ಪೌರತ್ವದ ಅರ್ಥ ಮತ್ತು ಮಹತ್ವ

ಉತ್ತಮ ಪೌರರು

ಅರ್ಥ :- ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ.

ಮಹತ್ವ :- ತಾನು ವಾಸಿಸುವ ರಾಷ್ಟ್ರದಲ್ಲಿ ಗೌರವಯುತ ಜೀವನ ನಡೆಸಲು, ರಾಷ್ಟ್ರದ ಆಡಳಿತದಲ್ಲಿ ಭಾಗವಹಿಸಲು ಹಾಗೂ ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಲು ಅನುಕೂಲವಾದ ಆಡಳಿತ ಸ್ಥಾಪಿಸಲು ಪೌರತ್ವ ಅಗತ್ಯ. ಅಲ್ಲದೆ, ರಾಷ್ಟ್ರದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ಬರದಂತೆ ನಡೆದುಕೊಳ್ಳಲು ಪೌರತ್ವ ಅತಿ ಮುಖ್ಯವೆನಿಸುತ್ತದೆ.

ಉತ್ತಮ ಪೌರರ ಲಕ್ಷಣಗಳು :-

 1. ವ್ಯಕ್ತಿ ತಾನು ಒಂದು ದೇಶದ ಪ್ರಜೆಯೆಂದು ಪೌರತ್ವದ ಮೂಲಕ ಗುರುತಿಸಿಕೊಳ್ಳುತ್ತಾನೆ.
 2. ಪೌರರು ರಾಷ್ಟ್ರ ನೀಡುವ ಎಲ್ಲ ಹಕ್ಕುಗಳನ್ನು ಪಡೆಯಬಹುದು.
 3. ಪೌರರಿಗೆ ರಾಷ್ಟ್ರವು ವಿಧಿಸಿದ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ.
 4. ಪೌರತ್ವವು ಪ್ರಜೆಗಳು ತಮ್ಮ ದೇಶದ ಕಾನೂನಿಗನುಗುಣವಾಗಿ ಜೀವನ ನಡೆಸುವಂತೆ ಮಾಡುತ್ತದೆ.
 5. ದೇಶದ ಅತ್ಯನ್ನತ ಹುದ್ದೆಯಿಂದ ಹಿಡಿದು ಇನ್ನಿತರ ಹುದ್ದೆಗಳನ್ನು ಹೊಂದುವ ಅಧಿಕಾರವನ್ನು ಪೌರರು ಪಡೆಯುತ್ತಾರೆ.
 6. ವಿದೇಶಿಯರಿಗೆ ರಾಜಕೀಯ ಹಕ್ಕನ್ನು ನಿರಾಕರಿಸುತ್ತದೆ.
ಉತ್ತಮ ಪೌರರ ಲಕ್ಷಣಗಳು

ಪೌರತ್ವ ಪಡೆಯುವ ವಿಧಾನ :-

 1. ಜನನದ ಮೂಲಕ
 2. ವಂಶ ಪಾರಂಪರ್ಯದ ಮೂಲಕ
 3. ನೋಂದಣಿಯ ಮೂಲಕ
 4. ಒಂದು ದೇಶದೊಂದಿಗೆ ಇನ್ನೊಂದು ದೇಶದ ಭೂಭಾಗ ಸೇರ್ಪಡೆಗೊಂಡರೆ ಯಾವ ದೇಶದೊಂದಿಗೆ ಇನ್ನೊಂದು ಭೂಪ್ರದೇಶ ಸೇರ್ಪಡೆಗೊಳ್ಳುತ್ತದೆಯೋ ಆ ದೇಶದ ಪೌರತ್ವ ಲಭ್ಯವಾಗುತ್ತದೆ.

ಪೌರತ್ವ ಕಳೆದುಕೊಳ್ಳುವ ವಿಧಾನ :-

 1. ಪರಿತ್ಯಾಗ (Renunciation)
 2. ಅಂತ್ಯಗೊಳ್ಳುವಿಕೆ (Termination)
 3. ಪದಚ್ಯತಿ (By Deprivation)

ವಿಡಿಯೋ ಪಾಠಗಳು

Samveda – 6th – Social Science – Citizenship ಪೌರತ್ವ ಪಾಠದ ಸಂಪೂರ್ಣ ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ
ಪೌರತ್ವ ಪಾಠದ ಸಂಪೂರ್ಣ ವಿಡಿಯೋ ವೀಕ್ಷಿಸಲು ಪರದೆಯ ಮೇಲೆ ಕ್ಲಿಕ್ ಮಾಡಿ

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.