ಸಿದ್ದಾಪುರ ಹಾಳದಕಟ್ಟಾ ಪ್ರೌಢಶಾಲೆಯಲ್ಲಿ ನಡೆದ 2024-25 ನೇ ಸಾಲಿನ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ತೇಜಸ್ವಿ ರಾಮಚಂದ್ರ ಹೆಗಡೆ ಹಿರಿಯ ವಿಭಾಗದಲ್ಲಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಅದೇ ರೀತಿಯಲ್ಲಿ 5-7 ನೇ ತರಗತಿ ಹಿರಿಯ ವಿಭಾಗದಲ್ಲಿ ಶ್ರೀಯಾ ರಾಮಚಂದ್ರ ಭಟ್ಟ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಕಿರಿಯ ವಿಭಾಗದಲ್ಲಿ ತನ್ವಿ ದಿನೇಶ ಹೆಗಡೆ ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಮಕ್ಕಳ ಈ ಸಾಧನೆಯನ್ನು ಶಾಲಾ ಶಿಕ್ಷಕರು ಎಸ್.ಡಿ.ಎಮ್.ಸಿ. ಸಮಿತಿ, ಪಾಲಕರು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
ತೇಜಸ್ವಿ ಹೆಗಡೆ
ತನ್ವಿ ದಿನೇಶ ಹೆಗಡೆ ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಶ್ರೀಯಾ ರಾಮಚಂದ್ರ ಭಟ್ಟ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
* * * * * * * *