ಕಾಣುವಂತೆ ದರ್ಪಣಗಳನ್ನು ಹೊಂದಾಣಿಕೆ ಮಾಡುವಂತೆ ಆ ಗೆಳೆಯ/ಗೆಳತಿಗೆ ಹೇಳಿ. (ಚಿತ್ರ 11.11).

ಚಿತ್ರ 11.12ರಲ್ಲಿ ತೋರಿಸಿರುವಂತೆ ಒಂದು ಸರಳ ಪರಿದರ್ಶಕವನ್ನು Z ಆಕಾರದ ಡಬ್ಬಿಯಲ್ಲಿ ಎರಡು ದರ್ಪಣಗಳನ್ನು ಜೋಡಿಸಿ ನೀವು ಮಾಡಬಹುದು

ಆಲೋಚಿಸಬಹುದಾದದ್ದು

1. ಅಪಾರದರ್ಶಕ ವಸ್ತುಗಳು ಛಾಯೆಯನ್ನು ಉಂಟುಮಾಡುತ್ತವೆ ಅಲ್ಲವೇ? ನಾವು ಪಾರದರ್ಶಕ ವಸ್ತುವೊಂದನ್ನು ಸೂರ್ಯನ ಬೆಳಕಿನಲ್ಲಿ ಹಿಡಿದರೆ, ಏನನ್ನೋ ಕೈಯಲ್ಲಿ ಹಿಡಿದಿರುವುವೆಂಬ ಸುಳಿವು ನೀಡುವಂತದ್ದು ಏನಾದರೂ ನೆಲದ ಮೇಲೆ ಕಾಣುವುದೇ?

2. ಅಪಾರದರ್ಶಕ ವಸ್ತುಗಳ ಬಣ್ಣ ಬದಲಾದಲ್ಲಿ ಅವುಗಳ ಛಾಯೆಗಳ ಬಣ್ಣ ಬದಲಾಗುವುದಿಲ್ಲವೆಂದು ನಾವು ನೋಡಿದೆವು. ಅಪಾರದರ್ಶಕ ವಸ್ತುವೊಂದನ್ನು ಬಣ್ಣದ ಬೆಳಕಿನಲ್ಲಿಟ್ಟರೆ ಏನಾಗುವುದು? ಹೀಗೆ ಮಾಡಲು ಟಾರ್ಚ್‍ನ ಮುಂಬದಿಯನ್ನು ಬಣ್ಣದ ಪಾರದರ್ಶಕ ಹಾಳೆಯಿಂದ ಸುತ್ತಬಹುದು. (ಸೂರ್ಯನು ಮುಳುಗುವಾಗ ಸಂಜೆಯ ಛಾಯೆಗಳ ಬಣ್ಣಗಳನ್ನು ನೀವೆಂದಾದರೂ ಗಮನಿಸಿದ್ದೀರ?)

ಓದಬಹುದಾದದ್ದು

ರುಡ್‍ಯಾರ್ಡ್ ಕಿಪ್ಲಿಂಗ್ ರವರು “ Just so stories ” ಮತ್ತು ಅದರಲ್ಲೂ ನಿರ್ದಿಷ್ಟವಾಗಿ “ How the leopard got its spots ” (ಚಿರತೆಯು ಹೇಗೆ ಬೊಟ್ಟುಗಳನ್ನು ಪಡೆಯಿತು) ಎಂಬ ಕಥೆಯಲ್ಲಿ ಪಟ್ಟೆಪಟ್ಟೆಯ, ಕಲೆಗಳುಳ್ಳ, ಮಚ್ಚೆಗಳಂತಿರುವ ಛಾಯೆಗಳ ಬಗ್ಗೆ ತಿಳಿಸುತ್ತಾರೆ. ಅಸಂಖ್ಯಾತ ಛಾಯೆಗಳಿರುವ ಅವರ ಕಥೆಯ ಕೆಲವು ಸಾಲುಗಳು ಇಲ್ಲಿವೆ.

….. ತುಂಬಾ ದಿನಗಳಾದ ಮೇಲೆ ಕಲೆಗಳಂತೆ, ಚುಕ್ಕೆಗಳಂತೆ, ಬೊಟ್ಟುಗಳಂತೆ, ಸಿಡಿದಂತೆ, ಹಾರಿದಂತೆ, ಕೊಬ್ಬಿದಂತೆ, ಮೊಟ್ಟೆ ಒಡೆದಂತೆ ಕಂಡುಬರುವ ಛಾಯೆಗಳನ್ನು ಹೊಂದಿದ ಮರದ ಕಾಂಡಗಳಿಂದ ತುಂಬಿರುವ ಒಂದು ದೊಡ್ಡ ಎತ್ತರದ ಕಾಡೊಂದನ್ನು ಅವರು ಕಂಡರು. (ಅದನ್ನು ಬೇಗನೆ ಜೋರಾಗಿ ಹೇಳಿ ಮತ್ತು ಕಾಡು ಹೇಗೆ ನೆರಳಿನಿಂದ ಆವೃತವಾಗಿದ್ದಿರಬಹುದೆಂದು ನೀವು ನೋಡುವಿರಿ).

“ಇದೇನು ಇಷ್ಟು ಕಾರ್ಗತ್ತಲಾದರೂ ಇಷ್ಟೊಂದು ಸಣ್ಣ ಬೆಳಕಿನ ತುಂಡುಗಳಿಂದ ತುಂಬಿದೆ” ಎಂದು ಚಿರತೆ ಕೇಳಿತು.