2021-22ನೇ ಸಾಲಿನ ಹೊರಸಂಚಾರವನ್ನು ಪ್ರತಿ ವರ್ಷದಂತೆ ಈ ವರ್ಷವೂ ಅಘನಾಶಿನಿ ನದಿ ತೀರದ ತೆಪ್ಪಸಾಲಿನಲ್ಲಿ ಎಸ್.ಡಿ.ಎಮ್.ಸಿ. ಹಾಗೂ ಪಾಲಕರ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.
ಪ್ರಕೃತಿಯ ಸೊಬಗನ್ನು ಸವಿದ ವಿದ್ಯಾರ್ಥಿಗಳು ನೀರಿನಾಟ, ಮನೋರಂಜನಾ ಆಟಗಳಿಂದ ಪುಳಕಿತಗೊಂಡರು. ನಂತರ ಪಾಲಕರೊಂದಿಗೆ ನದಿ ತೀರದ ಸುಂದರ ಮರಳಿನ ರಾಶಿಯ ಮೇಲೆ ಸಹಭೋಜನ ಸವಿದರು.
ಪ್ರಕೃತಿ ಪಾಠ :
ಈ ನಡುವೆ ಶಾಲೆಯ ಮಾಜಿ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಾಬ್ಲ ಗೌಡ ಇವರು ನದಿ ತೀರದ ಸುತ್ತ-ಮುತ್ತಲಿನ ಮರಗಿಡಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಅವುಗಳಲ್ಲಿ ಔಷಧೀಯ ಗಿಡಗಳು, ಹಣ್ಣಿನ ಮರಗಳು, ಬಳ್ಳಿಗಳು, ಬೃಹದಾಕಾರದ ಮರಗಳನ್ನು ಪರಿಚಯಿಸುವುದರ ಜೊತೆಗೆ ಅವುಗಳ ಉಪಯೋಗಗಳನ್ನು ತಿಳಿಸಿಕೊಟ್ಟರು. ಹೊಳೆಮತ್ತಿ, ಚೆಳ್ಳೆ ಗಿಡ, ಸುರಗಿ ಗಿಡ, ಕೆದಿಗೆ, ಬನಾಟೆ, ವಾಟೆ, ಹೆಬ್ಬಲಸು, ಸಂಪಿಗೆ, ಕಾನಗೌರಿ, ಮಾವು, ನಂದಿ, ಮತ್ತಿ ಹೀಗೆ ಅಂದಾಜು 41ಕ್ಕೂ ಹೆಚ್ಚು ವಿವಿಧ ಬಗೆಯ ಗಿಡಗಳನ್ನು ಗ್ರಾಮೀಣ ಹೆಸರುಗಳಿಂದ ಪರಿಚಯಿಸಿದರು.