ಸಂವಿಧಾನದ ಅರ್ಥ ಮತ್ತು ಮಹತ್ವ :-
ಸಂವಿಧಾನವೆಂದರೆ ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನು. ಅದು ಸರ್ಕಾರದ ಅಂಗಗಳು, ಅವುಗಳ ಅಧಿಕಾರ ಹಾಗೂ ಕಾರ್ಯಗಳನ್ನು ನಿರೂಪಿಸುತ್ತದೆ. ಸಂವಿಧಾನದಲ್ಲಿ ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳ ಉಲ್ಲೇಖವೂ ಇರುತ್ತದೆ. ಸಂವಿಧಾನವು ಸರಕಾರಕ್ಕೆ ಮಾರ್ಗಸೂಚಿಯಾಗಿರುತ್ತದೆ. ಸಂವಿಧಾನವನ್ನು ಯಾರೂ ಉಲ್ಲಂಘಿಸುವಂತಿಲ್ಲ.